ರಾಜನಾದ ಕೊಹ್ಲಿ.. ಮಂಕಾದ ಮನೀಶ್ – ಒಟ್ಟೊಟ್ಟಿಗೆ ಬಂದವರ ದಾರಿ ಬದಲಾಗಿದ್ದೇಗೆ?
ಸಿಡಿಲಿನಂತಿದ್ದ ಕನ್ನಡಿಗ ಹಳಿ ತಪ್ಪಿದ್ದೆಲ್ಲಿ?

ರಾಜನಾದ ಕೊಹ್ಲಿ.. ಮಂಕಾದ ಮನೀಶ್ – ಒಟ್ಟೊಟ್ಟಿಗೆ ಬಂದವರ ದಾರಿ ಬದಲಾಗಿದ್ದೇಗೆ?ಸಿಡಿಲಿನಂತಿದ್ದ ಕನ್ನಡಿಗ ಹಳಿ ತಪ್ಪಿದ್ದೆಲ್ಲಿ?

ಕೊಲ್ಕತ್ತಾ ವಿರುದ್ಧ ಗೆಲ್ಲೋ ಮೂಲಕ ಬೆಂಗಳೂರು ಸದ್ಯ ಪಾಯಿಂಟ್ಸ್ ಟೇಬಲ್​ನ ಕಿಂಗ್ ಆಗಿದೆ. ರಾಯ್ಪುರದ ಬ್ಯಾಕ್ ಟು ಬ್ಯಾಕ್ ವಿಕ್ಟರಿ ಆರ್​ಸಿಬಿ ತಂಡದ ಪ್ಲೇ ಆಫ್ಸ್ ಜರ್ನಿಗೆ ಬೂಸ್ಟ್ ನೀಡಿದೆ. ಕೆಕೆಆರ್ ವಿರುದ್ಧದ ಮ್ಯಾಚ್ ಹಲವು ವಿಶೇಷತೆಗಳಿಗೂ ಸಾಕ್ಷಿಯಾಯ್ತು. ಌಂಡ್ ಈ ಪಂದ್ಯದ್ಲಲಿ ಕೊಹ್ಲಿ ಜೊತೆ ಮತ್ತೊಬ್ಬ ಆಟಗಾರನ ಹೆಸರು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಅದುವೇ ಕನ್ನಡಿಗ ಮನೀಷ್ ಪಾಂಡೆ. ಟಿಮ್ ಡೇವಿಡ್ ಅವ್ರ ಅದ್ಭುತ ಕ್ಯಾಚ್ ಹಿಡಿದ ಮನೀಷ್ ಬಗ್ಗೆ ಕೆಲವರು ಮರುಕ ಕೂಡ ವ್ಯಕ್ತಪಡಿಸ್ತಿದ್ದಾರೆ.

ಇದನ್ನೂ ಓದಿ : ಕಾಡಿನ ರಾಜ ಸಿಂಹ ಕಣೋ.. – ಆರ್‌ಸಿಬಿ ಕಾಲೆಳೆದು ತಾನೇ ಜಾರಿಬಿದ್ದ ಕೆಕೆಆರ್

ಐಪಿಎಲ್​ನಲ್ಲಿ ಫಸ್ಟ್ ಸೀಸನ್​ನಿಂದ ಸ್ಟಿಲ್ ಈವರೆಗೂ ಐಪಿಎಲ್ ಆಡ್ತಿರೋದು ಕೇವಲ ನಾಲ್ವರು ಮಾತ್ರ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ. ಈ ಮೂವರು ದಿಗ್ಗಜರ ಸಾಲಿನಲ್ಲಿ ನಿಲ್ಲೋ 4ನೇ ಆಟಗಾರನೇ ಮನೀಷ್ ಪಾಂಡೆ. ಕೊಹ್ಲಿ ಜೊತೆ ಜೊತೆಗೇ ಕೆರಿಯರ್ ಸ್ಟಾರ್ಟ್ ಮಾಡಿದ್ದ ಮನೀಷ್ ಪಾಂಡೆ ಆರಂಭದ ದಿನಗಳಲ್ಲಿ ಅಕ್ಷರಶಃ ಸಿಡಿಲು. ಆದ್ರೀಗ ಒಂದು ಚಾನ್ಸ್ ಸಿಕ್ರೆ ಸಾಕು ಅಂತಾ ಕಾಯ್ತಿದ್ದಾರೆ. ಒಂದ್ಕಡೆ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಸಾಮ್ರಾಟನಾಗಿ ಮೆರೀತಿದ್ರೆ ಮನೀಷ್​ಗೆ ಅವಕಾಶವೇ ಸಿಗ್ತಿಲ್ಲ. ಈಗ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಹಿಡಿದ ಒಂದು ಅದ್ಭುತ ಕ್ಯಾಚ್ ಮತ್ತೆ ಮನೀಷ್ ಹೆಸರು ಚರ್ಚೆಗೆ ಬರುವಂತೆ ಮಾಡಿದೆ.

ಅದ್ಭುತ ಕ್ಯಾಚ್ ಹಿಡಿದು ಬೆರಗಾಗಿಸಿದ ಮನೀಶ್!

36 ವರ್ಷದ ಮನೀಷ್ ಪಾಂಡೆ ಸದ್ಯ ಟ್ರೆಂಡಿಂಗ್​ನಲ್ಲಿದ್ದಾರೆ. ಅದಕ್ಕೆ ಕಾರಣ ಅವ್ರು ಹಿಡಿದ ಟಿಮ್ ಡೇವಿಡ್ ಅವ್ರ ಅದ್ಭುತ ಕ್ಯಾಚ್. ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಟಿಮ್ ಡೇವಿಡ್ ಬಾರಿಸಿದ ಚೆಂಡು ಬ್ಯಾಕ್​ವರ್ಡ್ ಪಾಯಿಂಟ್​ನತ್ತ ನುಗ್ಗಿತ್ತು. ಎಲ್ರೂ ಬೌಂಡರಿ ಲೈನ್ ಕಡೆ ನೋಡ್ತಿದ್ರೆ ಮಿಂಚಿನ ವೇಗದಲ್ಲಿ ತನ್ನ ಎಡಕ್ಕೆ ಜಿಗಿದ ಪಾಂಡೆ ಇಂಪಾಸಿಬಲ್ ಅನ್ನೋ ಕ್ಯಾಚ್​ನ ಮ್ಯಾಜಿಕಲ್ ರೀತಿಯಲ್ಲಿ ಕಂಪ್ಲೀಟ್ ಮಾಡಿದ್ರು. ಮನೀಷ್ ಡೈವ್​ಗೆ ಕಿಂಗ್ ಕೊಹ್ಲಿ, ಟಿಮ್ ಡೇವಿಡ್, ಆರ್​ಸಿಬಿ ಡಗೌಟ್, ಕಾರ್ತಿಕ್ ತ್ಯಾಗಿ ಸೇರಿದಂತೆ ಕ್ರಿಕೆಟ್ ಲೋಕವೇ ಸ್ಟನ್ ಆಯ್ತು. ಮನೀಷ್​ ಕ್ಯಾಚ್ ನೋಡಿ ಬೆರಗಾದ ಕೊಹ್ಲಿ ತನ್ನ ಹಳೇ ಗೆಳೆಯನ ಬಳಿ ಬಂದು ಅಪ್ಪಿಕೊಳ್ಳೋ ಮೂಲಕ ಅಪ್ರಿಶಿಯೇಟ್ ಮಾಡಿದ್ರು. ಹಾಗಂತ ಮನೀಷ್ ಇದೊಂದೇ ಮ್ಯಾಚಲ್ಲಿ ಅಲ್ಲ. ಕ್ರಿಕೆಟ್ ಕರಿಯರ್ ಅಂತಾ ಬಂದಾಗ ಸರ್ವಶ್ರೇಷ್ಠ ಫೀಲ್ಡರ್​ಗಳ ಸಾಲಿಗೆ ನಿಲ್ಲೂ ಆಟಗಾರ. ಆದ್ರೆ ಅವ್ರ ಜರ್ನಿ ಮಾತ್ರ ಅಂದುಕೊಂಡ ದಿಕ್ಕಿನಲ್ಲಿ ಸಾಗಲಿಲ್ಲ ಅಷ್ಟೇ.

ಮಂಕಾದ ಮನೀಶ್ ಪಾಂಡೆ!

ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಮೊಟ್ಟ ಮೊದಲ ಭಾರತೀಯ

ಡೆಕ್ಕನ್ ಚಾರ್ಜರ್ಸ್ ವಿರುದ್ಧ ಕೇವಲ 73 ಎಸೆತಗಳಲ್ಲಿ ಅಜೇಯ 114 ರನ್

2016ರಲ್ಲಿ ಭಾರತದ ಪರವಾಗಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ಶತಕ

ಭಾರತ ತಂಡದಲ್ಲಿ ಮತ್ತು ಐಪಿಎಲ್‌ ನ ಪ್ರಮುಖ ಪಂದ್ಯಗಳಲ್ಲಿ ಫೇಲ್ಯೂರ್

7 ತಂಡಗಳ ಪರ ಆಡಿದ್ದು ಒಂದು ತಂಡದಲ್ಲಿ ಖಾಯಂ ಸ್ಥಾನ ಕಂಡುಕೊಳ್ಳಲಿಲ್ಲ

ನಿಧಾನಗತಿ ಬ್ಯಾಟಿಂಗ್ & ಪ್ರೆಶರ್ ಹ್ಯಾಂಡಲ್ ಮಾಡದೇ ಅವಕಾಶ ವಂಚಿತ

ಕೆಕೆಆರ್ 75 ಲಕ್ಷ ರೂ.ಗೆ ಖರೀದಿಸಿದೆಯಾದ್ರೂ ಬ್ಯಾಟಿಂಗ್ ಅವಕಾಶ ಸಿಕ್ತಿಲ್ಲ

177 ಐಪಿಎಲ್ ಪಂದ್ಯಗಳಲ್ಲಿ 29.42 ಸರಾಸರಿ ಹಾಗೂ 121.52 ಸ್ಟ್ರೈಕ್ ರೇಟ್‌

3,942 ರನ್ಸ್, ಇದರಲ್ಲಿ 1 ಶತಕ ಮತ್ತು 22 ಅರ್ಧಶತಕಗಳು ಇವೆ

ಹೀಗೆ ಮನೀಷ್ ಪಾಂಡೆಗೆ ಆರಂಭದಲ್ಲಿ ಸಿಕ್ಕ ಸಕ್ಸಸ್ ಆ ನಂತ್ರದಲ್ಲಿ ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನ ಸಮರ್ಥವಾಗಿ ಬಳಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಆದ್ರೆ ವಿರಾಟ್ ಕೊಹ್ಲಿ ಹಾಗಲ್ಲ. ಒಂದೆರಡು ಪಂದ್ಯಗಳಲ್ಲಿ ಫೇಲ್ಯೂರ್ ಆದ್ರೂ ಅಂದ್ರೆ ನೆಕ್ಸ್​ಟ್ ಬೆಂಕಿಯುಂಡೆಯಂತೆ ಬಂದು ಅಪ್ಪಳಿಸ್ತಾರೆ. ಹೀಗಾಗೇ  ಕೊಲ್ಕತ್ತಾ ವಿರುದ್ಧದ ಪಂದ್ಯದ ಮೂಲಕ ಬರೀ ಶತಕ ಅಷ್ಟೇ ಅಲ್ಲ ಟಿ-20 ಕ್ರಿಕೆಟ್ ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಟಿ-20 ಕ್ರಿಕೆಟ್ ನಲ್ಲಿ ಇತಿಹಾಸ ಬರೆದ ಕೊಹ್ಲಿ!

ಕ್ರಿಕೆಟ್ ಜಗತ್ತಿನ ಸಾಮ್ರಾಟ ವಿರಾಟ್ ಕೊಹ್ಲಿ ಕೋಟ್ಯಂತರ ಅಭಿಮಾನಿಗಳ ಪಾಲಿನ ಇನ್ಸ್​ಪಿರೇಷನ್, ರೋಲ್ ಮಾಡೆಲ್ ಎಲ್ಲವೂ. ದಾಖಲೆಗಳಲ್ಲೇ ಅತಿದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿರೋ ಕೊಹ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ 14,000 ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಹಾಗೇ ವಿಶ್ವದ 6ನೇ ಬ್ಯಾಟರ್ ಆಗಿದ್ದಾರೆ. ಯುನಿವರ್ಸಲ್ ಬಾಲ್ ಕ್ರಿಸ್​ಗೇಲ್​ರನ್ನ ಹಿಂದಿಕ್ಕಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿ 409 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದರೆ, ವೆಸ್ಟ್ ಇಂಡೀಸ್‌ನ ದಂತಕಥೆ ಕ್ರಿಸ್ ಗೇಲ್ 423 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಕ್ರಿಸ್ ಗೇಲ್ ಪ್ರಸ್ತುತ 14,562 ರನ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ಸಾರ್ವಕಾಲಿಕ ದಾಖಲೆಯನ್ನೂ ಬ್ರೇಕ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಹೀಗೆ ಕೊಹ್ಲಿ ಕಿಂಗ್ ಆಗಿ ಮೆರೀತಿದ್ರೆ ಅತ್ತ ಮನೀಷ್ ಪಾಂಡೆ ಸ್ಟಿಲ್ ಈಗಲೂ ಸ್ಟ್ರಗಲ್ ಪಡ್ತಾನೇ ಇದ್ದಾರೆ. ಅವಕಾಶಕ್ಕಾಗಿ ಕಾಯ್ತಿದ್ದಾರೆ. ಇಬ್ಬರ ಪರಿಸ್ಥಿತಿಗಳು ಬೇರೆ ಬೇರೆ ಇದ್ರೂ ಅವ್ರಿಬ್ಬರ ನಡುವಿನ ಗೆಳೆತನ ಮಾತ್ರ ಮಿನುಗುತ್ತಲೇ ಇದೆ.

Shantha Kumari