ಕುಗ್ಗಿದ ಕೊಹ್ಲಿಗೆ HITಮ್ಯಾನ್ ಬೂಸ್ಟ್ – ವಿಶ್ವಕಪ್ ಕಿರೀಟ ನಿನಗೇ ಎಂದ ಗೆಳೆಯ
RO-KO ಬಾಂಡಿಂಗ್ ಎಂಥಾದ್ದು?

ಕುಗ್ಗಿದ ಕೊಹ್ಲಿಗೆ HITಮ್ಯಾನ್ ಬೂಸ್ಟ್ – ವಿಶ್ವಕಪ್ ಕಿರೀಟ ನಿನಗೇ ಎಂದ ಗೆಳೆಯRO-KO ಬಾಂಡಿಂಗ್ ಎಂಥಾದ್ದು?

ಗೆದ್ದಾಗ ಹಿಗ್ಗಿಸಿ, ಸೋತಾಗ ಕುಗ್ಗಿಸಿ, ಮತ್ತೆ ಪುಟಿದೇಳಲು ಹಿಂದು ಮುಂದು ಯೋಚಿಸಬೇಕಾದ ಅನಿವಾರ್ಯತೆ ಇರೋ ಮೈಂಡ್ ಸೆಟ್ ಎಲ್ಲಿ, ಗೆಳೆಯಾ ಇದು ನಿನ್ನ ಫೈಲ್ಯೂರ್ ಅಲ್ಲ, ಇದು ನಿನಗೆ ಎದುರಾಗಿರೋ ಅಗ್ನಿಪರೀಕ್ಷೆ, ಚಿಂತೆ ಬೇಡ, ನಾಳೆಯ ದಿನ ನಿನ್ನದೇ ಮತ್ತೊಂದು ಚಾನ್ಸ್ ತಗೋ ಅನ್ನೋ ನಾಯಕನ ಮೈಂಡ್ ಸೆಟ್ ಎಲ್ಲಿ?, ಹೌದು.. ವಿರಾಟ್ ಕೊಹ್ಲಿ ಪರಿಸ್ಥಿತಿ ಸಧ್ಯ ಹೀಗೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ರನ್ ಮೆಷಿನ್ ಆಟದ ಬಗ್ಗೆ ನಾನಾ ರೀತಿಯ ಕಮೆಂಟ್ ಕೇಳಿ ಬರ್ತಿದೆ. ಮುಂದಿನ ಪಂದ್ಯದಲ್ಲಿ ಕೊಹ್ಲಿ ಔಟ್, ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಅಂತೆಲ್ಲಾ ಸುದ್ದಿ ಹರಿದಾಡ್ತಿದೆ. ಆದ್ರೆ, ನಾಯಕ ಎಂದೆಂದಿಗೂ ನಾಯಕನೇ ಅಂತಾ ತೋರಿಸಿಕೊಟ್ಟಿದ್ದಾರೆ ಕ್ಯಾಪ್ಟನ್ ರೋಹಿತ್ ಶರ್ಮಾ. ಜೊತೆಗೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೂಡಾ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಫೈಲ್ಯೂರ್ ಬಗ್ಗೆ ಕೋಚ್ ದ್ರಾವಿಡ್ ಹೇಳಿದ್ದೇನು? ವಿರಾಟ್ ವಿಚಾರದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ನಿಲುವೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕಲ್ಕಿಯಲ್ಲಿ ಕನ್ನಡಿಗ ನಟರಿಲ್ಲ ಯಾಕೆ? – ಕಾಸು ಬೇಕು.. ಕನ್ನಡಿಗರು ಬೇಡ್ವಾ?

ನಾವು ಭಾರತೀಯರು. ನಮಗೊಂದು ಮೈಂಡ್ ಸೆಟ್ ಇರುತ್ತೆ. ಬಹುತೇಕ ಭಾರತೀಯ ಪೋಷಕರು ಮಕ್ಕಳನ್ನ ಬೆಳೆಸೋವಾಗಲೆ ಅದೇ ಮೈಂಡ್ಸೆಟ್ನಲ್ಲೇ ಬೆಳೆಸ್ತಾರೆ. ನಂಬರ್ ಅನ್ನೋದು ಶಾಲಾ ದಿನಗಳಿಂದಲೇ ತಲೆಗೆ ಹೊಕ್ಕಿರುತ್ತೆ. ಎಷ್ಟು ಮಾರ್ಕ್ಸ್ ತೆಗೆದಿ? ನೀನು ಫಸ್ಟಾ, ಸೆಕೆಂಡಾ? ಫಸ್ಟ್ ಬಂದಿಲ್ಲ ಯಾಕೆ? ಹೀಗೆ ನಂಬರ್ಸ್ ಅನ್ನೋದು ಭಾರತದ ಪ್ರತಿ ಫ್ಯಾಮಿಲಿಯೊಳಗಿರುವ ಮ್ಯಾಟರ್. ನಂಬರ್ಸ್ ಮೇಲೆಯೇ ಅಚೀವ್ಮೆಂಟ್ನ್ನ ಅಳೆಯೋದು ರೂಢಿಯಾಗಿದೆ. ಪ್ರತಿ ಬಾರಿಯೂ ನೆಕ್ಟ್ಸ್ ಟೈಮ್ ಅಷ್ಟು ಮಾರ್ಕ್ಸ್ ಗಳಿಸಬೇಕು. ಇಷ್ಟು ರನ್ ಮಾಡಬೇಕು ಅನ್ನೋದನ್ನ ಫೋರ್ಸ್ ಮಾಡಲಾಗುತ್ತೆ. ಇದೀ ಟಿ20 ವರ್ಲ್ಡ್ಕಪ್ ನಲ್ಲೂ ಕೊಹ್ಲಿಯ ಫಾರ್ಮ್ ಬಗ್ಗೆಯೂ ಇದೇ ಮೈಂಡ್‌ಸೆಟ್ ನಲ್ಲಿದ್ದಾರೆ ಅನೇಕರು. ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು ಒಬ್ಬ ಭಾರತೀಯನ ಬಳಿ ಕೇಳ್ತಾರಂತೆ. ಯಾಕೆ ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಅಷ್ಟೊಂದು ವರ್ಲ್ಡ್ಕಪ್ಗಳನ್ನ ಗೆಲ್ಲೋಕೆ ಸಾಧ್ಯವಾಗುತ್ತೆ. ಟೀಂ ಇಂಡಿಯಾಗೆ ಯಾಕೆ ಆಗೋದಿಲ್ಲ ಅಂತಾ. ಅದಕ್ಕೆ ಭಾರತೀಯ ಹೇಳ್ತಾನಂತೆ, ನಮ್ಮ ದೇಶದಲ್ಲಿ ಮಗ ಫ್ರೆಂಡ್ಸ್ ಜೊತೆ ಕ್ರಿಕೆಟ್ ಆಡಿ ಮನೆಗೆ ಬಂದಾಗ ನೀನು ಎಷ್ಟು ರನ್ ಹೊಡೆದಿ? ಎಷ್ಟು ವಿಕೆಟ್ ಪಡೆದಿ ಅಂತಷ್ಟೇ ಪೋಷಕರು ಕೇಳ್ತಾರೆ. ಆದ್ರೆ ಆಸ್ಟ್ರೇಲಿಯಾದ ಪೇರೆಂಟ್ಸ್ ಹಾಗಲ್ಲ, ನಿಮ್ಮ ಟೀಂ ಮ್ಯಾಚ್ ಗೆಲ್ತಾ ಅಂತಾ ಪ್ರಶ್ನಿಸ್ತಾರೆ. ಅದು ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ಗೆ ಇರುವ ಡಿಫರೆನ್ಸ್ ಅನ್ನೋದು. ಈ ಮಾತು ನಿಜ.. ನಾವು ಟೀಂಗಿಂತ ಹೆಚ್ಚಾಗಿ ಇಂಡಿವಿಜ್ಯುವಲ್ ಪ್ಲೇಯರ್ಸ್ಗಳಿಗೆ ಹೆಚ್ಚು ಪ್ರಿಫರೆನ್ಸ್ ಕೊಡ್ತೀವಿ. ಆ ಒಬ್ಬ ಆಟಗಾರ ಆಡಿದ್ರಷ್ಟೇ  ಗೆಲ್ಲೋಕೆ ಸಾಧ್ಯ ಅಂತಾ ಬಿಂಬಿಸ್ತೀವಿ. ಇದು ಕೂಡ ತಪ್ಪೇ.. ಎನಿವೇ.. ವಿರಾಟ್ ಕೊಹ್ಲಿಯನ್ನ ದೂಷಿಸುವವರು, ಅವರ ಸಹ ಆಟಗಾರರನ್ನು ನೋಡಿ ಕಲಿಯಬೇಕು. ಈ ಬಾರಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ 7 ಇನಿಂಗ್ಸ್​ಗಳಿಂದ ಕಲೆಹಾಕಿರುವುದು ಕೇವಲ 75 ರನ್​ಗಳು ಮಾತ್ರ. ಇತ್ತ ಕೊಹ್ಲಿ ಓಪನರ್ ಆಗಿ ಆಡುತ್ತಿರುವ ಕಾರಣ ಅತ್ತ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಬೆಂಚ್ ಕಾಯುತ್ತಿದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿಯ ಆಟಕ್ಕೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೆಂಬಲ ಸೂಚಿಸಿದ್ದಾರೆ. ವಿರಾಟ್ ಕೊಹ್ಲಿ ಗುಣಮಟ್ಟದ ಆಟಗಾರ. ಕೊಹ್ಲಿಗೆ ಫಾರ್ಮ್ ಎಂದಿಗೂ ಸಮಸ್ಯೆಯಲ್ಲ. ನೀವು 15 ವರ್ಷಗಳ ಕಾಲ ಕ್ರಿಕೆಟ್ ಆಡಿರುವಾಗ, ಫಾರ್ಮ್ ಎಂದಿಗೂ ಸಮಸ್ಯೆಯಾಗಲ್ಲ. ಬಹುಶಃ ವಿರಾಟ್ ಕೊಹ್ಲಿ ತಮ್ಮ ಆಟವನ್ನು ಫೈನಲ್‌ಗಾಗಿ ಉಳಿಸುತ್ತಿದ್ದಾರೆ ಎಂದು ಅಂದ್ಕೋತೀನಿ. ಹೀಗಾಗಿ ಫೈನಲ್ ಚೆನ್ನಾಗಿ ಆಡ್ತಾರೆಂಬ ವಿಶ್ವಾಸವಿದೆ. ಈ ಬಗ್ಗೆ ನಮಗೆ ಯಾವುದೇ ಚಿಂತೆಯಿಲ್ಲ ಎಂದು ರೋಹಿತ್ ಶರ್ಮಾ ವಿರಾಟ್ ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಕಳೆದ ಆರು ಪಂದ್ಯಗಳಲ್ಲಿ ವಿಫಲರಾಗಿದ್ದ ಕೊಹ್ಲಿ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಒಂದಂಕಿ ಮೊತ್ತಕ್ಕೆ ಔಟಾದಾಗ ಸಹಜವಾಗಿಯೇ ಅಭಿಮಾನಿಗಳು ನೋವು ಪಟ್ಕೊಂಡಿದ್ದಂತೂ ಹೌದು. ಇತ್ತ ನಿರ್ಣಾಯಕ ಪಂದ್ಯದಲ್ಲಿ ಬೇಗನೆ ವಿಕೆಟ್ ಒಪ್ಪಿಸಿದ ಬೇಸರದಲ್ಲಿ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ ನತ್ತ ನಡೆದರು. ಅವರು ಹಾಕಿದ ಒಂದೊಂದು ಹೆಜ್ಜೆಯಲ್ಲೂ ನೋವಿನ ತೀವ್ರತೆ ಕಾಣುತ್ತಿತ್ತು. ನಂತರ ಡ್ರೆಸ್ಸಿಂಗ್ ರೂಮ್ ಹೊರಗೆ ಕೂತಿದ್ದ ವಿರಾಟ್ ಮುಖದಲ್ಲಿ ಭಾವುಕತೆಯಿತ್ತು. ನಿರ್ಣಾಯಕ ಪಂದ್ಯದಲ್ಲಿ ತನ್ನಿಂದ ಕೊಡುಗೆ ಕೊಡಲಾರದ ಕೊರಗು ಎದ್ದು ಕಾಣುತ್ತಿತ್ತು. ಈ ವೇಳೆ ವಿರಾಟ್ ಕೊಹ್ಲಿ ಬಳಿ ಆಗಮಿಸಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸಮಾಧಾನ ಪಡಿಸಿದ್ರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ದ್ರಾವಿಡ್ ಅವರು ತನ್ನ ಆಟಗಾರನ ಜೊತೆ ಈ ಕಠಿಣ ಸಂದರ್ಭದಲ್ಲಿ ನಿಂತು ಧೈರ್ಯ ಹೇಳಿರುವುದಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ರೋಹಿತ್ ಮತ್ತು ಕೊಹ್ಲಿ ಮಧ್ಯೆ ಇರೋ ಬ್ರೋಮ್ಯಾನ್ಸ್. ಪ್ರತಿ ಮ್ಯಾಚ್ಗೂ ಮುನ್ನ ನೆಟ್ ಪ್ರಾಕ್ಟೀಸ್ ವೇಳೆ ಇಬ್ಬರೂ ಡೀಪ್ ಆಗಿ ಡಿಸ್ಕಸ್ ಮಾಡ್ತಾರೆ. ಮ್ಯಾಚ್ ವೇಳೆಯೂ ಅಷ್ಟೇ, ಅಂದ್ರೆ ಫೀಲ್ಡಿಂಗ್ ಸಂದರ್ಭದಲ್ಲಿ ರೋಹಿತ್-ವಿರಾಟ್ ಆಗಾಗ ಚರ್ಚೆ ನಡೆಸುತ್ತಾ ಸ್ಟ್ರ್ಯಾಟಜಿ ಮಾಡ್ತಾರೆ. ರೋಹಿತ್ ಶರ್ಮಾಗೆ ವಿರಾಟ್ ಟಿಪ್ಟ್​ಗಳನ್ನ ನೀಡ್ತಾನೆ ಇರ್ತಾರೆ. ತಮ್ಮ ಐಡಿಯಾವನ್ನ ಶೇರ್ ಮಾಡಿಕೊಳ್ತಾನೆ ಇರ್ತಾರೆ. ಇಬ್ಬರ ಪ್ಲ್ಯಾನ್ ಕೂಡ ವರ್ಕೌಟ್ ಆಗಿ ವಿಕೆಟ್ ಬಿದ್ದಾಗ ರೋಹಿತ್ ಮತ್ತು ಕೊಹ್ಲಿ ಪರಸ್ಪರ ಸೆಲೆಬ್ರೇಷನ್ ನಡೆಸೋದ್ರಲ್ಲೇ ಸ್ಪಷ್ಟವಾಗ್ತಿದೆ. ಬ್ಯಾಟಿಂಗ್ ಮಾತ್ರವಲ್ಲ ಓವರ್ ಆಲ್ ಆಗಿ ರೋಹಿತ್ ಮತ್ತು ಕೊಹ್ಲಿ ಎದುರಾಳಿಗಳ ಪಾಲಿಗೆ ಅತ್ಯಂತ ಡೇಂಜರಸ್ ಕಾಂಬಿನೇಷನ್ ಆಗಿದ್ದಾರೆ. ಆದ್ರೆ, ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾಗೆ ಕೊಹ್ಲಿ ಸಂಪೂರ್ಣ ಸಾಥ್ ನೀಡಲಾಗದೇ ಒದ್ದಾಡ್ತಿದ್ದಾರೆ. ರೋಹಿತ್ ಜೊತೆ ಸೇರಿ ದೊಡ್ಡ ಇನ್ನಿಂಗ್ಸ್ ಕಟ್ಟಲಾಗದ ನೋವಲ್ಲಿದ್ದಾರೆ. ಆದ್ರೆ, ಇಲ್ಲೇ ನೋಡಿ ಇವರಿಬ್ಬರ ರಿಲೇಷನ್ ಶಿಪ್ ಅರ್ಥವಾಗೋದು. ನೀವು ಗಮನಿಸರಬಹುದು. ಕೊಹ್ಲಿ ಪ್ರತಿಬಾರಿ ಔಟಾದಾಗಲು ಮೊದಲು ಬೇಸರ ಹೊರಹಾಕೋದು ರೋಹಿತ್ ಶರ್ಮಾ, ಅದು ಕೊಹ್ಲಿ ಮೇಲಿನ ಬೇಸರ ಅಲ್ಲ. ಅದೊಂಥರಾ ಬ್ರೋಮ್ಯಾನ್ಸ್. ತನ್ನ ಜೊತೆ ಇನ್ನಿಂಗ್ಸ್ ಕಟ್ಟುವ ಮಹದಾಸೆಯೊಂದಿಗೆ ಬಂದ ಕೊಹ್ಲಿ ಬೇಗ ಔಟಾಗಿ ನಿರಾಶೆಯಿಂದ ಹೋಗುವುದನ್ನ ನೋಡಲಾಗದೇ ರೋಹಿತ್ ಶರ್ಮಾ ಬೇಜಾರು ಮಾಡಿಕೊಳ್ತಾರೆ. ಬ್ಯಾಟಿಂಗ್ ವೇಳೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಅಂಥಾ ಪಾಟ್ನರ್ಶಿಪ್ ಈ ಬಾರಿಯೂ ಬಿಲ್ಡ್ ಆಗಿಲ್ಲ. ಆದ್ರೆ, ಇಬ್ಬರ ನಡುವಿನ ಬಾಂಡಿಂಗೂ ಪ್ರತಿ ಪಂದ್ಯದಲ್ಲೂ ಹೆಚ್ಚಾಗಿ ಬಿಲ್ಡ್ ಆಗ್ತಿದೆ. ಈಗಲೂ ಹಾಗೇ ಆಗಿದೆ. ಇನ್ಯಾವ ಬ್ಯಾಟರ್ ಆಗಿದ್ರೂ ಪ್ರತಿ ಪಂದ್ಯದಲ್ಲೂ ಬ್ಯಾಟಿಂಗ್ ನಲ್ಲಿ ಫೆಲ್ಯೂರ್ ಆಗಿದಿದ್ರೆ ಹಿಟ್ ಮ್ಯಾನ್ ತನ್ನ ಆಕ್ರೋಶ ತೋರಿಸಿಕೊಳ್ತಿದ್ರು. ಆದ್ರೆ, ಹಿಟ್ ಮ್ಯಾನ್ ನಂಬಿದ್ದು ರನ್ ಮೆಷೀನ್ ನನ್ನು. ವಿರಾಟ್ ಕೊಹ್ಲಿ ಎಂಥಾ ಆಟಗಾರ ಅನ್ನೋದನ್ನು ಕ್ರಿಕೆಟ್ ಲೋಕಕ್ಕಿಂತಲೂ ಜಾಸ್ತಿ ರೋಹಿತ್ ಶರ್ಮಾಗೆ ಗೊತ್ತು. ಅದಕ್ಕಾಗಿಯೇ ಪ್ರತಿಬಾರಿಯೂ ಕೊಹ್ಲಿ ಜೊತೆ ನಿಲ್ತಾರೆ. ಗೆದ್ದಾಗ ಖುಷಿಪಡ್ತಾರೆ. ಫಾರ್ಮ್ ಕಳೆದುಕೊಂಡರೆ ಜೊತೆಯಲ್ಲೇ ನಿಂತು ಧೈರ್ಯ ತುಂಬ್ತಾರೆ. ಅದಕ್ಕೇ ಈ ಬಾರಿ ಕೂಡಾ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಆಡ್ತಾರೆ ಅಂತಾ ರೋಹಿತ್ ಶರ್ಮಾ ಹೇಳಿರೋದು. ರೋಹಿತ್ ಶರ್ಮಾ ನಂಬಿಕೆಯಂತೆ, ಕೋಚ್ ರಾಹುಲ್ ದ್ರಾವಿಡ್ ಅವರ ಸಪೋರ್ಟ್‌ನಿಂದ ವಿರಾಟ್ ಕೊಹ್ಲಿ ಫೈನಲ್‌ನಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟಲಿ ಅನ್ನೋದೇ ಕೋಟಿ ಕೋಟಿ ಅಭಿಮಾನಿಗಳ ಆಶಯ.

Shwetha M

Leave a Reply

Your email address will not be published. Required fields are marked *