ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸ್ಕ್ವಾಡ್‌ನಿಂದ ಕೊಹ್ಲಿ ಔಟ್? – ವಿರಾಟ್ ಕೊಹ್ಲಿ RCBಗೆ ಜಾಯಿನ್ ಆಗಲ್ವಾ?

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸ್ಕ್ವಾಡ್‌ನಿಂದ ಕೊಹ್ಲಿ ಔಟ್? – ವಿರಾಟ್ ಕೊಹ್ಲಿ RCBಗೆ ಜಾಯಿನ್ ಆಗಲ್ವಾ?

ವಿರಾಟ್ ಕೊಹ್ಲಿ ವಿಚಾರದಲ್ಲಿ ನಿಜಕ್ಕೂ ಸೆನ್ಸೇಷನಲ್​​ ಡೆವಲಪ್​ಮೆಂಟ್​​ಗಳಾಗ್ತಾ ಇದೆ. ಎಲ್ಲರ ಫೋಕಸ್ ಈಗ ಕೊಹ್ಲಿಯ ಕಡೆಗೆ ಶಿಫ್ಟ್ ಆಗಿದೆ. ವಂಡೇ ವರ್ಲ್ಡ್​​ಕಪ್​ ಫೈನಲ್ ಬಳಿಕ ಕೊಹ್ಲಿ ಟೀಂ ಇಂಡಿಯಾ ಪರ ಆಡಿರೋದು ಕೇವಲ ನಾಲ್ಕು ಮ್ಯಾಚ್​ಗಳು ಮಾತ್ರ. ಸೌತ್​ ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಎರಡು ಟಿ20 ಮ್ಯಾಚ್​​ಗಳು. ಇದಾದ್ಮೇಲೆ ಇಂಗ್ಲೆಂಡ್​ ವಿರುದ್ಧದ ಐದೂ ಟೆಸ್ಟ್​ ಮ್ಯಾಚ್​​ಗಳನ್ನ ಕೂಡ ಕೊಹ್ಲಿ ಆಡಿಲ್ಲ. ಅಷ್ಟೇ ಅಲ್ಲ, ಕೊಹ್ಲಿ ಕಮ್​ಬ್ಯಾಕ್ ಮಾಡೋದು ಯಾವಾಗ ಅನ್ನೋದು ಕೂಡ ಯಾರಿಗೂ ಗೊತ್ತಿಲ್ಲ. ಬಿಸಿಸಿಐಗೂ ಈ ಬಗ್ಗೆ ಕ್ಲ್ಯಾರಿಟಿ ಇಲ್ಲ. ಇವೆಲ್ಲದ್ರ ಪರಿಣಾಮ ಈಗ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಯ ಪ್ಲೇಸ್​ಮೆಂಟ್​​ಗೆ ಕಂಟಕ ಎದುರಾಗಿದೆ. ಟಿ20 ವರ್ಲ್ಡ್​​ಕಪ್​​ಗೆ ಟೀಂ ಇಂಡಿಯಾ ಸ್ಕ್ವಾಡ್​​ನಿಂದಲೇ ಕೊಹ್ಲಿ ಔಟಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಮಾತಾಡಿದ್ಯಾಕೆ?- ಹಿಟ್‌ಮ್ಯಾನ್ ದಿಢೀರ್ ಈ ನಿರ್ಧಾರಕ್ಕೆ ಬಂದಿದ್ಯಾಕೆ? 

ಐಪಿಎಲ್​​ ಆದ ಕೂಡಲೇ ಜೂನ್​ನಲ್ಲಿ ಟಿ20 ವರ್ಲ್ಡ್​​ಕಪ್​ ನಡೀತಾ ಇದೆ. ವಿಶ್ವಕಪ್​​ಗೆ ಟೀಂ ಇಂಡಿಯಾ ಸ್ಕ್ವಾಡ್ ಇನ್ನಷ್ಟು ಅನೌನ್ಸ್ ಆಗಬೇಕಿದೆ. ಮೇ ಮೊದಲ ವಾರದಲ್ಲೇ ಬಿಸಿಸಿಐ ವರ್ಲ್ಡ್​​ಕಪ್​ಗೆ ಅಂತಾ 15 ಮಂದಿ  ಪ್ಲೇಯರ್ಸ್​ಗಳ ಹೆಸರನ್ನ ಬಿಸಿಸಿಐ​ ಅನೌನ್ಸ್​ ಮಾಡುತ್ತೆ. ಮೇ 23ಕ್ಕೆ ಟೀಂನಲ್ಲಿ ಏನಾದ್ರೂ ಚೇಂಜೆಸ್​ಗಳಿದ್ರೆ ಅದನ್ನ ಕೂಡ ಫೈನಲ್ ಮಾಡಲಾಗುತ್ತೆ. ಟಿ20 ವರ್ಲ್ಡ್​​ಕಪ್​ಗೆ ಸಂಬಂಧಿಸಿ ಬಿಸಿಸಿಐ ಒಂದು ವಿಚಾರದಲ್ಲಿ ಮಾತ್ರ ಕ್ಲ್ಯಾರಿಟಿ ಕೊಟ್ಟಿದೆ. ಟೀಂ ಇಂಡಿಯಾವನ್ನ ರೋಹಿತ್ ಶರ್ಮಾರೇ ಲೀಡ್ ಮಾಡ್ತಾರೆ ಅನ್ನೋದಾಗಿ. ಹೀಗಾಗಿ ಸ್ಕ್ವಾಡ್​ನಲ್ಲಿ ರೋಹಿತ್ ಶರ್ಮಾ ಪ್ಲೇಸ್ ಅಂತೂ ಫಿಕ್ಸ್ ಆಗಿದೆ. ಇನ್ನುಳಿದಂತೆ ಐಪಿಎಲ್​​ನಲ್ಲಿ ಪ್ಲೇಯರ್ಸ್​ಗಳ ಪರ್ಫಾಮೆನ್ಸ್ ನೋಡಿಕೊಂಡು ಬಿಸಿಸಿಐ ವರ್ಲ್ಡ್​​ಕಪ್​​ ಟೀಂಗೆ ಆಟಗಾರರನ್ನ ಸೆಲೆಕ್ಟ್ ಮಾಡಲಾಗುತ್ತೆ. ಆದ್ರೆ ಇಲ್ಲಿ ಬಿಗ್ ಕ್ವಶ್ಚನ್ ಮಾರ್ಕ್ ಆಗಿರೋದು ಟೀಂ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ. ಇಡೀ ಇಂಗ್ಲೆಂಡ್ ವಿರುದ್ಧದ ಸೀರಿಸ್​ನಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಅವೈಲೇಬಲ್ ಆಗಿಲ್ಲದೇ ಇದ್ದಿದ್ರಂದ ಇದೀಗ ಬಿಸಿಸಿಐ ಅತ್ಯಂತ ಶಾರ್ಪ್​ ಡಿಸೀಶನ್​​ ತೆಗೆದುಕೊಳ್ಳೋಕೆ ಚಿಂತನೆ ನಡೆಸ್ತಿದ್ಯಂತೆ. ಟಿ20 ವರ್ಲ್ಡ್​​ಕಪ್​​ ಸ್ಕ್ವಾಡ್​​ನಿಂದ ವಿರಾಟ್ ಕೊಹ್ಲಿಯನ್ನ ಡ್ರಾಪ್ ಮಾಡೋಕೆ ಪ್ಲ್ಯಾನ್ ಮಾಡ್ತಿದ್ಯಂತೆ. ಈ ಬಗ್ಗೆ ಸಾಕಷ್ಟು ಮೀಡಿಯಾ ರಿಪೋರ್ಟ್ಸ್ ಕೂಡ ಈಗ ಪಬ್ಲಿಶ್ ಆಗಿದೆ.

ಸೆಲೆಕ್ಟರ್ಸ್ ಪ್ರಕಾರ ಟಿ20 ಫಾರ್ಮೆಟ್​​ನಲ್ಲಿ ವಿರಾಟ್ ಕೊಹ್ಲಿ ಇತ್ತೀಚೆಗೆ ಅಷ್ಟಾಗಿ ಪರ್ಫಾಮ್ ಮಾಡ್ತಾ ಇಲ್ಲ. ಆದ್ರೆ ಒಂದು ವೇಳೆ ಈ ಬಾರಿಯ ಐಪಿಎಲ್​​ನಲ್ಲಿ ಕೊಹ್ಲಿ ಟಾಪ್​ ಕ್ಲಾಸ್ ಬ್ಯಾಟಿಂಗ್ ಮಾಡಿದ್ರೆ ಸೆಲೆಕ್ಷನ್ ಕಮಿಟಿ ಕೂಡ ತನ್ನ ಡಿಸೀಶನ್​ನನ್ನ ಚೇಂಜ್ ಮಾಡಬಹುದು ಅಂತಾ ಹೇಳಲಾಗ್ತಿದೆ. ಇನ್ನೂ ಕೆಲ ರಿಪೋರ್ಟ್​ಗಳ ಪ್ರಕಾರ, ಯಂಗ್​ಸ್ಟರ್ಸ್​ಗಳಿಗೆ ಟೀಮ್​​ನಲ್ಲಿ ಅವಕಾಶ ನೀಡೋಕೆ ದಾರಿ ಮಾಡಿಕೊಡುವಂತೆ ವಿರಾಟ್ ಕೊಹ್ಲಿಯನ್ನ ಕನ್ವಿನ್ಸ್ ಮಾಡಿ ಅಂತಾ ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್​ಕರ್​ಗೆ ಬಿಸಿಸಿಐ ಸೂಚಿಸಿದ್ಯಂತೆ. ಹೀಗಾಗಿ ಅಜಿತ್ ಅಗರ್​ಕರ್ ಕೂಡ ವಿರಾಟ್ ಕೊಹ್ಲಿ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರಂತೆ. ಟಿ20 ಫಾರ್ಮೆಟ್​​ನಲ್ಲಿ ಕೊಹ್ಲಿ ಬ್ಯಾಟಿಂಗ್​ನಲ್ಲಿ ಬದಲಾವಣೆಯಾಗಬೇಕಾದ ಅವಶ್ಯಕತೆ ಇದೆ. ಟಿ20 ಆಡೋವಾಗ ಅಪ್ರೋಚ್​​ನ್ನ ಬದಲಾಯಿಸಬೇಕು. ಇನ್ನಷ್ಟು ಅಗ್ರೆಸ್ಸಿವ್ ಆಗಿ ಆಡಬೇಕು ಅಂತಾ ವಿರಾಟ್ ಕೊಹ್ಲಿ ಜೊತೆಗೆ ಅಜಿತ್​ ಅಗರ್​​ಕರ್ ಮಾತುಕತೆ ನಡೆಸಿದ್ದಾರಂತೆ. 2022ರಲ್ಲಿ ಟಿ20 ವರ್ಲ್ಡ್​​ಕಪ್​​ ಬಳಿಕ ವಿರಾಟ್ ಕೊಹ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಯಾವುದೇ ಟಿ20 ಮ್ಯಾಚ್​ಗಳನ್ನ ಆಡಿಲ್ಲ. ಅಫ್ಘಾನಿಸ್ತಾನ ವಿರುದ್ಧ ಎರಡು ಮ್ಯಾಚ್​​ಗಳಲ್ಲೊ ಕೊಹ್ಲಿಯ ಹೈಯೆಸ್ಟ್ ಸ್ಕೋರ್ 29 ರನ್. ಹೀಗಾಗಿ ಟಿ20 ಫಾರ್ಮೆಟ್​​ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಸೆಲೆಕ್ಷನ್ ಕಮಿಟಿ ಕನ್ಸರ್ನ್ ವ್ಯಕ್ತಪಡಿಸಿದೆ.

ಇದ್ರ ಜೊತೆಗೆ ವಿರಾಟ್ ಕೊಹ್ಲಿ ವಿಚಾರದಲ್ಲಿ ಸಲೆಕ್ಷನ್ ಕಮಿಟಿ ಇನ್ನೊಂದು ಸೂಕ್ಷ್ಮ ಸಂಗತಿಯನ್ನ ಕೂಡ ರೇಸ್ ಮಾಡಿದ್ಯಂತೆ. ನಿಮಗೆ ಗೊತ್ತಿರೋ ಹಾಗೆ ವೆಸ್ಟ್​ಇಂಡೀಸ್​​ ಮತ್ತು ಅಮೆರಿಕದಲ್ಲಿ ಈ ಬಾರಿಯ ಟಿ20 ವರ್ಲ್ಡ್​ಕಪ್ ನಡೀತಾ ಇದೆ. ಈ ಪೈಕಿ ವೆಸ್ಟ್​​ಇಂಡೀಸ್​​ನಲ್ಲೇ ಹೆಚ್ಚಿನ ಮ್ಯಾಚ್​ಗಳು ನಡೆಯುತ್ತೆ. ಆದ್ರೆ ವೆಸ್ಟ್​​ಇಂಡೀಸ್​ನದ್ದು ಸ್ಲೋ ವಿಕೆಟ್​ಗಳಾಗಿರುತ್ತೆ. ಬಿಸಿಸಿಐ ಸಲೆಕ್ಷನ್ ಕಮಿಟಿ ಪ್ರಕಾರ ಇಂಥಾ ಸ್ಲೋ ಪಿಚ್​ಗಳು ವಿರಾಟ್ ಕೊಹ್ಲಿಯ ಬ್ಯಾಟಿಂಗ್​ ಶೈಲಿಗೆ ಸೂಟ್ ಆಗೋದಿಲ್ವಂತೆ. ಕೊಹ್ಲಿಯ ನ್ಯಾಚ್ಯುರಲ್ ಬ್ಯಾಟಿಂಗ್​​ ಸ್ಟೈಲ್​ಗೆ ವೆಸ್ಟ್​ಇಂಡೀಸ್​ನ ಪಿಚ್​ಗಳ ಸೆಟ್ ಆಗೋದಿಲ್ಲ ಅನ್ನೋ ಸೆಲೆಕ್ಷನ್ ಕಮಿಟಿ ಮೆಂಬರ್ಸ್​ಗಳ ಒಪೀನಿಯನ್. ಹೀಗಾಗಿ ಟಿ20 ವರ್ಲ್ಡ್​ಕಪ್ ಸ್ಕ್ವಾಡ್​​ನಿಂದ ವಿರಾಟ್ ಕೊಹ್ಲಿಯನ್ನ ಡ್ರಾಪ್ ಮಾಡಿ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್ ಅಥವಾ ಶಿವಮ್ ದುಬೆಯನ್ನ ಮಿಡ್ಲ್ ಆರ್ಡರ್​​ನ್ನ ಕ್ರೀಸ್​ಗಿಳಿಸೋದು ಬೆಟರ್​ ಅನ್ನೋ ಲೆಕ್ಕಾಚಾರದಲ್ಲಿ ಅಜಿತ್ ಅಗರ್​ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ ಇದೆ.

 

ಹಾಗಂತಾ ಟಿ20 ವರ್ಲ್ಡ್​ಕಪ್​ನಲ್ಲಿ ಟೀಂ ಇಂಡಿಯಾ ಬಾಗಿಲು​ ವಿರಾಟ್ ಕೊಹ್ಲಿಗೆ ಕಂಪ್ಲೀಟ್ ಬಂದ್ ಆಗಿದೆ ಅಂತೇನಲ್ಲ. ಐಪಿಎಲ್​ನಲ್ಲಿ ಕೊಹ್ಲಿಯ ಪರ್ಫಾಮೆನ್ಸ್ ತುಂಬಾನೆ ಕ್ರೂಶಿಯಲ್ ಆಗಿರಲಿದೆ. ರಾಯಲ್ ಚಾಲೆಂಜರ್ಸ್ ಪರ ಕೊಹ್ಲಿ ಟಾಪ್ ಕ್ಲಾಸ್ ಬ್ಯಾಟಿಂಗ್ ಮಾಡಿದ್ರೆ, ರನ್ ಮಳೆಯನ್ನೇ ಹರಿಸಿದ್ರೆ ಆಗ ಟಿ20 ವರ್ಲ್ಡ್​​ಕಪ್​​ ಟೀಂನಿಂದ ಕೊಹ್ಲಿಯನ್ನ ಡ್ರಾಪ್ ಮಾಡೋ ಪ್ರಶ್ನೆಯೇ ಬರೋದಿಲ್ಲ. ವೆಸ್ಟ್​​ಇಂಡೀಸ್​​ನದ್ದು ಸ್ಲೋ ವಿಕೆಟ್..ಕೊಹ್ಲಿಗೆ ರನ್ ಮಾಡೋದು ಕಷ್ಟ ಅಂತೆಲ್ಲಾ ಸೆಲೆಕ್ಷನ್ ಕಮಿಟಿಗೆ ರೀಸನ್ ಕೊಡೋಕೂ ಆಗೋದಿಲ್ಲ.  ವಿರಾಟ್ ಕೊಹ್ಲಿಯನ್ನ ​ವರ್ಲ್ಡ್​​ಕಪ್ ಸ್ಕ್ವಾಡ್​​ಗೆ ಸೆಲೆಕ್ಟ್ ಮಾಡಲೇಬೇಕಾಗುತ್ತೆ. ಹೀಗಾಗಿ ಈ ಬಾರಿಯ ಐಪಿಎಲ್​ ವಿರಾಟ್ ಕೊಹ್ಲಿ ಪಾಲಿಗೆ ಡಿಸೈಡಿಂಗ್ ಫ್ಯಾಕ್ಟರ್ ಆಗಲಿದೆ. ಒಂದು ವೇಳೆ ವರ್ಲ್ಡ್​​​ಕಪ್​ಗೆ ಸೆಲೆಕ್ಷನ್ ಆದ್ರೆ ರೋಹಿತ್ ಶರ್ಮಾರಂತೆ ಕೊಹ್ಲಿಗೂ ಇದು ಕೊನೆಯ ಟಿ20 ವರ್ಲ್ಡ್​​ಕಪ್ ಆಗಿರಲಿದೆ. ಟೀಂನಲ್ಲಿ ಚಾನ್ಸ್ ಮಿಸ್ ಆಯ್ತು ಅಂದ್ರೆ ಇನ್ಮುಂದೆ ಟಿ20 ವರ್ಲ್ಡ್​ಕಪ್ ಆಡೋದಿಕ್ಕೆ ಕೊಹ್ಲಿಗೆ ಅವಕಾಶ ಸಿಗೋದಿಲ್ಲ. ಇದಂತೂ ಗ್ಯಾರಂಟಿ.

ಆದ್ರೆ ವಿರಾಟ್ ಕೊಹ್ಲಿಯನ್ನ ಟಿ20 ವರ್ಲ್ಡ್​ಕಪ್​ನಿಂದ ಡ್ರಾಪ್ ಮಾಡೋ ಬಗ್ಗೆ ಸಾಕಷ್ಟು ಕ್ರಿಟಿಸಿಸಮ್​ ಕೂಡ ಬರ್ತಾ ಇದೆ. ಪಾಕಿಸ್ತಾನನ ಮಾಜಿ ಆಟಗಾರ ಮೊಹಮ್ಮದ್ ಇರ್ಫಾನ್ ಕೂಡ ಈ ಬಗ್ಗೆ ಮಾತನಾಡಿದ್ದು, ವರ್ಲ್ಡ್​ಕಪ್​ ಸ್ಕ್ವಾಡ್​​ನಿಂದ ಕೊಹ್ಲಿಯನ್ನ ಡ್ರಾಪ್ ಮಾಡಬೇಕು ಅಂತಾ ಹೇಳುವವರು ಗಲ್ಲಿ ಕ್ರಿಕೆಟ್​​ಗೆ ಸೇರಿದವರು ಅಂತಾ ಕ್ರಿಟಿಸಯಸ್ ಮಾಡಿದ್ದಾರೆ. ವಿರಾಟ್ ಕೊಹ್ಲಿಯಂಥಾ ಬಿಗ್ ಬ್ಯಾಟ್ಸ್​ಮನ್ ಇಲ್ಲದೆ ಒಂದು ಸ್ಟ್ರಾಂಗ್ ಟೀಮ್​ನ್ನ ಕಟ್ಟೋಕೆ ಸಾಧ್ಯವಿಲ್ಲ. ಕಳೆದ ವಂಡೇ ವರ್ಲ್ಡ್​ಕಪ್​ನಲ್ಲಿ 3-4 ಮ್ಯಾಚ್​ಗಳನ್ನ ಕೊಹ್ಲಿ ಏಕಾಂಗಿಯಾಗಿಯೇ ಗೆಲ್ಲಿಸಿಕೊಟ್ಟಿದ್ದಾರೆ. ಅಂಥಾ ಪ್ಲೇಯರ್​​​ನ್ನ ಟೀಮ್​​ನಿಂದ ಡ್ರಾಪ್ ಮಾಡೋದ್ರಲ್ಲಿ ಅರ್ಥವೇ ಇಲ್ಲ ಪಾಕ್ ಮಾಜಿ ಕ್ರಿಕೆಟರ್ ಮೊಹಮ್ಮದ್ ಇರ್ಫಾನ್ ಹೇಳಿದ್ದಾರೆ. ಆ್ಯಕ್ಚುವಲಿ, ಮೊಹಮ್ಮದ್ ಇರ್ಫಾನ್ ಹೇಳಿರೋದು ಕೂಡ ನಿಜವೇ. ವರ್ಲ್ಡ್​ಕಪ್​ನಂಥಾ ಟೂರ್ನಿಗಳಲ್ಲಿ ಒಪೊಸಿಶನ್​ ಟೀಮ್​ಗಳ ಪಾಲಿಗೆ ವಿರಾಟ್ ಕೊಹ್ಲಿ ವೆರಿ ವೆರಿ ಡೇಂಜರಸ್ ಪ್ಲೇಯರ್. ವರ್ಲ್ಡ್​​ಕಪ್​ನಂಥಾ ಮೇನ್ ಟೂರ್ನಿಗಳಲ್ಲಂತೂ ಕೊಹ್ಲಿ ನೆಕ್ಸ್ಟ್ ಲೆವೆಲ್​​ನ ಪರ್ಫಾಮೆನ್ಸ್ ನೀಡ್ತಾನೆ ಬಂದಿದ್ದಾರೆ. 2022ರ ಟಿ20 ವರ್ಲ್ಡ್​ಕಪ್​ನಲ್ಲೂ ಅಷ್ಟೇ ಕೊಹ್ಲಿ ಟೀಂ ಇಂಡಿಯಾ ಪರ ಟಾಪ್ ಸ್ಕೋರರ್ ಆಗಿದ್ರು. ಪಾಕಿಸ್ತಾನ ವಿರುದ್ಧದ ಮ್ಯಾಚ್​​ನ್ನ ಲಾಸ್ಟ್ ಎರಡು ಓವರ್​​ಗಳಲ್ಲಿ ಹೇಗೆ ಟರ್ನ್​ ಮಾಡಿದ್ರು ಅನ್ನೋದನ್ನ ನೀವು ನೋಡಿದ್ರೆ. ವಿರಾಟ್ ಕೊಹ್ಲಿ ಟೀಮ್​​ನಲ್ಲಿದ್ದಾರೆ ಅಂದ್ರೆ ಟೀಂಗೆ  ಮಾರಲಿ ತುಂಬಾನೆ ಸ್ಟ್ರೆಂತ್ ಸಿಗುತ್ತೆ. ಈ ವಿಚಾರವಾಗಿ ಅನಿಲ್ ಕುಂಬ್ಳೆ ಅವರು ಲೇಟೆಸ್ಟ್​ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಯ ಅಗ್ರೆಸ್ಸಿವ್ ಆ್ಯಟಿಟ್ಯೂಡ್ ಟೀಮ್​​​ಗೆ ಇನ್ನಷ್ಟು ಇಂಟೆನ್ಸಿಟಿಯನ್ನ ತಂದು ಕೊಡುತ್ತೆ. ಎಸ್ಪೆಷಲಿ ಟಿ20 ಮ್ಯಾಚ್​ಗಳನ್ನ ಆಡೋವಾಗ ಈ ಅಗ್ರೆಸ್ಸಿವ್​ನೆಸ್, ಇಂಟೆನ್ಸಿಟಿ ಹೆಲ್ಪ್ ಆಗುತ್ತೆ ಅಂತಾ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಇವೆಲ್ಲದ್ರ ಮಧ್ಯೆ ವಿರಾಟ್ ಕೊಹ್ಲಿ ಐಪಿಎಲ್​​ನಲ್ಲಿ ಆಡ್ತಾರಾ? ಇಲ್ವಾ? ಅನ್ನೋ ಬಗ್ಗೆಯೂ ಒಂದಷ್ಟು ಚರ್ಚೆಗಳಿವೆ. ಇದುವರೆಗೂ ಕೊಹ್ಲಿ ಐಪಿಎಲ್​​​ನಲ್ಲಿ ಆಡೋ ಬಗ್ಗೆ ಯಾವುದೇ ಕ್ಲ್ಯಾರಿಟಿ ಕೊಟ್ಟಿಲ್ಲ. ಆರ್​ಸಿಬಿ ಕ್ಯಾಂಪ್​ನ್ನ ಕೂಡ ಕೊಹ್ಲಿ ಜಾಯಿನ್ ಆಗಿಲ್ಲ. ಎಬಿಡಿ ವಿಲಿಯರ್ಸ್ ಅಂತೂ ನತಿಂಗ್ ಈಸ್ ಕನ್​ಫರ್ಮ್​​ಡ್ ಯೆಟ್ ಅಂತಾ ಹೇಳಿದ್ದಾರೆ. ಆದ್ರೆ ಕೆಲ ರಿಪೋರ್ಟ್​ಗಳ ಪ್ರಕಾರ ಮಾರ್ಚ್ 17ರ ಒಳಗೆ ವಿರಾಟ್​ ಕೊಹ್ಲಿ ಆರ್​ಸಿಬಿಯನ್ನ ಜಾಯಿನ್ ಆಗ್ತಾರಂತೆ. ಮಾರ್ಚ್​ 19ಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಪ್ರಮೋಷನಲ್ ಈವೆಂಟ್ ಕೂಡ ಇದೆ. ಒಂದು ವೇಳೆ ಆಗಲೂ ಕೊಹ್ಲಿ ಟೀಮ್​​ನ್ನ ಜಾಯಿನ್ ಆಗಿಲ್ಲಾಂದ್ರೆ ಸಮ್​ಥಿಂಗ್ ಫಿಶ್ಶೀ ಅಂತಾನೆ ಅರ್ಥ. ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್ ಅಂತೂ ವಿರಾಟ್ ಕೊಹ್ಲಿ ಈ ಬಾರಿ 2016ರ ಐಪಿಎಲ್​​ ಟೂರ್ನಿಯನ್ನ ಆಡಿದ ರೀತಿ ಆಡ್ಬೇಕು ಅಂತಾ ಹೇಳಿದ್ದಾರೆ. 2016ರ ಐಪಿಎಲ್​ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 973 ರನ್ ಗಳಿಸಿದ್ರು. ಈ ಬಾರಿಯೂ ಅದೇ ರೀತಿ ಸ್ಕೋರ್ ಮಾಡಿದ್ರೆ ಕೊಹ್ಲಿಯನ್ನ ಟಿ20 ವರ್ಲ್ಡ್​ಕಪ್ ಸ್ಕ್ವಾಡ್​ನಿಂದ ಡ್ರಾಪ್ ಮಾಡೋ ಪ್ರಶ್ನೆಯೇ ಬರೋದಿಲ್ಲ.

Sulekha