MI ಫ್ಯಾನ್ಸ್‌ಗೆ ಕೊಹ್ಲಿ ಪಾಠ! – T20 ವರ್ಲ್ಡ್ ಕಪ್‌ಗೆ DK? – ಇಂತಾ ಬೌಲರ್ಸ್ ಬೇಕಾ?

MI ಫ್ಯಾನ್ಸ್‌ಗೆ ಕೊಹ್ಲಿ ಪಾಠ! – T20 ವರ್ಲ್ಡ್ ಕಪ್‌ಗೆ DK? – ಇಂತಾ ಬೌಲರ್ಸ್ ಬೇಕಾ?

ನಿರೀಕ್ಷೆಯಂತೆಯೇ ಆರ್‌ಸಿಬಿ ಮತ್ತೆ ಸೋತಿದೆ.. ಬಹುಷಃ ಬೆಂಗಳೂರು ಫ್ಯಾನ್ಸ್‌ ಈಗ ಮ್ಯಾಚ್‌ ಗೆಲ್ಲುವ ಆಸೆಯನ್ನೇ ಬಿಟ್ಟಾಗಿದೆ.. ಯಾಕಂದ್ರೆ ಆರ್‌ಸಿಬಿ ಜೊತೆಗೆ ಇರುವಂತಹ ಅದ್ಭುತ ಬೌಲಿಂಗ್‌ ಯುನಿಟ್ ಬಹುಷಃ ಇನ್ಯಾವ ಟೀಂ ಬಳಿಯಲ್ಲೂ ಇಲ್ಲ.. 197 ರನ್‌ಗಳ ಟಾರ್ಗೆಟ್‌ ಅನ್ನು 16ನೇ ಓವರ್‌ನಲ್ಲೇ ಚೇಸ್‌ ಮಾಡುವಷ್ಟು ಅನುಕೂಲ ಮಾಡಿಕೊಡ್ತಾರೆ ಅಂದ್ರೆ ಏನ್‌ ಹೇಳ್ಬೇಕು ಹೇಳಿ.. ಇಷ್ಟಕ್ಕೂ ಮುಂಬೈ ವಿರುದ್ಧದ ಪಂದ್ಯದ ನಂತರ ಆರ್‌ಸಿಬಿ ಪ್ಲೇ ಆಫ್‌ ಮಿಸ್ಸಾಗೋದು ಕನ್ಫರ್ಮ್‌ ಆಗ್ತಿದೆಯೇ ಅನ್ನೋದ್ರ ಬಗ್ಗೆಯೂ ವಿವರವಾದ ಮಾಹಿತಿಯಿಲ್ಲಿದೆ.

ಇದನ್ನೂ ಓದಿ: RR ಜಟಾಪಟಿ ಗೆದ್ದ GT – ರಶೀದ್ ತಡೆಯೋದೇ ಕಷ್ಟ? – ತಪ್ಪು ಮಾಡಿದ್ದೆಲ್ಲಿ ಸ್ಯಾಮ್ಸನ್?

ವಾಂಖೇಡೆ ಸ್ಟೇಡಿಯಂನಲ್ಲಿ ಮತ್ತೆ ಎಂಐ ಗೆಲುವಿನ ಕೇಕೆ ಹಾಕಿದೆ.. ಆರ್‌ಸಿಬಿಗೆ ನಸೀಬು ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.. ಮುಂಬೈ ವಿರುದ್ಧವಾದ್ರೂ ಆರ್‌ಸಿಬಿ ಗೆಲ್ಲಬಹುದಾ ಎಂಬ ಆಸೆ ಇಟ್ಕೊಂಡು ಆರ್‌ಸಿಬಿ ಫ್ಯಾನ್ಸ್‌ ಕಾಯ್ತಾ ಇದ್ರು.. ಆದ್ರೆ ಅದಕ್ಕೆ ಮುಂಬೈ ಇಂಡಿಯನ್ಸ್‌ ಚಾನ್ಸೇ ಕೊಡ್ಲಿಲ್ಲ.. ನಿರ್ದಯವಾಗಿ ಆರ್‌ಸಿಬಿಯನ್ನು ಬಡಿದು ಕಳಿಸಿದೆ.. ಸಿಕ್ಸರ್‌ –  ಬೌಂಡರಿಗಳ ಸುರಿಮಳೆಯಿಂದಾಗಿ ಆರ್‌ಸಿಬಿಯ ಯಾವೊಬ್ಬ ಬೌಲರ್‌ ಕೂಡ ನಾಲ್ಕು ಓವರ್‌ ಕಂಪ್ಲೀಟ್‌ ಮಾಡೋದಿಕ್ಕೆ ಸಾಧ್ಯವಾಗಿಲ್ಲ. ಎಲ್ಲಾ ಬೌಲರ್‌ಗಳು ಡಬಲ್‌ ಡಿಜಿಟ್‌ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿದ್ದಾರೆ.. ಒಂದ್ಕಡೆ ಜಸ್‌ಪ್ರೀತ ಬೂಮ್ರಾ ಐದು ವಿಕೆಟ್‌ ಪಡೆದ್ರೆ, ಮತ್ತೊಂದ್ಕಡೆ ಆರ್‌ಸಿಬಿ ಬೌಲರ್ಸ್‌ ಹೊಡೆಸ್ಕೊಳ್ಳೋಕಷ್ಟೇ ನಾವು ಬೌಲಿಂಗ್‌ ಮಾಡೋದು ಎಂಬಂತೆ ಆಡಿದ್ದಾರೆ.. ನಿಜಕ್ಕೂ ಈ ಆರ್‌ಸಿಬಿ ಟೀಂನಲ್ಲಿ ಗೆಲ್ಲುವ ಸ್ಪಿರಿಟ್‌ ಎನ್ನುವುದೇ ಕಾಣ್ತಿಲ್ಲ.. ಸೋಲೋದಕ್ಕಾಗಿಯೇ ಆಡ್ತಿರುವಂತಿದೆ.. ಸತತ ನಾಲ್ಕು ಮ್ಯಾಚ್‌ ಸೋತಿರುವ ಆರ್‌ಸಿಬಿ ಒಟ್ಟು ಆಡಿದ ಆರು ಮ್ಯಾಚ್‌ಗಳಲ್ಲಿ ಐದರಲ್ಲಿ ಸೋತು ಪಾಯಿಂಟ್ ಟೇಬಲ್‌ನಲ್ಲಿ ಬಾಟಮ್‌ನಿಂದ ನಂ.2 ಸ್ಥಾನದಲ್ಲಿದೆ.. ಇಂತಹ ಸ್ಥಾನ ಆರ್‌ಸಿಬಿಗೆ ಹೊಸದೇನೂ ಅಲ್ಲ.. ಆದ್ರೆ ಅಲ್ಲಿಂದ ಬೌನ್ಸ್‌ ಬ್ಯಾಕ್‌ ಆಗಬೇಕಾದ ಜೋಷ್‌ ಆಗ್ಲೀ ಅದಕ್ಕೆ ಬೇಕಾದ ಪ್ಲ್ಯಾನ್‌ ಆಗ್ಲೀ ಈ ಟೀಂನಲ್ಲಿ ಇಲ್ವೇ ಇಲ್ಲ.. ಇಷ್ಟಕ್ಕೂ ಮುಂಬೈ ವಿರುದ್ಧ ಫೈನಲಿ ಆರ್‌ಸಿಬಿಯ ಕ್ಯಾಪ್ಟನ್‌ ಫಾಫ್‌ ಡುಪ್ಲೆಸಿಸ್‌ ಒಳ್ಳೆಯ ಬ್ಯಾಟಿಂಗ್‌ ಮಾಡಿದ್ದಾರೆ.. ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬುಮ್ರಾ ಐಪಿಎಲ್‌ ಸಮರದಲ್ಲಿ ಕಿಂಗ್‌ ಐದನೇ ಬಾರಿ ವಿಕೆಟ್‌ ಒಪ್ಪಿಸಿದ್ದಾರೆ.. ಆದ್ರೆ ನಂತರ ವಿಲ್‌ ಜ್ಯಾಕ್ಸ್‌ ಬೇಗನೆ ಔಟಾದ್ರೂ ರಜತ್ ಪಟೀದಾರ್‌ ಮಾತ್ರ ಕ್ಯಾಪ್ಟನ್​ಗೆ ಒಳ್ಳೆಯ ಸಾಥ್‌ ಕೊಟ್ಟು ಹಾಫ್‌ ಸೆಂಚುರಿ ಬಾರಿಸಿದ್ರು..  ಇನ್ನು ಗ್ಲೆನ್‌ ಮ್ಯಾಕ್ಸ್‌ವೆಲ್‌ಗಂತೂ ಬ್ಯಾಟಿಂಗ್‌ ಸಂಪೂರ್ಣ ಮರೆತುಹೋಗಿದೆ.. ಬಹುಷಃ ಟಿ20 ವರ್ಲ್ಡ್‌ ಕಪ್‌ನಲ್ಲಿ ಆಸ್ಟ್ರೇಲಿಯಾ ಪರ ಸಿಡಿಲಬ್ಬರದಿಂದ ಬ್ಯಾಟಿಂಗ್‌ ಮಾಡಲು ತನ್ನ ಶಕ್ತಿಯನ್ನೆಲ್ಲಾ ಮ್ಯಾಕ್ಸಿ ರಿಸರ್ವ್‌ ಮಾಡಿ ಇಟ್ಟುಕೊಂಡಿರುವಂತಿದೆ.. ಸದ್ಯ ಐಪಿಎಲ್‌ನಲ್ಲಿ ಬಂದ ಪುಟ್ಟ ಹೋದ ಪುಟ್ಟ ಎಂಬಂತಿದೆ ಮ್ಯಾಕ್ಸಿಯ ಪೆವಿಲಿಯನ್‌ ಪರೇಡ್‌.. ಆದ್ರೆ ನಿಜಕ್ಕೂ ಆರ್‌ಸಿಬಿಯನ್ನು ಗೆಲ್ಲಿಸಲೇಬೇಕು ಎಂಬಂತೆ ಆಡಿದ್ದು ಡಿಕೆ.. ದಿನೇಶ್‌ ಕಾರ್ತಿಕ್‌ ಬ್ಯಾಟಿಂಗ್‌ಗೆ ಇಳಿಯುವವರೆಗೂ ಆರ್‌ಸಿಬಿ 170ರೊಳಗೆ ಟಾರ್ಗೆಟ್‌ ಸೆಟ್ ಮಾಡಬಹುದು ಎಂಬ ರೀತಿಯಲ್ಲೇ ಪರಿಸ್ಥಿತಿಯಿತ್ತು.. ಆದ್ರೆ ಕಾರ್ತಿಕ್‌ ಮಾತ್ರ ಬೇರೆಯದ್ದೇ ಪ್ಲ್ಯಾನ್‌ನಲ್ಲಿ ಬಂದ್ರು.. 23 ಎಸೆತಗಳಲ್ಲಿ 5 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ ನೊಂದಿಗೆ ಭರ್ಜರಿ 53 ರನ್‌ ಸೇರಿಸಿದ ಡಿಕೆ, ತಂಡ 196 ರನ್‌ ತಲುಪುವಂತೆ ಮಾಡಿದ್ರು.. ಅದರಲ್ಲೂ ಜಸ್‌ ಪ್ರೀತ್‌ ಬೂಮ್ರಾ ಒಂದೆಡೆ ಮಿಂಚಿನಂತೆ ಬೌಲಿಂಗ್‌ ಮಾಡ್ತಿದ್ದರೆ, ಅದೇ ಬೂಮ್ರಾಗೂ ಸಿಕ್ಸ್‌ ಬಾರಿಸಿ, ತಾನ್ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಆಟವಾಡಿದ್ದರು.. ಡಿಕೆ ಹಾಗೆ ಬುಮ್ರಾಗೆ ಸಿಕ್ಸ್‌ ಬಾರಿಸುತ್ತಿದ್ದಂತೆ ಕೀಪರ್‌ ಇಶಾನ್‌ ಕಿಶನ್‌ ಹತ್ತಿರದಲ್ಲೇ ಫೀಲ್ಡ್‌ ಮಾಡ್ತಿದ್ದ ಟೀಂ ಇಂಡಿಯಾದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ನಗುತ್ತಲೇ ಡಿಕೆಯನ್ನು ಟೀಸ್‌ ಮಾಡಿದ್ರು. ಶಹಬ್ಬಾಸ್‌ ಡಿಕೆ.. ಟಿ20 ವರ್ಲ್ಡ್‌ ಕಪ್‌ ಟೀಂ ಸೇರಲು ಪುಶ್‌ ಮಾಡ್ತಾ ಇದ್ದೀಯಾ.. ಇವ್ನ ತಲೆಯಲ್ಲಿ ಈಗ ವರ್ಲ್ಡ್‌ ಕಪ್‌ ಓಡ್ತಿದೆ.. ಎಂದು ನಗುತ್ತಲೇ ರೋಹಿತ್‌ ಟೀಸ್‌ ಮಾಡಿದ್ದು ಕೀಪರ್‌ ಮೈಕ್‌ನಲ್ಲಿ ಸೆರೆಯಾಗಿದೆ.. ಈ ಡಿಕೆ ಮತ್ತು ರೋಹಿತ್‌ ಟೀಂ ಇಂಡಿಯಾದಲ್ಲಿ ಬೆಸ್ಟ್‌ ಫ್ರೆಂಡ್ಸ್‌.. ಒಬ್ಬರ ಕಾಲೆಳೆಯುವುದರಲ್ಲಿ ಮತ್ತೊಬ್ಬರದ್ದು ಯಾವತ್ತೂ ಎತ್ತಿದ ಕೈ.. ರೋಹಿತ್‌ ಮರೆವಿನ ಬಗ್ಗೆ ಡಿಕೆ ಸಂದರ್ಶನಗಳಲ್ಲೂ ಟೀಸ್‌ ಮಾಡ್ತಿರುತ್ತಾರೆ.. ಹಾಗೆಯೇ ಡಿಕೆಗೆ ಕಾಟ ಕೊಡೋದು ಅಂದ್ರೆ ರೋಹಿತ್‌ಗೂ ಸಿಕ್ಕಾಪಟ್ಟೆ ಇಷ್ಟ.. ಆದ್ರೆ ನಿಜಕ್ಕೂ ಡಿಕೆ ವರ್ಲ್ಡ್‌ ಕಪ್‌ ಟೀಂ ಸೇರುತ್ತಾರಾ ಎನ್ನುವುದನ್ನು ಸದ್ಯ ಟೀಂ ಇಂಡಿಯಾದ ಕ್ಯಾಪ್ಟನ್‌ ಆಗಿರುವ ರೋಹಿತ್‌ ಶರ್ಮಾ ನಿರ್ಧರಿಸಬೇಕಿದೆ.. ಈಗ 38 ವರ್ಷದಲ್ಲಿರುವ ದಿನೇಶ್‌ ಕಾರ್ತಿಕ್‌ಗೆ ಜೂನ್‌ ತಿಂಗಳಲ್ಲಿ ಟಿ20 ವರ್ಲ್ಡ್‌ ಕಪ್‌ ಶುರುವಾಗುವ ವೇಳೆಗೆ 39 ವರ್ಷ ವಯಸ್ಸಾಗಿರುತ್ತದೆ.. ಮತ್ತೊಂದ್ಕಡೆ ಇಶಾನ್ ಕಿಶನ್‌, ಸಂಜು ಸ್ಯಾಮ್ಸನ್‌, ರಿಶಬ್‌ ಪಂತ್‌ ಕೂಡ ಒಳ್ಳೆಯ ಫಾರ್ಮ್‌ನಲ್ಲಿದ್ದು, ಟಿ20 ವರ್ಲ್ಡ್‌ ಕಪ್‌ ಟೀಂ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.. ಬಹುಶಃ ರೋಹಿತ್‌ ಶರ್ಮಾ ಮಾತು ಕೇಳಿಸಿಕೊಂಡಿದ್ದಕ್ಕೋ ಏನೋ ಆರ್‌ಸಿಬಿ ವಿರುದ್ಧವಂತೂ ಇಶಾನ್‌ ಕಿಶನ್‌ ಬ್ಯಾಟಿಂಗ್‌ನಲ್ಲಿ ರೋಶಾವೇಶ ಪ್ರದರ್ಶಿಸಿದ್ರು.. ಆರ್‌ಸಿಬಿ ಬೌಲರ್‌ಗಳನ್ನು ಆರಂಭದಿಂದಲೇ ಬೆಂಡೆತ್ತಿದರು..  ರೋಹಿತ್‌ ಶರ್ಮಾ ಎದುರೇ 5 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಕೇವಲ 34 ಎಸೆತಗಳಲ್ಲಿ 69 ರನ್‌ ಬಾರಿಸಿದ್ರು.. ಟಿ20 ವರ್ಲ್ಡ್‌ ಕಪ್‌ಗೆ ನನ್ನ ಹೆಸರನ್ನೂ ಮರೀಬೇಡಿ ಎಂಬಂತಿತ್ತು ಇಶಾನ್‌ ಕಿಶನ್‌, ಆರ್‌ಸಿಬಿ ಬೌಲರ್‌ಗಳನ್ನು ಚಿಂದಿ ಉಡಾಯಿಸಿದ ರೀತಿ.. ಇನ್ನು ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯಾ ಅಬ್ಬರದ ಆಟದ ಮುಂದೆ ಆರ್‌ಸಿಬಿ ಬೌಲರ್‌ಗಳಿಗೆ ಹೊಡೆಸಿಕೊಳ್ಳೋದು ಬಿಟ್ರೆ ಬಹುಷಃ ಬೇರೇನೂ ಗೊತ್ತಿರಲಿಲ್ಲ.. ಎಂಐ ವಿರುದ್ಧದ ಪಂದ್ಯ ನೋಡಿದ್ಮೇಲಂತೂ ಆರ್‌ಸಿಬಿಗೆ ಬೌಲರ್‌ಗಳು ಬೇಕಾ ಎಂಬ ಪ್ರಶ್ನೆಯೆದ್ದಿದೆ.. 196 ರನ್‌ಗಳನ್ನೂ 15 ಚಿಲ್ಲರೆ ಓವರ್‌ಗಳಲ್ಲಿ ಚೇಸ್‌ ಮಾಡ್ತಾರೆ ಅಂದ್ರೆ ಈ ತಂಡದ ಬ್ಯಾಟ್ಸ್‌ಮನ್‌ಗಳು ಇನ್ನೆಷ್ಟು ರನ್‌ ಸ್ಕೋರ್‌ ಮಾಡಬೇಕು ಎನ್ನುವ ಪ್ರಶ್ನೆಯಿದೆ.. ಅದಕ್ಕಿಂತ ಹೇಗೂ ಕೊಹ್ಲಿ, ಡುಪ್ಲೆಸಿಸ್‌, ಮ್ಯಾಕ್ಸ್‌ವೆಲ್‌ ಅಷ್ಟೋ ಇಷ್ಟೋ ಬೌಲಿಂಗ್‌ ಮಾಡ್ತಾರೆ.. ಅವರ ಜೊತೆಗೆ ಗ್ರೀನ್‌ ಸೇರ್ಕೊಂಡ್ರೆ ನಾಲ್ಕು ಜನ ಬೌಲರ್‌ಗಳು ಆಗೇ ಬಿಡ್ತಾರೆ.. ಇನ್ನು ಒಬ್ರೋ ಇಬ್ರೋ ಬೌಲರ್‌ಗಳನ್ನು ಇಟ್ಕೊಂಡು, ಫುಲ್‌ ಬ್ಯಾಟ್ಸ್‌ಮನ್‌ಗಳನ್ನು ಇಟ್ಕೊಂಡೇ ಈ ಟೀಂ ಆಡೋದು ಬೆಸ್ಟ್‌ ಅನ್ನಿಸ್ತಿದೆ.. ಆಗ ಅಟ್‌ಲೀಸ್ಟ್‌ 250 ರನ್‌ಗಳನ್ನು ಸ್ಕೋರ್‌ ಮಾಡಿ, ನಂತರ ಹೆಂಗೂ ಹೊಡೆಸ್ಕೊಂಡ್ರೂ ಗೆಲ್ಲೋ ಕನಸು ಕಾಣಬಹುದು.. ಇದು ತಮಾಶೆ ಅನ್ನಿಸಿದ್ರೂ ಸದ್ಯದ ಆರ್‌ಸಿಬಿ ಬೌಲರ್‌ಗಳ ಪರಿಸ್ಥಿತಿ ಮಾತ್ರ ಹೀಗೆಯೇ ಇದೆ.. ಇನ್ನು ಮುಂಬೈ ಇಂಡಿಯನ್ಸ್‌ ಕ್ಯಾಪ್ಟನ್‌ ಹಾರ್ದಿಕ್ ಪಾಂಡ್ಯಾ ಪರ, ಮುಂಬೈ ಫ್ಯಾನ್ಸ್‌ ಚೀರಾಡುವಂತೆ ಕಿಂಗ್‌ ಕೊಹ್ಲಿ ಮಾಡಿದ್ದಾರೆ.. ರೋಹಿತ್‌ಗೂ ಮಾಡಲಾಗದ ಕೆಲಸವನ್ನು ಕೊಹ್ಲಿ ಮಾಡಿ ಫ್ಯಾನ್ಸ್‌ ಮನಗೆದ್ದಿದ್ದಾರೆ.. ಇಷ್ಟು ದಿನ ಹಾರ್ದಿಕ್‌ ಪಾಂಡ್ಯಾರನ್ನು ಮುಂಬೈ ಫ್ಯಾನ್ಸ್‌ ಟೀಕೆ ಮಾಡಿದ್ದರು.. ರೋಹಿತ್‌ ರೋಹಿತ್‌ ಎಂದು ಕೂಗಿ ಕಿಚಾಯಿಸ್ತಿದ್ದರು.. ಆದ್ರೆ ಆರ್‌ಸಿಬಿ ವಿರುದ್ಧ ಹಾರ್ದಿಕ್‌ ಬ್ಯಾಟಿಂಗ್‌ಗೆ ಬಂದಾಗ, ಅವರನ್ನು ಸಪೋರ್ಟ್‌ ಮಾಡುವಂತೆ ಫೀಲ್ಡಿಂಗ್‌ನಲ್ಲಿದ್ದ ಕೊಹ್ಲಿ, ಪ್ರೇಕ್ಷಕರ ಗ್ಯಾಲರಿ ಕಡೆಗೆ ತಿರುಗಿ ಚಪ್ಪಾಳೆ ತಟ್ಟಿದ್ದರು.. ಕೊಹ್ಲಿಯ ಸಿಗ್ನಲ್‌ ಅರ್ಥ ಮಾಡ್ಕೊಂಡು ಫ್ಯಾನ್ಸ್‌ ಕೂಡ ನಂತರ ಹಾರ್ದಿಕ್‌…. ಹಾರ್ದಿಕ್‌ ಎಂದು ಜೋರಾಗಿ ಕೂಗುವ ಮೂಲಕ, ಇಷ್ಟು ದಿನ ಪಾಂಡ್ಯಾನನ್ನು ಕಿಚಾಯಿಸ್ತಾ ಇದ್ದಿದ್ದನ್ನು ಮರೆತ್ರು.. ಇದಕ್ಕೇನೆ ಕೊಹ್ಲಿಯನ್ನು ಅಭಿಮಾನಿಗಳು ಕಿಂಗ್ ಕೊಹ್ಲಿ ಅನ್ನೋದು.. ಆಟದಲ್ಲಿ ಎಷ್ಟೇ ಅಗ್ರೆಸ್ಸಿವ್‌ ಆಗಿದ್ದರೂ ಕೊಹ್ಲಿ ಕ್ರಿಕೆಟ್‌ನ ಘನತೆ ವಿಚಾರದಲ್ಲಿ ಅಷ್ಟೇ ಸ್ಪೋರ್ಟ್‌ ಸ್ಪಿರಿಟ್‌ ಮೆರೀತಾರೆ.. ಈ ಮೂಲಕ ಮುಂಬೈ ಇಂಡಿಯನ್ಸ್‌ ಪ್ಯಾನ್ಸ್‌ ಮನಪರಿವರ್ತನೆ ಮಾಡಿಸುವಲ್ಲಿ ಕಿಂಗ್ ಕೊಹ್ಲಿ ಯಶಸ್ವಿಯಾಗಿದ್ದಾರೆ..

Sulekha