2 ಸಲ ಡಕ್.. ಕೈ ಮುಗಿದ ಕೊಹ್ಲಿ – ಗುಡ್ ಬೈ ಸಿಗ್ನಲ್ ಕೊಟ್ರಾ KING?
AUSನಲ್ಲೇ ODI ಜರ್ನಿಯೂ ಎಂಡ್?

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕೋಟ್ಯಂತರ ಅಭಿಮಾನಿಗಳ ಕಣ್ಣು ಇದ್ದದ್ದೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೇಲೆ. ಫಸ್ಟ್ ಮ್ಯಾಚಲ್ಲಿ ರೋಹಿತ್ ಸೈಲೆಂಟ್ ಆದ್ರೂ ಸೆಕೆಂಡ್ ಮ್ಯಾಚಲ್ಲಿ ಹೈಯೆಸ್ಟ್ ಸ್ಕೋರರ್ ಆಗಿ ಪ್ಯಾಚಪ್ ಮಾಡ್ಕೊಂಡ್ರು. ಬಟ್ ವಿರಾಟ್ ಕೊಹ್ಲಿ ಎರಡೂ ಪಂದ್ಯದಲ್ಲೂ ಖಾತೆಯನ್ನೂ ತೆರೀಲಿಲ್ಲ. ಬಟ್ ಇಲ್ಲಿ ಔಟ್ ಆಗಿದ್ದಕ್ಕಿಂತ ಜಾಸ್ತಿ ಪ್ರೇಕ್ಷಕರನ್ನ ಕ್ಷಮೆ ಕೇಳಿದ್ದೇ ಹೈಲೆಟ್ ಆಗ್ತಿದೆ.
ಇದನ್ನೂ ಓದಿ : ರೋಹಿತ್ HERO.. ಕೊಹ್ಲಿ DUCK – 2ನೇ ಮ್ಯಾಚಲ್ಲೂ ಬಳಲಿದ ಬ್ಯಾಟಿಂಗ್!
ಅಭಿಮಾನಿಗಳ ಕ್ಷಮೆ ಕೇಳಿದ್ರಾ.. ಗುಡ್ ಬೈ ಸಹ್ನೆ ಮಾಡಿದ್ರಾ?
ಎರಡನೇ ಪಂದ್ಯದಲ್ಲೂ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತದ ರೋಹಿತ್ ಮತ್ತು ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ ನಾಯಕ ಗಿಲ್ 9 ರನ್ ಗಳಿಸಿ ಔಟ್ ಆದ್ರು. ಈ ಟೈಮಲ್ಲಿ ನಂಬರ್ 3ನಲ್ಲಿ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ ಖಾತೆಯನ್ನೂ ತೆರೀಲಿಲ್ಲ. 4 ಎಸೆತಗಳನ್ನ ಫೇಸ್ ಮಾಡಿ ಷೇವಿಯರ್ ಬರ್ಟ್ಲೆಟ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ರು. ಕೊಹ್ಲಿ ಔಟ್ ಆಗ್ತಿದ್ದಂತೆ ಗ್ಯಾಲರಿಯಲ್ಲಿದ್ದ ಫ್ಯಾನ್ಸ್ಗೂ ಸಿಕ್ಕಾಪಟ್ಟೆ ನಿರಾಸೆಯಾಯ್ತು. ಇತ್ತ ಕೊಹ್ಲಿ ಕೂಡ ಬೇಸರದಲ್ಲೇ ಡಗ್ ಔಟ್ನತ್ತ ಹೆಜ್ಜೆ ಹಾಕಿದ್ರು. ಈ ವೇಳೆ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿದ್ರು. ಹಾಗೇ ಕೊಹ್ಲಿ ಪ್ರೇಕ್ಷಕರತ್ತ ಸನ್ಹೆ ಮಾಡಿದ್ದೇ ಚರ್ಚೆಗೆ ಗ್ರಾಸವಾಗಿದೆ. ಕೊಹ್ಲಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುವಾಗ ತಮ್ಮ ಕೈಯಲ್ಲಿದ್ದ ಕೈಗವಸುಗಳನ್ನು ಹಿಡಿದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಈ ಸನ್ನೆಯನ್ನ ನೋಡಿದ ಕೆಲವರು ವಿರಾಟ್ ಕೊಹ್ಲಿ ತಮ್ಮ ವಿದಾಯದ ಮುನ್ಸೂಚನೆ ನೀಡಿದ್ದಾರೆ ಅಂತಿದ್ದಾರೆ. ಅಭಿಮಾನಿಗಳಿಗೆ ನಿವೃತ್ತಿ ಸುಳಿವು ಕೊಟ್ರಾ. ಅಡಿಲೇಡ್ ನಲ್ಲಿ ಕೊಹ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡುತ್ತಿರುವುದರಿಂದ ಅವರು ಈ ರೀತಿ ಸನ್ಹೆ ಮಾಡಿದ್ರಾ? ಅಥವಾ ಶೂನ್ಯ ಸುತ್ತಿ ಮತ್ತೆ ನಿರಾಸೆ ಮೂಡಿಸಿದ್ದರಿಂದ ಅಭಿಮಾನಿಗಳ ಕ್ಷಮೆ ಕೇಳಿದ್ರಾ ಎಂಬ ಪ್ರಶ್ನೆಗಳು ಮೂಡಿವೆ. ಅಲ್ದೇ ಪರ್ತ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಶೂನ್ಯಕ್ಕೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದ್ರು. ಌಕ್ಚುಲಿ ವಿರಾಟ್ ಕೊಹ್ಲಿಗೆ ಆಡಿಲೇಡ್ ಫೇವರೆಟ್ ಮೈದಾನ. ಈ ಕ್ರೀಡಾಂಗಣದಲ್ಲಿ 17 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕೊಹ್ಲಿ 65ರ ಸರಾಸರಿಯಲ್ಲಿ 975 ರನ್ ಗಳಿಸಿದ್ದರು. ಇನ್ನು 25 ರನ್ಸ್ ಕಲೆ ಹಾಕಿದ್ರೆ ಆಡಿಲೇಡ್ನಲ್ಲಿ 1000 ರನ್ ಕಲೆ ಹಾಕಿದ ಮೊದಲ ವಿದೇಶಿ ಆಟಗಾರ ಎನಿಸಿಕೊಳ್ತಿದ್ರು. ಬಟ್ ಇದು ಸಾಧ್ಯವಾಗ್ಲೇ ಇಲ್ಲ. ಇನ್ನು ಏಕದಿನ ಮಾದರಿಯಲ್ಲಿ ಕೊಹ್ಲಿ ಇದುವರೆಗೆ 304 ಪಂದ್ಯಗಳನ್ನ ಆಡಿರೋ ವಿರಾಟ್ 14,181 ರನ್ ಗಳಿಸಿದ್ದಾರೆ. 51 ಶತಕ, 74 ಅರ್ಧಶತಕಗಳೊಂದಿಗೆ 57.41ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.
2025ರ ಮಾರ್ಚ್ನಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಬಳಿಕ ಕೊಹ್ಲಿ ಯಾವುದೇ ಆಂತಾರಾಷ್ಟ್ರೀಯ ಪಂದ್ಯಗಳನ್ನ ಆಡಿರಲಿಲ್ಲ. ಈಗ ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಭರ್ಜರಿಯಾಗಿ ಕಮ್‌ಬ್ಯಾಜ್ ಮಾಡಬಹುದು ಎನ್ನುವ ನಿರೀಕ್ಷೆ ಸುಳ್ಳಾಗಿದೆ. ಎರಡೂ ಪಂದ್ಯಗಳಲ್ಲೂ ಡಕ್ ಔಟ್ ಆಗಿದ್ದಾರೆ. ಆಲ್ರೆಡಿ ಏಕದಿನ ಫಾರ್ಮೆಟ್ ಜರ್ನಿಯೂ ಎಂಡಿಂಗ್ನಲ್ಲೇ ಇದ್ದು ಆಸೀಸ್ ಸರಣಿ ಬಳಿಕ ನಿವೃತ್ತಿ ನಿರ್ಧಾರ ಘೋಷಣೆ ಮಾಡಿದ್ರೂ ಅಚ್ಚರಿ ಇಲ್ಲ.

ನೋಡಿರಿ

