ಅಂದು ಕ್ರಿಕೆಟ್ ದೇವರು ಹೇಳಿದ ಭವಿಷ್ಯ ಇಂದು ನಿಜವಾಯಿತು – ಸಚಿನ್ ತೆಂಡೂಲ್ಕರ್ ಮುಂದೆಯೇ ರೆಕಾರ್ಡ್ ಬ್ರೇಕ್ ಮಾಡಿದ ಕೊಹ್ಲಿ..!
ವಿರಾಟ್ ಕೊಹ್ಲಿ ಈಗ ವರ್ಲ್ಡ್ ಕ್ರಿಕೆಟ್ನ ಬ್ಯಾಟಿಂಗ್ ದಂತಕಥೆಯಾಗಿದ್ದಾರೆ. ಜಾಗತಿಕ ಕ್ರಿಕೆಟ್ನಲ್ಲಿ ಯಾರೂ ಮಾಡದೆ ಸಾಧನೆಯನ್ನ ವಿರಾಟ್ ಕೊಹ್ಲಿ ಸಾಧಿಸಿ ತೋರಿಸಿದ್ದಾರೆ. ವಂಡೇ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ 50ನೇ ಸೆಂಚೂರಿ ಬಾರಿಸಿದ್ದಾರೆ. ಈ ಮೂಲಕ ತಮ್ಮ ರೋಲ್ ಮಾಡೆಲ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ರೆಕಾರ್ಡ್ನ್ನ ಬ್ರೇಕ್ ಮಾಡಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಚಿನ್ ಎದುರೇ ವಿರಾಟ್ ಕೊಹ್ಲಿ ದಾಖಲೆ ಶತಕ ಬಾರಿಸಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100ನೇ ಸೆಂಚೂರಿ ಬಾರಿಸಿದಾಗ ತೆಂಡೂಲ್ಕರ್ಗೆ ಅಭಿನಂದನಾ ಕಾರ್ಯಕ್ರಮವೊಂದನ್ನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿಮ್ಮ ರೆಕಾರ್ಡ್ನ್ನ ಯಾರು ಬ್ರೇಕ್ ಮಾಡಬಹುದು ಅಂತಾ ಬಾಲಿವುಡ್ ಆ್ಯಕ್ಟರ್ ಸಲ್ಮಾನ್ ಖಾನ್ ಸಚಿನ್ ಅವರ ಬಳಿ ಕೇಳ್ತಾರೆ. ಅದಕ್ಕೆ ಮಾಸ್ಟರ್ ನನ್ನ ರೆಕಾರ್ಡ್ನ್ನ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಬ್ರೇಕ್ ಮಾಡಬಹುದು. ಭಾರತೀಯರು ಯಾರೇ ಬ್ರೇಕ್ ಮಾಡಿದ್ರೂ ನನಗೆ ಯಾವುದೇ ಬೇಸರ ಇಲ್ಲ ಎಂದಿದ್ರು. ಅಂದು ಸಚಿನ್ ಹೇಳಿದ್ದ ಮಾತು ಈಗ ನಿಜವಾಗಿದೆ. ವಿರಾಟ್ ಕೊಹ್ಲಿ ಲೆಜೆಂಡರಿ ಬ್ಯಾಟ್ಸ್ಮನ್ ಹೆಸರಲ್ಲಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ವಂಡೇ ಇಂಟರ್ನ್ಯಾಷನಲ್ನಲ್ಲಿ ಸಚಿನ್ 49 ಸೆಂಚೂರಿ ಹೊಡೆದಿದ್ರು. ಕೊಹ್ಲಿ ಈಗ 50 ಶತಕಗಳನ್ನ ಹೊಡೆದಿದ್ದಾರೆ. ಫಾರ್ ಇ ಫಸ್ಟ್ ಟೈಮ್.. ಶತಕಗಳ ಅರ್ಧಶತಕ.. ಅದು ಕೂಡ ಸಚಿನ್ ತೆಂಡೂಲ್ಕರ್ ಕಣ್ಣ ಮುಂದೆಯೇ.
ವಿರಾಟ್ ಕೊಹ್ಲಿ ಈಗ ಬ್ರೇಕ್ ಮಾಡಿರೋದು ಇದೊಂದೇ ರೆಕಾರ್ಡ್ ಮಾತ್ರವಲ್ಲ. ಸಚಿನ್ ಹೆಸರಲ್ಲಿದ್ದ ಇನ್ನೊಂದು ದಾಖಲೆಗಳನ್ನ ಕೂಡ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಒಂದೇ ವರ್ಲ್ಡ್ಕಪ್ನಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿದ ದಾಖಲೆಯನ್ನ ಕೂಡ ಸೃಷ್ಟಿಸಿದ್ದಾರೆ. 2003ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ 673 ರನ್ ಹೊಡೆದಿದ್ರು. ಆದ್ರೆ ವಿರಾಟ್ ಕೊಹ್ಲಿ ಈ ಬಾರಿಯ ವರ್ಲ್ಡ್ಕಪ್ನಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಇನ್ನು ಓವರ್ಆಲ್ ವರ್ಲ್ಡ್ಕಪ್ ಟೂರ್ನಿಯಲ್ಲೇ ವಿರಾಟ್ ಕೊಹ್ಲಿಗೆ ಸೆಕೆಂಡ್ ಹೈಯೆಸ್ಟ್ ಸ್ಕೋರ್ ಮಾಡಿದ ಬ್ಯಾಟ್ಸ್ಮನ್ ಅನ್ನೋ ರೆಕಾರ್ಡ್ ಕೂಡ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕ್ಕಿ ಪಾಂಟಿಂಗ್ ದಾಖಲೆಯನ್ನ ಕೊಹ್ಲಿ ಬ್ರೇಕ್ ಮಾಡಿದ್ದಾರೆ. ರಿಕ್ಕಿ ಪಾಂಟಿಂಗ್ 46 ವಿಶ್ವಕಪ್ ಮ್ಯಾಚ್ಗಳಲ್ಲಿ ಒಟ್ಟು 1,743 ರನ್ ಗಳಿಸಿದ್ರು. ವಿರಾಟ್ ಕೊಹ್ಲಿ 36ನೇ ವಂಡೇ ವರ್ಲ್ಡ್ಕಪ್ ಮ್ಯಾಚ್ನಲ್ಲೇ ಪಾಂಟಿಂಗ್ ರೆಕಾರ್ಡ್ನ್ನ ಬ್ರೇಕ್ ಮಾಡಿದ್ರು. ಸಚಿನ್ ತೆಂಡೂಲ್ಕರ್ 45 ವರ್ಲ್ಡ್ಕಪ್ ಮ್ಯಾಚ್ಗಳಲ್ಲಿ ಒಟ್ಟು 2,278 ರನ್ ಗಳಿಸಿದ್ರು. ಕೊಹ್ಲಿ ಆ ದಾಖಲೆಯನ್ನ ಮುರಿಯೋಕೆ ಬಾಕಿ ಇದೆ.
ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ನಲ್ಲಿ ಒಟ್ಟು 100 ಶತಕಗಳನ್ನ ಬಾರಿಸಿದ್ದಾರೆ. ಶತಕಗಳ ಶತಕ ದಾಖಲಿಸಿರೋ ಏಕೈಕ ಕ್ರಿಕೆಟಿಗ ಸಚಿನ್ ಮಾತ್ರ. ಇಲ್ಲೂ ಕೂಡ ಸಚಿನ್ ರೆಕಾರ್ಡ್ ಮಾಡಲು ರೇಸ್ನಲ್ಲಿರೋ ಬ್ಯಾಟ್ಸ್ಮನ್ ಕೊಹ್ಲಿ ಮಾತ್ರ. ಸದ್ಯ ಕೊಹ್ಲಿ ವಂಡೇ, ಟೆಸ್ಟ್ ಮತ್ತು ಟಿ-20 ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 80 ಶತಕಗಳನ್ನ ಬಾರಿಸಿದ್ದಾರೆ. ಸಚಿನ್ ದಾಖಲೆ ಮುರಿಯೋಕೆ ಕೊಹ್ಲಿಗೆ ಇನ್ನೂ 21 ಶತಕಗಳ ಅಗತ್ಯ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊಹ್ಲಿ ಇದೇ ಪರ್ಫಾಮೆನ್ಸ್ ಕಂಟಿನ್ಯೂ ಮಾಡಿದ್ರೆ ಸಚಿನ್ ಶತಕಗಳ ರೆಕಾರ್ಡ್ ಕೂಡ ಬ್ರೇಕ್ ಮಾಡಬಹುದು. ವಿರಾಟ್ ಕೊಹ್ಲಿ ಬ್ಯಾಟ್ ಕೈಗೆತ್ತಿಕೊಂಡಿದ್ದು, ಕ್ರಿಕೆಟ್ ಆಡೋಕೆ ಶುರು ಮಾಡಿದ್ದೇ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ನೋಡಿ. ತಮ್ಮ ಕೆರಿಯರ್ನುದ್ದಕ್ಕೂ ರೋಲ್ ಮಾಡೆಲ್ ಆಗಿ ಇಟ್ಟುಕೊಂಡಿದ್ದ ಸಚಿನ್ ದಾಖಲೆಯನ್ನ ತೆಂಡೂಲ್ಕರ್ ಮುಂದೇಯೇ ಬ್ರೇಕ್ ಮಾಡಿರೋದು ನಿಜಕ್ಕೂ ಗ್ರೇಟೆಸ್ಟ್ ಅಚೀವ್ಮೆಂಟ್ . ಅಂತೂ ಭಾರತೀಯನ ದಾಖಲೆಯನ್ನ ಮತ್ತೊಬ್ಬ ಭಾರತೀಯನೇ ಬ್ರೇಕ್ ಮಾಡಿದ್ದಾರೆ. ಕ್ರಿಕೆಟ್ನ ಪ್ರಮುಖ ದಾಖಲೆಗಳೆಲ್ಲಾ ಭಾರತೀಯರ ಹೆಸರಲ್ಲೇ ಇದೆ ಅನ್ನೋದೆ ಹೆಮ್ಮೆಯ ಸಂಗತಿ. ಹ್ಯಾಟ್ಸ್ ಆಫ್ ಟು ವಿರಾಟ್ ಕೊಹ್ಲಿ..