ಟ್ರಾಫಿಕ್‌ಗೆ ಆಕಾಶದಲ್ಲಿದೆ ಪರಿಹಾರ – ಶೀಘ್ರದಲ್ಲೇ ಭಾರತಕ್ಕೆ ಕಾಲಿಡಲಿದೆ ಹಾರುವ ಟ್ಯಾಕ್ಸಿ!

ಟ್ರಾಫಿಕ್‌ಗೆ ಆಕಾಶದಲ್ಲಿದೆ ಪರಿಹಾರ – ಶೀಘ್ರದಲ್ಲೇ ಭಾರತಕ್ಕೆ ಕಾಲಿಡಲಿದೆ ಹಾರುವ ಟ್ಯಾಕ್ಸಿ!

ನಗರಗಳಲ್ಲಿ ಈಗ ಸಿಕ್ಕಾಪಟ್ಟೆ ಟ್ರಾಫಿಕ್‌.. ಟ್ರಾಫಿಕ್‌ ಸಮಸ್ಯೆಯಿಂದ ಜನರು ಬೇಸತ್ತು ಹೋಗಿದ್ದಾರೆ.. ದೇವ್ರೇ ಈ ಸಮಸ್ಯೆಯಿಂದ ಮುಕ್ತಿ ಕೊಡಪ್ಪಾ ಅಂತಾ ಅನೇಕ ವಾಹನ ಸವಾರರು ಬೇಡಿಕೊಳ್ಳುತ್ತಾರೆ.. ಇದೀಗ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿಕೊಡುವ ಕಾಲ ಹತ್ತಿರ ಬರುತ್ತಿದೆ. ಇನ್ನುಮುಂದೆ ಆಕಾಶದಲ್ಲೇ ಹಾರಾಟ ನಡೆಸಬಹುದು..

ಹೌದು, ದೇಶದ ಅನೇಕ ನಗರಗಳಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಅನೇಕರು ಹಾರುವ ಟ್ಯಾಕ್ಸಿಗಳು ಇದ್ದರೆ ಎಷ್ಟು ಚೆಂದ ಎಂದು ಅಂದುಕೊಳ್ಳುತ್ತಿರುತ್ತಾರೆ.  ಅಂತವರಿಗೆ ಗುಡ್‌ ನ್ಯೂಸ್‌ ಇದೆ. ಭಾರತಕ್ಕೆ ಹಾರುವ ಟ್ಯಾಕ್ಸಿ ಕಾಲಿಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ಹಾರುವ ಟ್ಯಾಕ್ಸಿಗಳು ಭಾರತದಲ್ಲಿ ಹಾರಲಿವೆ.

ಇದನ್ನೂ ಓದಿ: ಇನ್ನು ಮುಂದೆ ಹೊಯ್ಸಳ ಪೊಲೀಸರಿಗೆ ಬಂದೂಕು ಕಡ್ಡಾಯ – ಕಾರಣವೇನು ಗೊತ್ತಾ?

ಈ ಫ್ಯೂಚರಿಸ್ಟಿಕ್ ಯೋಜನೆಯು ಶೀಘ್ರದಲ್ಲೇ ಬರಲಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನ ಪ್ರೊಫೆಸರ್ ಸತ್ಯ ಚಕ್ರವರ್ತಿ ಮಾಹಿತಿ ನೀಡಿದ್ದಾರೆ. ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಾಧ್ಯಾಪಕರು ಭಾರತದ ಪ್ರವರ್ತಕ ಫ್ಲೈಯಿಂಗ್ ಟ್ಯಾಕ್ಸಿಯಾದ e200 ಕುರಿತು ಮಾತನಾಡಿದರು, ಇದು ಪ್ರಯಾಣದ ಪ್ರಪಂಚವನ್ನು ಪರಿವರ್ತಿಸುತ್ತದೆ.

ಯೋಜನೆಯ ಉದ್ದೇಶವೇನು?

ಭಾರತದ ನಗರಗಳ ಸಂಕೀರ್ಣ ಭೂದೃಶ್ಯಗಳನ್ನು ನ್ಯಾವಿಗೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ವಿಮಾನವನ್ನು ಅಭಿವೃದ್ಧಿಪಡಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಚಕ್ರವರ್ತಿ, ರೀಚಾರ್ಜ್ ಮಾಡುವ ಮೊದಲು ಅನೇಕ ಪ್ರಯಾಣಗಳನ್ನು ಮಾಡುವ ಸಾಮರ್ಥ್ಯವಿರುವ ವಿಮಾನವನ್ನು ವಿನ್ಯಾಸಗೊಳಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

ಮೊದಲ ಹಾರಾಟವನ್ನುಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಿರೀಕ್ಷಿಸಲಾಗಿದೆ ಎಂದು ಹೇಳಲಾಗುತ್ತಿದೆ. ಜನರ ಸುರಕ್ಷತೆಯೂ ಅತಿ ಮುಖ್ಯ ಎಂದು ತಿಳಿಸಿದರು. ಹಾಗಾಗಿ ಕಟ್ಟುನಿಟ್ಟಾದ ಅಂತರಾಷ್ಟ್ರೀಯ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದಿದ್ದಾರೆ.

Shwetha M