3 ಮ್ಯಾಚ್.. ಕೊಹ್ಲಿ 30 ರನ್ – ಚಿನ್ನಸ್ವಾಮಿಯಲ್ಲೇ ಕೈಕೊಟ್ಟ ಪಾಂಡ್ಯ
ತವರಲ್ಲಿ ವಿರಾಟ್ & ಕೃನಾಲ್ ಫ್ಲ್ಯಾಪ್ ಶೋ

ಸ್ಪೋರ್ಟ್ಸ್ ಅಂತಾ ಬಂದಾಗ ಪ್ರತಿಯೊಂದು ಟೀಮ್ಗೆ ಹೋಂ ಗ್ರೌಂಡ್ ಅನ್ನೋದು ಅಡ್ವಾಂಟೇಜಸ್ ಇದ್ದೇ ಇರುತ್ತೆ. ಬಟ್ ಬ್ಯಾಡ್ಲಕ್ ನಮ್ಮ ಆರ್ಸಿಬಿಗೆ ಈ ಸಲ ತವರು ಮೈದಾನವೇ ವಿಲನ್ ಆಗಿ ಕಾಡ್ತಾ ಇದೆ. ಈ ಇಬ್ಬರು ಆಟಗಾರರಿಗೂ ತಮ್ಮ ರಿಯಲ್ ಪರ್ಪಾಮೆನ್ಸ್ ತೋರಿಸೋಕೆ ಆಗ್ತಾ ಇಲ್ಲ. ಅದ್ರಲ್ಲಿ ಒಂದು ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ ಹಾಗೇ ಬೌಲಿಂಗ್ನಲ್ಲಿ ಕೃನಾಲ್ ಪಾಂಡ್ಯ. ಇವ್ರಿಬ್ಬರು ಬೇರೆ ಮೈದಾನಗಳಲ್ಲಿ ಹುಲಿಯಂತೆ ಮೆರೆದ್ರೂ ಕೂಡ ಚಿನ್ನಸ್ವಾಮಿಯಲ್ಲಿ ಸೈಲೆಂಟ್ ಆಗ್ತಿರೋದೇ ದೊಡ್ಡ ಹೊಡೆತ ಕೊಡ್ತಿದೆ.
ಇದನ್ನೂ ಓದಿ : 3 ಮ್ಯಾಚ್.. NOT OUT ವಿರಾಟ್ – ಬೆನ್ನಟ್ಟಿ ಗೆಲ್ಲೋದ್ರಲ್ಲಿ ಇವ್ರೇ KING!
ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ ಈ ಸೀಸನ್ನಲ್ಲಿ ಮೂರು ಮ್ಯಾಚ್ ಆಡಿದೆ. ಈ ಮೂರೂ ಪಂದ್ಯಗಳಲ್ಲಿ ಸೋತಿದೆ. ಈ ಪಂದ್ಯಗಳಲ್ಲಿ ಕೃನಾಲ್ ಪಾಂಡ್ಯ ಫ್ಲ್ಯಾಪ್ ಶೋ ತೋರಿಸಿದ್ದಾರೆ. ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಎದುರಿನ ಮ್ಯಾಚ್ಗಳಲ್ಲಿ ರನ್ಗಳನ್ನ ಕಂಟ್ರೋಲ್ ಮಾಡೋಕೇ ಆಗಿಲ್ಲ. ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ 3 ಪಂದ್ಯಗಳಿಂದ 6 ಓವರ್ ಬೌಲಿಂಗ್ ಮಾಡಿರೋ ಕೃನಾಲ್ ಪಾಂಡ್ಯ ಒಂದೇ ಒಂದು ವಿಕೆಟ್ ಪಡೆಯೋಕೂ ಸಾಧ್ಯವಾಗಿಲ್ಲ. ವಿಕೆಟ್ ಲೆಸ್ ಆಗಿರೋ ಕೃನಾಲ್ 63 ರನ್ ನೀಡಿದ್ದಾರೆ. 10.50ರ ಏಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಬಟ್ ತವರಿನ ಆಚೆಗಿನ ಪಂದ್ಯಗಳಲ್ಲಿ ಮಾತ್ರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಪಂಜಾಬ್ ಕಿಂಗ್ಸ್ ಎದುರು ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಗೆಲುವಿನ ಆಲ್ರೌಂಡರ್ ಕೃನಾಲ್ ಪಾಂಡ್ಯ ದೊಡ್ಡ ಕೊಡುಗೆ ನೀಡಿದ್ರು. ಪಂಜಾಬ್ ಕಿಂಗ್ಸ್ ಪರ ಘರ್ಜಿಸುತ್ತಿದ್ದ ಓಪನರ್ಸ್ಗೆ ಪೆವಿಲಿಯನ್ ಹಾದಿ ತೋರಿಸಿದ್ದೇ ಪಾಂಡ್ಯ. ಸ್ಪೋಟಕ ಬ್ಯಾಟಿಂಗ್ ನಡೆಸ್ತಿದ್ದ ಪ್ರಿಯಾಂಶ್ ಆರ್ಯ, ಪ್ರಬ್ ಸಿಮ್ರಾನ್ ಸಿಂಗ್ ಸ್ಫೋಟಕ ಇನ್ನಿಂಗ್ಸ್ನ ಹಿಂಟ್ ಕೊಟ್ಟಿದ್ರು. ಬಟ್ ಬೌಲಿಂಗ್ಗೆ ಇಳಿದ ಪಾಂಡ್ಯ ಅವ್ರ ಬ್ಯಾಟ್ ಸೌಂಡ್ ಮಾಡೋ ಮುನ್ನವೇ ವಿಕೆಟ್ ಕಿತ್ತಿದ್ರು. ಅಲ್ದೇ ಹೊರಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ಕೊಲ್ಕತ್ತಾ ಎದುರು ಆಡಿದ್ದ ಮೊದಲ ಪಂದ್ಯದಲ್ಲೇ ಕೃನಾಲ್ 3 ವಿಕೆಟ್ ಬೇಟೆಯಾಡಿ ಮ್ಯಾಚ್ ವಿನ್ನರ್ ಆಗಿ ಮೆರೆದಾಡಿದ್ರು. ಆ ಬಳಿಕ ಚೆನ್ನೈನಲ್ಲಿ ಸಿಎಸ್ಕೆ ಎದುರು ಜವಾಬ್ದಾರಿಯುತ ಆಟವಾಡಿದ್ರು. ವಾಂಖೆಡೆಯಲ್ಲಿ ರನ್ನಲ್ಲಿ ದುಬಾರಿಯಾದ್ರೂ ಪ್ರಮುಖ 4 ವಿಕೆಟ್ ಬೇಟೆಯಾಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಜೈಪುರದಲ್ಲಿ ರಾಜಸ್ಥಾನ್ ಎದುರು ಎಕಾಮಿಕಲ್ ಸ್ಪೆಲ್ ಹಾಕಿ ಮಿಂಚಿದ್ರು. ತವರಿನಾಚೆ 5 ಪಂದ್ಯಗಳನ್ನಾಡಿರುವ ಕೃನಾಲ್, 18 ಓವರ್ ಬೌಲಿಂಗ್ ಮಾಡಿ 10 ವಿಕೆಟ್ ಬೇಟೆಯಾಡಿದ್ದಾರೆ. 8.55ರ ಏಕಾನಮಿಯಲ್ಲಿ 154 ರನ್ ನೀಡಿದ್ದಾರೆ.
ಇನ್ನು ಚಿನ್ನಸ್ವಾಮಿ ಪಂದ್ಯಗಳಂದ್ರೆ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳು ಇರುತ್ವೆ. ಆದ್ರೆ ವಿರಾಟ್ ಇಲ್ಲಿಯೇ ಫೇಲ್ಯೂರ್ ಆಗ್ತಿದ್ದಾರೆ. ಆಡಿದ ಮೂರು ಮ್ಯಾಚ್ಗಳಲ್ಲೂ ಹೇಳಿಕೊಳ್ಳುವಂತ ಪರ್ಫಾಮೆನ್ಸ್ ಬಂದಿಲ್ಲ. ಗುಜರಾತ್ ವಿರುದ್ಧದ ಮ್ಯಾಚಲ್ಲಿ ಜಸ್ಟ್ 7 ರನ್ಗೆ ಔಟ್ ಆಗಿದ್ದ ಕೊಹ್ಲಿ ಆ ಬಳಿಕ ಡಿಸಿ ವಿರುದ್ಧದ ಮ್ಯಾಚಲ್ಲಿ 22 ರನ್ಗಳಿಗೆ ಆಟ ಮುಗಿಸಿದ್ರು. ಪಂಜಾಬ್ ವಿರುದ್ಧದ ಮ್ಯಾಚಲ್ಲಿ 1 ರನ್ ಅಷ್ಟೇ ಬಂದಿದ್ದು. ಸೋ ಹೋಂ ಗ್ರೌಂಡ್ನಲ್ಲಿ ಮೂರು ಪಂದ್ಯ ಆಡಿದ್ದ ಕೊಹ್ಲಿ ಜಸ್ಟ್ 30 ರನ್ ಅಷ್ಟೇ ಕಲೆಹಾಕಿರೋದು. ಬಟ್ ಹೊರಗೆ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಅರ್ಧಶತಕಗಳು ಬಂದಿವೆ.