ಗಿಲ್ Vs ಕೊಹ್ಲಿ.. ನಂ.1 ವಾರ್ – ಬ್ಯಾಟ್ ನಲ್ಲೇ HITಮ್ಯಾನ್ ಸೇಫ್
T-20I, ODIನಲ್ಲಿ ಭಾರತವೇ ಬೆಸ್ಟ್

ಗಿಲ್ Vs ಕೊಹ್ಲಿ.. ನಂ.1 ವಾರ್ – ಬ್ಯಾಟ್ ನಲ್ಲೇ HITಮ್ಯಾನ್ ಸೇಫ್T-20I, ODIನಲ್ಲಿ ಭಾರತವೇ ಬೆಸ್ಟ್

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಎರಡೂ ಮ್ಯಾಚ್​ಗಳಲ್ಲೂ ಟೀಂ ಇಂಡಿಯಾದ ಮಾಜಿ ನಾಯಕರು ಸೆಂಚುರಿಗಳ ಸುನಾಮಿ ಎಬ್ಬಿಸಿದ್ದಾರೆ. ಌಂಡ್ ಎರಡೂ ಪಂದ್ಯಗಳಲ್ಲೂ ಎರಡೆರಡು ವಿಕೆಟ್ಸ್ ಮಾತ್ರ ಕಳ್ಕೊಂಡು ಟಾರ್ಗೆಟ್ ರೀಚ್ ಆಗಿದ್ದಾರೆ. ನಂಬರ್ 5 ಬ್ಯಾಟರ್​ಗೆ ಕ್ರೀಸ್​ಗೆ ಬರೋಕೂ ಚಾನ್ಸ್ ಸಿಕ್ಕಿಲ್ಲ. ಸೋ ಇದೇ ಬ್ಯಾಟಿಂಗ್ ಅಬ್ಬರ ಐಸಿಸಿ ಓಡಿಐ ಬ್ಯಾಟರ್ಸ್ ರ್ಯಾಂಕಿಂಗ್ ನಲ್ಲೂ ಬಿರುಗಾಳಿ ಎಬ್ಬಿಸಿದೆ. ಕಿಂಗ್ ವರ್ಸಸ್ ಪ್ರಿನ್ಸ್ ವಾರ್ ಶುರುವಾಗಿದೆ. ಹಿಟ್​ಮ್ಯಾನ್ ಕೂಡ ಟಾಪ್​ಗೆ ಜಿಗಿದಿದ್ದಾರೆ.

ಇದನ್ನೂ ಓದಿ : ಐಸಿಸಿ 2027 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಒಂದೇ ಗುಂಪಿನಲ್ಲಿ ಭಾರತ–ಪಾಕಿಸ್ತಾನ ಫೈಟ್

ವಿಂಡೀಸ್ ವಿರುದ್ಧದ ಸರಣಿಯಲ್ಲಿ ಕ್ಯಾಪ್ಟನ್ ಶುಭ್​ಮನ್ ಗಿಲ್ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ್ದಾರೆ. ಮೊದಲ ಪಂದ್ಯದಲ್ಲಿ 110 ರನ್​ಗಳ ಇನ್ನಿಂಗ್ಸ್ ಆಡಿದ್ದ ಗಿಲ್ ಎರಡನೇ ಪಂದ್ಯದಲ್ಲಿ 223 ರನ್​ ಗಳಿಸಿ ಅಜೇಯರಾಗಿ ಉಳಿದ್ರು. ಇನ್ನು ಕಿಂಗ್ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ 139 ರನ್ ಗಳಿಸಿ ಅಜೇಯರಾಗಿದ್ರೆ ಎರಡನೇ ಪಂದ್ಯದಲ್ಲಿ 29 ರನ್​​ಗಳಿಗೆ ವಿಕೆಟ್ ಒಪ್ಪಿಸಿದ್ರು. ಇನ್ನು ರೋಹಿತ್ ಶರ್ಮಾ ಕೂಡ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ರು. ಭಾರತದ ಈ ಹಾಲಿ ಮತ್ತು ಮಾಜಿ ನಾಯಕರ ಧಮಾಕೇಧಾರ್ ಪರ್ಫಾಮೆನ್ಸ್​ನಿಂದಲೇ ಐಸಿಸಿ ಓಡಿಐ ರ್ಯಾಂಕಿಂಗ್​ನಲ್ಲಿ ಪೈಪೋಟಿ ಜೋರಾಗಿದೆ.

ಟಾಪ್-1ನಲ್ಲೇ ಗಿಲ್ ಕಂಟಿನ್ಯೂ.. 2ನೇ ಸ್ಥಾನಕ್ಕೆ ಜಿಗಿದ ಕೊಹ್ಲಿ!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ದಾಖಲೆಯ 55ನೇ ಏಕದಿನ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಒಂದು ಸ್ಥಾನ ಬಡ್ತಿ ಪಡೆದು 796 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ. ನ್ಯೂಜಿಲೆಂಡ್‌ನ ಡೆರಿಲ್ ಮಿಚೆಲ್​ರನ್ನು ಹಿಂದಿಕ್ಕಿದ್ದಾರೆ. ಇನ್ನು 816 ರೇಟಿಂಗ್ ಪಾಯಿಂಟ್ಸ್​ಗಳೊಂದಿಗೆ ನಾಯಕ ಶುಭಮಾನ್ ಗಿಲ್ ಫಸ್ಟ್ ಪ್ಲೇಸ್​ನಲ್ಲಿದ್ದಾರೆ. ಇನ್ನು ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೂಡ ನಾನೇನ್ ಕಮ್ಮಿ ಇಲ್ಲ ಅನ್ನೋ ಥರ 719 ರೇಟಿಂಗ್ ಅಂಕಗಳೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸೋ ಅಲ್ಲಿಗೆ ಟಾಪ್-5 ಪೈಕಿ ಟೀಂ ಇಂಡಿಯಾದ ಸೂಪರ್ ಸ್ಟಾರ್​ಗಳೇ ಮೂವರಿದ್ದಾರೆ. ಇನ್ನು ಮೊದಲ ಏಕದಿನ ಪಂದ್ಯದಲ್ಲಿ ಶತಕದ ಬಳಿಕ ಗಿಲ್​ರನ್ನ ಕೊಹ್ಲಿ ಬೀಟ್ ಮಾಡ್ಬೋದು ಅನ್ನಿಸ್ತಿತ್ತು. ಆದ್ರೆ ಗಿಲ್ ಡಬಲ್ ಸೆಂಚುರಿ ಸಿಡಿಸಿ ತಮ್ಮ ಸ್ಥಾನವನ್ನ ಮತ್ತಷ್ಟು ಸೇಫ್ ಮಾಡ್ಕೊಂಡಿದ್ದಾರೆ. ಬ್ಯಾಟರ್​ಗಳೇನೋ ರ್ಯಾಂಕಿಂಗ್​ನಲ್ಲಿ ನಾ ಮುಂದು ತಾ ಮುಂದು ಅಂತಿದ್ದಾರೆ. ಆದ್ರೆ ಬೌಲರ್​ಗಳು ಮಾತ್ರ ಹಿಂದೆ ಹೋಗ್ತಿದ್ದಾರೆ.

ಏಕದಿನದಲ್ಲಿ ಟಾಪ್-5 ಕುಲ್ದೀಪ್.. ಟಿ-20ಐನಲ್ಲಿ ಟಾಪ್-7 ವರುಣ್!

ಏಕದಿನ ಹಾಗೇ ಟಿ-20ಐನಲ್ಲಿ ಬ್ಯಾಟಿಂಗ್ ಅಂತಾ ಬಂದಾಗ ಎರಡೂ ಕಡೆ ಟಾಪ್ ಟು ಬ್ಯಾಟರ್ಸ್​ ಇಂಡಿಯನ್ಸೇ ಆಗಿದ್ದಾರೆ. ಏಕದಿನದಲ್ಲಿ ಗಿಲ್ ಮತ್ತು ಕೊಹ್ಲಿ ಟಾಪ್ 1, ಟಾಪ್2ನಲ್ಲಿದ್ರೆ ಟಿ-20ನಲ್ಲಿ ಇಶಾನ್ ಕಿಶನ್ ನಂಬರ್ ಹಾಗೇ ಅಭಿಷೇಕ್ ಶರ್ಮಾ ನಂಬರ್ 2ನಲ್ಲಿದ್ದಾರೆ. ಆದ್ರೆ ಬೌಲಿಂಗ್ ಅಂತಾ ನೋಡಿದ್ರೆ ಏಕದಿನ ಮಾದರಿಯಲ್ಲಿ ಕುಲ್ದೀಪ್ ಯಾದವ್ 5ನೇ ಸ್ಥಾನದಲ್ಲಿದ್ರೆ ಟಿ-20ಐನಲ್ಲಿ ವರುಣ್ ಚಕ್ರವರ್ತಿ 7ನೇ ಸ್ಥಾನದಲ್ಲಿದ್ದಾರೆ. ಸೋ ಇಲ್ಲೇ ಕ್ಲಿಯರ್ ಆಗಿ ಗೊತ್ತಾಗ್ತಿದೆ ಭಾರತದ ಬೌಲಿಂಗ್ ಎಷ್ಟು ವೀಕ್ ಆಗ್ತಿದೆ ಅನ್ನೋದು. ಒಟ್ನಲ್ಲಿ ಭಾರತದ ಬ್ಯಾಟಿಂಗ್ ನೋಡೋಕೆ ಹಬ್ಬ ಅನ್ನಿಸ್ತಿದ್ರೆ ಬೌಲಿಂಗ್ ಕಳಪೆ ಆಗ್ತಿರೋದು ಆತಂಕ ಕೂಡ ಮೂಡಿಸಿದೆ.

Shantha Kumari

Leave a Reply

Your email address will not be published. Required fields are marked *