ಕೊಹ್ಲಿ ಮತ್ತು ಕಾರ್ತಿಕ್ ಸೇರಿದ್ರೆ ಈ ಬಾರಿ ಕಪ್ ನಮ್ದೇ – KK ಇದ್ದಲ್ಲಿ RCB ಗೆಲುವಿನ ಕೇಕೆ
ಅಂತು ಫ್ಯಾನ್ಸ್ ಅಂದುಕೊಂಡಿದ್ದಕ್ಕಿಂತಲೂ ಬೇಗನೇ ಆರ್ಸಿಬಿ ಗೆಲುವಿನ ಟ್ರ್ಯಾಕ್ಗೆ ಬಂದಿದೆ.. ಪಾಯಿಂಟ್ ಟೇಬಲ್ನಲ್ಲಿ ಆರ್ಸಿಬಿಯ ಖಾತೆ ತೆರೆದಿದೆ.. KK ಆಟದಿಂದಾಗಿ ಫ್ಯಾನ್ಸ್ ಗೆಲುವಿನ ಕೇಕೆ ಹಾಕಿದ್ದಾರೆ.. ಕೊಹ್ಲಿ ಮತ್ತು ಕಾರ್ತಿಕ್ ಸೇರಿದ್ರೆ ಈ ಬಾರಿ ಕಪ್ ನಮ್ದೇ ಎಂಬಷ್ಟರ ಮಟ್ಟಿಗೆ ಅಭಿಮಾನಿಗಳ ಮನಸ್ಸಿನಲ್ಲಿ ಭರವಸೆ ಮೂಡಿಸಿದ್ದಾರೆ.
ಇದನ್ನೂ ಓದಿ: ಪಾಂಡ್ಯಾಗೆ ಸೋಲಿನ ಸ್ವಾಗತ ಕೋರಿದ ಗಿಲ್ – ಗೆಲ್ಲುವ ಮ್ಯಾಚ್ ಸೋತಿದ್ದು ಹೇಗೆ ಮುಂಬೈ ಇಂಡಿಯನ್ಸ್?
ಚಿನ್ನಸ್ವಾಮಿಯಲ್ಲಿ ಸೋಮವಾರ ರಾತ್ರಿ ಅಕ್ಷರಶಃ ಕಿಂಗ್ ದರ್ಬಾರ್ ನಡೆದಿತ್ತು. ಆದ್ರೆ ಅದಕ್ಕೂ ಮೊದಲೇ ಆರ್ಸಿಬಿ ಪ್ಯಾನ್ಸ್ ಸೋಮವಾರ ಬೆಳಗ್ಗೆಯಿಂದಲೇ ಕಿಂಗ್ ಕೊಹ್ಲಿ ಮೇಲೆ ಸಿಕ್ಕಾಪಟ್ಟೆ ಕಾನ್ಫಿಡೆನ್ಸ್ ಇಟ್ಟುಕೊಂಡಿದ್ದರು.. ಸುದ್ದಿಯಾನ ನಡೆಸಿದ್ದ ಪೋಲ್ನಲ್ಲೂ 17 ಸಾವಿರಕ್ಕೂ ಹೆಚ್ಚು ಮಂದಿ ವೋಟ್ ಮಾಡಿದ್ರೆ ಅದರಲ್ಲಿ ಶೇ.74ರಷ್ಟು ಮಂದಿ ಕಿಂಗ್ ಕೊಹ್ಲಿಯೇ ಇಂದು ಮಿಂಚೋದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.. ಡುಪ್ಲೆಸಿಸ್ ಮತ್ತು ಮ್ಯಾಕ್ಸಿ ಮಿಂಚಬಹುದು ಎಂದು ಕೇವಲ 26 ಪರ್ಸೆಂಟ್ ಜನ ಮಾತ್ರ ವೋಟಿಂಗ್ನಲ್ಲಿ ಹೇಳಿದ್ದರು.. ಅಭಿಮಾನಿಗಳ ನಿರೀಕ್ಷೆಗೆ ಸ್ವಲ್ಪವೂ ನಿರಾಶೆ ತರದ ಕೊಹ್ಲಿ ಬ್ಯಾಟಿಂಗ್ನಲ್ಲಿ ಹಾಗೆಯೇ ಆಡಿ ತೋರಿಸಿದ್ರು.. ಮೊದಲ ಗೆಲುವಿನ ಹುಮ್ಮಸ್ಸಿನಲ್ಲಿ ಬೆಂಗಳೂರಿಗೆ ಬಂದಿಳಿದಿದ್ದ ಪಂಜಾಬ್ ಕಿಂಗ್ಸ್ ಹುಮ್ಮಸ್ಸನ್ನು ಕೆ ಕೆ ಜೋಡಿ ಕಿತ್ತು ಬಿಸಾಕಿತ್ತು.. ಓಪನಿಂಗ್ನಲ್ಲಿ ಕಿಂಗ್ ಕೊಹ್ಲಿ ಸಿಡಿದ್ರೆ ಫಿನಿಶಿಂಗ್ ಎಂಡ್ನಲ್ಲಿ ಡಿಕೆ ದರ್ಬಾರ್ ಜೋರಾಗಿತ್ತು.. ಇದ್ರಿಂದಾಗಿ ಗಬ್ಬರ್ ಸಿಂಗ್ ಶಿಖರ್ ಧವನ್ ಸದ್ದಿಲ್ಲದೆ ಸೋಲೊಪ್ಪಬೇಕಾಯಿತು.. ಇಷ್ಟಕ್ಕೂ ಪಂಜಾಬ್ ಕಿಂಗ್ಸ್ ಮತ್ತು ಆರ್ಸಿಬಿ ನಡುವಿನ ರಾಯಲ್ ಚಾಲೆಂಜ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ಮೇಲುಗೈ ಸಾಧಿಸಿತ್ತು.. ಬೌಲಿಂಗ್ನಲ್ಲಿ ಸಿರಾಜ್ ಬಾಯ್ ತಮ್ಮ ಮೇಲಿಟ್ಟ ಭರವಸೆಯನ್ನು ಪಂಜಾಬ್ ಎದುರು ಹುಸಿಮಾಡಲಿಲ್ಲ.. ಮೂರನೇ ಓವರ್ನಲ್ಲೇ ಬೈರ್ಸ್ಚೋ ವಿಕೆಟ್ ಕೆಡವಿ ಪಂಜಾಬ್ಗೆ ಮೊದಲ ಆಘಾತ ನೀಡಿದರು.. ಇದರಿಂದಾಗಿ ಆರಂಭದಿಂದಲೇ ದೊಡ್ಡ ಮೊತ್ತದಲ್ಲಿ ರನ್ರೇಟ್ ಹೆಚ್ಚಿಸಿಕೊಳ್ಳಲು ಪಂಜಾಬ್ಗೆ ಸಾಧ್ಯವಾಗಲಿಲ್ಲ.. ಸಿರಾಜ್ಗೆ ಸಾಥ್ ನೀಡಿದ ಯಶ್ ದಯಾಳ್ ಎರಡನೇ ಪಂದ್ಯದಲ್ಲಿ ಗ್ರೇಟ್ ಕಮ್ ಬ್ಯಾಕ್ ಮಾಡಿದ್ರು.. ನಾಲ್ಕು ಓವರ್ಗಳಲ್ಲಿ ಕೇವಲ 23 ರನ್ ನೀಡಿ 1 ವಿಕೆಟ್ ಕಬಳಿಸಿದ ಯಶ್ ನಿಜಕ್ಕೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ತನ್ನ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿದ್ರು.. ಸಿರಾಜ್ ಎರಡು ವಿಕೆಟ್ ಕಬಳಿಸಿದ್ರೆ ಅಲ್ಝಾರಿ ಜೋಸೆಫ್ ಮಾತ್ರ 1 ವಿಕೆಟ್ ಪಡೆಯಲು ಸರಿಯಾಗಿಯೇ ಚಚ್ಚಿಸಿಕೊಂಡ್ರು.. ಗ್ಲೆನ್ ಮ್ಯಾಕ್ಸ್ವೆಲ್ ಎರಡು ವಿಕೆಟ್ ಕಬಳಿಸುವ ಮೂಲಕ ಹಿರಿಯ ಸ್ಪಿನ್ನರ್ ಕರ್ನ್ ಶರ್ಮಾರನ್ನು ಡ್ರಾಪ್ ಮಾಡಿದ್ದು ಸರಿ ಎಂದು ಸಾಬೀತುಪಡಿಸಿದ್ರು.. ಆದ್ರೆ ಬೌಲಿಂಗ್ ವೇಳೆ ನಿಜಕ್ಕೂ ಹೈಲೈಟ್ ಆಗಿದ್ದು ಕಿಂಗ್ ಕೊಹ್ಲಿ.. ಫೀಲ್ಡ್ನಲ್ಲಿ ಚಿರತೆಯಂತೆ ಓಡಾಡುವ ಕೊಹ್ಲಿ, ಎರಡು ಭರ್ಜರಿ ಕ್ಯಾಚ್ಗಳ ಮೂಲಕ ಗೆಲ್ಲುವ ಹಸಿವು ತಂಡಕ್ಕೆ ಎಷ್ಟಿದೆ ಎನ್ನುವುದನ್ನು ತೋರಿಸಿಕೊಟ್ಟಿದ್ದರು.. ಆದ್ರೆ ಪಂಜಾಬ್ನ 179 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿಗೆ ಆರಂಭದಲ್ಲೇ ದೊಡ್ಡ ಶಾಕ್ ಎದುರಾಗಿತ್ತು. ಮೊದಲ ಓವರ್ನಲ್ಲೇ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು. ಆದರೆ ಮೊದಲ ಸ್ಲಿಪ್ನಲ್ಲಿದ್ದ ಜಾನಿ ಬೈರ್ಸ್ಟೋವ್ ಕೊಹ್ಲಿ ಕ್ಯಾಚ್ ಬಿಟ್ಟರು. ಇದರ ಲಾಭ ಪಡೆದ ವಿರಾಟ್ ಕೊಹ್ಲಿ ಅದೇ ಓವರ್ಲ್ಲಿ ನಾಲ್ಕು ಬೌಂಡರಿಗಳನ್ನು ಹೊಡೆದರು. ನಂತರ ಕೊಹ್ಲಿ ಸ್ವಲ್ಪವೂ ಎದುರಾಳಿಗಳ ಮೇಲೆ ದಯೆ ತೋರಲಿಲ್ಲ.. ಮೊದಲ ಓವರ್ನಲ್ಲಿಯೇ ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ 16 ರನ್ ಪೇರಿಸಿದ ಕೊಹ್ಲಿ, ಇಂದಿನ ಆಟ ಡಿಫರೆಂಟಾಗಿರುತ್ತದೆ ಎಂದು ಎದುರಾಳಿಗಳಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದರು.. ಆದ್ರೆ ಮೂರನೇ ಓವರ್ನಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಔಟಾಗಿದ್ದರಿಂದ ಸ್ವಲ್ಪ ತಂಡಕ್ಕೆ ಹಿನ್ನಡೆಯಾದರೂ ಮತ್ತೊಂದು ಎಂಡ್ನಲ್ಲಿದ್ದ ಕಿಂಗ್ ಕೊಹ್ಲಿ ಅಬ್ಬರ ಮಾತ್ರ ತಗ್ಗಲಿಲ್ಲ.. ಇದ್ರಿಂದಾಗಿ ಆರ್ಸಿಬಿ ಯಾವುದೇ ಒತ್ತಡಕ್ಕೆ ಒಳಗಾಗದೇ ಇನ್ನಿಂಗ್ ಕಟ್ಟುತ್ತಾ ಹೋಗಿತ್ತು.. 49 ಎಸೆತಗಳಲ್ಲಿ 77 ರನ್ ಬಾರಿಸಿ ಕೊಹ್ಲಿ ವಿಕೆಟ್ ಒಪ್ಪಿಸಿದಾಗ ಆರ್ಸಿಬಿ ಆಲ್ಮೋಸ್ಟ್ ಸೇಫ್ ಝೋನ್ನಲ್ಲಿತ್ತು.. ನಂತರ ಗೆಲುವಿನ ದಡ ಸೇರಿಸಲು ದಿನೇಶ್ ಕಾರ್ತಿಕ್ ಸಜ್ಜಾಗಿಯೇ ಬಂದಿದ್ದರು.. ಹೇಳಿಕೇಳಿ ಗ್ರೇಟ್ ಫಿನಿಷರ್ ಆಗಿರುವ ಕಾರ್ತಿಕ್ ಸ್ವಲ್ಪಮೂ ಟೆನ್ಷನ್ ಇಲ್ಲದೆ ಆರ್ಸಿಬಿಯನ್ನು ಗೆಲುವಿನ ದಡ ಸೇರಿಸಿದ್ದರು.. ಆದ್ರೆ ಕಾರ್ತಿಕ್ ಚಾರ್ಜ್ ಮಾಡೋದಿಕ್ಕೂ ಮೊದಲೇ ಹೆಚ್ಚುವರಿ ಆಟಗಾರನಾಗಿ ಬ್ಯಾಟಿಂಗ್ಗೆ ಇಳಿದ ಮಹಿಪಾಲ್ ಲೊಮ್ರೊರ್ 8ಬಾಲ್ಗೆ 17 ರನ್ ಸಿಡಿಸಿ ಗೆಲುವಿನ ಕಡೆಗೆ ತಂಡವನ್ನು ಮುನ್ನಡೆಸಿದ್ರು.. ಇದನ್ನು ನೋಡ್ತಾ ಮತ್ತೊಂದು ಎಂಡ್ನಲ್ಲಿ ನಿಂತಿದ್ದ ಕಾರ್ತಿಕ್, ಈಗ ನಂದು ತಗೊಳ್ಳಿ ಅನ್ನೋ ರೀತಿಯಲ್ಲಿ ಸಿಕ್ಸರ್, ಬೌಂಡರಿಗಳ ಮೂಲಕ ಮೈದಾನದ ಮೂಲೆ ಮೂಲೆಗೆ ಬಾಲ್ ಅಟ್ಟಿ, ಕೇವಲ 10 ಎಸೆತಗಳಲ್ಲಿ 28 ರನ್ ಚಚ್ಚಿ, ತಂಡವನ್ನು ಭರ್ಜರಿ ಜಯದ ದಡ ಸೇರಿಸಿದ್ರು..
ಆರ್ಸಿಬಿ ಈಗ ಗೆದ್ದಿರುವ ಖುಷಿಯಲ್ಲಿದೆ ನಿಜ. ಆದ್ರೆ ಮುಂದಿನ ಪಂದ್ಯ ಇರೋದು ಕೆಕೆಆರ್ ವಿರುದ್ಧ.. ಪಂಜಾಬ್ ಕಿಂಗ್ಸ್ಗೆ ಹೋಲಿಸಿದ್ರೆ ಕೆಕೆಆರ್, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ಬಲಿಷ್ಠ ತಂಡ. ಫೀಲ್ಡಿಂಗ್ನಲ್ಲಿ ಒಂದಿಬ್ಬರನ್ನು ಬಿಟ್ಟರೆ ಕೆಕೆಆರ್ನಲ್ಲಿ ಒಳ್ಳೆಯ ಫೀಲ್ಡರ್ಗಳಿದ್ದಾರೆ.. ಆದ್ರೆ ಆರ್ಸಿಬಿ ಪರ ಕೊಹ್ಲಿ ಮತ್ತು ಡುಪ್ಲೆಸಿಸ್ ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಆಟವಾಡಿದ್ದರೂ ತ್ರಿಮೂರ್ತಿಗಳಲ್ಲಿ ಇರುವ ಒಬ್ಬರಾಗಿರುವ ಮ್ಯಾಕ್ಸಿ ಇನ್ನೂ ಬ್ಯಾಟಿಂಗ್ನಲ್ಲಿ ಮಿಂಚಿಲ್ಲ.. ಕೆಜಿಎಫ್ ಸಿಡಿದ್ರೆ ಎದುರಾಳಿಗಳೇ ಇಲ್ಲ.. ಆದ್ರೆ ಗ್ಲೆನ್ ಬ್ಯಾಟಿಂಗ್ನಲ್ಲಿ ಇನ್ನು ಮಿಂಚಿನ ಸಂಚಾರ ಶುರುವಾಗಿಲ್ಲ.. ಅಲ್ಲದೆ ಬೌಲಿಂಗ್ನಲ್ಲಿ ಇನ್ನಷ್ಟು ಕರಾರುವಾಕ್ ಆಗಿ ಆರ್ಸಿಬಿ ಬೌಲಿಂಗ್ ಮಾಡಲೇಬೇಕಿದೆ.. ಇಲ್ಲದೆ ಆ್ಯಂಡ್ರೂ ರಸೆಲ್, ಶ್ರೇಯಸ್ ಅಯ್ಯರ್ ರೀತಿಯ ಬ್ಯಾಟ್ಸ್ಮನ್ಗಳಿಗೆ ಆರ್ಸಿಬಿ ಬೌಲರ್ಗಳು ಸುಲಭ ತುತ್ತಾಗಬಹುದು.. ಹಾಗಿದ್ದರೂ ಕೆಜಿಎಫ್ ಮೇಲಿನ ಭರವಸೆ ಆರ್ಸಿಬಿ ಫ್ಯಾನ್ಸ್ಗೆ ಕಮ್ಮಿಯಾಗಿಲ್ಲ.. ಜೊತೆಗೆ ಕೆ ಕೆ ಏನಾದ್ರೂ ಬ್ಯಾಟಿಂಗ್ನಲ್ಲಿ ಕೇಕೆ ಹಾಕಲು ಶುರು ಮಾಡಿದ್ರು ಅಂತಾದ್ರೆ, ಯಾವ ಸ್ಕೋರ್ ಇದ್ದರೂ ಚೇಸ್ ಮಾಡೋದು ನೀರು ಕುಡಿದಷ್ಟೇ ಸುಲಭವಾಗಲಿದೆ.. ಹಾಗಿದ್ದರೂ ಮುಂದಿನ ಪಂದ್ಯದಲ್ಲಿ ಏನಾಗುತ್ತೆ ಅಂತ ಕುತೂಹಲದಿಂದ ನೋಡಬೇಕಿದೆ..