ಕೊಹ್ಲಿ ಗಂಭೀರ್ ಜಗಳ – ಇಬ್ಬರಿಗೂ ಪಂದ್ಯದ ಶೇಕಡಾ 100ರಷ್ಟು ದಂಡ..!

ಕೊಹ್ಲಿ ಗಂಭೀರ್ ಜಗಳ – ಇಬ್ಬರಿಗೂ ಪಂದ್ಯದ ಶೇಕಡಾ 100ರಷ್ಟು ದಂಡ..!

ಆರ್​ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಕಿತ್ತಾಟಕ್ಕೆ ಸಾಕ್ಷಿಯಾಗಿದೆ. ಪಂದ್ಯ ನಡೆಯುವಾಗ ಮತ್ತು ಪಂದ್ಯ ಮುಗಿದ ಮೇಲೂ ಕಿತ್ತಾಡಿಕೊಂಡ ವಿರಾಟ್ ಕೊಹ್ಲಿ, ನವೀನ್ ಉಲ್​ ಹಕ್​ ಮತ್ತು ಗೌತಮ್ ಗಂಭೀರ್‌ಗೆ ಬಿಸಿಸಿಐ ಶಿಕ್ಷೆ ಪ್ರಕಟಿಸಿದೆ. ಜೊತೆಗೆ ವಿರಾಟ್ ಕೊಹ್ಲಿಯ ಅತಿರೇಕದ ವರ್ತನೆಗೂ ಮತ್ತೊಮ್ಮೆ ದಂಡ ತೆರಬೇಕಾಗಿದೆ.

ಇದನ್ನೂ ಓದಿ: ಸನ್ನೆಗೆ ಪ್ರತಿಸನ್ನೆ, ಅತಿರೇಕದ ವರ್ತನೆ – ಕ್ರಿಕೆಟ್ ಆಟವೆಂದರೆ ಕಿತ್ತಾಟವೇ ? – ಕೊಹ್ಲಿ ಮಾಡಿದ್ದೇನು?

ಹೈವೋಲ್ಟೇಜ್​​ ಪಂದ್ಯವನ್ನ ಆರ್​ಸಿಬಿ ಗೆದ್ದ ಬಳಿಕ ದೊಡ್ಡ ಹೈಡ್ರಾಮಾವೇ ನಡೀತು. ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಪರಸ್ಪರ ಮಾತಿನ ಚಕಮಕಿ ನಡೆಸಿದ್ದಕ್ಕಾಗಿ ಇಬ್ಬರಿಗೂ ಪಂದ್ಯದ ಶೇಕಡಾ 100ರಷ್ಟು ದಂಡ ವಿಧಿಸಲಾಗಿದೆ. ಅಂದ್ರೆ, ಕೊಹ್ಲಿ ಮತ್ತು ಗಂಭೀರ್​ಗೆ ಒಂದೇ ಒಂದು ರೂಪಾಯಿ ಕೂಡ ಸಿಗಲ್ಲ. ಇನ್ನು ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡ ಅಫ್ಘಾನಿಸ್ತಾನ ಮೂಲದ ಆಟಗಾರ ನವೀನ್​ ಉಲ್​ ಹಕ್​ಗೆ ಕೂಡ ಪಂದ್ಯದ ಶೇಕಡಾ 50ರಷ್ಟು ಫೈನ್ ಹಾಕಲಾಗಿದೆ. ಮ್ಯಾಚ್​ನ 16 ಮತ್ತು 17ನೇ ಓವರ್​​ನ ವೇಳೆ ಕೊಹ್ಲಿ ಮತ್ತು ನವೀನ್ ಉಲ್​ ಹಕ್​ ಕಿತ್ತಾಡಿಕೊಂಡಿದ್ದರು. ಆದರೆ, ಇದರಲ್ಲಿ ವಿರಾಟ್ ಕೊಹ್ಲಿ ತನ್ನ ಶೂ ಧೂಳನ್ನು ನವೀನ್ ಉಲ್ ಹಕ್‌ಗೆ ತೋರಿಸಿ ಅತಿರೇಕದ ವರ್ತನೆ ತೋರಿಸಿರುವ ಬಗ್ಗೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಒಬ್ಬ ಆಟಗಾರನನ್ನು ಈ ರೀತಿ ನಿಂದಿಸಿರುವುದು ಸರಿಯೇ ಎಂಬ ಮಾತುಗಳು ಕೇಳಿಬರುತ್ತಿದೆ.

ಸೋಮವಾರ ರಾತ್ರಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹಂಗಾಮಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ತಂಡ ಮೆಂಟರ್‌ ಗೌತಮ್ ಗಂಭೀರ್ ನಡುವೆ ಹಸ್ತಲಾಘವದ ವೇಳೆ ಕೊಹ್ಲಿ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ.  ಸಹ ಆಟಗಾರರು ಇಬ್ಬರನ್ನೂ ಸಮಾಧಾನ ಪಡಿಸಿದ್ದರು. ಈ ದೃಶ್ಯ ಕೂಡಾ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

suddiyaana