ಫಸ್ಟ್ ಮ್ಯಾಚಲ್ಲೇ RO-KO ಸುನಾಮಿ – BCCIಗೆ ಬಿಗ್ ಮೆಸೇಜ್ ಕೊಟ್ರಾ?
ದಿಗ್ಗಜರ ವಿಶ್ವಕಪ್ ದಾರಿಗಿಲ್ಲ ವಿಘ್ನ  

ಫಸ್ಟ್ ಮ್ಯಾಚಲ್ಲೇ RO-KO ಸುನಾಮಿ – BCCIಗೆ ಬಿಗ್ ಮೆಸೇಜ್ ಕೊಟ್ರಾ?ದಿಗ್ಗಜರ ವಿಶ್ವಕಪ್ ದಾರಿಗಿಲ್ಲ ವಿಘ್ನ  

2026ರ ಐಪಿಎಲ್ ಸ್ಟಾರ್ಟ್ ಆಗಿ 2 ಪಂದ್ಯಗಳು ಮುಗಿದಿವೆ. ಎರಡೂ ಮ್ಯಾಚಲ್ಲೂ ಚೇಸಿಂಗ್ ಮಾಡಿರೋ ಟೀಂ ವಿನ್ ಆಗಿವೆ. ಌಂಡ್ ಈ ಪಂದ್ಯಗಳ ಬಳಿಕ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋದು ಕಿಂಗ್ ವಿರಾಟ್ ಕೊಹ್ಲಿ ಹಾಗೇ ಹಿಟ್​ಮ್ಯಾನ್ ರೋಹಿತ್ ಶರ್ಮಾ. ಟಿ-20ಐ ಮ್ಯಾಚ್ ಆಡಿ 10 ತಿಂಗಳೇ ಕಳೆದಿದ್ರೂ ಈಗ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ದಿಗ್ಗಜರ ಆರ್ಭಟ ಬಿಸಿಸಿಐಗೆ ಹೊಸ ಸಂದೇಶ ರವಾನಿಸಿದೆ. ಹಾಗೇ 2027ರ ಏಕದಿನ ವಿಶ್ವಕಪ್ ನ ಸ್ಥಾನ ಭದ್ರವಾಗುವಂತೆ ಮಾಡ್ತಿದೆ.

ಇದನ್ನೂ ಓದಿ : KKR ವಿರುದ್ಧ ಮುಂಬೈಗೆ ರೋಚಕ ಗೆಲುವು – ಅತ್ಯಧಿಕ ಮೊತ್ತ ಬೆನ್ನಟ್ಟಿದ ದಾಖಲೆ ಬರೆದ ಪಾಂಡ್ಯ ಪಡೆ

ಶನಿವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧದ ಮ್ಯಾಚಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಮ್ಯಾಚಲ್ಲಿ ಓಪನರ್ ಆಗಿ ಕಣಕ್ಕಿಳಿದು ಫಿನಿಶರ್ ಆಗಿ ಮ್ಯಾಚ್ ಮುಗಿಸಿದ್ದು ಕಿಂಗ್ ವಿರಾಟ್ ಕೊಹ್ಲಿ. ಌಂಡ್ ಭಾನುವಾರ ವಾಂಖೆಡೆ ಸ್ಟೇಡಿಯಮ್​ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಘೀಳಿಟ್ಟಿದ್ದು ಹಿಟ್​ಮ್ಯಾನ್ ರೋಹಿತ್ ಶರ್ಮಾ. ಯಂಗ್​ಸ್ಟರ್​​ಗಳ ಅಬ್ಬರದ ಮುಂದೆ ಮೋಸ್ಟ್ ಎಕ್ಸ್​ಪೀರಿಯನ್ಸ್​ಡ್ ಲೆಜೆಂಡರಿ ಬ್ಯಾಟರ್​​ಗಳ ಪವರ್ ಶೋ ತೋರಿಸ್ತಿದ್ದಾರೆ.

ಬ್ಯಾಟಿಂಗ್ ಮೂಲಕವೇ ಬಿಸಿಸಿಐಗೆ ಬಿಗ್ ಮೆಸೇಜ್!

ಟಿ-20ಐ ಹಾಗೇ ಟೆಸ್ಟ್ ಮಾದರಿ ಕ್ರಿಕೆಟ್​ನಿಂದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸದ್ಯ ಭಾರತದ ಪರ ಏಕದಿನ ಮಾದರಿ ಪಂದ್ಯಗಳನ್ನ ಮಾತ್ರ ಆಡ್ತಿದ್ದಾರೆ. ಈ ಇಬ್ಬರು ದಿಗ್ಗಜರ ಟಾರ್ಗೆಟ್ ಇರೋದು 2027ರ ಏಕದಿನ ವಿಶ್ವಕಪ್. 2023ರ ಫೈನಲ್​ನಲ್ಲಿ ಜಸ್ಟ್ ಮಿಸ್ ಆಗಿರೋ ಟ್ರೋಫಿಯನ್ನ 2027ರಲ್ಲಿ ಎತ್ತಿ ಹಿಡಿಯಬೇಕು ಅನ್ನೋ ಮಹದಾಸೆಯಿಂದ ಆಡ್ತಿದ್ದಾರೆ. ಆದ್ರೆ ರೋಹಿತ್ ಶರ್ಮಾ ಆಟದ ಬಗ್ಗೆ ಬಿಸಿಸಿಐ ಕಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ ತಮ್ಮ ಬ್ಯಾಟ್ ಮೂಲಕವೇ ಸ್ಪಷ್ಟ ಸಂದೇಶ ಕೊಡ್ತಿದ್ದಾರೆ. ಮುಂಬೈ ಪರ 38 ಎಸೆತಗಳಲ್ಲಿ 78 ರನ್ ಸಿಡಿಸಿ ಅಬ್ಬರಿಸಿದ್ರು. ಈ ಮೂಲಕ  39 ವರ್ಷದ ರೋಹಿತ್ ಶರ್ಮಾ ಹಿಂದೆಂದಿಗಿಂತಲೂ ಫಿಟ್ ಌಂಡ್ ಫೈನ್ ಆಗಿ ಐಪಿಎಲ್​ಗೆ ಕಂ ಬ್ಯಾಕ್ ಮಾಡಿದ್ದಾರೆ. ಮೊದಲ ಮ್ಯಾಚಲ್ಲೇ ತಮ್ಮ ಐಪಿಎಲ್ ವೃತ್ತಿಜೀವನದ ಫಾಸ್ಟೆಸ್ಟ್ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಯಾಕಂದ್ರೆ ರೋಹಿತ್ ಶರ್ಮಾರ ಪ್ರತೀ ಪಂದ್ಯ, ಅವ್ರ ಪರ್ಫಾಮೆನ್ಸ್ ಎಲ್ಲವನ್ನೂ ಅನಾಲಿಸಿಸ್ ಮಾಡಲಾಗ್ತಿದೆ. ಈಗಾಗ್ಲೇ 2027ರ ವಿಶ್ವಕಪ್​ಗೆ 20 ಆಟಗಾರರ ಒಂದು ಲಿಸ್ಟ್ ರೆಡಿಯಾಗಿದ್ದು ಅದ್ರಲ್ಲಿರೋ ಪ್ರತಿಯೊಬ್ಬರ ಪ್ರದರ್ಶನದ ಮೇಲೆ ಬಿಸಿಸಿಐ ಸೆಲೆಕ್ಷನ್ ಕಮಿಟಿ ಕಣ್ಣಿಟ್ಟಿದೆ. ಹೀಗಾಗಿ ಆಟದ ಮೂಲಕವೇ ರೋಹಿತ್ ಶರ್ಮಾ ತಮ್ಮ ಸ್ಥಾನ ಭದ್ರಪಡಿಸಿಕೊಳ್ತಿದ್ದಾರೆ. ಇತ್ತ 37 ವರ್ಷದ ಕೊಹ್ಲಿ ಬ್ಯಾಟಿಂಗ್ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಇದೀಗ ಮೊದಲ ಮ್ಯಾಚಲ್ಲೇ ದಾಖಲೆ ಮೇಲೆ ದಾಖಲೆ ಬರೆದು ದೊಡ್ಡ ಸಂದೇಶವನ್ನೇ ರವಾನಿಸಿದ್ದಾರೆ.

ಮೊದಲ ಮ್ಯಾಚಲ್ಲೇ RO-KO ಪವರ್!

ಕೆಕೆಆರ್ ವಿರುದ್ಧ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರೋಹಿತ್

ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಪವರ್‌ ಪ್ಲೇನಲ್ಲೇ 50 ರನ್ ಗಳಿಕೆ

ಟಿ20 ಕ್ರಿಕೆಟ್‌ನಲ್ಲಿ 550 ಸಿಕ್ಸರ್‌ಗಳನ್ನು ಪೂರೈಸಿದ ದಾಖಲೆ ಮಾಡಿದ್ದಾರೆ

ಏಷ್ಯಾದ ಮೊದಲ ಆಟಗಾರ ಮತ್ತು ವಿಶ್ವದ ಒಂಬತ್ತನೇ ಬ್ಯಾಟ್ಸ್‌ ಮನ್

ಮುಂಬೈ ಪರ ಇದುವರೆಗೆ 228 ಪಂದ್ಯಗಳನ್ನಾಡಿ 5876 ರನ್ ಗಳಿಕೆ

ಚೇಸ್ ಮಾಸ್ಟರ್ ಕಿಂಗ್ ಕೊಹ್ಲಿ ಮತ್ತೊಮ್ಮೆ ಡಾಮಿನೇಷನ್ ಸ್ಟಾರ್ಟ್

38 ಎಸೆತಗಳಲ್ಲಿ 69 ರನ್ ಸಿಡಿಸುವ ಮೂಲಕ ಅದ್ಭುತ ಪ್ರದರ್ಶನ

ಚೇಸಿಂಗ್​ನಲ್ಲಿ 4000 ರನ್​ ಕಲೆಹಾಕಿದ ಮೊದಲ ಬ್ಯಾಟರ್ ಎಂಬ ದಾಖಲೆ

ಅತಿ ಹೆಚ್ಚು ಬಾರಿ ತಂಡದ ಪರ ಅತ್ಯಧಿಕ ರನ್ ಗಳಿಸಿದ ದಾಖಲೆ

ಐಪಿಎಲ್‌ನಲ್ಲಿ 50+ ಸ್ಕೋರ್​ಗಳಿಸಿ ಅತ್ಯಧಿಕ ಬಾರಿ ಅಜೇಯ ಬ್ಯಾಟರ್

ಚೇಸಿಂಗ್ ವೇಳೆ ಅತೀ ಹೆಚ್ಚು ಬಾರಿ 50+ ಸ್ಕೋರ್​ ಗಳಿಸಿದ ದಾಖಲೆ

ಹೈದರಾಬಾದ್ ತಂಡದ ವಿರುದ್ಧ ಅತಿ ಹೆಚ್ಚು ರನ್ (874) ಗಳಿಸಿದ ಆಟಗಾರ

ಓಪನರ್ ಆಗಿ 181 ಸಿಕ್ಸ್, 150+ ಸ್ಟ್ರೈಕ್  ರೇಟ್ ​ನಲ್ಲಿ ಟಾಪ್ ಸ್ಕೋರರ್

ಇತಿಹಾಸದಲ್ಲಿ ಒಂದೇ ತಂಡದ ಪರ 19 ಸೀಸನ್​ ಆಡಿದ ಏಕೈಕ ಆಟಗಾರ

Shantha Kumari