ಕೊಹ್ಲಿ ಕಿಚ್ಚಿಗೆ ತುಪ್ಪ ಸುರಿದ ಗಂಭೀರ್ – 2013ರ IPL ಸಂಘರ್ಷದ ಸತ್ಯ ಬಯಲು
ವಿರಾಟ್ ಮಾಡಿದ್ದೇ ಸರಿ ಎಂದ ಅಂಪೈರ್

ಕೊಹ್ಲಿ ಕಿಚ್ಚಿಗೆ ತುಪ್ಪ ಸುರಿದ ಗಂಭೀರ್ – 2013ರ IPL ಸಂಘರ್ಷದ ಸತ್ಯ ಬಯಲುವಿರಾಟ್ ಮಾಡಿದ್ದೇ ಸರಿ ಎಂದ ಅಂಪೈರ್

ಜಗತ್ತಿನ ಶ್ರೀಮಂತ ಲೀಗ್ ಆಗಿರುವ ಐಪಿಎಲ್​ 19 ಸೀಸನ್​ಗಳನ್ನ ಯಶಸ್ವಿಯಾಗಿ ಮುಗಿಸಿ 20ನೇ ಆವೃತ್ತಿಗೆ ಸಿದ್ಧವಾಗ್ತಿದೆ. ಈ 19 ವರ್ಷಗಳ ಇತಿಹಾಸವನ್ನ ಕೆದಕಿದ್ರೆ ಸಾಧನೆಗಳೂ ಶಿಖರವೂ ಇದೆ. ಹಲವು ವಿವಾದಗಳೂ ಇವೆ. ಅದ್ರಲ್ಲೂ ಕಾಂಟ್ರವರ್ಶಿಯಲ್ ಲಿಸ್ಟ್​ನಲ್ಲಿ ಟಾಪ್​ನಲ್ಲಿ ಬರುವಂಥ ಇನ್ಸಿಡೆಂಟ್ ಅಂದ್ರೆ ಅದು 2013ರ ಐಪಿಎಲ್​ನಲ್ಲಿ ನಡೆದಿದ್ದ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಸಂಘರ್ಷ. ದಿಗ್ಗಜ ಆಟಗಾರರ ಆನ್​ಫೀಲ್ಡ್​ ಸಮರ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು. ಸ್ಟಿಲ್ ಈವರೆಗೂ ಈ ಘಟನೆ ಸದ್ದು ಮಾಡ್ತಾನೇ ಇರುತ್ತೆ. ಇದೀಗ ಆವತ್ತಿನ ಮ್ಯಾಚಲ್ಲಿ ನಿಜವಾಗ್ಲೂ ಏನಾಗಿತ್ತು ಅನ್ನೋದನ್ನ ಅಂದಿನ ಪಂದ್ಯದ ಫೀಲ್ಡ್ ಅಂಪೈರ್ ಅನಿಲ್ ಚೌಧರಿ ರಿವೀಲ್ ಮಾಡಿದ್ದಾರೆ. ಅಟ್ ದಿ ಸೇಮ್ ಟೀಂ ಕೊಹ್ಲಿ ಮಾಡಿದ್ದೇ ಸರಿ ಎಂದಿದ್ದಾರೆ.

ಇದನ್ನೂ ಓದಿ : IPL ಪವರ್ ಗೆ PSL ಪಂಕ್ಚರ್ – ಲೀಗ್ ನೇ ಎತ್ತಂಗಡಿ ಮಾಡುತ್ತಾ PAK?

2013ರ ಏಪ್ರಿಲ್ 11. ಬೆಂಗಳೂರಿನ ಚಿನ್ನಸ್ವಾಮಿ ಮೈದಾನ. ಈ ಮ್ಯಾಚಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೇ ಗೌತಮ್ ಗಂಭೀರ್​ ಲೀಡರ್​ಶಿಪ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ ಆಗಿದ್ವು. ಆದರೆ ಮ್ಯಾಚ್ ಟೈಮಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ನಡೆದ ಜಗಳ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಂಘರ್ಷಗಳಲ್ಲಿ ಒಂದು. ಅಂದು ಪಂದ್ಯದ ಆನ್‌-ಫೀಲ್ಡ್ ಅಂಪೈರ್ ಆಗಿದ್ದ ಅನಿಲ್ ಚೌಧರಿ ಈಗ ಏನಾಗಿತ್ತು ಆವತ್ತು ಅನ್ನೋದ್ರ ಬಗ್ಗೆ ಮಾತ್ನಾಡಿದ್ದಾರೆ.

ಕೊಹ್ಲಿ ಔಟ್ ಆಗಿದ್ದಕ್ಕೆ ಟೀಕೆ ಮಾಡಿದ್ದ ಗಂಭೀರ್!

ಈ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಕೆಕೆಆರ್ 155 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಪರ ವಿರಾಟ್ ಕೊಹ್ಲಿ 35 ರನ್ ಗಳಿಸಿ ಔಟಾಗಿದ್ರು. ಲಕ್ಷ್ಮಿಪತಿ ಬಾಲಾಜಿ ಬೌಲಿಂಗ್ ವೇಳೆ ಇಯಾನ್ ಮಾರ್ಗನ್‌ಗೆ ಕ್ಯಾಚ್ ನೀಡಿದ್ರು. ಕೊಹ್ಲಿ ಔಟಾಗ್ತಿದ್ದಂತೆ ಕೆಕೆಆರ್ ಕ್ಯಾಪ್ಟನ್ ಆಗಿದ್ದ ಗೌತಮ್ ಗಂಭೀರ್ ಫುಲ್ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿದ್ರು. ಅಷ್ಟಕ್ಕೇ ಸುಮ್ಮನಾಗದೆ ಕೊಹ್ಲಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುವಾಗ ಆಕ್ಷೇಪಾರ್ಹ ಪದ ಬಳಸಿ ಟೀಸ್ ಮಾಡಿದ್ರು. ಇದ್ರಿಂದ ಸಿಟ್ಟಾದ ಕೊಹ್ಲಿ ಗಂಭೀರ್​ ಕಡೆ ವಾಪಸ್ ಬಂದು ನುಗ್ಗಿದ್ರು. ದೆಹಲಿ ಮೂಲದ ಇಬ್ಬರೂ ಆಟಗಾರರು ಮೈದಾನದಲ್ಲೇ ಪರಸ್ಪರ ಬೈದಾಡಿಕೊಂಡಿದ್ದಾರೆ. ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಈ ಟೈಮಲ್ಲಿ ಕೊಲ್ಕತ್ತಾದ ಆಟಗಾರರು ಹಾಗೇ ಅಂಪೈರ್‌ಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ದೂರ ತಳ್ಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸೋ ಆವತ್ತು ಏನಾಗಿತ್ತು ಅನ್ನೋದನ್ನ ಕಣ್ಣಾರೆ ಕಂಡಿರುವ ಆನ್ ಫೀಲ್ಡ್ ಅಂಪೈರ್ ಅನಿಲ್ ಚೌಧರಿ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ.

ಕೊಹ್ಲಿ ಅಗ್ರೆಸ್ಸಿವ್ ಆಗಿ ಆಡದಿದ್ರೆ ಕ್ರಿಕೆಟ್ ಬೋರಿಂಗ್!

ಈ ಮ್ಯಾಚಲ್ಲಿ ಆನ್​ಫೀಲ್ಡ್ ಅಂಪೈರ್​ಗಳಲ್ಲಿ ಒಬ್ರಾಗಿದ್ದ ಅನಿಲ್ ಚೌಧರಿ ಈ ಮ್ಯಾಚಲ್ಲಿ ವಾಗ್ವಾದ ಆಗ್ಬೋದು ಅಂತಾ ನಾನು ಪಂದ್ಯಕ್ಕೂ ಮೊದಲೇ ಊಹಿಸಿದ್ದೆ ಎಂದಿದ್ದಾರೆ. ನಾರ್ಥ್ ಇಂಡಿಯನ್ಸ್ ಆಲ್ಮೋಸ್ಟ್ ಅಗ್ರೆಸ್ಸಿವ್ ಆಗೇ ಆಡ್ತಾರೆ. ನಾನು ಸ್ಥಳೀಯ ಕ್ರಿಕೆಟ್​ನಲ್ಲಿ ಆಡಿದ್ದೆ ಌಂಡ್ ನಮ್ಮ ಪ್ಲೇಯರ್ಸ್ ಯಾವಾಗ್ಲೂ ಹೀಗೇ ಆಡೋದು.  ಅವರು ಅಗ್ರೆಸ್ಸಿವ್ ಆಗಿ ಆಡಿಲ್ಲ ಅಂದ್ರೆ ಅವ್ರ ನೈಜ ಆಟವೂ ಹೊರಬರಲ್ಲ. ಆಟಗಾರರ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರಿದ್ರೆ ಆಟವೂ ಚೆನ್ನಾಗಿರಲ್ಲ. ಆದ್ರೆ ಅದಕ್ಕೆ ಒಂದು ಮಿತಿ ಇರುತ್ತದೆ ಮತ್ತು ಅದನ್ನು ಮೀರಬಾರದು ಎಂದಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿ ಮ್ಯಾನರಿಸಂ ಕೂಡ ಒಪ್ಕೊಂಡಿದ್ದಾರೆ. ನಾನು ವಿರಾಟ್ ಕೊಹ್ಲಿಯನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ, ಅವರ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದೇನೆ. ಹಾಗಾಗಿ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಕೊಹ್ಲಿಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಕೆಲವೊಮ್ಮೆ ಅವರು ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಕಾಣಿಸುತ್ತಾರೆ, ಆದರೆ ನಾವು ಅಂಪೈರ್‌ಗಳು ಕರೆಕ್ಟ್ ಡಿಸಿಷನ್ಸ್ ಕೊಟ್ರೆ ಖಂಡಿತವಾಗಿಯೂ  ಅಪ್ರಿಶಿಯೇಟ್ ಮಾಡ್ತಾರೆ. ಓವರ್‌ಗಳ ಮಧ್ಯೆ ಬಂದು ಬೆನ್ನು ತಟ್ಟುತ್ತಾರೆ. ಆಟದ ಮೇಲೆ ಅವರಿಗೆ ತುಂಬಾನೇ ಪ್ಯಾಶನ್. ಇಂಥಾ ಆಟಗಾರರು ಇರಲೇಬೇಕು, ಇಲ್ಲವಾದರೆ ಕ್ರಿಕೆಟ್‌ ಎಂಬ ಆಟವೇ ಬೋರಿಂಗ್ ಆಗಿಬಿಡುತ್ತದೆ ಎಂದಿದ್ದಾರೆ. ಹೀಗೆ 2013ರಲ್ಲಿ ಆರ್​ಸಿಬಿ ವರ್ಸಸ್ ಕೆಕೆಆರ್ ನಡುವೆ ನಡೆದಿದ್ದ ಗಲಾಟೆಯ ಬಗ್ಗೆ ಅನಿಲ್ ಚೌಧರಿ ಮಾತನಾಡಿದ್ದಾರೆ. ಌಂಡ್ ಈ ಇನ್ಸಿಡೆಂಟ್ ಎಷ್ಟೇ ಐಪಿಎಲ್​ ಸೀಸನ್​ಗಳು ಕಳೆದ್ರೂ ಮಾಸದ ಘಟನೆಯಾಗಿಯೇ ಉಳ್ಕೊಳುತ್ತೆ.

Shantha Kumari

Leave a Reply

Your email address will not be published. Required fields are marked *