ಕೋಡಿಮಠ ಶ್ರೀಗಳ ಮತ್ತೊಂದು ಭವಿಷ್ಯವಾಣಿ..! ದಕ್ಷಿಣ ಭಾರತಕ್ಕೆ ಪ್ರವಾಹದ ಎಚ್ಚರಿಕೆ

ಹಾಸನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಈ ವರ್ಷದ ಮಳೆ ಹಾಗೂ ಪ್ರಕೃತಿ ವಿಕೋಪಗಳ ಬಗ್ಗೆ ಮತ್ತೊಂದು ಮಹತ್ವದ ಭವಿಷ್ಯ ನುಡಿದಿದ್ದಾರೆ.
ಈ ವರ್ಷ ಮುಂಗಾರು ಮಳೆ ವಿರಳವಾಗಲಿದೆ, ಆದರೆ ಹಿಂಗಾರು ಮಳೆ ಉತ್ತಮವಾಗಲಿದೆ ಎಂದು ತಾವು ಮೊದಲೇ ಹೇಳಿದ್ದಾಗಿ ಕೋಡಿಶ್ರೀ ತಿಳಿಸಿದ್ದಾರೆ. ಜೊತೆಗೆ ಜನಜಂಗುಳಿ ಹೆಚ್ಚಾಗುವ ಪರಿಸ್ಥಿತಿ, ಅನ್ನ, ಆಹಾರ ಮತ್ತು ನೀರಿಗೆ ಕೊರತೆ ಉಂಟಾಗುವ ಸಾಧ್ಯತೆ, ಸಾವು-ನೋವುಗಳು ಹೆಚ್ಚಾಗುವಂತಹ ಘಟನೆಗಳು ನಡೆಯಬಹುದು ಎಂದು ತಾವು ಭವಿಷ್ಯ ನುಡಿದಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ದರ್ಶನ್ ರಿಟ್ ಅರ್ಜಿ – ಇಂದು ದಾಸನಿಗೆ ಸಿಗುತ್ತಾ ಸಿಹಿ ಸುದ್ದಿ
ನೇಪಾಳದಲ್ಲಿ ಸಂಭವಿಸಿದಂತಹ ಭೀಕರ ಪ್ರವಾಹದ ಘಟನೆಗಳ ಮಾದರಿಯಲ್ಲಿ ದಕ್ಷಿಣ ಭಾರತದಲ್ಲೂ ಪ್ರಕೃತಿ ವಿಕೋಪಗಳು ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸಮುದ್ರದ ನೀರು ನುಗ್ಗಿ ಕೆಲವು ಪ್ರದೇಶಗಳು ಮುಳುಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಮಾತನ್ನೂ ಅವರು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಬಹುದು ಎಂದು ಕೋಡಿಶ್ರೀ ಸೂಚಿಸಿದ್ದಾರೆ. ಆದರೆ ಇದರ ನಡುವೆಯೇ ರೈತರಿಗೆ ಆಶಾದಾಯಕ ಸುದ್ದಿಯನ್ನೂ ನೀಡಿದ್ದಾರೆ. ಹಿಂಗಾರು ಮಳೆ ಸಮೃದ್ಧವಾಗಿ ಸುರಿಯುವ ಲಕ್ಷಣಗಳಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಇದೀಗ ಕೋಡಿಮಠ ಶ್ರೀಗಳ ಈ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಗಳ ಬಗ್ಗೆ ಜನರಲ್ಲಿ ಕುತೂಹಲವೂ ಹೆಚ್ಚಾಗಿದೆ.

ನೋಡಿರಿ

