ಕೂಲ್ KL ಆಟಕ್ಕೆ NZ ಶೇಕ್ – ರಾಜ್ ಕೋಟ್ ನಲ್ಲಿ ಶತಕದ ದರ್ಬಾರ್
ಅಸಲಿ ಆಪತ್ಬಾಂಧವ ಆಟ!

ಕೂಲ್ KL ಆಟಕ್ಕೆ NZ ಶೇಕ್ – ರಾಜ್ ಕೋಟ್ ನಲ್ಲಿ ಶತಕದ ದರ್ಬಾರ್ಅಸಲಿ ಆಪತ್ಬಾಂಧವ ಆಟ!

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲೇ ಗೆದ್ದು ಸರಣಿ ಕೈವಶ ಮಾಡಿಕೊಳ್ಳೋ ಟಾರ್ಗೆಟ್​ನಲ್ಲಿದ್ದ ಭಾರತಕ್ಕೆ ಕಿವೀಸ್ ಬೌಲರ್ಸ್ ಶಾಕ್ ಕೊಟ್ಟಿದ್ದಾರೆ. ರಾಜ್​ಕೋಟ್​ನ ನಿರಂಜನ್​ ಶಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ನಿರೀಕ್ಷಿತ ರನ್ಸ್ ಬರ್ಲಿಲ್ಲ. ಬಟ್ ಒನ್ಸ್ ಅಗೇನ್ ಭಾರತಕ್ಕೆ ಕೆಎಲ್ ರಾಹುಲ್ ಆಸರೆಯಾದ್ರು.

ಇದನ್ನೂ ಓದಿ : ಹರ್ಮನ್‌ಪ್ರೀತ್‌ ಕೌರ್‌  ಅರ್ಧಶತಕ ಬಲ – ಗುಜರಾತ್ ವಿರುದ್ಧ ಗೆದ್ದ ಮುಂಬೈ

ರಾಜ್​ಕೋಟ್ ಸ್ಟೇಡಿಯಂ ಹೇಳಿಕೇಳಿ ಬ್ಯಾಟಿಂಗ್ ಫ್ರೆಂಡ್ಲಿ ಪಿಚ್.. ಬ್ಯಾಟರ್​ಗಳ ಪ್ಯಾರಡೈಸ್ ಅಂತಾಣೇ ಕರೀತಾರೆ. ಸೋ ಇಲ್ಲಿ ಯಾರೇ ಫಸ್ಟ್ ಬ್ಯಾಟಿಂಗ್ ಮಾಡಿದ್ರೂ ಬಿಗ್ ಸ್ಕೋರ್ ಗ್ಯಾರಂಟಿ ಅನ್ನೋದೇ ಎಲ್ಲರ ಲೆಕ್ಕಾಚಾರ ಆಗಿತ್ತು. ಹಿಂದಿನ ಪಂದ್ಯಗಳ ನಂಬರ್ಸ್ ಕೂಡ ಹಾಗೇ ಇತ್ತು. ಇನ್ನು ಎರಡನೇ ಪಂದ್ಯಕ್ಕೆ ಟೀಂ ಇಂಡಿಯಾ ಪ್ಳೇಯಿಂಗ್ 11ನಲ್ಲಿ ಒಂದು ಬದಲಾವಣೆ ಮಾಡಲಾಗಿದೆ.  ವಾಷಿಂಗ್ಟನ್ ಸುಂದರ್ ಗಾಯದ ಕಾರಣಕ್ಕೆ ತಂಡದಿಂದ ಹೊರಬಿದ್ದಿದ್ದು ಅವರ ಬದಲಿಗೆ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಲಾಗಿತ್ತು. ಉಳಿದಂತೆ ಕಳೆದ ಪಂದ್ಯದ ಆಟಗಾರರೇ ಇಲ್ಲೂ ಕಂಟಿನ್ಯೂ ಆಗಿದ್ರು. ಆದ್ರೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಇಳಿದ ಭಾರತಕ್ಕೆ ಅಂದುಕೊಂಡಂತ ಸ್ಟಾರ್ಟ್ ಸಿಗ್ಲಿಲ್ಲ. ಟಾಪ್ ಆರ್ಡರ್ ಬ್ಯಾಟಿಂಗ್​ನಲ್ಲಿ ಕಂಪ್ಲೀಟ್ ಸ್ಟ್ರಗಲ್ ಕಾಣ್ತಿತ್ತು. ಮಿಡಲ್ ಓವರ್​ಗಳಲ್ಲಿ ಬ್ಯಾಟರ್​ಗಳಿಗೆ ವಿಕೆಟ್ ಉಳಿಸಿಕೊಳ್ಳೋದೇ ಟಾಸ್ಕ್ ಆಯ್ತು. ಹೀಗಿದ್ರೂ ಕ್ರಿಟಿಕಲ್ ಕಂಡೀಷನ್​ನಲ್ಲಿದ್ದ ಭಾರತಕ್ಕೆ ಆಕ್ಸಿಜನ್ ಆಗಿದ್ದು ಕೆಎಲ್ ರಾಹುಲ್.

ಟಾಸ್ ಸೋತ ಭಾರತಕ್ಕೆ ಕೈಕೊಟ್ಟ ಟಾಪ್ ಆರ್ಡರ್ ಬ್ಯಾಟರ್ಸ್!

ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭ ಮಾಡ್ತಾರೆ. ಆರಂಭದಲ್ಲಿ ಬಾಲ್ ತುಂಬಾನೇ ಸ್ವಿಂಗ್ ಆಗ್ತಿತ್ತು. ಹೀಗಾಗಿ ಗಿಲ್ ಮತ್ತು ರೋಹಿತ್ ವೇಯ್ಟಿಂಗ್ ಗೇಮ್ ಆಡ್ತಿದ್ರು. ಅದೆಷ್ಟರ ಮಟ್ಟಿಗೆ ಅಂದ್ರೆ 10 ಬಾಲ್ ಫೇಸ್ ಮಾಡಿದ್ರೂ ರೋಹಿತ್ ಖಾತೆಯನ್ನೇ ತೆರೆದಿರಲಿಲ್ಲ. ಌಂಡ್ 4 ಓವರ್​ಗಳು ಕಳೆದ್ರೂ 6 ರನ್ಸ್ ಅಷ್ಟೇ ಬಂದಿತ್ತು. ಬಟ್ 7ನೇ ಒವರ್ ನಲ್ಲಿ ಇದೇ ಓವರ್​ನಲ್ಲಿ 13 ರನ್ಸ್ ಬಂತು. ಸ್ವಲ್ಪ ಮಟ್ಟಿಗೆ ಮೊಮೆಂಟಮ್ ಶಿಫ್ಟ್ ಆಗಿತ್ತು.. ಆನಂತ್ರ ರೋಹಿತ್ ಮತ್ತು ಗಿಲ್ ಫಿಯರ್​ಲೆಸ್ ಆಗಿ ಆಡೋಕೆ ಶುರು ಮಾಡ್ತಾರೆ. 10 ಓವರ್ ಮುಗ್ಯೋ ಅಷ್ಟ್ರಲ್ಲಿ 57 ರನ್ಸ್ ಕೂಡ ಬಂತು. ಇನ್ನೇನು ಓಪನರ್ಸ್ ಕಡೆಯಿಂದ ಬಿಗ್ ಹಿಟ್ಸ್ ಬರ್ತಿದೆ ಅನ್ನುವಷ್ಟ್ರಲ್ಲೇ ರೋಹಿತ್ ಶರ್ಮಾ ವಿಕೆಟ್ ಬೀಳುತ್ತೆ. ತಂಡದ ಸ್ಕೋರ್ 70 ಇದ್ದಾಗ ಹಿಟ್​ಮ್ಯಾನ್ ವಿಕೆಟ್ ಒಪ್ಪಿಸ್ತಾರೆ. ಇನ್ನು ನಂಬರ್ 3ನಲ್ಲಿ ಬಂದ ವಿರಾಟ್ ಕೊಹ್ಲಿ ಫಸ್ಟ್ ಬಾಲ್​ನಲ್ಲೇ ಫೋರ್ ಬಾರಿಸಿ ತುಂಬಾನೇ ಕಾನ್ಫಿಡೆಂಟಾಗಿ ಕಾಣ್ತಿದ್ರು. ಕೊಹ್ಲಿ ಮತ್ತು ಗಿಲ್ ಜೊತೆಯಾದ ಸ್ಟ್ರಾಂಗ್ ಆಗ್ತಿದೆ ಅನ್ನುವಾಗ್ಲೇ ಗಿಲ್ ವಿಕೆಟ್ ಒಪ್ಪಿಸ್ತಾರೆ. 53 ಬಾಲಲ್ಲಿ 56 ರನ್ ಸಿಡಿಸಿ ಸೆಟಲ್ ಆಗಿದ್ದ ಗಿಲ್ ಔಟ್ ಆಗ್ತಿದ್ದಂತೆ ಕೊಹ್ಲಿ ಕೂಡ ಹೆಚ್ಚು ಹೊತ್ತು ಸರ್ವೈವ್ ಆಗ್ಲಿಲ್ಲ. 29 ಬಾಲಲ್ಲಿ 23 ರನ್ ಗಳಿಸಿ ಪೆವಿಲಿಯನ್ ಸೇರ್ಕೊಳ್ತಾರೆ. ಇವತ್ತಿನ ಮ್ಯಾಚಲ್ಲಿ ಶಾಕಿಂಗ್ ಏನಂದ್ರೆ ಆಫ್ಟರ್ ಎ ಲಾಂಗ್ ಟೈಂ ನಂಬರ್ 5ನಲ್ಲಿ ಕೆಎಲ್ ರಾಹುಲ್​ನ ಬ್ಯಾಟಿಂಗ್​ಗೆ ಕಳಿಸ್ತಾರೆ. ರಾಹುಲ್ ಮತ್ತು ಜಡೇಜಾ ಇಬ್ಬರು ತುಂಬಾ ಕ್ರೂಶಿಯಲ್ ಇನ್ನಿಂಗ್ಸ್ ಆಡಿದ್ರು. ಇಬ್ಬರ ಪಾಟ್ನರ್​ಶಿಪ್​ನಲ್ಲಿ 70ಪ್ಲಸ್ ರನ್ಸ್ ಬಂತು. ಆದ್ರೆ ಕಿವೀಸ್ ನಾಯಕ ಮೈಕೆಲ್ ಬ್ರೇಸ್​ವೆಲ್ ಈ ಇಬ್ಬರ ಪಾಟ್ನರ್​ಶಿಪ್​ನ ಬ್ರೇಕ್ ಮಾಡಿದ್ರು. 44 ಬಾಲಲ್ಲಿ 27 ರನ್ಸ್ ಗಳಿಸಿದ್ದ ಜಡ್ಡು ಕಾಟನ್ ಬೌಲ್ಡ್ ಆದ್ರು. ಹೀಗಿ ವಿಕೆಟ್​ಗಳು ಉರುಳ್ತಿದ್ರೂ  ಮತ್ತೊಂದು ತುದಿಯಲ್ಲಿ ಕೂಲ್ ಌಂಡ್ ಕಾಮ್ ಆಗಿಯೇ ಬ್ಯಾಟ್ ಬೀಸಿದ ರಾಹುಲ್ ಈ ಮ್ಯಾಚಲ್ಲಿ ಮತ್ತೊಮ್ಮೆ ಹೀರೋ ಆದ್ರು.

ನಂಬರ್ 5ನಲ್ಲಿ ಕ್ರೂಶಿಯಲ್ ಇನ್ನಿಂಗ್ಸ್ ಆಡಿದ ರಾಹುಲ್!

118 ರನ್​ಗಳಿಗೆ ಟಾಪ್ ಆರ್ಡರ್​ನ ಪ್ರಮುಖ ನಾಲ್ಕು ವಿಕೆಟ್ ಕಳ್ಕೊಂಡಿದ್ದ ಭಾರತಕ್ಕೆ ಭರವಸೆಯಾಗಿ ನಿಂತಿದ್ದೇ ಕೆಎಲ್ ರಾಹುಲ್. 52 ಬಾಲಲ್ಲಿ ಅರ್ಧಶತಕ ಕೂಡ ಬಾರಿಸಿದ ರಾಹುಲ್ ಆ ನಂತ್ರ ಸ್ಪೀಡ್ ಜಾಸ್ತಿ ಮಾಡಿದ್ರು. ಕ್ರೀಸ್ ಕಚ್ಚಿ ನಿಂತು ಇನ್ನಿಂಗ್ಸ್ ಆಡಿದ್ರು. 87 ಬಾಲ್​ಗಳಲ್ಲಿ ಶತಕ ಬಾರಿಸಿದ್ರು. ಌಂಡ್ ಸಿಕ್ಸ್ ಮೂಲಕವೇ ಸೆಂಚುರಿ ಕಂಪ್ಲೀಟ್ ಮಾಡಿದ್ದು ವಿಶೇಷವಾಗಿತ್ತು. ಅಂತಿಮವಾಗಿ 92 ಬಾಲ್​ಗಳಲ್ಲಿ 11 ಫೋರ್, 1 ಸಿಕ್ಸರ್ ಸಮೇತ 112 ರನ್ ಸಿಡಿಸಿ ಅಜೇಯರಾಗಿ ಉಳಿದ್ರು. ಈ ಮೂಲಕ ಭಾರತ 50 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 284 ರನ್​ಗಳನ್ನ ಕಲೆ ಹಾಕಿತು. ಟಾಸ್ ಸೋತ ಭಾರತಕ್ಕೆ ಬ್ಯಾಟಿಂಗ್​ನಲ್ಲಿ ಓಪನಿಂಗ್​ ಬ್ಯಾಟರ್​ಗಳಿಂದ ಅಂದುಕೊಂಡಂತ ರಿಸಲ್ಟ್ ಸಿಕ್ಕಿಲ್ಲ. ಬಟ್ ಮಿಡಲ್ ಆರ್ಡರ್​ನಲ್ಲಿ ರಾಹುಲ್ ಆಪತ್ಬಾಂಧವನಾದ್ರು. ಈ ಮೂಲಕ ಟೀಂ ಇಂಡಿಯಾ ಏಕದಿನ ಮಾದರಿಯಲ್ಲಿ ತಾನೆಂಥ ಕ್ವಾಲಿಟಿ ಪ್ಲೇಯರ್ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ರು.

Shantha Kumari