NZ ವಿರುದ್ಧ ಯಾರು ಕ್ಯಾಪ್ಟನ್? – ಗೆಲ್ಲೋ KL ಸಾಕಾ.. ಸೋಲೋ ಗಿಲ್ ಬೇಕಾ?
ರೇಸ್ ನಲ್ಲಿರೋ ಹೊಸಬರು ಯಾರೆಲ್ಲಾ?

NZ ವಿರುದ್ಧ ಯಾರು ಕ್ಯಾಪ್ಟನ್? – ಗೆಲ್ಲೋ KL ಸಾಕಾ.. ಸೋಲೋ ಗಿಲ್ ಬೇಕಾ?ರೇಸ್ ನಲ್ಲಿರೋ ಹೊಸಬರು ಯಾರೆಲ್ಲಾ?

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮೂಲಕ ಭಾರತ 2026ರ ಜರ್ನಿ ಸ್ಟಾರ್ಟ್ ಮಾಡುತ್ತೆ. ಈ ಸರಣಿ  ಹಲವು ಆಟಗಾರರ ಪಾಲಿಗೆ ತುಂಬಾನೇ ಇಂಪಾರ್ಟೆಂಟ್ ಆಗುತ್ತೆ. ಅದ್ರಲ್ಲೂ ಶುಭ್​ಮನ್ ಗಿಲ್ ಅಂತೂ ಸದ್ಯಕ್ಕೆ ಡೇಂಜರ್ ಝೋನ್​ನಲ್ಲಿದ್ದಾರೆ.

ಇದನ್ನೂ ಓದಿ : 2026ರಲ್ಲಿ ಕಡಿಮೆ ಬಜೆಟ್‌ನಲ್ಲಿ ಪ್ರವಾಸದ ಪ್ಲ್ಯಾನ್ ಮಾಡ್ತಾ ಇದ್ದೀರಾ? – ಈ 5 ಸ್ಥಳಗಳು ಬೆಸ್ಟ್

ಜನವರಿ 11ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಜನವರಿ 3 ಅಥವಾ 4ರಂದು ಭಾರತ ತಂಡ ಅನೌನ್ಸ್ ಆಗುವ ಸಾಧ್ಯತೆಗಳಿವೆ. ಒಂದ್ಕಡೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡ್ತಾರೆ ಅನ್ನೋ ಕ್ಯೂರಿಯಾಸಿಟಿ, ಹಾಗೇ ಯಾರೆಲ್ಲಾ ಕಂ ಬ್ಯಾಕ್ ಮಾಡ್ಬೋದು, ಯಾರೆಲ್ಲಾ ಡ್ರಾಪ್ ಆಗ್ಬೋದು ಅನ್ನೋ ಗೊಂದಲ. ಇದೆಲ್ಲಕ್ಕಿಂತ ಹೆಚ್ಚಾಗಿ ಕ್ಯಾಪ್ಟನ್ ಯಾರಾದ್ರೆ ಬೆಸ್ಟ್ ಅನ್ನೋ ಚರ್ಚೆ. ಅದೂ ಕೂಡ ಕೆಎಲ್​ ಮತ್ತು ಗಿಲ್ ನಡುವೆ ಕಂಪೇರಿಸನ್ ವಾರ್ ನಡೀತಿದೆ.

ಕೆಎಲ್ & ಗಿಲ್ ನಡುವೆ ಏಕದಿನ ಕ್ಯಾಪ್ಟನ್ಸಿ ವಾರ್!

ನ್ಯೂಜಿಲೆಂಡ್ ವಿರುದ್ಧದ ಸರಣಿ ಭಾರತಕ್ಕೆ 2026ರ ಮೊದಲ ಸರಣಿ. ಹೀಗಾಗಿ ಸರಣಿಯನ್ನ ಗೆದ್ದು ಶುಭಾರಂಭ ಮಾಡ್ಬೇಕು. ಏಕದಿನ ಮಾದರಿಗೆ ಸದ್ಯ ಶುಭ್​ಮನ್ ಗಿಲ್ ಖಾಯಂ ನಾಯಕ ಆಗಿದ್ದಾರೆ. ಆದ್ರೆ ಗಿಲ್ ಪ್ರಸ್ತುತ ಕಳಪೆ ಫಾರ್ಮ್​ನಲ್ಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಕಳೆದ ಏಕದಿನ ಸಿರೀಸ್​ನಲ್ಲಿ ಇಂಜುರಿ ಕಾರಣಕ್ಕೆ ತಂಡದಿಂದ ಹೊರಗಿದ್ರು. ಕೆಎಲ್ ರಾಹುಲ್ ಅವ್ರ ನಾಯಕತ್ವದಲ್ಲಿ ಭಾರತ ಸರಣಿ ಗೆದ್ದಿತ್ತು. ಹೀಗಾಗಿ ಕಿವೀಸ್ ಬೇಟೆಗೆ ಗಿಲ್​ರನ್ನೇ ನಾಯಕನಾಗಿ ಅಖಾಡಕ್ಕಿಳಿಸೋದಾ ಅಥವಾ ರಾಹುಲ್​ಗೆ ಮತ್ತೆ ಚಾನ್ಸ್ ಕೊಡೋದಾ ಅನ್ನೋ ಚರ್ಚೆ ಶುರುವಾಗಿದೆ. ಅಂದ್ರೆ ಗೆಲ್ಲೋ ರಾಹುಲ್ ಬೇಕಾ ಅಥವಾ ಸೋಲೋ ಗಿಲ್ ಬೇಕಾ ಅನ್ನೋ ವಾದ. ಆಸೀಸ್ ಸರಣಿಯಲ್ಲಿ ನಾಯಕನಾದ ಗಿಲ್ 3 ಪಂದ್ಯಗಳಿಂದ 42 ರನ್ಸ್ ಕಲೆ ಹಾಕಿದ್ರು. ಆದ್ರೆ ನಾಯಕರಾಗಿ ಸೌತ್ ಆಫ್ರಿಕಾ ವಿರುದ್ಧ 2 ಇನ್ನಿಂಗ್ಸ್​ಗಳಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿದ್ರು. ಸೋ ರಾಹುಲ್ ಬೆಸ್ಟ್ ಎನ್ನುವಂತೆ ಕಾಣ್ತಿದ್ದಾರೆ. ಹಾಗೇನಾದ್ರೂ ಗಿಲ್ ಕಂ ಬ್ಯಾಕ್ ಮಾಡಿದ್ರೂ ಸಾಲು ಸಾಲು ಸವಾಲುಗಳನ್ನ ಮೆಟ್ಟಿ ನಿಲ್ಬೇಕಿದೆ.

ಗಿಲ್ ಮುಂದಿರೋ ಸವಾಲುಗಳು!

ಟಿ-20 ವಿಶ್ವಕಪ್ ತಂಡದಿಂದ ಹೊರಬಿದ್ದಿರೋ ಗಿಲ್

ಏಕದಿನ ಮಾದರಿಯ ನಾಯಕನಾಗಿ ಆಟದ ಜತೆ ಗೆಲ್ಲಬೇಕು

ಕೆಎಲ್ ರಾಹುಲ್ ಕಳೆದ ಸಿರೀಸ್ ನಲ್ಲಿ ಗೆದ್ದು ತೋರಿಸಿದ್ದಾರೆ

ಬ್ಯಾಟಿಂಗ್ ನಲ್ಲೂ ಕಳಪೆ ಫಾರ್ಮ್ ನಿಂದ ಹೊರ ಬರಬೇಕು

ಆಲ್ ಫಾರ್ಮೆಟ್ ನಲ್ಲಿ ರೋಹಿತ್ & ಕೊಹ್ಲಿಯಲ್ಲ ಅನ್ನೋ ಟೀಕೆ

ಹೀಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸಿರೀಸ್ ಗಿಲ್ ಪಾಲಿಗೆ ಡು ಆರ್ ಡೈನಂತಿದೆ. ಇನ್ನು ಇದೆಲ್ಲದ್ರ ನಡುವೆ ಸರಣಿಗೆ ಯಾರೆಲ್ಲಾ ಸೆಲೆಕ್ಟ್ ಆಗ್ತಾರೆ ಅನ್ನೋ ಕುತೂಹಲವೂ ಇದೆ. ಫೆಬ್ರವರಿಯಲ್ಲಿ ಟಿ-20 ವಿಶ್ವಕಪ್ ಕೂಡ ಇರೋದ್ರಿಂದ ಹಲವು ಆಟಗಾರರನ್ನ ಕೈಬಿಡೋ ಸಾಧ್ಯತೆ ಇದೆ. ಬಹುತೇಕ ಶುಭ್​ಮನ್ ಗಿಲ್ ಏಕದಿನ ತಂಡದ ನಾಯಕನಾಗಿ ಕಾಣಿಸಿಕೊಳ್ತಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೊರಗುಳಿಯಬಹುದು. ಸೌತ್ ಆಫ್ರಿಕಾ ಸಿರೀಸ್​ನಲ್ಲಿ ಇದ್ರೂ ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ. ಌಂಡ್ 2024ರ ಆಗಸ್ಟ್‌ ಬಳಿಕ ಅವರು ಏಕದಿನ ತಂಡದ ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಚಾಂಪಿಯನ್ಸ್‌ ಟ್ರೋಫಿ ಹಾಗೂ ಇಂಗ್ಲೆಂಡ್‌ ವಿರುದ್ಧದ ತವರು ಸರಣಿಯಲ್ಲಿಯೂ ಪಂತ್‌ ಬೆಂಚ್‌ ಕಾದಿದ್ದರು. ಬಹುಶಃ ಈ ಸರಣಿಗೆ ಕೆಎಲ್ ರಾಹುಲ್​ಗೆ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಕಾಣಿಸಿಕೊಳ್ಳೋ ಸಾಧ್ಯತೆಗಳಿವೆ. ವಿಶ್ವಕಪ್‌ಗೂ ಮುನ್ನ ಭಾರತದ ಪರ ಆಡಲು ಕಿಶನ್​ಗೆ ಅವಕಾಶ ಸಿಕ್ಕಂತಾಗುತ್ತೆ. ಹಾಗೇ ಟಿ-20 ವಿಶ್ವಕಪ್​ ಹಿನ್ನೆಲೆಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯನೂ ಕೈಬಿಡಲಾಗುತ್ತೆ. ಯಾಕಂದ್ರೆ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ-20ಐ ಸರಣಿ ಇದ್ದು ನೆಕ್ಸ್​ಟ್ ವಿಶ್ವಕಪ್ ಇರೋದ್ರಿಂದ ರೆಸ್ಟ್ ನೀಡಬಹುದು. ಅಂತಿಮವಾಗಿ ಯಾರೆಲ್ಲಾ ಸೆಲೆಕ್ಟ್ ಆಗಬಹುದು ಅನ್ನೋದನ್ನ ನೋಡೋದಾದರೆ..

ಏಕದಿನ ಸರಣಿಗೆ ಸಂಭಾವ್ಯ ತಂಡ!

ಶುಭಮನ್ ಗಿಲ್ (ಸಿ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್

Shantha Kumari