ಮಗುವಿಗೆ ಕತ್ತೆ ಹಾಲು ಕುಡಿಸುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಮಗುವಿಗೆ ಕತ್ತೆ ಹಾಲು ಕುಡಿಸುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ನಾವು ಪ್ರತಿನಿತ್ಯ ಆರೋಗ್ಯವಾಗಿರಲು ಹಾಗು ಪೋಷಕಾಂಶವನ್ನು ದೇಹಕ್ಕೆ ತುಂಬಿಸಲು ಎಮ್ಮೆ ಹಾಗು ಹಸುವಿನ ಹಾಲನ್ನು ಕುಡಿಯುತ್ತೇವೆ. ಮೇಕೆ ಹಾಗು ಕತ್ತೆಯ ಹಾಲುಗಳು ಕೂಡ ಸಿಗುತ್ತದೆಯಾದರೂ, ಬಹಳ ಅಪರೂಪ ಎಂದೇ ಹೇಳಬಹುದು. ಹಳ್ಳಿಯ ಭಾಗದಲ್ಲಿ ಇಂತಹ ಹಾಲುಗಳು ವ್ಯಾಪಕವಾಗಿ ದೊರೆಯುತ್ತದೆ. ಆದ್ರೆ ಎಮ್ಮೆ, ಹಸು, ಮೇಕೆ ಹಾಲಿಗಿಂತ ಕತ್ತೆ ಹಾಲಿನಲ್ಲಿ ತುಂಬಾನೇ ಪೋಷಕಾಂಶಗಳಿವೆ. ಅದರ ಮಹತ್ವದ ಬಗ್ಗೆ ತಿಳಿದರೆ ನೀವೂ ಕೂಡ ದಂಗಾಗುತ್ತೀರಿ.

ಇದನ್ನೂ ಓದಿ: ರಾಹಾಗಾಗಿ ಆನೆ ಕಳುಹಿಸಿದ್ದ ರಾಮ್‌ ಚರಣ್‌! – ಆಲಿಯಾ ಮಾಡಿದ್ದೇನು ಗೊತ್ತಾ?

ಹಳ್ಳಿಗಳ ಕಡೆ ಕುರಿ ಮಂದೆಯವರು ಬಂದಾಗ ಮಕ್ಕಳಿಗೆ ಕತ್ತೆ ಹಾಲು ಕುಡಿಸ್ತಾರೆ. ಇನ್ನು ಸಿಟಿಗಳಲ್ಲಿ ಇತ್ತೀಚೆಗೆ ಕತ್ತೆಗಳ ಸಮೇತ ಮನೆ ಬಾಗಿಲಿಗೇ ಬರ್ತಾರೆ. ಯಾಕಂದ್ರೆ ಕತ್ತೆ ಹಾಲಿನ ಸೇವನೆಯಿಂದ ಹಲವು ಪ್ರಯೋಜನಗಳಿವೆ. ತಾಯಿಯ ಎದೆ ಹಾಲಿನಷ್ಟೇ ಪೌಷ್ಟಿಕಾಂಶ ಗುಣಗಳನ್ನ ಕತ್ತೆ ಹಾಲು ಹೊಂದಿದೆ ಅಂದ್ರೆ ನೀವು ನಂಬಲೇಬೇಕು. ಹಸುವಿನ ಹಾಲಿಗೆ ಹೋಲಿಸಿದರೆ ಕತ್ತೆ ಹಾಲಿನಲ್ಲಿ ಕೊಬ್ಬಿನಾಂಶ ತೀರಾ ಕಡಿಮೆ ಇರುತ್ತದೆ. ಕೆಲ ಅಧ್ಯಯನದ ಪ್ರಕಾರ, ಕತ್ತೆ ಹಾಲು ಹಸುವಿನ ಹಾಲಿಗಿಂತ 9 ಪಟ್ಟು ಹೆಚ್ಚು ಟೌರಿನ್ ಎಂಬ ಅಂಶವನ್ನು ಹೊಂದಿರುತ್ತದೆ. ಇದ್ರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ.

ಶಿಶುವಿಗೆ ಮಿತವಾಗಿ ಕತ್ತೆಯ ಹಾಲನ್ನು ನೀಡಿದಾಗ ಪೋಷಕಾಂಶಗಳನ್ನು ಜೀರ್ಣಿಸಿಕೊಳ್ಳಲು ಹಾಗು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯಕ್ಕೆ ಬೇಕಾದ ವಿಟಮಿನ್‌ ಡಿ ಪೋಷಕಾಂಶ ಇದರಲ್ಲಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕತ್ತೆ ಹಾಲು 10 ಎಂಎಲ್​ಗೆ ನೂರಾರು ರೂಪಾಯಿ 1 ಲೀಟರ್​ಗೆ ಸಾವಿರಾರು ರೂಪಾಯಿ ಇದೆ.

Shwetha M

Leave a Reply

Your email address will not be published. Required fields are marked *