RCB Vs GT.. ವಿರಾಟ್ ಶಪಥವೇನು? – ಕೊಹ್ಲಿ ಚಿನ್ನಸ್ವಾಮಿ KINGDOM ಹೇಗಿದೆ?
ಮಳೆಯಿಂದ ಪಂದ್ಯ ರದ್ದಾದ್ರೆ ಮುಂದೆ?

RCB Vs GT.. ವಿರಾಟ್ ಶಪಥವೇನು? – ಕೊಹ್ಲಿ ಚಿನ್ನಸ್ವಾಮಿ KINGDOM ಹೇಗಿದೆ?ಮಳೆಯಿಂದ ಪಂದ್ಯ ರದ್ದಾದ್ರೆ ಮುಂದೆ?

ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದ ಬಳಿಕ ಆರ್​ಸಿಬಿಯ ಕಾನ್ಫಿಡೆನ್ಸ್ ಲೆವೆಲ್ ಡಬಲ್ ಆಗಿದೆ. ಸದ್ಯ ಶನಿವಾರ ಮತ್ತೆ ಗುಜರಾತ್ ವಿರುದ್ಧ ಪಂದ್ಯ ನಡೆಯಲಿದೆ. ಅದೂ ಕೂಡ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಹೀಗಾಗಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರೋ ಆರ್​ಸಿಬಿ ಪ್ಲೇಯರ್ಸ್​ ಭರ್ಜರಿ ಪ್ರಾಕ್ಟೀಸ್ ನಲ್ಲಿದ್ದಾರೆ. ಕಿಂಗ್ ಕೊಹ್ಲಿ ಅಭಿಮಾನಿಗಳಿಗಾಗಿ ಶಪಥವೊಂದನ್ನ ಮಾಡಿದ್ದಾರೆ. ಆದ್ರೆ ಶನಿವಾರದ ಪಂದ್ಯ ಕ್ಯಾನ್ಸಲ್ ಆಗೋ ಭೀತಿ ಇದೆ. ಅಷ್ಟಕ್ಕೂ ಕೊಹ್ಲಿ ಮಾಡಿರೋ ಶಪಥ ಏನು? ಮ್ಯಾಚ್ ರದ್ದಾಗುತ್ತಾ..? ಪ್ಲೇಆಫ್ ಕನಸು ಕಂಪ್ಲೀಟ್ ಛಿದ್ರವಾಗುತ್ತಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಗುಜರಾತ್ ಟೈಟನ್ಸ್ vs ಆರ್‌ಸಿಬಿ ಹೈವೋಲ್ಟೇಜ್‌ ಪಂದ್ಯ – ನಮ್ಮ ಮೆಟ್ರೋ ಅವಧಿ ವಿಸ್ತರಣೆ! 

ಐಪಿಎಲ್ ಸೀಸನ್ 17ನಲ್ಲಿ ಹೊಸ ಅಧ್ಯಾಯ ಅಂತಾ ಟೂರ್ನಿ ಆರಂಭಿಸಿದ್ದ ಆರ್​ಸಿಬಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಆದ್ರೆ ಕಳೆದ 2 ಪಂದ್ಯಗಳನ್ನ ಗೆದ್ದ ಜೋಶ್​ನಲ್ಲಿರೋ ಆರ್​​ಸಿಬಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಶನಿವಾರ ಜಿಟಿ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಮ್ಯಾಚ್ ನಡೆಯಲಿದೆ. ಈಗಾಗಲೇ ಹೋಮ್​​ಗ್ರೌಂಡ್​ನಲ್ಲಿ ಹ್ಯಾಟ್ರಿಕ್​ ಸೋಲುಂಡು ಆರ್​​ಸಿಬಿ ಅವಮಾನಕ್ಕೆ ಒಳಗಾಗಿದೆ. ಫ್ಯಾನ್ಸ್ ಕೂಡ ತುಂಬಾನೇ ನಿರಾಸೆಗೊಂಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆ ನಿರಾಸೆಗೆ ಬ್ರೇಕ್​ ಹಾಕಲು ಅಭಿಮಾನಿಗಳಿಗಾಗಿ ಕಿಂಗ್ ವಿರಾಟ್​ ಕೊಹ್ಲಿ ಶಪಥಗೈದಿದ್ದಾರೆ.

ಕಿಂಗ್ ಕೊಹ್ಲಿ ಶಪಥ! 

ಐಪಿಎಲ್ ಸೀಸನ್ 17ರಲ್ಲಿ ಆರ್​​ಸಿಬಿ ಟೀಮ್​ ಹೋಮ್​​ಗ್ರೌಂಡ್​ನಲ್ಲಿ ಹೀನಾಯ ಪರ್ಫಾಮೆನ್ಸ್​​ ನೀಡಿದೆ. ಈ ಸಲ ಕಪ್​ ನಮ್ದೇ ಅಂತಾ ಖುಷಿಯಿಂದ ಸ್ಟೇಡಿಯಂಗೆ ಬಂದ ಫ್ಯಾನ್ಸ್​​ ತೀವ್ರ ನಿರಾಸೆಗೆ ಒಳಗಾಗಿದ್ದಾರೆ. ಚಿನ್ನಸ್ವಾಮಿಯಲ್ಲಿ ಈ ಸೀಸನ್​ನಲ್ಲಿ ಆಡಿದ ಮೊದಲ ಪಂದ್ಯ ಗೆದ್ದಿದ್ದು ಬಿಟ್ರೆ, ಕೆಕೆಆರ್​​, ಲಕ್ನೋ ಸೂಪರ್​ ಜೈಂಟ್ಸ್​​, ಸನ್​ರೈಸರ್ಸ್​ ಹೈದ್ರಾಬಾದ್​ ಮೂರೂ ತಂಡಗಳ ಎದುರು ಸೋಲಿಗೆ ಶರಣಾಗಿದೆ. ಹ್ಯಾಟ್ರಿಕ್​ ಸೋಲಿನ ಮುಖಭಂಗ ಅಭಿಮಾನಿಗಳ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ. ಆದ್ರೆ ಹೈದ್ರಾಬಾದ್​ ಮತ್ತು ಗುಜರಾತ್​ನಲ್ಲಿ ಭರ್ಜರಿ ಗೆಲುವು ಸಾಧಿಸಿದ ರಾಯಲ್​ ಚಾಲೆಂಜರ್ಸ್​, ಬೆಂಗಳೂರಿಗೆ ವಾಪಾಸ್ಸಾಗಿದೆ. ಹೋಮ್​ಗ್ರೌಂಡ್​​ ಚಿನ್ನಸ್ವಾಮಿ ಮೈದಾನದಲ್ಲಿ, ಮುಂದಿನ 3 ಪಂದ್ಯಗಳನ್ನ ಆಡಲಿದೆ. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರೋ ತಂಡ ಅಭ್ಯಾಸವನ್ನೂ ಆರಂಭಿಸಿದೆ. ಇದ್ರ ನಡುವೆ ಕಿಂಗ್​ ಕೊಹ್ಲಿ ಫ್ಯಾನ್ಸ್​ಗಾಗಿ ಶಪಥಗೈದಿದ್ದಾರೆ. ಹ್ಯಾಟ್ರಿಕ್​ ಸೋಲಿನ ನಿರಾಸೆ ಅನುಭವಿಸಿರೋ ಲಾಯಲ್​ ಫ್ಯಾನ್ಸ್​ ಬೇಸರಕ್ಕೆ ಬ್ರೇಕ್ ಹಾಕಲು ಕಿಂಗ್​ ಕೊಹ್ಲಿ ಮುಂದಾಗಿದ್ದಾರೆ. ಇದಕ್ಕಾಗಿ ಭರ್ಜರಿ ಅಭ್ಯಾಸ ಆರಂಭಿಸಿದ್ದಾರೆ. ಹಾಗೂ ಅಭಿಮಾನಿಗಳಿಗೋಸ್ಕರ ನಾವು ಪಂದ್ಯವನ್ನ ಗೆದ್ದೇ ಗೆಲ್ಲುತ್ತೇವೆ ಎಂದಿದ್ದಾರೆ ಕಿಂಗ್ ಕೊಹ್ಲಿ.

ಕೊಹ್ಲಿ ಏನೋ ಫ್ಯಾನ್ಸ್​ಗಾಗಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಆದ್ರೆ ಮುಂದಿನ ಮ್ಯಾಚ್​ಗಳನ್ನ ಗೆಲ್ಲೋದು ಅಷ್ಟು ಸುಲಭವಿಲ್ಲ. ಬೌಲಿಂಗ್​ ವೈಫಲ್ಯ, ಕಳಪೆ ಫೀಲ್ಡಿಂಗ್​​ನ ಸಮಸ್ಯೆ ಆರ್​​​ಸಿಬಿಯನ್ನ ಕಾಡ್ತಿದೆ. ಆದ್ರೆ, ಆರ್​​ಸಿಬಿ ಎದುರಿಸೋ​​ ಗುಜರಾತ್​ ಟೈಟನ್ಸ್​, ಡೆಲ್ಲಿ ಕ್ಯಾಪಿಟಲ್ಸ್​, ಚೆನ್ನೈ ಸೂಪರ್​​ ಕಿಂಗ್ಸ್​​ ಈ ಮೂರೂ ತಂಡಗಳು ಬಲಿಷ್ಟವಾಗಿವೆ. ಆದ್ರೂ, ಕೊಹ್ಲಿಗೆ ಕಾನ್ಫಿಡೆನ್ಸ್ ಮಾತ್ರ ಇದ್ದೇ ಇದೆ. ಚಿನ್ನಸ್ವಾಮಿ ಮೈದಾನದಲ್ಲಿ ಈ ಸೀಸನ್​ನಲ್ಲಿ 3 ಪಂದ್ಯದಲ್ಲಿ ಆರ್​​ಸಿಬಿ ಸೋತಿದೆ ನಿಜ. ಆದ್ರೆ ಕಿಂಗ್​ ಕೊಹ್ಲಿ ಮಾತ್ರ ಭರ್ಜರಿ ಪ್ರದರ್ಶನವನ್ನೇ ನೀಡಿದ್ದಾರೆ. ಚಿನ್ನಸ್ವಾಮಿ ಮೈದಾನ ಕೊಹ್ಲಿಯ ಕಿಂಗ್​ಡಮ್​ ಅನ್ನೋದನ್ನ ಅವ್ರ ಪರ್ಫಾಮೆನ್ಸೇ ಸಾರಿ ಸಾರಿ ಹೇಳ್ತಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಈ ಸೀಸನ್​ನಲ್ಲಿ 4 ಪಂದ್ಯವನ್ನಾಡಿರುವ ಕೊಹ್ಲಿ 74.66ರ ಸರಾಸರಿಯಲ್ಲಿ 224 ರನ್​ ಸಿಡಿಸಿದ್ದಾರೆ. 23 ಬೌಂಡರಿ, 9 ಸಿಕ್ಸರ್​​​ ಸಿಡಿಸಿರುವ ಕೊಹ್ಲಿಯ ಸ್ಟ್ರೈಕ್​ರೇಟ್​​ 155.55 ಆಗಿದೆ. ಆದ್ರೂ ಆರ್​​ಸಿಬಿ ಚಿನ್ನಸ್ವಾಮಿ ಅಂಗಳದಲ್ಲಿ ಸೋತಿದೆ. ಮುಂದಿನ 3 ಪಂದ್ಯಗಳಲ್ಲಿ ಕೊಹ್ಲಿ ಸಾಲಿಡ್​ ಆಟವಾಡಿದ್ರೂ, ಉಳಿದ ಆಟಗಾರರು ಪರ್ಫಾಮ್​ ಮಾಡಬೇಕಿದೆ. ಇಲ್ಲದಿದ್ರೆ, ಅಭಿಮಾನಿಗಳಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯೇ ಆಗಿದೆ. ಸದ್ಯ ಈವರೆಗೂ ಹತ್ತು ಪಂದ್ಯಗಳನ್ನು ಆಡಿ ಮೂರು ಪಂದ್ಯಗಳಲ್ಲಿ ಗೆದ್ದುಕೊಂಡಿರುವ ಆರ್​ಸಿಬಿ ಇನ್ನೂ ಪ್ಲೇ-ಆಫ್ ಕನಸು ಕಾಣುತ್ತಿದೆ. ಆದ್ರೆ ಆರ್​ಸಿಬಿ ಅಭಿಮಾನಿಗಳಲ್ಲಿ, ತಂಡದಲ್ಲಿ ಆತಂಕ ಶುರುವಾಗಿದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಬೆಂಗಳೂರಲ್ಲಿ ಸಂಜೆ ಮತ್ತು ರಾತ್ರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯ ನಡೆಯುವ ವೇಳೆ ಭರ್ಜರಿಯಾಗಿ ಮಳೆ ಬಂದರೆ ರದ್ದಾಗುವ ಸಾಧ್ಯತೆ ಇದೆ.

ಸ್ನೇಹಿತರೇ.. ಒಂದು ವೇಳೆ ಮಳೆ ಜೋರಾಗಿ ಬಂದರೆ, ಪಂದ್ಯ ರದ್ದಾದರೆ ಆರ್​ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಯಾಕಂದ್ರೆ ಆರ್​ಸಿಬಿಗೆ ಉಳಿದಿರೋದು ಕೇವಲ 4 ಪಂದ್ಯಗಳು ಮಾತ್ರ. ಆಡಿರೋ 10 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕ ಪಡೆದುಕೊಂಡಿದೆ. ತಂಡದ ರನ್​ ರೇಟ್​ ಕೂಡ ಸುಧಾರಿಸಿದೆ. ಆರ್​​ಸಿಬಿ ಇನ್ನೂ 4 ಪಂದ್ಯಗಳು ಆಡಲಿದ್ದು. 4ಕ್ಕೆ 4 ಗೆಲ್ಲಬೇಕಿದೆ. ಆಗ ಆರ್​​ಸಿಬಿಗೆ ಮತ್ತೆ 8 ಅಂಕ ದೊರೆಯಲಿದ್ದು, ಟೋಟಲ್​​ 14 ಪಾಯಿಂಟ್ಸ್​ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್​​ ಕನ್ಫರ್ಮ್​​. 14 ಅಂಕ ಪಡೆದ್ರೂ ಪ್ಲೇ ಆಫ್​ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್​ ಆಗಿರಲಿದೆ. ಒಟ್ನಲ್ಲಿ ಈ ಸೀಸನ್​ ಐಪಿಎಲ್​ನಲ್ಲಿ ಆರ್​​ಸಿಬಿ ಫ್ಲೇ ಆಫ್​ಗೆ ಎಂಟ್ರಿ ಕೊಡುತ್ತೋ, ಇಲ್ವಾ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ಹೀಗಾಗಿ ಅಭಿಮಾನಿಗಳ ಚಿತ್ತ ಶನಿವಾರದ ಪಂದ್ಯದತ್ತ ನೆಟ್ಟಿದೆ. ಬೆಂಗಳೂರು ಸ್ಟೇಡಿಯಂ ಕೊಹ್ಲಿಗೆ ಪೇವರೆಟ್ ಆಗಿರೋದ್ರಿಂದ ಮತ್ತೆ ಸಿಡಿದು ನಿಲ್ತಾರಾ ಹಾಗೇ ಕಳೆದ ಪಂದ್ಯದಲ್ಲಿ ಜಿಟಿ ಬೌಲರ್​ಗಳನ್ನ ಬೆಂಡೆತ್ತಿದ್ದ ವಿಲ್ ಜಾಕ್ಸ್ ಮತ್ತೆ ಅಬ್ಬರಿಸ್ತಾರಾ ಅನ್ನೋದನ್ನ ನೋಡೋಕೆ ಕಾತರದಿಂದ ಕಾಯ್ತಿದ್ದಾರೆ. ಫ್ಯಾನ್ಸ್ ಕೂಡ ತುಂಬಾ ದಿನಗಳ ಬಳಿಕ ಹೋಮ್​ಗ್ರೌಂಡ್​ನಲ್ಲಿ ಆರ್​ಸಿಬಿ ಮ್ಯಾಚ್ ನೋಡೋ ಖುಷಿಯಲ್ಲಿದ್ದಾರೆ.

Shwetha M