ವಿಶಾಖಪಟ್ಟಣಂನಲ್ಲಿ ವಿರಾಟ ತಾಂಡವ – ಹ್ಯಾಟ್ರಿಕ್ ಸೆಂಚುರಿ ಸಿಡಿಸ್ತಾರಾ KING?
ಫೇವರೆಟ್ ಪಿಚ್.. ಕೊಹ್ಲಿನೇ BOSS

ವಿಶಾಖಪಟ್ಟಣಂನಲ್ಲಿ ವಿರಾಟ ತಾಂಡವ – ಹ್ಯಾಟ್ರಿಕ್ ಸೆಂಚುರಿ ಸಿಡಿಸ್ತಾರಾ KING?ಫೇವರೆಟ್ ಪಿಚ್.. ಕೊಹ್ಲಿನೇ BOSS

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಇವತ್ತು ಮಧ್ಯಾಹ್ನ 1.30ಕ್ಕೆ ವಿಶಾಖಪಟ್ಟಣದಲ್ಲಿ ಪಂದ್ಯ ನಡೆಯಲಿದ್ದು ಗೆದ್ರವ್ರು ಸರಣಿಯಲ್ಲಿ ಚಾಂಪಿಯನ್ಸ್ ಆಗ್ತಾರೆ. ಈ ಪಂದ್ಯಕ್ಕೂ ಮುನ್ನ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ಕಿಂಗ್ ವಿರಾಟ್ ಕೊಹ್ಲಿ ಮೇಲಿದೆ. ಆಲ್ರೆಡಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿರೋ ವಿರಾಟ್ ಹ್ಯಾಟ್ರಿಕ್ ಸೆಂಚುರಿ ಸಿಡಿಸ್ತಾರಾ ಅಂತಾ ಕುತೂಹಲದಿಂದ ಕಾಯ್ತಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ವಿಶಾಖಪಟ್ಟಣಂನಲ್ಲಿ ಕೊಹ್ಲಿ ರೆಕಾರ್ಡ್ಸ್ ಅತ್ಯದ್ಭುತವಾಗಿದೆ.

ಇದನ್ನೂ ಓದಿ : ಜೈಲಿನಲ್ಲಿರುವ ದಾಸನಿಗೆ ಶಾಕ್‌ ಕೊಟ್ಟ IT ಅಧಿಕಾರಿಗಳು! – ದರ್ಶನ್‌ಗೆ 82 ಲಕ್ಷ ಹಣ ಫ್ಯಾನ್ಸ್‌ ಕೊಟ್ಟಿದ್ದಾ?  

ಭಾರತದಲ್ಲಿ ವಿರಾಟ್ ಕೊಹ್ಲಿಯವ್ರ ಒನ್ ಆಫ್ ದಿ ಫೇವರೆಟ್ ಮೈದಾನಗಳಲ್ಲಿ ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನ ಕೂಡ ಒಂದು. ಸತತ ಎರಡು ಶತಕಗಳೊಂದಿಗೆ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹಾಗೇ ಇವತ್ತು ನಿರ್ಣಾಯಕ ಪಂದ್ಯಕ್ಕೆ ಕಾಲಿಡ್ತಿದ್ದಾರೆ. ಹ್ಯಾಟ್ರಿಕ್ ಶತಕದ ಮೇಲೆ ಕಣ್ಣಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ಬಳಿಕ ಹೈಯೆಸ್ಟ್ ಶತಕ ಬಾರಿಸಿರೋ ವಿರಾಟ್ ಈಗ ಮತ್ತೊಂದು ಮೈಲುಗಲ್ಲು ನೆಡೋಕೆ ರೆಡಿಯಾಗ್ತಿದ್ದಾರೆ.

ಏಕದಿನದಲ್ಲಿ 2ನೇ ಬಾರಿ ಹ್ಯಾಟ್ರಿಕ್ ಶತಕ ಬಾರಿಸ್ತಾರಾ ಕೊಹ್ಲಿ?

ವಿಶ್ವಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಶತಕಗಳ ಶತಕ ಬಾರಿಸಿದ್ರೆ ಈ ಲಿಸ್ಟ್ ನಲ್ಲಿ ವಿರಾಟ್ ಕೊಹ್ಲಿ ಸೆಕೆಂಡ್ ಪ್ಲೇಸ್ ನಲ್ಲಿದ್ದಾರೆ. ಇದುವರೆಗೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 84 ಶತಕ ಬಾರಿಸಿದ್ದಾರೆ. ಹಾಗೇ ಏಕದಿನ ಮಾದರಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. 53 ಏಕದಿನ ಮಾದರಿಯ ಶತಕ ಬಾರಿಸಿದ್ದಾರೆ. ಸೆಕೆಂಡ್ ಪ್ಲೇಸ್​ನಲ್ಲಿರೋ ಸಚಿನ್ ತೆಂಡೂಲ್ಕರ್ 49 ಒಡಿಐ ಶತಕ ಬಾರಿಸಿದ್ದಾರೆ. ಇನ್ನು ರೋಹಿತ್ ಶರ್ಮಾ 3ನೇ ಸ್ಥಾನದಲ್ಲಿದ್ದು 33 ಸೆಂಚುರಿಗಳು ಅವ್ರ ಹೆಸರಲ್ಲಿವೆ. ಸೋ ಕೊಹ್ಲಿಯವ್ರ ಈ ದಾಖಲೆ ಮುರಿಯೋಕೆ ಸಧ್ಯಕ್ಕಂತೂ ಯಾರಿಂದಲೂ ಸಾಧ್ಯನೇ ಇಲ್ಲ. ಇನ್ನು ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 11 ಸಲ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿದ್ದಾರೆ. ಌಂಡ್ ಒಮ್ಮೆ ಹ್ಯಾಟ್ರಿಕ್ ಶತಕ ಬಾರಿಸಿದ್ದಾರೆ. ಅದೂ ಕೂಡ ಒಂದೇ ವಾರದ ಅಂತರದಲ್ಲಿ ಈ ಸಾಧನೆ ಮಾಡಿದ್ದಾರೆ. ಹೀಗಾಗೇ ಈ ಬಾರಿಯೂ ಒಂದೇ ವಾರದ ಅಂತರದಲ್ಲಿ ಕೊಹ್ಲಿ ಮತ್ತೊಂದು ಹ್ಯಾಟ್ರಿಕ್ ಸಾಧನೆ ಮಾಡ್ತಾರಾ ಅನ್ನೋ ಕ್ಯೂರಿಯಾಸಿಟಿ ಜಾಸ್ತಿಯಾಗ್ತಿದೆ. ಅದಕ್ಕೆ ಕಾರಣ ವಿಶಾಖಪಟ್ಟಣಂ ಮೈದಾನ.

ವಿಶಾಖಪಟ್ಟಣಂ ಮೈದಾನದಲ್ಲಿ ಕೊಹ್ಲಿ ಅದ್ಭುತ ದಾಖಲೆ!

ಮೂರನೇ ಪಂದ್ಯ ನಡೆಯಲಿರುವ ವಿಶಾಖಪಟ್ಟಣಂನಲ್ಲಿನ ಎಸಿಎ-ಡಿವಿಸಿಎ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ.

ಕೊಹ್ಲಿ ಅದ್ಬುತ ದಾಖಲೆ!

ಇದುವರೆಗೆ 7 ಏಕದಿನ ಪಂದ್ಯಗಳನ್ನ ಆಡಿದ್ದು 587 ರನ್ಸ್

ಮೂರು ಶತಕಗಳು ಮತ್ತು 2 ಅರ್ಧಶತಕಗಳೂ ಸೇರಿವೆ

ವೆಸ್ಟ್ ಇಂಡೀಸ್ ವಿರುದ್ಧ 99 ರನ್‌ ಗಳಿಸಿ ಶತಕ ವಂಚಿತ

97.83 ಸರಾಸರಿ, 157 ರನ್ಸ್ ಹೊಡೆದು ಅಜೇಯರಾಗಿ ಬೆಸ್ಟ್

2 ಪಂದ್ಯಗಳಲ್ಲಿ ಡಕ್, ನಂತ್ರ 74 ರನ್, 135 ರನ್, 102 ರನ್

ಶತಕ ಸಿಡಿದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ಸತತ ನಾಲ್ಕು ಏಕದಿನ ಶತಕ

2023 ರ ವಿಶ್ವಕಪ್ ​ನಲ್ಲಿ ಕೊನೇ ಬಾರಿ ಶತಕ, ಈಗ ಬಂದ್ರೆ 4ನೇ ಶತಕ

ಸದ್ಯ ಕೊಹ್ಲಿ ಹ್ಯಾಟ್ರಿಕ್ ಶತಕ ಬಾರಿಸೋಕೆ ಅವಕಾಶ ಇರೋದ್ರಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಖರೀದಿಸಿದ್ದಾರೆ. ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣವು 27,500 ಆಸನಗಳ ಸಾಮರ್ಥ್ಯ ಹೊಂದಿದ್ದು ಸ್ಟಾರ್ಟಿಂಗ್ ಪ್ರೈಸ್ 1,200 ರೂಪಾಯಿಂದ ಹಿಡ್ದು 18,000 ರೂಪಾಯಿಗಳಷ್ಟಿದ್ರೂ ಕೂಡ ಎಲ್ಲವೂ ಸೋಲ್ಡ್ ಔಟ್ ಆಗಿವೆ.  ಇನ್ನು ವಿಶಾಖಪಟ್ಟಣದಲ್ಲಿ ಕೊಹ್ಲಿ ಶತಕ ಬಾರಿಸಿದ್ದೇ ಆದಲ್ಲಿ ಮತ್ತೊಂದು ದಾಖಲೆ ಮಾಡಬಹುದು. ಪ್ರಸ್ತುತ ಅಂರಾತಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ದಾರೆ. ಕುಮಾರ ಸಂಗಾಕ್ಕಾರ ಸೆಕೆಂಡ್ ಪ್ಲೇಸ್​ನಲ್ಲಿದ್ದಾರೆ. ಸಂಗಾಕ್ಕಾರರನ್ನ ಕೊಹ್ಲಿ ಹಿಂದಿಕ್ಕೋಕೆ ಜಸ್ಟ್ 107 ರನ್​ಗಳ ಅಗತ್ಯ ಅಷ್ಟೇ ಇದೆ.

Shantha Kumari