ಕೊಹ್ಲಿ & ಸಾಲ್ಟ್ ಮ್ಯಾಚ್ ವಿನ್ನರ್ಸ್ – RCB ಗೆಲುವಿಗೆ ಜೊತೆಯಾಟವೇ ಟಾನಿಕ್
ಪವರ್ ಪ್ಲೇ ಪರ್ಫಾಮೆನ್ಸ್ ಹೇಗಿದೆ? 

ಕೊಹ್ಲಿ & ಸಾಲ್ಟ್ ಮ್ಯಾಚ್ ವಿನ್ನರ್ಸ್ – RCB ಗೆಲುವಿಗೆ ಜೊತೆಯಾಟವೇ ಟಾನಿಕ್ಪವರ್ ಪ್ಲೇ ಪರ್ಫಾಮೆನ್ಸ್ ಹೇಗಿದೆ? 

18ನೇ ಸೀಸನ್ ಐಪಿಎಲ್​ನಲ್ಲಿ 7 ಮ್ಯಾಚ್​ಗಳನ್ನ ಆಡಿರುವ ಆರ್​ಸಿಬಿ 4ರಲ್ಲಿ ಗೆದ್ದಿದೆ. ಮೂರು ಮ್ಯಾಚ್ ಸೋತಿದೆ. ಹಾಗೇ ಮುಂದೆ ಲೀಗ್ ಹಂತದಲ್ಲಿ ಇನ್ನೂ 7 ಪಂದ್ಯಗಳನ್ನ ಆಡ್ಬೇಕಿದೆ. ಈ 7 ಮ್ಯಾಚ್​ಗಳ ಪೈಕಿ 4ರಲ್ಲಿ ಗೆಲುವು ಸಾಧಿಸಲೇಬೇಕು. ಬಟ್ ತಂಡದ ಗೆಲುವಿಗೆ ಕಿಂಗ್ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವ್ರ ಪಾರ್ಟರ್ ಶಿಪ್ ತುಂಬಾನೇ ಇಂಪಾರ್ಟೆಂಟ್. ಇವ್ರಿಬ್ಬರು ಪವರ್ ಪ್ಲೇನಲ್ಲಿ ಬೆಸ್ಟ್ ಇನ್ನಿಂಗ್ಸ್ ಆಡಿದಾಗ್ಲೆಲ್ಲಾ ತಂಡ ಗೆಲುವು ಸಾಧಿಸಿದೆ. ಇವ್ರು ಕೈಕೊಟ್ಟಾಗ್ಲೇ ಟೀಮ್ ಸೋಲು ಕಂಡಿದೆ.

ಇದನ್ನೂ ಓದಿ : style=”color:blue;” RCBಗೆ ಬ್ಯಾಡ್ ಲಕ್ ಬೆಂಗಳೂರು – ಟೀಂ ಸೋತರೂ ಗೆದ್ದ ಟಿಮ್ ಡೇವಿಡ್

ಆರ್​ಸಿಬಿಯ ಮೊದಲ ಪಂದ್ಯ ಕೆಕೆಆರ್ ವಿರುದ್ಧದ ಮ್ಯಾಚಲ್ಲಿ ಕೊಹ್ಲಿ ಮತ್ತು ಸಾಲ್ಟ್ 95 ರನ್​ಗಳ ಜೊತೆಯಾಟವಾಡಿದ್ರು. ಸಾಲ್ಟ್ 56 ರನ್ ಗಳಿಸಿದ್ರೆ ಕೊಹ್ಲಿ 36 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಪರಿಣಾಮ ಕೆಕೆಆರ್ ನೀಡಿದ್ದ ಟಾರ್ಗೆಟ್​ನ 16.2ನೇ ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ ಚೇಜ್ ಮಾಡಿ ವಿನ್ ಆಗಿದ್ರು. ಆ ಬಳಿಕ CSK ವಿರುದ್ಧದ ಎರಡನೇ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಸಾಲ್ಟ್ ಮತ್ತು ಕೊಹ್ಲಿ 45 ರನ್ ಗಳಿಸಿದರು. ಆ ಬಳಿಕ ಬಂದವ್ರಿಗೆ ಸ್ವಲ್ಪ ಪ್ರೆಶರ್ ಕಡಿಮೆಯಾಗಿತ್ತು. ಹೀಗಾಗಿ 17 ವರ್ಷಗಳ ಬಳಿಕ ಆರ್​ಸಿಬಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಫಿಲ್ ಸಾಲ್ಟ್ 16 ಬಾಲ್​ಗಳಲ್ಲಿ 32 ರನ್ ಗಳಿಸಿದ್ರು. ಕೊಹ್ಲಿ 30 ಬಾಲಲ್ಲಿ 31 ರನ್. ಬಟ್ ಹ್ಯಾಟ್ರಿಕ್ ಕನಸಿನಲ್ಲಿ ಬೆಂಗಳೂರಿಗೆ ಕಾಲಿಟ್ಟಿದ್ದ ಆರ್​ಸಿಬಿಗೆ ಗುಜರಾತ್ ಶಾಕ್ ಕೊಟ್ಟಿತ್ತು. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ 12 ರನ್ ಗೆ ಫಸ್ಟ್ ವಿಕೆಟ್ ಕಳ್ಕೊಳ್ತು. ಕೊಹ್ಲಿ 6 ಬಾಲ್ಗೆ 7 ರನ್ ಹೊಡ್ದು ಅರ್ಶದ್ ಖಾನ್ ಬೌಲಿಂಗ್ ನಲ್ಲಿ ಪ್ರಸಿದ್ಧ್ ಕೃಷ್ಣಗೆ ಕ್ಯಾಚ್ ಕೊಟ್ರು. 3ನೇ ಓವರ್​ನಲ್ಲೇ ಸಾಲ್ಟ್ ಕೂಡ 13 ಬಾಲಲ್ಲಿ 14 ರನ್ ಗಳಿಸಿ ಔಟಾದ್ರು. ಈ ಮೂಲಕ 8 ವಿಕೆಟ್ ಕಳ್ಕೊಂಡು 169 ರನ್ ಕಲೆ ಹಾಕಿತ್ತು ರೆಡ್ ಆರ್ಮಿ. ಇನ್ನು ಜಿಟಿ ತಂಡ 17ನೇ ಓವರ್​ನಲ್ಲೇ 2 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ರೀಚ್ ಆಯ್ತು.  ಈ ಸೋಲಿನೊಂದಿಗೆ ಮುಂಬೈಗೆ ಹಾರಿದ್ದ ಆರ್​ಸಿಬಿಗೆ ಒಳ್ಳೆ ಓಪನಿಂಗ್ ಸಿಕ್ಕಿರಲಿಲ್ಲ. 4 ರನ್ ಗಳಿಸಿದ್ದ ಸಾಲ್ಟ್ ವಿಕೆಟ್ ಒಪ್ಪಿಸಿದ್ರು. ಬಟ್ ವಿರಾಟ್ ಕೊಹ್ಲಿ 42 ಬಾಲ್​ನಲ್ಲಿ 67 ರನ್ ಬಾರಿಸಿದ್ರು. 221ರನ್​ಗಳ ಟಾರ್ಗೆಟ್ ನೀಡಿದ್ದ ರಜತ್ ಪಡೆ 12 ರನ್ ಗಳಿಂದ ಗೆದ್ದು ಬೀಗಿತ್ತು. ಬಟ್ ಒನ್ಸ್ ಅಗೇನ್ ಈ ಜೋಡಿ ಬೆಂಗಳೂರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೆಲ್ಯೂರ್ ಆಗಿತ್ತು. 5ನೇ ಪಂದ್ಯದಲ್ಲಿ ಸಾಲ್ಟ್ ಮತ್ತು ಕೊಹ್ಲಿ 3 ಓವರ್‌ಗಳಲ್ಲೇ 50 ರನ್ ಕಂಪ್ಲೀಟ್ ಮಾಡಿದ್ರು. ಸಾಲ್ಟ್ 17 ಎಸೆತಗಳಲ್ಲಿ 37 ರನ್‌ಗಳಿಸಿದ್ರು. ಬಟ್ ರನ್ ಔಟ್ ಗೆ ಬಲಿಯಾಗಿದ್ರು. ಆ ಬಳಿಕ ಕೊಹ್ಲಿ ಕೂಡ ಕೊಹ್ಲಿ 14 ಎಸೆತಗಳಲ್ಲಿ ಕೇವಲ 22 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. 20 ಓವರ್ 7 ವಿಕೆಟ್ ನಷ್ಟಕ್ಕೆ 163 ರನ್ ರನ್ ಕಲೆ ಹಾಕಿತ್ತು ತಂಡ. ಡೆಲ್ಲಿ ಪರ ಕೆಎಲ್ ರಾಹುಲ್ ಅಬ್ಬರಿಸಿ 93 ರನ್ ಚಚ್ಚಿದ್ರು. ಪರಿಣಾಮ 17.5 ಓವರ್​ನಲ್ಲೇ 4 ವಿಕೆಟ್ ನಷ್ಟಕ್ಕೆ ಡಿಸಿ ಟಾರ್ಗೆಟ್ ರೀಚ್ ಆಯ್ತು. ಹೀಗೆ ಡಿಸಿ ವಿರುದ್ಧ ಸೋತು ಜೈಪುರಕ್ಕೆ ಹಾರಿದ್ದ ಆರ್​ಸಿಬಿ ರಾಜಸ್ಥಾನ ವಿರುದ್ಧ ಗೆದ್ದು ಬೀಗಿತ್ತು.  ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಅಬ್ಬರಿಸಿತ್ತು. 92 ರನ್‌ಗಳ ಜೊತೆಯಾಟವಾಡಿದ್ರು. ಹೀಗಾಗಿ ರಾಜಸ್ಥಾನ ನೀಡಿದ್ದ 174 ರನ್‌ಗಳ ಗುರಿಯನ್ನ ಈಸಿಯಾಗಿ ಬೆನ್ನತ್ತಿದ್ರು. 9 ವಿಕೆಟ್​ಗಳಿಂದ ಮ್ಯಾಚ್ ವಿನ್ ಆಗಿದ್ರು.  ಆದ್ರೆ ಈ ಪಾರ್ಟ್ನರ್​ಶಿಪ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೈಕೊಟ್ಟಿದ್ದಕ್ಕೆ ಮ್ಯಾಚ್ ಕಳ್ಕೊಳ್ಬೇಕಾಯ್ತು. 4 ರನ್ ಗಳಿಗೆ ಮೊದಲ ವಿಕೆಟ್ ಬಿದ್ದಿತ್ತು. ಟಾಪ್ ಎಡ್ಜ್ ಆಗಿ ಸಾಲ್ಟ್ ಔಟ್ ಆಗಿದ್ರು. ಕೊಹ್ಲಿ 3 ಬಾಲ್ ಆಡಿ 1 ರನ್ ಗಳಿಸಿ ವಿಕೆಟ್ ನೀಡಿದ್ರು. ಇಬ್ಬರಿಂದ ಕೇವಲ ಐದೇ ರನ್ ಬಂದಿದ್ದು. ಅಂತಿಮವಾಗಿ ಟಿಮ್ ಡೇವಿಡ್ ಅರ್ಧಶತಕದ ಕಾರಣದಿಂದಾಗಗಿ 95 ರನ್ ಸ್ಕೋರ್ ಮಾಡಿದ್ರು. 96 ರನ್ ಟಾರ್ಗೆಟ್ ಬೆನ್ನತ್ತಿದ್ದ ಪಂಜಾಬ್ 12.1ನೇ ಓವರ್ ನಲ್ಲೇ ಟಾರ್ಗೆಟ್ ರಿಚ್ ಆಯ್ತು.

ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ ಪ್ಲೇಆಫ್​ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಾಗ್ಲೆಲ್ಲಾ ತಂಡ ಗೆದ್ದಿದೆ. ಅಟ್​ಲೀಸ್ಟ್ ಇಬ್ಬರಲ್ಲಿ ಒಬ್ಬರಾದ್ರೂ ನಿಂತು ಆಡಿದಾಗ ಮಾತ್ರ ಮ್ಯಾಚ್ ಗೆಲ್ತಿದ್ದಾರೆ. ಹೀಗಾಗಿ ಪಂಜಾಬ್ ವಿರುದ್ಧದ ಮ್ಯಾಚಲ್ಲೂ ಈ ಜೋಡಿ ಮೋಡಿ ಮಾಡ್ಲೇಬೇಕಿದೆ.

Shantha Kumari

Leave a Reply

Your email address will not be published. Required fields are marked *