ನಾಕೌಟ್ ರೌಂಡ್‌ ಬ್ರೆಝಿಲ್ ಎಂಟ್ರಿ – ಮೈದಾನದಲ್ಲೇ ಸೂಪರ್‌ಸ್ಟಾರ್ ನೇಮರ್ ಕಣ್ಣೀರು
981 ದಿನಗಳ ನಂತರ ಫಿಫಾ ವಿಶ್ವಕಪ್‌ಗೆ ಮರಳಿದ ನೇಮರ್

ನಾಕೌಟ್ ರೌಂಡ್‌ ಬ್ರೆಝಿಲ್ ಎಂಟ್ರಿ – ಮೈದಾನದಲ್ಲೇ ಸೂಪರ್‌ಸ್ಟಾರ್ ನೇಮರ್ ಕಣ್ಣೀರು981 ದಿನಗಳ ನಂತರ ಫಿಫಾ ವಿಶ್ವಕಪ್‌ಗೆ ಮರಳಿದ ನೇಮರ್

ವಿಶ್ವಕಪ್ ಇತಿಹಾಸದಲ್ಲೇ ಮತ್ತೊಂದು ದಾಖಲೆ ಬರೆಯಲು ಹೊರಟಿದೆ ಬ್ರೆಝಿಲ್ ತಂಡ. ಗುಂಪು ಸಿ ಯಲ್ಲಿ ಅಗ್ರ ಸ್ಥಾನ ಪಡೆದು ನಾಕೌಟ್ ಹಂತಕ್ಕೆ ಬ್ರೆಝಿಲ್ ಎಂಟ್ರಿ ಪಡೆದಿದೆ. ಇದರ ಜೊತೆಗೆ ಸೂಪರ್ ಸ್ಟಾರ್ ನೇಮರ್ ಮೈದಾನದಲ್ಲೇ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಚರಿತ್ರೆ – ಗೋಲ್ಡನ್ ಬೂಟ್ ಈ ಸಲ ಮೆಸ್ಸಿಗೆ ಫಿಕ್ಸ್..

ಲೀಗ್​ ಹಂತದಲ್ಲಿ ಗ್ರೂಪ್ ಸಿ ಅಂಕ ಪಟ್ಟಿಯಲ್ಲಿ ಬ್ರೆಝಿಲ್ ನಂಬರ್ ಒನ್ ಸ್ಥಾನ ಪಡೆದಿದೆ. ಜೊತೆಗೆ ನಾಕೌಟ್ ಹಂತ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಫುಟ್‌ಬಾಲ್ ದಿಗ್ಗಜ ನೇಮರ್ ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಬ್ರೆಜಿಲ್ ಫುಟ್ಬಾಲ್ ಸೂಪರ್‌ಸ್ಟಾರ್ ನೇಮರ್ ಜೂನಿಯರ್ 981 ದಿನಗಳ ನಂತರ ಫಿಫಾ ವಿಶ್ವಕಪ್ ಮೈದಾನಕ್ಕೆ ಕಾಲಿಟ್ಟಿದ್ದಾರೆ. ಫಿಫಾ ವಿಶ್ವಕಪ್ 2026 ರ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ 76ನೇ ನಿಮಿಷದಲ್ಲಿ ನೇಮರ್ ಬದಲಿಯಾಗಿ ಮೈದಾನದಲ್ಲಿ ಕಾಣಿಸಿಕೊಂಡರು. ಫುಟ್ಬಾಲ್ ದಿಗ್ಗಜ ನೇಮರ್ ಜೂನಿಯರ್ ಅವರ ಬಹುನಿರೀಕ್ಷಿತ ಕಮ್​​ಬ್ಯಾಕ್ ನೋಡಿ ಒಂದೆಡೆ ಅಭಿಮಾನಿಗಳು ಭಾವುಕರಾದರು. ಇನ್ನೊಂದೆಡೆ ಸ್ವತಃ ನೇಮರ್ ಕೂಡಾ ಮೈದಾನದಲ್ಲಿಯೇ ಕಣ್ಣೀರು ಹಾಕಿದರು.

ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ಮೂರು ವರ್ಷಗಳಿಂದ ದೂರವಿದ್ದ 34 ವರ್ಷದ ನೇಮಾರ್ ಮತ್ತೊಮ್ಮೆ ಬ್ರೆಜಿಲ್ ತಂಡದ ಜೆರ್ಸಿಯನ್ನು ಧರಿಸಿ ಮೈದಾನಕ್ಕೆ ಇಳಿದರು. ಫಿಫಾ ವಿಶ್ವಕಪ್ 2026 ರ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ ದ್ವಿತೀಯಾರ್ಧದಲ್ಲಿ ನೇಮಾರ್‌ಗೆ ಅವಕಾಶ ನೀಡಲಾಯಿತು. ಈ ಪಂದ್ಯದ ನಂತರ ಮೈದಾನದಲ್ಲೇ ನೇಮಾರ್ ಕಣ್ಣೀರು ಹಾಕಿದರು. ಬ್ರೆಜಿಲ್ ಹೆಡ್ ಕೋಚ್ ಕಾರ್ಲೊ ಅನ್ಸೆಲೋಟಿ ಸ್ಕಾಟ್ಲೆಂಡ್ ವಿರುದ್ಧದ ಫಿಫಾ ವಿಶ್ವಕಪ್ ಪಂದ್ಯಕ್ಕೂ ಮೊದಲು ನೇಮಾರ್‌ಗೆ ಅವಕಾಶ ಸಿಗುತ್ತದೆ ಎಂದು ಘೋಷಿಸಿದ್ದರು. ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದ 76ನೇ ನಿಮಿಷದಲ್ಲಿ, ಮ್ಯಾಥ್ಯೂಸ್ ಕುನ್ಹಾ ಬದಲಿಗೆ ನೇಮಾರ್ ಅವರನ್ನು ಕರೆತರಲಾಯಿತು. ನೇಮರ್ ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ, ಸ್ಟೇಡಿಯಂ ಚಪ್ಪಾಳೆ ಮತ್ತು ಹರ್ಷೋದ್ಗಾರಗಳಿಂದ ತುಂಬಿತು. ಅಭಿಮಾನಿಗಳು ತಮ್ಮ ಸ್ಟಾರ್ ಆಟಗಾರನನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದರು. ಈ ವಿಶೇಷ ಸ್ವಾಗತದ ಜೊತೆಗೆ ನೇಮರ್  ದಾಖೆ ಕೂಡಾ ಬರೆದರು. ಅವರು ಸತತ ನಾಲ್ಕನೇ ಫಿಫಾ ವಿಶ್ವಕಪ್‌ ಆಡುತ್ತಿರುವ ಆಟಗಾರರ ಎಲೈಟ್ ಕ್ಲಬ್​​ಗೆ ಎಂಟ್ರಿ ಕೊಟ್ಟರು.

ಬ್ರೆಜಿಲ್ ಗುಂಪು ಸಿ ಯಲ್ಲಿ ಅಗ್ರ ಸ್ಥಾನ ಪಡೆದು ನಾಕೌಟ್ ಹಂತಕ್ಕೆ ಮುನ್ನಡೆಯಿತು. ಈ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಬ್ರೆಜಿಲ್ 3-0 ಗೋಲುಗಳ ಅಂತರದಲ್ಲಿ ಸೋಲಿಸಿತು. ಈ ಮೂಲಕ ಗುಂಪು ಸಿ ಯಲ್ಲಿ ಅಗ್ರ ಸ್ಥಾನ ಪಡೆದು ನಾಕೌಟ್ ಹಂತ ಪ್ರವೇಶಿಸಿದೆ.

Sulekha

Leave a Reply

Your email address will not be published. Required fields are marked *