ನಂದಿನಿ ನಕಲಿ ತುಪ್ಪ ಮಾರಾಟಕ್ಕೆ ಬ್ರೇಕ್ ಹಾಕಲು ಕೆಎಂಎಫ್ ಮಾಸ್ಟರ್ ಪ್ಲ್ಯಾನ್! – ನಂದಿನಿ ಉತ್ಪನ್ನ ಮೇಲಿರಲಿದೆ ಕ್ಯೂಆರ್ ಕೋಡ್

ನಂದಿನಿ ಉತ್ಪನ್ನಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ದೇಶ ಮಾತ್ರವಲ್ಲದೇ ವಿದೇಶಗಳಿಗೂ ನಂದಿನಿ ಉತ್ಪನ್ನಗಳನ್ನ ರಫ್ತು ಮಾಡಲಾಗುತ್ತಿದೆ. ಆದ್ರೀಗ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಮೇಲೆ ವಕ್ರ ದೃಷ್ಠಿ ಬಿದ್ದಿದೆ. ನಂದಿನಿ ತುಪ್ಪವನ್ನ ಕಲಬೆರಕೆ ಮಾಡಿ ಮಾರಾಟ ಮಾಡಿರುವ ಜಾಲ ಇತ್ತೀಚೆಗೆ ಪತ್ತೆಯಾಗಿದೆ.
ಇದನ್ನೂ ಓದಿ: ದರ್ಶನ್‌ಗೆ ಜೈಲು ಶಿಕ್ಷೆ ಮತ್ತಷ್ಟು ಕಠಿಣ – ಇನ್ಮುಂದೆ ದಾಸ ಊಟಕ್ಕೂ ಸರತಿ ಸಾಲಿನಲ್ಲಿ ನಿಲ್ಲಬೇಕು!
ನಂದಿನಿ ತುಪ್ಪ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಜಾಲ ಇತ್ತೀಚೆಗೆ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದೆ. ಇದೀಗ ನಕಲಿ ನಂದಿನಿ ತುಪ್ಪ ಮಾರಾಟಕ್ಕೆ ಕಡಿವಾಣ ಹಾಕಲು ಇದೀಗ ಕೆಎಂಎಫ್ ಹೊಸ ಕ್ರಮ ಕೈಗೊಂಡಿದೆ. ಇನ್ಮುಂದೆ ನಂದಿನಿ ತುಪ್ಪದ ಪ್ಯಾಕೇಜ್ ಅಥವಾ ಡಬ್ಬಿಯಲ್ಲಿ ಕ್ಯೂಆರ್ ಕೋಡ್ ಈಗ ಇರೋದನ್ನ ಮತ್ತಷ್ಟು ಸ್ಟ್ರಾಂಗ್ ಮಾಡುತ್ತಿದೆ. ಈ ಕ್ಯೂಆರ್ ಕೋಡ್ ಇದ್ದರೆ ನಕಲು ಮಾಡಲು ಆಗೋದಿಲ್ಲ. ನಂದಿನಿ ಬ್ರ್ಯಾಂಡ್‌ಗೆ ಹೊಡೆತ ಬೀಳಬಾರದು ಅಂತ ಆಹಾರ ಇಲಾಖೆ ತಜ್ಞರ ಜೊತೆ ಚರ್ಚಿಸಿ ಮಾಸ್ಟರ್ ಪ್ಲಾನ್ ಮಾಡಿದೆ.
ಕ್ಯೂಆರ್ ಕೋಡ್ನಲ್ಲಿ ಏನಿರುತ್ತೆ?
- ಯಾವ ಒಕ್ಕೂಟದಿಂದ ಉತ್ಪಾದನೆಯಾಗಿದೆ
- ಯಾವ ಡಿಪೋಗೆ ಸರಬರಾಜು ನೀಡಲಾಗಿದೆ
- ಯಾವ ಏರಿಯಾಗೆ ಡೆಲಿವರಿ ನೀಡಲಾಗಿದೆ
- ಯಾವ ರೀಟೇಲ್ ಅಂಗಡಿಗೆ ಸೇಲ್ ಮಾಡಲಾಗಿದೆ ಎಂಬ ಮಾಹಿತಿ ಇದರಲ್ಲಿ ಇರುತ್ತದೆ.
ಕ್ಯೂಆರ್ ಕೋಡ್ ಮೂಲಕ ಗ್ರಾಹಕರು ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ತಿಳಿಯಬಹುದು. ಇದರಿಂದ ಗ್ರಾಹಕರು ಖರೀದಿ ಮಾಡಿರೋದು ಅಸಲಿಯೋ ನಕಲಿಯೋ ಅನ್ನೋದು ಗ್ರಾಹಕರೇ ತಿಳಿಯಬಹುದು.

ನೋಡಿರಿ

