₹100 ಕೋಟಿಗೂ ಕೊಹ್ಲಿ RCB ಬಿಡಲ್ಲ – KING ನಿಷ್ಠೆ & ತ್ಯಾಗ ಎಂಥಾದ್ದು?
17 ವರ್ಷ.. 3 ಸಲ ಫೈನಲ್.. ಕನಸೇನು?

2025ರ ಐಪಿಎಲ್ಗೆ ಭರ್ಜರಿ ಸಿದ್ಧತೆಗಳು ನಡಿತಾ ಇದ್ದು, ಈಗಾಗ್ಲೇ ಫ್ರಾಂಚೈಸಿಗಳಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಅದ್ರಂತೆ ಆರ್ಸಿಬಿಯಲ್ಲೂ ಕೂಡ ಈ ಸಲ ಕ್ಯಾಪ್ಟನ್ ಚೇಂಜಸ್ ಆಗೋ ಹಿಂಟ್ ಸಿಕ್ಕಿದೆ. 17 ವರ್ಷಗಳಿಂದ ಟ್ರೋಫಿ ವಂಚಿತವಾಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಸೀಸನ್ಗಾದ್ರೂ ಚಾಂಪಿಯನ್ ಪಟ್ಟಕ್ಕೇರಬೇಕು ಅನ್ನೋದು ಅಭಿಮಾನಿಗಳ ಆಸೆ ಕೂಡ ಹೌದು. ಬಟ್ ಎಷ್ಟೋ ಜನ್ರಿಗೆ ಬೆಂಗಳೂರು ತಂಡ, ಬೆಂಗಳೂರು ಫ್ಯಾನ್ಸ್ಗೋಸ್ಕರ ಅಲ್ಲದೇ ಇದ್ರೂ ಕಿಂಗ್ ವಿರಾಟ್ ಕೊಹ್ಲಿಗೋಸ್ಕರನಾದ್ರೂ ಆರ್ಸಿಬಿ ಕಪ್ ಗೆಲ್ಲಬೇಕು ಅನ್ನೋ ಮಹದಾಸೆ ಇಟ್ಕೊಂಡಿದ್ದಾರೆ. ಯಾಕಂದ್ರೆ ಈ ತಂಡದ ಮೇಲೆ ವಿರಾಟ್ಗೆ ಇರೋ ನಿಷ್ಠೆನೇ ಅಂಥಾದ್ದು. ವಿರಾಟ್ಗೆ ಬಂದಿದ್ದ ಆಫರ್ ಎಂಥಾದ್ದು? ಬೆಂಗಳೂರು ತಂಡವನ್ನ ಬಿಡದ ವಿರಾಟ್ ಬಗ್ಗೆ ಮಾಜಿ ಕ್ರಿಕೆಟಿಗರೊಬ್ಬರು ಬಿಚ್ಚಿಟ್ಟಿರೋ ರೋಚಕ ರಹಸ್ಯ ಇಲ್ಲಿದೆ.
ಇದನ್ನೂ ಓದಿ: ಸೂರ್ಯಕುಮಾರ್, ಶ್ರೇಯಸ್ ಅಯ್ಯರ್ ಫ್ಲಾಪ್ ಶೋ – ದೇಶಿ ಟೂರ್ನಿ ಲೆಕ್ಕಕ್ಕಿಲ್ವಾ?
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಐಪಿಎಲ್ನಲ್ಲಿ ಕಿಂಗ್ ವಿರಾಟ್ ಅಬ್ಬರವನ್ನ ನೋಡೋದೇ ಚೆಂದ. ಆರ್ಸಿಬಿ ಅಂದ್ರೆ ವಿರಾಟ್ ವಿರಾಟ್ ಅಂದ್ರೆ ಆರ್ಸಿಬಿ ಅನ್ನೋದು ಅಭಿಮಾನಿಗಳಿಗೂ ಮನದಟ್ಟಾಗಿದೆ. ಡೇ ಒನ್ನಿಂದ ಬೆಂಗಳೂರು ತಂಡಕ್ಕಾಗೇ ಆಡ್ತಿರೋ ವಿರಾಟ್ರದ್ದು ನಿಜಕ್ಕೂ ಕೂಡ ಗ್ರೇಟ್ ಪರ್ಸನಾಲಿಟಿ. ಹೆಚ್ಚು ಹಣಕ್ಕಾಗಿ ಫ್ರಾಂಚೈಸಿಯಿಂದ ಫ್ರಾಂಚೈಸಿಗೆ ಜಂಪ್ ಆಗೋ ಈ ಕಾಲದಲ್ಲಿ ವಿರಾಟ್ ಅದೆಷ್ಟು ಲಾಯಲ್ ಆಗಿದ್ದಾರೆ ಅನ್ನೋದನ್ನ ಟೀಂ ಇಂಡಿಯಾದ ಮಾಜಿ ಟೆಸ್ಟ್ ಆರಂಭಿಕ ಮತ್ತು ಜನಪ್ರಿಯ ಕಾಮೆಂಟೇಟರ್ ಆಕಾಶ್ ಚೋಪ್ರಾ ಹೇಳಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಎಷ್ಟೇ ಆಫರ್ಗಳು ಬಂದರೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯಾಕೆ ಬಿಡಲಿಲ್ಲ ಅನ್ನೋದನ್ನ ಜಗಜ್ಜಾಹೀರು ಮಾಡಿದ್ದಾರೆ.
$100 ಕೋಟಿ ಕೊಟ್ಟರೂ ಕೊಹ್ಲಿ ಆರ್ ಸಿಬಿ ಬಿಡಲ್ಲ
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯವ್ರನ್ನ ಮುಕ್ತ ಕಂಠದಿಂದ ಗುಣಗಾನ ಮಾಡಿರೋ ಆಕಾಶ್ ಚೋಪ್ರಾ ಅಚ್ಚರಿಯ ವಿಚಾರವೊಂದನ್ನ ಹೇಳಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ವಿರಾಟ್ ಕೊಹ್ಲಿ ಅವರ ಐಪಿಎಲ್ ಜರ್ನಿಯನ್ನ ಎಕ್ಸ್ಪ್ಲೇನ್ ಮಾಡಿದ್ದಾರೆ. ಈ ಹಿಂದೆ ಎಂಥದ್ದೇ ಆಫರ್ ಬಂದರೂ ಬೆಂಗಳೂರು ತಂಡ ಬಿಡದ ಕೊಹ್ಲಿ, ಈಗ 100 ಕೋಟಿ ರೂಪಾಯಿಗಳನ್ನು ಕೊಟ್ಟರೂ ಆರ್ಸಿಬಿ ಬಿಡುವುದಿಲ್ಲ. ಆರ್ಸಿಬಿ ಒಮ್ಮೆಯಾದರೂ ಕಪ್ ಗೆಲ್ಲಬೇಕೆಂಬ ಕನಸಿನೊಂದಿಗೆ ವಿರಾಟ್ ಕೊಹ್ಲಿ ಬೆಂಗಳೂರು ತಂಡದಲ್ಲಿದ್ದಾರೆ. ವಿರಾಟ್ ಕೊಹ್ಲಿ ಸೋಲನ್ನು ವಿರೋಧಿಸುತ್ತಾರೆ, ಆದರೆ ಅವರು ಇನ್ನೂ ಆರ್ಸಿಬಿ ತಂಡದಲ್ಲಿದ್ದಾರೆ. ಏಕೆಂದರೆ ಅವರು ತಂಡಕ್ಕೆ ಪ್ರಾಮಾಣಿಕರಾಗಿದ್ದಾರೆ. ನಿಷ್ಠೆ ಎಂದರೆ ರಾಯಧನ ಎಂದು ವಿರಾಟ್ರನ್ನ ಕೊಂಡಾಡಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಚೋಪ್ರಾ, ಐಪಿಎಲ್ ಟೂರ್ನಿಯಲ್ಲಿ ವಿರಾಟ್ಗೆ ಸಾಕಷ್ಟು ಆಫರ್ಗಳ ಬಂದಿದ್ದವು. ಆದರೆ ಅವ್ರು ಆರ್ಸಿಬಿಯೊಂದಿಗಿನ ಸಂಬಂಧವನ್ನು ಎಂದಿಗೂ ಮುರಿಯಲಿಲ್ಲ. ಬೆಂಗಳೂರು ಫ್ರಾಂಚೈಸಿಗೆ ಪ್ರಾಮಾಣಿಕರಾಗಿ ಉಳಿದಿದ್ದಾರೆ ಹಾಗೂ ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಶ್ಲಾಘಿಸಿದ್ದಾರೆ.
2008ರಲ್ಲಿ ಐಪಿಎಲ್ ಗೆ ಪದಾರ್ಪಣೆ.. ಆರ್ ಸಿಬಿ ಪರವೇ ಆಟ!
2008ರದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದ ವರ್ಷವೇ ವಿರಾಟ್ ಕೊಹ್ಲಿ ಕೂಡ ಲೀಗ್ಗೆ ಎಂಟ್ರಿ ಕೊಟ್ಟಿದ್ರು. ತಮ್ಮ ಚೊಚ್ಚಲ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ರು. ಸೋ ಅಂದಿನಿಂದ ಇಂದಿನವರೆಗೂ ಅದೇ ತಂಡಕ್ಕಾಗಿ ಆಡುತ್ತಿದ್ದಾರೆ. ತಂಡವನ್ನ ಸ್ಟ್ರಾಂಗ್ ಮಾಡ್ಭೇಕು ಕಪ್ ಗೆಲ್ಬೇಕು ಅನ್ಕೊಂಡಿರೋ ವಿರಾಟ್ 2022ರ ಮೆಗಾ ಹರಾಜಿನಲ್ಲಿ ತಮ್ಮ ಸಂಭಾವನೆಯನ್ನು ಕಡಿತಗೊಳಿಸಿದ್ದರು. ಪ್ರಸ್ತುತ ಒಂದು ಆವೃತ್ತಿಗೆ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಈಗಾಗ್ಲೇ 2025ರ ಐಪಿಎಲ್ ಮೆಗಾ ಆಕ್ಷನ್ಗೆ ಏನೆಲ್ಲಾ ನಿಯಮಗಳನ್ನ ರೂಪಿಸಬೇಕು ಅಂತಾ ಬಿಸಿಸಿಐ ಯೋಜನೆಯಲ್ಲಿದೆ. ಇದ್ರ ನಡುವೆ ಸ್ಟಾರ್ ಆಟಗಾರರೇ ಬೇರೆ ಬೇರೆ ತಂಡಗಳಿಗೆ ಜಂಪ್ ಆಗೋ ಚಿಂತನೆಯಲ್ಲಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುತ್ತಿದ್ದಾರೆ ಮತ್ತು ಈ ಮೂವರು ನಾಯಕತ್ವದ ಅವಕಾಶಗಳಿಗಾಗಿ ಇತರ ತಂಡಗಳಿಗೆ ಹೋಗಲು ಸಿದ್ಧರಾಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಲಖನೌ ಸೂಪರ್ ಜೇಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ನಂತಹ ಫ್ರಾಂಚೈಸಿಗಳು ಸಹ ಈ ಬಾರಿ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿವೆ. ಬಟ್ ಸ್ಟಾರ್ಗಳಿಗೇ ಸ್ಟಾರ್ ಅನ್ನುವಂತಿರೋ ವಿರಾಟ್ ಮಾತ್ರ ಬೇರೆ ಫ್ರಾಂಚೈಸಿಗಳ ಕಡೆ ಕಣ್ಣೆತ್ತಿಯೂ ನೋಡಿಲ್ಲ. ನೋಡೋದೂ ಇಲ್ಲ.
ಐಪಿಎಲ್ ಇತಿಹಾಸದಲ್ಲಿ ನೂರಾರು ಆಟಗಾರರು ಬಂದು ಹೋಗಿದ್ದಾರೆ. ಆದ್ರೆ ಒಂದೇ ತಂಡಕ್ಕಾಗಿ ಅತಿ ಹೆಚ್ಚು ಋತುಗಳನ್ನು ಆಡಿದ ಏಕೈಕ ಆಟಗಾರ ವಿರಾಟ್ ಮಾತ್ರ ಆಗಿದ್ದಾರೆ. ಆರ್ಸಿಬಿ ಒಮ್ಮೆಯಾದರೂ ಕಪ್ ಗೆಲ್ಲಬೇಕು ಅನ್ನೋದು ವಿರಾಟ್ ಕೊಹ್ಲಿಯವರ ಕನಸು. ನಿವೃತ್ತಿ ಪಡೆಯುವುದಕ್ಕೂ ಮುನ್ನ ಒಮ್ಮೆಯಾದ್ರೂ ಅಭಿಮಾನಿಗಳ ಎದುರು ಕಪ್ ಎತ್ತಿ ಹಿಡಿಯಬೇಕು ಅನ್ನೋ ಪಣ ತೊಟ್ಟಿದ್ದಾರೆ. ಚಾಂಪಿಯನ್ ಪಟ್ಟಕ್ಕೇರಿ ವಿರಾಟ್ ಕೈಯಲ್ಲಿ ಟ್ರೋಫಿ ಇರೋದನ್ನ ನೋಡ್ಬೇಕು ಅನ್ನೋದು ಅಭಿಮಾನಿಗಳ ಕನಸೂ ಹೌದು. ವಿಪರ್ಯಾಸ ಅಂದ್ರೆ ಬೆಂಗಳೂರು ಪಾಲಿಗೆ ಚಾಂಪಿಯನ್ ಪಟ್ಟ ಗಗನ ಕುಸುಮವಾಗೇ ಉಳಿದಿದೆ. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಫೈನಲ್ ತಲುಪಿದ್ದ ಆರ್ಸಿಬಿ ಒಂದು ಬಾರಿಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಕಿಂಗ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲೂ ಫಿನಾಲೆ ತಲುಪಿದ್ರೂ ಕೂಡ ಮತ್ತದೇ ನಿರಾಸೆಯಾಗಿತ್ತು. ಬಟ್ 2025ರ ಐಪಿಎಲ್ನಲ್ಲಾದ್ರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲಲಿ, ವಿರಾಟ್ ಕೊಹ್ಲಿ ಟ್ರೋಫಿ ಹಿಡಿದು ಸಂಭ್ರಮಿಸೋ ಕ್ಷಣಕ್ಕಾಗಿ ಕೋಟಿ ಕೋಟಿ ಫ್ಯಾನ್ಸ್ ಕಾಯ್ತಿದ್ದಾರೆ.