ಕೊಹ್ಲಿ-ಸಾಲ್ಟ್ RCB ಡೆಡ್ಲಿ ಓಪನರ್ಸ್ – SRH, RRನಲ್ಲೂ ಡೇಂಜರ್ ಕಾಂಬೋ
10 ಟೀಂ.. ಹೇಗಿದೆ ಪವರ್ ಪ್ಲೇ ಪ್ಲ್ಯಾನ್?

2026ರ ಐಪಿಎಲ್ಗೆ ರಗಡ್ ಎಂಟ್ರಿ ಕೊಡೋಕೆ ಹತ್ತೂ ಫ್ರಾಂಚೈಸಿಗಳು ರೆಡಿಯಾಗಿವೆ. ಮಿನಿ ಆಕ್ಷನ್ ಬಳಿಕ ಒಂದಷ್ಟು ತಂಡಗಳಲ್ಲಿ ಮೇಜರ್ ಸರ್ಜರಿಗಳಾಗಿವೆ. ಬ್ಯಾಟಿಂಗ್, ಬೌಲಿಂಗ್ ಅಂತಾ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ನೆಕ್ಸ್ಟ್ ಸೀಸನ್ಗೆ ಪವರ್ಫುಲ್ ಆಗೇ ರೆಡಿಯಾಗಿದ್ದಾರೆ. ಹೀಗೆ 19ನೇ ಆವೃತ್ತಿಯ ಐಪಿಎಲ್ ಕಪ್ ಮೇಲೆ ಕಣ್ಣಿಟ್ಟಿರೋ 10 ಫ್ರಾಂಚೈಸಿಗಳಲ್ಲಿ ಓಪನರ್ಸ್ ಆಗಿ ಯಾರು ಕಣಕ್ಕಿಳಿಯಬಹುದು.
ಇದನ್ನೂ ಓದಿ : T-20Iನಲ್ಲಿ ಶುರು ಕ್ಯಾಪ್ಟನ್ಸಿ ರೇಸ್ – ಪಾಂಡ್ಯ Vs ಸಂಜು Vs ಅಕ್ಷರ್!
ಟಿ-20 ಕ್ರಿಕೆಟ್ ಫಾರ್ಮೆಟ್ನಲ್ಲಿ ಬ್ಯಾಟರ್ಗಳದ್ದೇ ಅಬ್ಬರ.. ಅದ್ರಲ್ಲೂ ಐಪಿಎಲ್ನಲ್ಲಂತೂ ಬೌಲರ್ಗಳನ್ನ ಬೆಂಡೆತ್ತಿ ಬಿಡ್ತಾರೆ. ಪಂದ್ಯಕ್ಕೊಂದು ದಾಖಲೆಗಳು ಬ್ರೇಕ್ ಆಗ್ತಾನೇ ಇರ್ತಾವೆ. ಒಂದ್ಕಡೆ ಯಂಗ್ಸ್ಟರ್ಸ್ ಮತ್ತೊಂದ್ಕಡೆ ಸೀನಿಯರ್ಸ್ ಕಾಂಬಿನೇಷನ್ನಲ್ಲಿ ಧೂಳೆಬ್ಬಿಸ್ತಾರೆ. ಕಳೆದ ಆವೃತ್ತಿಯಲ್ಲೇ ಪವರ್ಹಿಟ್ಗಳನ್ನ ನೋಡಿದ್ದ ಅಭಿಮಾನಿಗಳಿಗೆ ಮುಂದಿನ ಆವೃತ್ತಿಯಲ್ಲೂ ಹಬ್ಬವೋ ಹಬ್ಬ. ಅದ್ರಲ್ಲೂ ಪವರ್ಪ್ಲೇನಲ್ಲೇ ಪವರ್ಶೋ ತೋರಿಸೋಕೆ ಓಪನರ್ಸ್ ಕೂಡ ರೆಡಿಯಾಗಿದ್ದಾರೆ.
19ನೇ ಸೀಸನ್ ಐಪಿಎಲ್ ಓಪನರ್ಸ್!
ತಂಡ ಓಪನರ್ಸ್
ಆರ್ ಸಿಬಿ ವಿರಾಟ್ ಕೊಹ್ಲಿ & ಫಿಲ್ ಸಾಲ್ಟ್
ಚೆನ್ನೈ ರುತುರಾಜ್ ಗಾಯಕ್ವಾಡ್ & ಆಯುಷ್ ಮ್ಹಾತ್ರೆ
ಮುಂಬೈ ರೋಹಿತ್ ಶರ್ಮಾ & ಕ್ವಿಂಟನ್ ಡಿ ಕಾಕ್
ಕೊಲ್ಕತ್ತಾ ಫಿನ್ ಅಲೆನ್ & ಅಜಿಂಕ್ಯ ರಹಾನೆ
ಹೈದ್ರಾಬಾದ್ ಅಭಿಷೇಕ್ ಶರ್ಮಾ & ಟ್ರಾವಿಸ್ ಹೆಡ್
ಲಕ್ನೋ ಐಡೆನ್ ಮಾರ್ಕ್ರಾಮ್ & ಮಿಚೆಲ್ ಮಾರ್ಷ್
ಗುಜರಾತ್ ಶುಭಮನ್ ಗಿಲ್ & ಸಾಯಿ ಸುದರ್ಶನ್
ರಾಜಸ್ಥಾನ ಯಶಸ್ವಿ ಜೈಸ್ವಾಲ್ & ವೈಭವ್ ಸೂರ್ಯವಂಶಿ
ಡೆಲ್ಲಿ ಬೆನ್ ಡಕೆಟ್ & ಕೆಎಲ್ ರಾಹುಲ್
ಪಂಜಾಬ್ ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್

ನೋಡಿರಿ

