ಬಡತನದಿಂದ ಮೇಲೆದ್ದ ಕ್ರಿಕೆಟರ್‌! – ಓದಿದ್ದು 8 ಕ್ಲಾಸ್‌.. ಈಗ ಫೇಮಸ್ ಆಟಗಾರ!

ಬಡತನದಿಂದ ಮೇಲೆದ್ದ ಕ್ರಿಕೆಟರ್‌! – ಓದಿದ್ದು 8 ಕ್ಲಾಸ್‌.. ಈಗ ಫೇಮಸ್ ಆಟಗಾರ!

ಹಾರ್ದಿಕ್‌ ಪಾಂಡ್ಯಾ.. ಕ್ರಿಕೆಟ್‌ ಆಟದ ಕಾರಣಕ್ಕಾಗಿ ಆಗ್ಲೀ.. ಅಥವಾ ವೈಯಕ್ತಿಕ ವಿಚಾರಗಳಲ್ಲೇ ಇರಲಿ.. ಒಂದಲ್ಲ ಒಂದು ಕಾರಣಕ್ಕೆ ಆಗಾಗ್ಗೆ ಕ್ರಿಕೆಟ್‌ ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗ್ತಾ ಇರುವ ಆಟಗಾರ.. ಪಾಂಡ್ಯಾ  ಟೀಂ ಇಂಡಿಯಾದ ಪ್ರಮುಖ ಆಟಗಾರ ಅಷ್ಟೇ ಅಲ್ಲ, ಈಗ ಮುಂಬೈ ಇಂಡಿಯನ್ಸ್‌ನ ಕ್ಯಾಫ್ಟನ್‌ ಆಗಿಯೂ ರೋಹಿತ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.. ಆದ್ರೆ ಈ ಆಟಗಾರನ ಕ್ರಿಕೆಟ್‌ ಜರ್ನಿ ಶುರುವಾಗಿದ್ದು ಹೇಗೆ? ಇವರು ಎಷ್ಟನೇ ಕ್ಲಾಸ್‌ ವರೆಗೆ ಓದಿದ್ದಾರೆ? ಹಾಗೆಯೇ ಈಗ ಪಾಂಡ್ಯಾ ಗಳಿಸಿರುವ ಕೋಟಿಗಳೆಷ್ಟು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕ್ರಿಕೆಟ್.. ಕಾರು ಮತ್ತು ಕಾವ್ಯಾ!.. ಗಜಕೇಸರಿ ಯೋಗದಿಂದ SRH ಗೆಲುವು! – ಭಾರತದ ಹೊಸ ನ್ಯಾಷನಲ್ ಕ್ರಷ್!

1993ರ ಅಕ್ಟೋಬರ್‌ 11ರಂದು ಗುಜರಾತ್‌ನ ಚೊರಾಯಸಿಯಲ್ಲಿ ಹಾರ್ದಿಕ್‌ ಪಾಂಡ್ಯಾ ಜನಿಸಿದ್ದರು. ಬಡಕುಟುಂಬದಲ್ಲಿ ಹುಟ್ಟಿದ್ದ ಪಾಂಡ್ಯಾಗೆ ಬಾಲ್ಯದಿಂದಲೂ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ಹಿರಿಯ ಸಹೋದರ ಕೃನಾಲ್ ಪಾಂಡ್ಯ ಕ್ರಿಕೆಟ್ ಆಡಲು ಹೋಗುತ್ತಿದ್ದಾಗ, ಅವರ ಜೊತೆ ಹಾರ್ದಿಕ್ ಕೂಡ ಮೈದಾನಕ್ಕೆ ಹೋಗಿ ತನ್ನ ಪಾಡಿಗೆ ಆಡುತ್ತಾ ಮೋಜು ಮಾಡುತ್ತಿದ್ದರು.  ಅಂತದ್ದರಲ್ಲಿ ಒಂದು ದಿನ ಕೃನಾಲ್ ಅವರ ಕೋಚ್ ಕಿರಣ್ ಮೋರೆಯವರ ಕಣ್ಣಿಗೆ ಈ ಹಾರ್ದಿಕ್‌ ಬಿದ್ದರು.. ಹಾರ್ದಿಕ್‌ಗೆ ಕ್ರಿಕೆಟ್‌ ಮೇಲಿರುವ ಆಸಕ್ತಿ ಮತ್ತು ಶ್ರದ್ಧೆಯನ್ನು ಗಮನಿಸಿದ ಮೋರೆಯವರು ಕ್ರಿಕೆಟ್‌ ಕೋಚಿಂಗ್‌ ಪಡೆಯುವಂತೆ ಸಲಹೆ ನೀಡಿದ್ರು.. ಹಾಗೆ ಕೋಚಿಂಗ್‌ ಗೆ ಹಾರ್ದಿಕ್‌ನನ್ನು ಸೇರಿಸಿಕೊಂಡಿದ್ದ ಮೋರೆ, ಮೊದಲ ಮೂರು ವರ್ಷ ಕೋಚಿಂಗ್ ಫೀಸ್ ಕೂಡ ತೆಗೆದುಕೊಂಡಿರಲಿಲ್ಲ.

ಇನ್ನು ಹಾರ್ದಿಕ್ ಪಾಂಡ್ಯಗೆ ಬಾಲ್ಯದಿಂದಲೂ ಓದೋದರಲ್ಲಿ ಹೇಳಿಕೊಳ್ಳುವಂತಹ ಆಸಕ್ತಿ ಇರಲಿಲ್ಲ. 9ನೇ ತರಗತಿ ಕೂಡ ಪೂರ್ಣಗೊಳಿಸದೆ ಕ್ರಿಕೆಟ್ ಕಡೆ ಹೆಚ್ಚಿನ ಗಮನ ನೀಡಲು ಪ್ರಾರಂಭಿಸಿದರು. ಅಂದರೆ, ಹಾರ್ದಿಕ್ ಪಾಂಡ್ಯ 9 ನೇ ತರಗತಿ ಪರೀಕ್ಷೆ ಕೂಡ ಬರೆದಿಲ್ಲ. ಹೀಗಾಗಿ ಅವರ ಶೈಕ್ಷಣಿಕ ಅರ್ಹತೆ ಕೇವಲ 8 ನೇ ತರಗತಿ ಮಾತ್ರ.

ಕ್ರಿಕೆಟ್’ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್. ಅದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಅವರು ಜಿಟಿಯನ್ನು ಒಂದು ಬಾರಿ ಚಾಂಪಿಯನ್ ಮಾಡಿದ್ದರೆ, ಮತ್ತೊಂದು ಬಾರಿ ಫೈನಲ್ ಪ್ರವೇಶಿಸುವಂತೆ ಮಾಡಿದ್ದರು. ಹೆಸರಾಂತ ಕ್ರೀಡಾ ವೆಬ್‌ಸೈಟ್‌, ಸ್ಪೋರ್ಟ್ಸ್ ಕೀಡಾ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರ ಈಗಿನ ಒಟ್ಟು ಆಸ್ತಿ ಮೌಲ್ಯ ಸುಮಾರು 91 ಕೋಟಿ ರುಪಾಯಿ..ಇಷ್ಟೆಲ್ಲಾ ಕೋಟಿಗಳನ್ನು ಕ್ರಿಕೆಟ್‌ ಮತ್ತು ಜಾಹೀರಾತುಗಳ ಮೂಲಕವೇ ಹಾರ್ದಿಕ್‌ ಗಳಿಸಿದ್ದರು ಎನ್ನುವುದು ವಿಶೇಷ.. ಹೀಗೆ ಬಡಕುಟುಂಬದಿಂದ ಮೇಲೆ ಬಂದ ಹಾರ್ದಿಕ್‌ ಈಗ ವಿಶ್ವಕ್ರಿಕೆಟ್‌ನ ಗಮನ ಸೆಳೆಯುತ್ತಿರುವುದಕ್ಕೆ ಮುಖ್ಯ ಕಾರಣವೇ,ಪ್ರತಿಭೆಯ ಜೊತೆಗೆ ಕ್ರಿಕೆಟ್‌ ಬಗ್ಗೆ ಅವರಿಗಿರುವ ಬದ್ಧತೆ..

Shwetha M