10 ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯವಾಗುತ್ತಾ? – ಯುಐಡಿಎಐ ಹೇಳಿದ್ದೇನು?
ಆಧಾರ್ ಕಾರ್ಡ್ ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಇವಾಗಂತೂ ಆಧಾರ್ ಕಾರ್ಡ್ ಎಲ್ಲದಕ್ಕೂ ಕಡ್ಡಾಯ ಮಾಡಲಾಗಿದೆ. ಜೊತೆಗೆ ಆಧಾರ್ ಮೂಲಕ ಅನೇಕ ಸೌಲಭ್ಯಗಳನ್ನ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಮಾಡಿಸಿ 10 ವರ್ಷಕ್ಕಿಂತ ಜಾಸ್ತಿಯಾಗಿರುವವರು ಅಪ್ಡೇಟ್ ಮಾಡಿಸಲು ಈಗಾಗಲೇ ಅವಕಾಶ ನೀಡಲಾಗಿದೆ. ಆದರೂ ಕೂಡ ಜನರು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಸಲು ಮನಸ್ಸು ಮಾಡುತ್ತಿಲ್ಲ. ಜೂನ್ 14ರ ಬಳಿಕ ಇಂತಹ ಆಧಾರ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳಲಿವೆ ಎಂಬ ಸುದ್ದಿಯಲ್ಲಿತ್ತು. ಇದೀಗ ಈ ಬಗ್ಗೆ ಯುಐಡಿಎಐ ಸ್ಪಷ್ಟಣೆ ನೀಡಿದೆ.
ಇದನ್ನೂ ಓದಿ: ರಘುಪತಿ ಭಟ್ ಗೆ ಬಿಜೆಪಿಯಿಂದ ನೋಟಿಸ್ ಜಾರಿ – ಪಕ್ಷದಿಂದ ಉಚ್ಛಾಟನೆಯಾಗ್ತಾರಾ ಮಾಜಿ ಶಾಸಕ?
ಕಳೆದ 10 ವರ್ಷದಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದಿದ್ದರೆ ಅಂತಹ ಆಧಾರ್ ಕಾರ್ಡ್ ಜೂನ್ 14ರ ಬಳಿಕ ಇಂತಹ ಆಧಾರ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದು ವೈರಲ್ ಆಗಿತ್ತು. ಇದೀಗ ಆಧಾರ್ ಕಾರ್ಡ್ ರೂಪಿಸಿರುವ ಯುಐಡಿಎಐ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಯುಐಡಿಎಐ ಹೇಳಿದೆ. ಹತ್ತು ವರ್ಷವಾದರೂ ಅಪ್ಡೇಟ್ ಆಗದ ಆಧಾರ್ ಕಾರ್ಡ್ಗೆ ಏನೂ ಆಗುವುದಿಲ್ಲ. ಅದು ಚಾಲನೆಯಲ್ಲಿ ಇರುತ್ತದೆ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.
ಜೂನ್ 14 ರ ಡೆಡ್ಲೈನ್ ಸುದ್ದಿ ಹಿಂದಿನ ಮರ್ಮವೇನು?
ವಾಸ್ತವದಲ್ಲಿ ಆಧಾರ್ ವಿವರವನ್ನು ಆನ್ಲೈನ್ನಲ್ಲಿ ಉಚಿತವಾಗಿ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದಕ್ಕೆ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಹೊಸ ಗಡುವು ಇರುವುದು 2024ರ ಜೂನ್ 14ಕ್ಕೆ. ಅಲ್ಲಿಯವರೆಗೆ ಆನ್ಲೈನ್ನಲ್ಲಿ ಶುಲ್ಕ ಇಲ್ಲದೇ ಉಚಿತವಾಗಿ ಆಧಾರ್ ವಿವರವನ್ನು ಅಪ್ಡೇಟ್ ಮಾಡಬಹುದು. ಕೆಲವರು ಇದನ್ನೇ ತಿರುಚಿ, ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ಜೂನ್ 14ರ ಬಳಿಕ ನಿಷ್ಕ್ರಿಯಗೊಳ್ಳುತ್ತದೆ ಎನ್ನುವಂತಹ ವದಂತೆ ಹಬ್ಬಿಸಿರಬಹುದು ಎನ್ನಲಾಗಿದೆ.
ಈಗ ಆನ್ಲೈನ್ನಲ್ಲಿ ಆಧಾರ್ ವಿವರನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು. ಆಧಾರ್ ಸೆಂಟರ್ಗೆ ಹೋಗಿಯೂ ಅಪ್ಡೇಟ್ ಮಾಡಿಸಬಹುದು. ಆದರೆ, ಅಲ್ಪಮೊತ್ತದ ಶುಲ್ಕ ಕೊಡಬೇಕು. ಜೂನ್ 14ರ ಬಳಿಕವೂ ಆನ್ಲೈನ್ನಲ್ಲಿ ಆಧಾರ್ ಅಪ್ಡೇಟ್ ಮಾಡಬಹುದು. ಆದರೆ ಉಚಿತ ಇರುವುದಿಲ್ಲ. 50 ರೂ ಅಥವಾ ಅದರ ಆಸುಪಾಸಿನ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಆನ್ಲೈನ್ನಲ್ಲಿ ಆಧಾರ್ ವಿವರ ಅಪ್ಡೇಟ್ ಮಾಡುವುದು ಹೇಗೆ?
- ಯುಐಡಿಎಐನ ಸೆಲ್ಫ್ ಸರ್ವಿಸ್ ಪೋರ್ಟಲ್ ssup.uidai.gov.in/ssup/ ಗೆ ಹೋಗಿ.
- ಆಧಾರ್ ನಂಬರ್, ಒಟಿಪಿ ಬಳಸಿ ಲಾಗಿನ್ ಆಗಿ
- ಲಾಗಿನ್ ಆದ ಬಳಿಕ ‘ಸರ್ವಿಸಸ್’ ಟ್ಯಾಬ್ ಅಡಿಯಲ್ಲಿ ‘ಅಪ್ಡೇಟ್ ಆಧಾರ್ ಆನ್ಲೈನ್’ ಅನ್ನು ಆಯ್ಕೆ ಮಾಡಿ.
- ‘ಪ್ರೊಸೀಡ್ ಟು ಅಪ್ಡೇಟ್ ಆಧಾರ್’ ಅನ್ನು ಕ್ಲಿಕ್ ಮಾಡಿ.
- ಬಳಿಕ ನಿಮಗೆ ಯಾವ ವಿವರ ಬದಲಿಸಬೇಕೋ ಅದನ್ನು ಆಯ್ದುಕೊಳ್ಳಿ.
- ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ಹೆಸರು ಕಾಣುತ್ತದೆ.
- ನೀವು ಬೇಕಾದ ವಿವರವನ್ನು ಬದಲಿಸಬಹುದು. ಅದಕ್ಕೆ ಪೂರಕವಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ವಿವರ ಬದಲಾವಣೆಯನ್ನು ಖಚಿತಪಡಿಸಿದರೆ ಅದು ಅಪ್ಡೇಟ್ ಆಗುತ್ತದೆ.