ಬಾಂಗ್ಲಾ ಸರಣಿಯಲ್ಲಿ KL ಮೈಲುಗಲ್ಲು – 8,000 ರನ್ ಗಡಿ ದಾಟಿದ ಕನ್ನಡಿಗ

ಬಾಂಗ್ಲಾ ಸರಣಿಯಲ್ಲಿ KL ಮೈಲುಗಲ್ಲು – 8,000 ರನ್ ಗಡಿ ದಾಟಿದ ಕನ್ನಡಿಗ

ಮೊದಲ ಟೆಸ್ಟ್ ಮ್ಯಾಚ್​ನಲ್ಲಿ ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರೋ ಖುಷಿಯಲ್ಲಿದೆ ಟೀಂ ಇಂಡಿಯಾ. ಈ ಪಂದ್ಯದಲ್ಲಿ ಆರ್. ಅಶ್ವಿನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ದಾಖಲೆಗಳನ್ನ ಬರೆದಿದ್ದಾರೆ. ಆದ್ರೆ ನಿಮ್ಗೊತ್ತಾ ಇದೇ ಮ್ಯಾಚ್​ನಲ್ಲಿ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಕೂಡ ಇತಿಹಾಸ ನಿರ್ಮಿಸಿದ್ದಾರೆ. ಅದ್ರಲ್ಲೂ ನಮ್ಮ ಕನ್ನಡಿಗರಿಗೆ ಪ್ರತಿಭೆ ಇದ್ರೂ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು ಕಡಿಮೆಯೇ. ಹೀಗೆ ಸಿಕ್ಕ ಅವಕಾಶವನ್ನೇ ಎರಡೂ ಕೈಗಳಿಂದ ಬಾಚಿಕೊಂಡಿರೋ ರಾಹುಲ್ ಇಡೀ ಕರುನಾಡೇ ಹೆಮ್ಮೆ ಪಡುವಂಥ ಸಾಧನೆ ಮಾಡಿದ್ದಾರೆ. ಏನದು ಸಾಧನೆ? ಕೆಎಲ್ ರಾಹುಲ್ ಯಾಕೆ ಎಲ್ರಿಗೂ ಇಷ್ಟ ಆಗ್ತಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಭೂಮಿ ಸುತ್ತ ನಿಗೂಢ ಸಿಗ್ನಲ್‌ – ವಿಜ್ಞಾನಿಗಳಿಂದ ಶಾಕಿಂಗ್‌ ವಿಚಾರ ರಿವೀಲ್‌!

ಪಾಕಿಸ್ತಾನವನ್ನ ಕ್ಲೀನ್ ಸ್ವೀಪ್ ಮಾಡಿದ್ದೇವೆ. ಸೋ ಭಾರತವನ್ನೂ ವೈಟ್ ವಾಶ್ ಮಾಡ್ತೀವಿ ಅಂತಾ ಬಾಂಗ್ಲಾದೇಶದ ಕ್ಯಾಪ್ಟನ್ ನಜ್ಮುಲ್ ಹಸನ್ ಶಾಂತೊ ಜಂಬದ ಮಾತುಗಳನ್ನಾಡಿದ್ರು. ಆದ್ರೆ ನಮ್ಮ ಬಲಿಷ್ಠ ಭಾರತವನ್ನ ಸೋಲಿಸೋದು ಇರಲಿ. ಅಲುಗಾಡಿಸೋದು ಕೂಡ ಕಷ್ಟ ಅನ್ನೋದು ಈಗ ಅರ್ಥ ಆಗಿರ್ಬೇಕು. ಬ್ಯಾಟಿಂಗ್, ಬೌಲಿಂಗ್​ನಲ್ಲೂ ಕೂಡ ಬೆಂಕಿ, ಬಿರುಗಾಳಿಯಂತೆ ಅಬ್ಬರಿಸಿದ ನಮ್ಮ ಟೀಂ ಇಂಡಿಯಾ ಸ್ಟಾರ್ಸ್ ಬಾಂಗ್ಲಾ ಬಾಯ್ಸ್​ಗೆ ಸರಿಯಾಗೇ ಬಿಸಿ ಮುಟ್ಟಿಸಿದ್ದಾರೆ. ಅಲ್ದೇ ಇದೇ ಪಂದ್ಯದಲ್ಲಿ ಭಾರತದ ಪರವಾಗಿ ಅನೇಕ ದಾಖಲೆಗಳೂ ಕೂಡ ನಿರ್ಮಾಣವಾಗಿವೆ. ಅದರಲ್ಲಿ ನಮ್ಮ ಹೆಮ್ಮೆಯ ಕನ್ನಡಿಗ ಕೆಎಲ್ ರಾಹುಲ್ ಕೂಡ ವಿಶೇಷ ಮೈಲುಗಲ್ಲೊಂದು ಸ್ಥಾಪಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಅಷ್ಟೇನು ಸದ್ದು ಮಾಡದ ರಾಹುಲ್​ಗೆ ಎರಡನೇ ಇನ್ನಿಂಗ್ಸ್​ನಲ್ಲೂ ಉತ್ತಮ ಸ್ಕೋರ್ ಮಾಡೋಕೆ ಅವಕಾಶ ಸಿಗಲಿಲ್ಲ. ಆದ್ರೆ ಗಳಿಸಿದ್ದು ಕಡಿಮೆ ರನ್ ಆದ್ರೂ ಟೀಂ ಇಂಡಿಯಾದಲ್ಲಿ ದಾಖಲೆ ಬರೆದಿದ್ದಾರೆ.

ಕನ್ನಡಿಗ ರಾಹುಲ್ ಇತಿಹಾಸ!

ಚೆಕಾಪ್​ನಲ್ಲಿ ನಡೆದ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 16 ರನ್ ಗಳಿಸಿದ್ದ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್​್ನಲ್ಲಿ ಅಜೇಯ 22 ರನ್ ಕಲೆ ಹಾಕಿದ್ರು. ಎರಡೂ ಇನ್ನಿಂಗ್ಸ್‌ಳಿಂದ 38 ರನ್​ ಕಲೆಹಾಕುವ ಮೂಲಕ ಕೆಎಲ್ ರಾಹುಲ್ 8,000 ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವಿಶೇಷ ದಾಖಲೆ ಬರೆದ 2ನೇ ಕನ್ನಡಿಗ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ 22 ರನ್‌ ಗಳಿಸುತ್ತಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನನಲ್ಲಿ ಬರೋಬ್ಬರಿ 8000 ರನ್ ಪೂರೈಸಿದ ಆಟಗಾರರ ಸಾಲಿಗೆ ಸೆರಿಕೊಂಡಿದ್ದಾರೆ. ಈ ಮೂಲಕ ಇಂಟರ್ ನ್ಯಾಷನಲ್ ಕ್ರಿಕೆಟ್‌ನನಲ್ಲಿ 8 ಸಾವಿರ ರನ್ ಕಲೆಹಾಕಿದ ಭಾರತದ 17ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಪರ 50 ಟೆಸ್ಟ್ ಪಂದ್ಯಗಳಲ್ಲಿ 86 ಇನಿಂಗ್ಸ್ ಆಡಿರುವ ಕನ್ನಡಿಗ ಕೆಎಲ್ ರಾಹುಲ್ 8 ಶತಕ ಹಾಗೂ 16 ಅರ್ಧಶತಕಗಳೊಂದಿಗೆ ಒಟ್ಟು 2863 ರನ್ ಕಲೆಹಾಕಿದ್ದಾರೆ. ಇನ್ನೂ 72 ಏಕದಿನ ಇನ್ನಿಂಗ್ಸ್‌ಗಳಿಂದ 7 ಶತಕ ಹಾಗೂ 18 ಅರ್ಧಶತಕಗಳೊಂದಿಗೆ 2851 ರನ್ ಬಾರಿಸಿದ್ದಾರೆ. ಹಾಗೇ ಭಾರತದ ಪರ 72 ಟಿ-20 ಪಂದ್ಯಗಳಲ್ಲಿ 68 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು ರಾಹುಲ್, 2 ಶತಕ ಹಾಗೂ 22 ಅರ್ಧಶತಕಗಳೊಂದಿಗೆ ಒಟ್ಟು 2,265 ರನ್ ಕಲೆಹಾಕಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನನಲ್ಲಿ ಒಟ್ಟು 8000 ರನ್ ಕಲೆಹಾಕಿದ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 2014ರ ಡಿಸೆಂಬರ್ 26ರಂದು ಮೇಲ್ಬರ್ನ್​ನಲ್ಲಿ ನಡೆದಿದ್ದ ಟೆಸ್ಟ್ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಡೆಬ್ಯೂ ಮ್ಯಾಚ್ ಆಡಿದ್ದ ರಾಹುಲ್ ಇದೀಗ ಬಾಂಗ್ಲಾ ವಿರುದ್ಧದ ಟೆಸ್ಟ್ ಮ್ಯಾಚ್​ನಲ್ಲೂ ಸ್ಥಾನ ಪಡ್ಕೊಂಡಿದ್ದಾರೆ.  2016ರ ಜೂನ್ 11ರಂದು ಜಿಂಬಾಬ್ವೆ ವಿರುದ್ದ ಹರಾರೆಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಪಂದ್ಯದಲ್ಲಿ ಏಕದಿನ ಮಾದರಿಯ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ್ರು. ಕಳೆದ ಆಗಸ್ಟ್ 4ರಂದು ಶ್ರೀಲಂಕಾದ ಆರ್ ಪ್ರೇಮದಾಸ ಸ್ಟೇಡಿಯಮ್​ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯ ಏಕದಿನ ಮಾದರಿಯಲ್ಲಿ ಅವ್ರು ಕೊನೆಯದಾಗಿ ಆಡಿದ ಪಂದ್ಯ. ಹಾಗೇ 2016ರ ಜೂನ್ 18ರಂದು ಜಿಂಬಾಬ್ವೆ ವಿರುದ್ಧ ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಟಿ-20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಡೆಬ್ಯೂ ಮಾಡಿದ್ರು. ಬಟ್ 2022ರ ನವೆಂಬರ್ 10ರಲ್ಲಿ ಇಂಗ್ಲೆಂಡ್ ವಿರುದ್ಧ ಅಡಿಲೇಡ್​ ಓವಲ್​ನಲ್ಲಿ ನಡೆದ ಪಂದ್ಯವೇ ಅವ್ರ ಕೊನೇ ಟಿ-20ಐ ಮ್ಯಾಚ್. ಅದಾದ್ಮೇಲೆ ಭಾರತದ ಪರ ಯಾವುದೇ ಟಿ-20 ಪಂದ್ಯದಲ್ಲಿ ಅವಕಾಶ ಸಿಕ್ಕಿಲ್ಲ.

ಸದ್ಯ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಅವಕಾಶ ಪಡೆದಿದ್ದ ಕೆಎಲ್ ರಾಹುಲ್ ಎರಡನೇ ಪಂದ್ಯಕ್ಕೂ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹೀಗಾಗಿ ಕಾನ್ಪುರದಲ್ಲಿ ನಡೆಯಲಿರುವ ಈ ಮ್ಯಾಚ್​​ನಲ್ಲಿ ಕೆಎಲ್ ಬ್ಯಾಟ್ ಸದ್ದು ಮಾಡಲಿ ಅಂತಾ ಕನ್ನಡಿಗರು ಕೂಡ ಕಾಯ್ತಿದ್ದಾರೆ. ಸ್ಯಾಮುಯೆಲ್ ಜಯರಾಜ್ ಅವರ ಗರಡಿಯಲ್ಲಿ ಪಳಗಿರೋ ರಾಹುಲ್ ಸಾಮಾನ್ಯ ಆಟಗಾರನೇನೂ ಅಲ್ಲ. ರಾಹುಲ್​ ದ್ರಾವಿಡ್​​ರಂತೆ ಕ್ರೀಸ್ ಕಚ್ಚಿ ನಿಂತು ರನ್ ಮಳೆ ಹರಿಸೋ ತಾಕತ್ತು ರಾಹುಲ್​ಗಿದೆ. ಬಾಂಗ್ಲಾ ವಿರುದ್ಧ ರಾಹುಲ್​ರ ಸಾಮರ್ಥ್ಯ ಪ್ರೂವ್ ಆಗಲಿ ಅನ್ನೋದೇ ಕನ್ನಡಿಗರ ಆಶಯ.

Shwetha M