ಕೈಗ್ ಹಾಕಲೋ ಎಂದ ಕೆ.ಎಲ್ ರಾಹುಲ್ – ದಕ್ಷಿಣ ಆಫ್ರಿಕಾ ನೆಲದಲ್ಲಿ ಪ್ರಸಿದ್ಧ್ ಕೃಷ್ಣಗೆ ಕನ್ನಡದಲ್ಲೇ ತಾಕೀತು

ಕೈಗ್ ಹಾಕಲೋ ಎಂದ ಕೆ.ಎಲ್ ರಾಹುಲ್  –  ದಕ್ಷಿಣ ಆಫ್ರಿಕಾ ನೆಲದಲ್ಲಿ ಪ್ರಸಿದ್ಧ್ ಕೃಷ್ಣಗೆ ಕನ್ನಡದಲ್ಲೇ ತಾಕೀತು

ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 11 ರನ್‌ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 245 ರನ್‌ಗಳಿಗೆ ಆಲೌಟ್‌ ಆಗಿತ್ತು. ಆದರೆ ದಕ್ಷಿಣ ಆಫ್ರಿಕಾ 5 ವಿಕೆಟ್‌ ನಷ್ಟಕ್ಕೆ 256 ರನ್‌ಗಳಿಸಿ ಬ್ಯಾಟಿಂಗ್‌ ಮುಂದುವರಿಸಿದೆ. ಇನ್ನು ಸೌತ್ ಆಫ್ರಿಕಾ ನೆಲದಲ್ಲಿ ಕನ್ನಡದ ಮಾತು ಕೇಳಿ ಕನ್ನಡಿಗರು ಖುಷಿಪಟ್ಟಿದ್ದಾರೆ. ಕೆ.ಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಮೈದಾನದಲ್ಲಿ ಕನ್ನಡದಲ್ಲೇ ಮಾತಾಡಿಕೊಂಡಿದ್ದು ಸ್ಪಷ್ಟವಾಗಿ ಕೇಳಿಬಂದಿದೆ.

ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೆ.ಎಲ್ ರಾಹುಲ್ ಶೈನಿಂಗ್ – ಸೌತ್ ಆಫ್ರಿಕಾದಲ್ಲಿ ಕನ್ನಡಿಗನ ಬೊಂಬಾಟ್ ಬ್ಯಾಟಿಂಗ್

ಟೀಮ್ ಇಂಡಿಯಾ ಕೆಎಲ್ ರಾಹುಲ್ (101) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 245 ರನ್ ಕಲೆಹಾಕಿದೆ. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡದ ಪರ ಆರಂಭಿಕ ಆಟಗಾರ ಡೀನ್ ಎಲ್ಗರ್ (140) ಅಜೇಯ ಶತಕ ಸಿಡಿಸಿದ್ದಾರೆ. ಇದರ ನಡುವೆ ಸೆಂಚುರಿಯನ್ ಮೈದಾನದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೆಂಚುರಿ ಸಿಡಿಸಿ ಮಿಂಚಿದ್ದ ಕೆಎಲ್ ರಾಹುಲ್ ಇದೀಗ ಕನ್ನಡಿಗರ ಮನ ಗೆದ್ದಿದ್ದಾರೆ. ಅದು ಕೂಡ ಕನ್ನಡದಲ್ಲೇ ಮಾತನಾಡುತ್ತಾ, ಕನ್ನಡದಲ್ಲೇ ತಾಕೀತು ಮಾಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಡೀನ್ ಎಲ್ಗರ್ ಉತ್ತಮ ಬ್ಯಾಟಿಂಗ್ ಮುಂದುವರೆಸಿದ್ದರು. ಇದರ ನಡುವೆ ಡೀನ್ ಎಲ್ಗರ್ ಬಾರಿಸಿದ ಚೆಂಡು ಲೆಗ್ ಸೈಡ್ ಬೌಂಡರಿಯತ್ತ ಸಾಗಿದೆ. ಈ ವೇಳೆ ಬೌಂಡರಿ ಲೈನ್‌ನಿಂದ ಓಡಿ ಬಂದು ಪ್ರಸಿದ್ಧ್ ಕೃಷ್ಣ ಚೆಂಡನ್ನು ವಿಕೆಟ್ ಕೀಪರ್‌ಗೆ ಎಸೆದಿದ್ದಾರೆ. ಆದರೆ ಚೆಂಡು ವಿಕೆಟ್ ಕೀಪರ್ ಕೆಎಲ್ ರಾಹುಲ್‌ಗೆ ನೇರವಾಗಿ ತಲುಪಿರಲಿಲ್ಲ. ಇದರಿಂದ ಕೊಂಚ ಕೋಪಗೊಂಡ ಕೆಎಲ್ ರಾಹುಲ್ ಚೆಂಡನ್ನು ನೇರವಾಗಿ ಕೈಗ್ ಹಾಕಲೋ ಎಂದು ಪ್ರಸಿದ್ಧ್ ಕೃಷ್ಣಗೆ ಕನ್ನಡದಲ್ಲೇ ತಾಕೀತು ಮಾಡಿದ್ದಾರೆ. ಈ ವಾರ್ನಿಂಗ್ ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಇಬ್ಬರು ಕನ್ನಡಿಗರ ನಡುವೆ ಸಂಭಾಷಣೆ ವಿಡಿಯೋ ವೈರಲ್ ಆಗಿದೆ. ಇನ್ನು ಕೆಎಲ್ ರಾಹುಲ್ ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಐಪಿಎಲ್‌ನಲ್ಲಿ ಕರ್ನಾಟಕದ ಆಟಗಾರರಿಗೆ ಕನ್ನಡದಲ್ಲೇ ಸೂಚನೆ ನೀಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಮನೀಷ್ ಪಾಂಡೆ, ರಾಬಿನ್ ಉತ್ತಪ್ಪ ಕೂಡ ಮೈದಾನದಲ್ಲಿ ಕನ್ನಡದಲ್ಲಿ ಮಾತನಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಆಟಗಾರದ ಆಟಗಾರನೊಂದಿಗೆ ಕೆಎಲ್ ರಾಹುಲ್ ಕನ್ನಡದಲ್ಲೇ ವ್ಯವಹರಿಸುತ್ತಿದ್ದಾರೆ. ಅದರ ಸಣ್ಣ ಝಲಕ್ ಅಷ್ಟೇ ಈಗ ವೈರಲ್ ಆಗಿದೆ.  ಅಂದಹಾಗೆ ಈ ಪಂದ್ಯದ ಮೂಲಕ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲೇ ಕೈಲ್ ವೆರ್ರೆನ್ನೆ (4) ಯನ್ನು ಔಟ್ ಮಾಡಿ ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಖಾತೆ ತೆರೆದಿದ್ದಾರೆ.

Sulekha