ರಾಜ Vs ರಾಜಕುಮಾರ – RCB ಫ್ಯಾನ್ಸ್ ಕಾಲೆಳೆದ್ರಾ ಗಿಲ್?
ತಂಗಿ ಟ್ರೋಲ್ ಮಾಡಿದ್ದಕ್ಕೆ ರಿವೇಂಜ್!

ರಾಜ Vs ರಾಜಕುಮಾರ – RCB ಫ್ಯಾನ್ಸ್ ಕಾಲೆಳೆದ್ರಾ ಗಿಲ್?ತಂಗಿ ಟ್ರೋಲ್ ಮಾಡಿದ್ದಕ್ಕೆ ರಿವೇಂಜ್!

ದೇಶ, ಭಾಷೆ, ಗಡಿಗಳಿಂದಾಚೆಗೂ ಕೊಹ್ಲಿಯನ್ನ ಪ್ರೀತಿಸೋ, ಆರಾಧಿಸೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಾಗೇ ಶುಭ್​ಮನ್ ಗಿಲ್ ಕೂಡ ಟೀಂ ಇಂಡಿಯಾದ ಉತ್ತರಾಧಿಕಾರಿ, ಯಂಗ್ ಪ್ರಿನ್ಸ್ ಅಂತಾನೇ ಬಿಂಬಿತವಾಗಿರೋ ಸ್ಟಾರ್ ಆಟಗಾರ. ಕೊಹ್ಲಿ ಬರೆದಿರೋ ಅದೆಷ್ಟೋ ದಾಖಲೆಗಳನ್ನ ಶುಭ್​ಮನ್ ಗಿಲ್ ಬ್ರೇಕ್ ಮಾಡ್ತಾರೆ ಅಂತಾ ಸಾಕಷ್ಟು ಕ್ರಿಕೆಟ್ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಆದ್ರೆ ಐಪಿಎಲ್​ನಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಇಬ್ರಿಬ್ಬರ ನಡುವೆ ಅಂತರ ಹೆಚ್ಚಾಗ್ತಾನೇ ಇದೆ. ಒಬ್ಬರಿಗೊಬ್ಬರು ಟಾಂಟ್ ಕೊಡೋ ರೀತಿಯಲ್ಲೇ ಸಿಚುಯೇಷನ್ಸ್ ಕ್ರಿಯೇಟ್ ಆಗ್ತಿದೆ. ಏಪ್ರಿಲ್ 2ರಂದು ನಡೆದ ಪಂದ್ಯದಲ್ಲೂ ಅದೇ ಆಗಿದೆ.

ಇದನ್ನೂ ಓದಿ : RCB Vs GT.. ಕಳೆದ ಪಂದ್ಯದಂತೆಯೇ ಪ್ಲೇಯಿಂಗ್ 11 – ಗುಜರಾತ್ ತಂಡದಲ್ಲಿದ್ದಾರೆ ಡೇಂಜರಸ್ ಸ್ಪಿನ್ನರ್ಸ್!

ಐಪಿಎಲ್ 2025 ರಲ್ಲಿ ಬುಧವಾರ ನಡೆದ 14 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತ್ತು. 42 ರನ್ ಕಲೆಹಾಕುವಷ್ಟ್ರಲ್ಲೇ ಆರ್​ಸಿಬಿಯ ನಾಲ್ವರು ಟಾಪ್ ಆರ್ಡರ್ ಬ್ಯಾಟರ್ಸ್ ಕೈಕೊಟ್ಟಿದ್ರು. ಫಸ್ಟ್ ಇನ್ನಿಂಗ್ಸ್​ನಲ್ಲೇ ಡಾಮಿನೇಟ್ ಮಾಡಿದ ಗುಜರಾತ್ ಆಟಗಾರರು ಬ್ಯಾಟಿಂಗ್​ನಲ್ಲೂ ಅಬ್ಬರಿಸೋಕೆ ಶುರು ಮಾಡಿದ್ರು. ಸಾಯಿ ಸುದರ್ಶನ್ ಮತ್ತು ಶುಭ್​ ಮನ್ ಒಳ್ಳೆ ಓಪನಿಂಗ್ಸ್ ಕೊಡ್ತಿದ್ರು. ಮೊದ್ಲೇ ಕಡಿಮೆ ಸ್ಕೋರ್ ಮಾಡಿದ್ದ ಆರ್ ಸಿಬಿಗೆ ಗುಜರಾತ್ ಆಟಗಾರರ ವಿಕೆಟ್ ಬೇಟೆಯಾಡದೇ ಬೇರೆ ದಾರಿ ಇರಲಿಲ್ಲ. ಸೋ ಇಂಥಾ ಟೈಮಲ್ಲೇ 14 ರನ್ ಗಳಿಸಿದ್ದ ಶುಭ್​ಮನ್ ಗಿಲ್ ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದ್ರು. ಕಡಿಮೆ ಟಾರ್ಗೆಟ್ ನೀಡಿ ಡಿಸಪಾಯಿಂಟ್ ಆಗಿದ್ದ ಆರ್​ಸಿಬಿ ಆಟಗಾರರಿಗೆ ಇದು ಮಚ್ ನೀಡೆಡ್ ವಿಕೆಟ್ ಆಗಿತ್ತು. ಹೀಗಾಗಿ ಗಿಲ್ ವಿಕೆಟ್ ಬಿದ್ದಾಗ ಎಲ್ರೂ ಸಂಭ್ರಮಿಸಿದ್ರು. ಅದ್ರಲ್ಲೂ ಕೊಹ್ಲಿ ಸ್ವಲ್ಪ ಜಾಸ್ತಿನೇ ರಿಯಾಕ್ಟ್ ಮಾಡಿದ್ರು. ಹಾಗಂತ ಕೊಹ್ಲಿ ಈ ಥರ ಸೆಲೆಬ್ರೇಟ್ ಮಾಡೋದು ಹೊಸದೇನು ಅಲ್ಲ. ತಾವು ಆಡುವ ತಂಡದಲ್ಲಿ ಯಾವುದೇ ಬೌಲರ್ ವಿಕೆಟ್ ಪಡೆದಾಗ ವಿರಾಟ್ ಅವ್ರಿಗಿಂತ ಜಾಸ್ತಿನೇ ಸೆಲೆಬ್ರೇಟ್ ಮಾಡ್ತಾರೆ. ಅದು ಅವ್ರ ನೇಚರ್. ಟೀಂ ಜೋಶ್. ಇದೇನು ಹೊಸದಲ್ಲ. ಬಟ್ ಇದೇ ಸೆಲೆಬ್ರೇಷನ್ ಗೆ ಗಿಲ್ ಟಾಂಟ್ ಕೊಡೋ ಥರ ಪೋಸ್ಟ್ ಹಾಕಿರೋದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.

ಯಾವಾಗ ಜಿಟಿ ತಂಡ ಆರ್ ಸಿಬಿ ವಿರುದ್ಧ ಗೆಲುವು ಸಾಧಿಸಿತೋ ಗುಜರಾತ್ ಟೀಂ ಫುಲ್ ಖುಷಿಯಾಗಿತ್ತು. ಪಂದ್ಯದ ಬಳಿಕ ಗುಜರಾತ್ ಕ್ಯಾಪ್ಟನ್ ಶುಭ್​ಮನ್ ಗಿಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಿಂದ ಟ್ವೀಟ್ ಮಾಡಿದ್ರು. ಜಿಟಿ ತಂಡದೊಂದಿಗಿನ ಫೋಟೋವನ್ನು ಹಂಚಿಕೊಂಡು ಅದಕ್ಕೊಂದು ಕ್ಯಾಪ್ಟನ್ ಕೊಟ್ಟಿದ್ರು. ಅದೇನಂದ್ರೆ  ‘ಐಸ್ ಆನ್ ದಿ ಗೇಮ್.. ನಾಟ್ ದಿ ನಾಯ್ಸ್ ಅಂತಾ. ಅಂದ್ರೆ ಗಮನ ಆಟದ ಮೇಲಿದೆ, ಕೂಗಾಟ ಮೇಲಲ್ಲ’ ಎಂಬ ಶೀರ್ಷಿಕೆ ಅದು. ಇದೇ ಕ್ಯಾಪ್ಟನ್ ಈಗ ಆರ್ ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.  ಗಿಲ್ ಔಟಾದಾಗ ವಿರಾಟ್ ಕೊಹ್ಲಿ ಭರ್ಜರಿಯಾಗಿ ಆಚರಿಸಿದ್ದರಿಂದ ಗಿಲ್ ವಿರಾಟ್ ಕೊಹ್ಲಿಗೆ ಟಾಂಟ್ ಕೊಡಲೆಂದೇ ಈ ರೀತಿಯ ಶೀರ್ಷಿಕೆ ಹಾಕಿದ್ದಾರೆಂದು ವಿಶ್ಲೇಷಣೆ ಮಾಡಲಾಗ್ತಿದೆ. ಮತ್ತೆ ಕೆಲವ್ರು ಆರ್ ಸಿಬಿ ಫ್ಯಾನ್ಸ್ ಗೆ ಬರೆದಿರೋ ಲೈನ್ಸ್ ಎನ್ನುತ್ತಿದ್ದಾರೆ. ಭುವನೇಶ್ವರ್ ಕುಮಾರ್​ ಎಸೆತದಲ್ಲಿ ಬೌಂಡರಿ ಬಾರಿಸಲು ಯತ್ನಿಸಿದ ಗಿಲ್​ ಲಿವಿಂಗ್​ಸ್ಟೋನ್​ ಕೈಗೆ ಕ್ಯಾಚಿಟ್ಟರು. ಗಿಲ್​ ವಿಕೆಟ್ ಬೀಳುತ್ತಿದ್ದಂತೆ ಜೋರಾಗಿ ಕಿರುಚಾಡುವ ಮೂಲಕ ಸಂಭ್ರಮಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಫ್ಯಾನ್ಸ್​ ಜೋರಾಗಿ ಕಿರುಚಾಡಿದರು. ಪ್ರೇಕ್ಷಕರ ಕಿರುಚಾಟದ ಶಬ್ದವು 126 ಡೆಸಿಬಲ್​ಗಳಲ್ಲಿ ದಾಖಲಾಗಿದೆ. ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಗಿಲ್​ ಎಕ್ಸ್​ ಖಾತೆ ಮೂಲಕ ಕೌಂಟರ್​ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಐಪಿಎಲ್​ನಲ್ಲಿ ಇವ್ರಿಬ್ಬರ ರಿವೇಂಜ್ ಌಟಿಟ್ಯೂಡ್ ಇಂದು ನಿನ್ನೇದಲ್ಲ. 2023ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಮ್ಯಾಚ್​ನಲ್ಲಿ ಇಬ್ಬರೂ ಆಟಗಾರರು ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. 2023ರ ಮೇ 21ರಂದು ನಡೆದಿದ್ದ ಪಂದ್ಯದಲ್ಲಿ ಫಸ್ಟ್ ಬ್ಯಾಟ್ ಮಾಡಿದ್ದ ಆರ್ ಸಿಬಿ ಪರ ಕಿಂಗ್ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ರು. 61 ಎಸೆತಗಳಲ್ಲಿ 101 ರನ್​ ಕಲೆ ಹಾಕಿದ ಅವರ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳು ಮತ್ತು 1 ಸಿಕ್ಸರ್‌ ಸೇರಿದ್ದವು. ಟೋಟಲ್ಲಾಗಿ 197 ರನ್ ಕಲೆ ಹಾಕಿತ್ತು ಆರ್ ಸಿಬಿ. 198 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಗುಜರಾತ್ ಪರ ಶುಭ್​ಮನ್ ಗಿಲ್ ಅಬ್ಬರಿಸಿದ್ದರು. 52 ಎಸೆತಗಳಲ್ಲಿ 5 ಬೌಂಡರಿ, 8 ಸಿಕ್ಸರ್​ಗಳೊಂಡಿಗೆ ಅಜೇಯ 104 ರನ್ ಗಳಿಸಿದ್ರು. ಪರಿಣಾಮ 19.1 ಓವರ್​ನಲ್ಲೇ ಜಿಟಿ ಟಾರ್ಗೆಟ್ ರೀಚ್ ಮಾಡಿತ್ತು. ಸೆಂಚುರಿ ಜೊತೆಗೆ ಮ್ಯಾಚ್ ಗೆದ್ದಿದ್ದ ಗಿಲ್ ತುಂಬಾನೇ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿದ್ರು. ಅವ್ರ ಆಕ್ರಮಣಕಾರಿ ಸಂಭ್ರಮಾಚರಣೆ ಫೋಟೋಗಳು ವೈರಲ್ ಆಗಿದ್ವು. ಸೋ ಇಲ್ಲಿಂದಲೇ ಇವ್ರ ನಡುವೆ ಪ್ರತಿಷ್ಠೆಯ ಆಟ ಶುರುವಾಯ್ತು ಅನ್ನೋ ಬಗ್ಗೆ ಚರ್ಚೆಯಾಗ್ತಿದೆ.

ಐಪಿಎಲ್ 2023ರಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್ ಗೆದ್ದಾಗ, ಗಿಲ್ ಅವರ ಸಹೋದರಿ ಶಾನೀಲ್ ಹಾಕಿದ್ದ ಪೋಸ್ಟ್‌ಗೆ ಆರ್‌ಸಿಬಿ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಈಗ ಅದಕ್ಕೆ ಪ್ರತಿಕ್ರಿಯೆಯಾಗಿ ಗಿಲ್ ಈ ಪೋಸ್ಟ್ ಹಾಕಿರಬಹುದು ಎಂಬ ಮಾತುಗಳೂ ಕೇಳಿ ಬರ್ತಿವೆ. ಈ ವಿವಾದ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಗಿಲ್ ಪೋಸ್ಟ್‌ನಿಂದಾಗಿ ಗಿಲ್ ಮತ್ತು ವಿರಾಟ್ ಕೊಹ್ಲಿ ನಡುವೆ ಏನಾದರೂ ಮನಸ್ತಾಪ ಇದೆಯೇ ಎಂಬ ಚರ್ಚೆ ಶುರುವಾಗಿದ್ದು, ಆರ್‌ಸಿಬಿ ಅಭಿಮಾನಿಗಳ ಮೇಲೆ ಗಿಲ್ ಕೋಪಗೊಂಡಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ಆದ್ರೆ ಪಂದ್ಯ ಮುಗಿದ ಮೇಲೆ ಇಬ್ಬರೂ ಆಟಗಾರರು ಪರಸ್ಪರ ಭೇಟಿಯಾಗಿ ಚೆನ್ನಾಗಿ ಮಾತನಾಡಿದ್ದಾರೆ. ಆರ್‌ಸಿಬಿಯ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಅವರಿಬ್ಬರ ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ.

Shantha Kumari

Leave a Reply

Your email address will not be published. Required fields are marked *