ಸೋತ ಟೀಂ ಕಿಚಾಯಿಸಿದ್ರಾ ಕೊಹ್ಲಿ? – ಮೈದಾನದಲ್ಲಿ ಗೇಲಿ.. ಆಮೇಲೆ ಫುಲ್ ಜಾಲಿ!

ಸೋತ ಟೀಂ ಕಿಚಾಯಿಸಿದ್ರಾ ಕೊಹ್ಲಿ? – ಮೈದಾನದಲ್ಲಿ ಗೇಲಿ.. ಆಮೇಲೆ ಫುಲ್ ಜಾಲಿ!

ವಿರಾಟ್ ಕೊಹ್ಲಿ ಮೈದಾನಕ್ಕೆ ಇಳ್ದಿದ್ದಾರೆ ಅಂದ್ರೆ ಆಫ್ಟರ್​ ದಿ ಮ್ಯಾಚ್ ಒಂದಷ್ಟು ಫೋಟೋಸ್, ಒಂದಷ್ಟು ವಿಡಿಯೋಸ್ ವೈರಲ್ ಆಗಿ ಬಿಡುತ್ವೆ. ಅದು ಟೀಂ ಇಂಡಿಯಾ ಪರನೇ ಇರ್ಲಿ ಅಥವಾ ಐಪಿಎಲ್ ಅಂಗಳವೇ ಆಗಿರ್ಲಿ. ಕೊಹ್ಲಿ ಫುಲ್ ಸಿಟ್ಟಲ್ಲಿ ಇರೋದು, ಇಲ್ಲ ಇಮಿಟೇಟ್ ಮಾಡೋದು, ಇಲ್ಲ ಕೌಂಟರ್ ಕೊಡೋದು. ಹೀಗೆ ಮೋಸ್ಟ್ ಆಫ್ ದಿ ಟೈಂ ಕ್ಯಾಮರಾಮನ್ ಕೂಡ ಕೊಹ್ಲಿ ಮೇಲೆ ಫೋಕಸ್ ಮಾಡ್ತಿರ್ತಾರೆ. ಇದೀಗ ಪಂಜಾಬ್ ವಿರುದ್ಧದ ಮ್ಯಾಚಲ್ಲಿ ಕೊಹ್ಲಿ ಮಾಡಿದ ಸೆಲೆಬ್ರೇಷನ್ನೇ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ : ಚಿನ್ನಸ್ವಾಮಿ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ವಿಚಾರ – ಬೆಂಗಳೂರಿನ ಮೈದಾನದಲ್ಲಿ ಅದೆಷ್ಟು ದಾಖಲೆಗಳು?

ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಶತಕದ ಜತೆಯಾಟವಾಡುವ ಮೂಲಕ ತವರಿನಲ್ಲೇ ಪಂಜಾಬ್​ತಂಡವನ್ನ ಸೋಲಿಸಿದ್ರು. ಜಿತೇಶ್ ಶರ್ಮಾ ಸಿಕ್ಸರ್ ಮೂಲಕ ಮ್ಯಾಚ್ ಫಿನಿಶ್ ಮಾಡ್ತಿದ್ದಂತೆ ಮತ್ತೊಂದು ತುದಿ ಕ್ರೀಸ್​ನಲ್ಲಿದ್ದ ಕೊಹ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಅವರ ಕಡೆ ತಿರುಗಿ ಅಣಕಿಸುವಂತೆ ಸೆಲೆಬ್ರೇಟ್ ಮಾಡಿದ್ರು.  ಮೊದ್ಲೇ ಸೋಲಿನ ಸಿಟ್ಟಲ್ಲಿದ್ದ ಶ್ರೇಯಸ್ ಕೊಹ್ಲಿಯವ್ರ ಬಳಿ ಬಂದು ಏನನ್ನೋ ಹೇಳಿದ್ದಾರೆ. ಆದ್ರೆ ಫುಲ್ ಹ್ಯಾಪಿ ಮೂಡ್​ನಲ್ಲಿದ್ದ ಕೊಹ್ಲಿ ನಗು ನಗುತ್ತಲೇ ಅಲ್ಲಿಂದ ತೆರಳಿದ್ರು. ಕೊಹ್ಲಿಯವ್ರ ಇದೇ ವರ್ತನೆಗೆ ಕೆಲವರು ಕಿಡಿ ಕಾರಿದ್ದಾರೆ. ಸೋತ ತಂಡದ ಎದುರು ಹೀಗೆ ಅಣಕಿಸೋದು ಸರಿ ಅಲ್ಲ. ಇದು ಒಬ್ಬ ಸ್ಪೋರ್ಟ್ಸ್ ಪರ್ಸನ್​ಗೆ ಘನತೆ ತರಲ್ಲ ಎಂದಿದ್ದಾರೆ. ಬಟ್ ಇನ್ನೂ ಕೆಲವ್ರು ಕೊಹ್ಲಿ ಇರೋದೇ ಹಂಗೆ. ಅವ್ರಿಗೆ ಯಾವ್ದನ್ನೂ ಇಟ್ಕೊಂಡು ರೂಢಿ ಇಲ್ಲ. ಕರ್ಮ ಬಿಟ್ರೂ ಕೊಹ್ಲಿ ಬಿಡಲ್ಲ. ಬೆಂಗಳೂರಲ್ಲಿ ಸೋಲಿಸಿದ್ದಕ್ಕೆ ಪಂಜಾಬ್​ನಲ್ಲಿ ಸೋಲಿಸಿ ತಿರುಗೇಟು ಕೊಟ್ಟಿದ್ದಾರೆ ಅಷ್ಟೇ ಅಂತಾ ಸಪೋರ್ಟ್ ಮಾಡ್ತಿದ್ದಾರೆ.

ಪಂಜಾಬ್ ವಿರುದ್ಧದ ಮ್ಯಾಚಲ್ಲಿ ಮತ್ತೊಂದು ಇನ್ಸಿಡೆಂಟ್ ನಡೆದಿದೆ. ಪಂಜಾಬ್ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್‌ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಸರ್ಕಸ್ ಮಾಡ್ತಿದ್ರು. ಬಟ್ ಕೊಹ್ಲಿ ಅದಾವುದಕ್ಕೂ ಜಗ್ಗದೆ ಬ್ಯಾಟಿಂಗ್ ಮಾಡ್ತಿದ್ರು. ಈ ವೇಳೆ ನಾನ್ ಸ್ಟ್ರೈಕರ್ ನಲ್ಲಿದ್ದ ವಿರಾಟ್ ಕೊಹ್ಲಿಯನ್ನು ಬ್ರಾರ್ ಸ್ಲೆಡ್ಜ್ ಮಾಡಲು ಮುಂದಾಗಿದ್ರು. ಈ ವೇಳೆ ಬ್ರಾರ್​ಗೆ ಸಖತ್ತಾಗೇ ಕೌಂಟರ್ ಕೊಟ್ಟ ಕೊಹ್ಲಿ 20 ವರ್ಷದಿಂದ ಕ್ರಿಕೆಟ್ ಆಡುತ್ತಿದ್ದೇನೆ. ನಿನ್ನ ಕೋಚ್ ಕೂಡ ನನಗೆ ಗೊತ್ತಿದೆ. ಚಿಲ್ರೆ ಬಾಲ್​ಗಳಿಗೆಲ್ಲಾ ಔಟಾಗಲ್ಲ ಎಂದಿದ್ದಾರೆ.  ಕೊಹ್ಲಿ ಮತ್ತು ಬ್ರಾರ್ ನಡುವಿನ ಮಾತುಕತೆ ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗ್ತಿದೆ. ಬಟ್ ಈ ಕಿತ್ತಾಟ ಏನಿದ್ರೂ ಮ್ಯಾಚ್ ಟೈಮಲ್ಲಷ್ಟೇ ಅಂತಾ ಆಫ್ಟರ್ ದಿ ಮ್ಯಾಚ್ ಹರ್​ಪ್ರೀತ್ ಬ್ರಾರ್ ಹಾಗೂ ಕೊಹ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಕೊಹ್ಲಿ ಮತ್ತೆ ಬ್ರಾರ್ ಅವರ ಕಾಲೆಳೆಯುತ್ತಿರುವ ವಿಡಿಯೋವನ್ನು ಪಂಜಾಬ್ ಕಿಂಗ್ಸ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಮುಂಬೈ ವಿರುದ್ಧದ ಮ್ಯಾಚಲ್ಲೂ ಆರ್​ಸಿಬಿ ಗೆದ್ದ ಮೇಲೆ ಫುಲ್ ಅಗ್ರೆಸ್ಸಿವ್ ಆಗಿಯೇ ಕೊಹ್ಲಿ ಸಂಭ್ರಮಾಚರಿಸಿದ್ರು. ಪ್ರತೀ ಪಂದ್ಯದ ವೇಳೆಯೇ ಆರ್​ಸಿಬಿ ಪರ ಬೌಲರ್​ಗಳು ವಿಕೆಟ್ ಕಿತ್ತಾಗ, ಬ್ಯಾಟಿಂಗ್​ನಲ್ಲಿ ತಮ್ಮ ಪಾರ್ಟ್ನರ್ ಸಿಕ್ಸ್, ಫೋರ್ ಬಾರಿಸುವಾಗ್ಲೂ ಅಷ್ಟೇ ಅತಿರೇಖದಲ್ಲೇ ಸೆಲೆಬ್ರೇಟ್ ಮಾಡ್ತಾರೆ. ತಮ್ಮ ಆಕ್ರಮಣಕಾರಿ ವರ್ತನೆ ಬಗ್ಗೆ ಮಾತ್ನಾಡಿದ್ದ ಕೊಹ್ಲಿ ಇದೆಲ್ಲಾ ಆರಂಭದಲ್ಲು ನನಗೆ ಪ್ರಾಬ್ಲಂ ಆಗ್ತಿತ್ತು. ಬಟ್ ಈಗ ಆ ಥರ ಸೆಲೆಬ್ರೇಟ್ ಮಾಡೋದ್ರಿಂದಲೇ ಶಾಂತತೆ ಸಿಗುತ್ತೆ ಎಂದಿದ್ದಾರೆ. ಬಟ್ ವಿರಾಟ್ ಆನ್ ಫೀಲ್ಡ್​ನಲ್ಲಿ ಎಷ್ಟೇ ರಿಯಾಕ್ಟ್ ಮಾಡಿದ್ರೂ ಆಫ್ ದಿ ಫೀಲ್ಡ್​ನಲ್ಲಿ ಎಲ್ಲರ ಜೊತೆಯೂ ಫ್ರೆಂಡ್ಲಿಯಾಗಿ ಮೂವ್ ಆಗ್ತಾರೆ. ಆಟದ ಟೈಮಲ್ಲಿ ಆ ಕ್ಷಣಕ್ಕಷ್ಟೇ ಎಕ್ಸ್​ಪ್ರೆಸ್ ಮಾಡಿಬಿಡ್ತಾರೆ.

Shantha Kumari

Leave a Reply

Your email address will not be published. Required fields are marked *