ಹೆಚ್ಚು ಟೀ ಕುಡಿದ್ರೆ ಕಾಡುತ್ತೆ ಆರೋಗ್ಯ ಸಮಸ್ಯೆ! ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯಬೇಕು?
ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಬೇಕೆ ಬೇಕು. ಒಂದು ದಿನ ಟೀ ಕುಡಿಯೋದು ಮಿಸ್ ಆದ್ರೂ ತಲೆನೋವು ಅಂತ ಇಡೀ ದಿನ ಹೇಳ್ಕೊಂಡು ಇರ್ತಾರೆ.. ಹಾಗಂತ ಹೆಚ್ಚು ಟೀ ಕುಡಿದ್ರೂ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ. ದಿನದಲ್ಲಿ ಎಷ್ಟು ಕಪ್ ಟೀ ಕುಡಿಬೇಕು, ಹೆಚ್ಚು ಟೀ ಕುಡಿದ್ರೆ ಯಾವೆಲ್ಲಾ ಸಮಸ್ಯೆಗಳು ನಮ್ಮನ್ನು ಕಾಡುತ್ತೆ ಎಂಬುವುದರ ಕುರಿತ ಮಾಹಿತಿ ಈ ಲೇಖನದಲ್ಲಿದೆ.
ನಮ್ಮಲ್ಲಿ ಹೆಚ್ಚಿನ ಜನರಿಗೆ ಬೆಳಿಗ್ಗೆ ಒಂದು ಕಪ್ ಚಹಾ ಕುಡಿಯುವ ಅಭ್ಯಾಸವಿರುತ್ತೆ. ದಿನಕ್ಕೆ ಒಂದು ಕಪ್ ಚಹಾ ಕುಡಿಯುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಆದರೆ ಅನೇಕರು ದಿನವಿಡೀ ಹಲವಾರು ಕಪ್ ಟೀ ಕುಡಿಯುತ್ತಾರೆ. ಚಹಾ ಎಲೆಗಳಲ್ಲಿ ಟ್ಯಾನಿನ್ ಎಂಬ ಅಂಶವಿದೆ. ಹೆಚ್ಚು ಟೀ ಸೇವಿಸಿದ್ರೆ ಅನೇಕ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುತ್ತದೆ.
ಇದನ್ನೂ ಓದಿ: ಕತ್ತೆ ಹಾಲಿಗಿಂತಲೂ ಬಲು ದುಬಾರಿ ಇಲಿ ಹಾಲು! – ಒಂದು ಲೀಟರ್ ಹಾಲಿನ ಬೆಲೆ ಎಷ್ಟು ಗೊತ್ತಾ?
ಹೆಚ್ಚು ಟೀ ಕುಡಿದ್ರೆ ಆರೋಗ್ಯ ಕೆಡುತ್ತೆ!
ಪದೇ ಪದೇ ಟೀ ಕುಡಿದ್ರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ, ರಕ್ತಹೀನತೆ ಉಂಟಾಗುತ್ತೆ. ಅತಿಯಾಗಿ ಟೀ ಕುಡಿದರೆ ನಿದ್ದೆಯೂ ಕೆಡುತ್ತೆ. ಇದು ದೇಹದಲ್ಲಿ ಆಯಾಸ ಉಂಟು ಮಾಡುತ್ತೆ. ಇದರಿಂದಾಗಿ ಮಾನಸಿಕ ಆರೋಗ್ಯ ಕೆಡಬಹುದು. ಹೆಚ್ಚು ಟೀ ಕುಡಿದ್ರೆ ಅಸಿಡಿಟಿ ಸಮಸ್ಯೆ ಉಂಟಾಗುತ್ತೆ. ಚಹಾದ ಚಟ ಹತ್ತಿದವರಿಗೆ ಕೆಲವೊಮ್ಮೆ ಟೀ ಸಿಗದಿದ್ದರೆ ಮಾನಸಿಕ ಕಿರಿಕಿರಿ ಹೆಚ್ಚಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ.
ದಿನಕ್ಕೆ ಎಷ್ಟು ಕಪ್ ಚಹಾ ಕುಡಿಯಬೇಕು?
ಚಹಾ ಎಲೆಗಳಲ್ಲಿ ಟ್ಯಾನಿನ್ ಎಂಬ ಅಂಶವಿದೆ. ಈ ಕಾರಣಕ್ಕಾಗಿಯೇ ಹೆಚ್ಚು ಚಹಾ ಕುಡಿಯಬಾರದು ಎಂದು ಹೇಳಲಾಗುತ್ತದೆ. ಇದು ಚಹಾ ಎಲೆಗಳ ಗುಣಮಟ್ಟವನ್ನು ಕೂಡಾ ಅವಲಂಬಿಸಿರುತ್ತದೆ. ಕೆಲವೊಂದು ಬಾರಿ ಚಹಾ ಪುಡಿ ಹೆಚ್ಚು ದಿನಗಳ ಕಾಲ ಶೇಖರಿಸಿ ಇಡಲಾಗುತ್ತದೆ. ಇದರಿಂದಾಗಿ ಹೆಚ್ಚು ಟೀ ಕುಡಿದ್ರೆ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ತಜ್ಞರು ಹೇಳುವಂತೆ ನೀವು ದಿನಕ್ಕೆ 1 ರಿಂದ 2 ಕಪ್ ಚಹಾವನ್ನು ಮಾತ್ರ ಕುಡಿಯೋದು ಉತ್ತಮ.