ಕುಟುಂಬಕ್ಕಿಂತ ದೇಶವೇ ಮುಖ್ಯ ಎಂದ ಕೆಎಲ್ ರಾಹುಲ್ – ಕನ್ನಡಿಗನ ಕ್ರಿಕೆಟ್ ಪ್ರೀತಿಗೆ ಶಹಬ್ಬಾಸ್

ಕುಟುಂಬಕ್ಕಿಂತ ದೇಶವೇ ಮುಖ್ಯ ಎಂದ ಕೆಎಲ್ ರಾಹುಲ್ – ಕನ್ನಡಿಗನ ಕ್ರಿಕೆಟ್ ಪ್ರೀತಿಗೆ ಶಹಬ್ಬಾಸ್

ಸರಣಿಯಿಂದ ಕೈ ಬಿಡ್ಲಿ.. ಯಾವ್ದೇ ಸ್ಲಾಟ್​ನಲ್ಲಿ ಕಣಕ್ಕಿಳಿಸ್ಲಿ. ಟೀಂ ಇಂಡಿಯಾದಲ್ಲಿ ಎಕ್ಸ್​ಪೆರಿಮೆಂಟ್​ ಥರ ಬಳುಸ್ಕೊಂಡ್ರೂ ಒಂದು ದಿನಕ್ಕೂ ತಗಾದೆ ತೆಗ್ದಿದ್ದೇ ಇಲ್ಲ. ನಾನು ಎಲ್ಲದಕ್ಕೂ ಫ್ಲೆಕ್ಸಿಬಲ್ ಆಗಿ ಆಟದಲ್ಲೇ ಉತ್ತರ ಕೊಡ್ತೇನೆ ಅಂತಾ ಆಡ್ತಿರೋರು ಕೆಎಲ್ ರಾಹುಲ್. ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೂ ತಮ್ಮ ಸಾಮರ್ಥ್ಯ ಏನು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಟೀಂ ಇಂಡಿಯಾಗಾಗಿ ಅದೇ ರಾಹುಲ್ ಬಹುದೊಡ್ಡ ತ್ಯಾಗವನ್ನೇ ಮಾಡಿದ್ದಾರೆ.

ಇದನ್ನೂ ಓದಿ : ENG ಬೇಟೆಗೆ ಶತಕವೀರ ನಿತೀಶ್? – ಗೇಮ್ ಚೇಂಜರ್ ಆಗ್ತಾರಾ ಕುಲ್ದೀಪ್?

ಲೀಡ್ಸ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಓಪನರ್​ ಆಗಿ ಬ್ಯಾಟ್​ ಮಾಡಿದ ರಾಹುಲ್​ ಮೊದಲ ಇನ್ನಿಂಗ್ಸ್​ನಲ್ಲಿ 42ರನ್​ ಬಾರಿಸಿದರೇ ಎರಡನೇ ಇನ್ನಿಂಗ್ಸ್​ನಲ್ಲಿ 137 ರನ್​ ಕಲೆಹಾಕಿ ತಂಡದ ಸ್ಕೋರ್​ಗೆ ಮಹತ್ವದ ಕೊಡುಗೆ ನೀಡಿದರು. ತಮ್ಮ ಈ ಅದ್ಬುತ ಪ್ರದರ್ಶನದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ಎರಡನೇ ಪಂದ್ಯಕ್ಕೂ ರಾಹುಲ್​ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಇದರ ನಡುವೆಯೇ ಐಪಿಎಲ್ ಫ್ರಾಂಚೈಸಿಗಳಲ್ಲಿ ಒಂದಾದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಹೇಮಾಂಗ್ ಬದಾನಿ  ರಾಹುಲ್ ಅವರನ್ನು ಕೊಂಡಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಬದಾನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಕೆಎಲ್ ರಾಹುಲ್ ಈಗ ಭಾರತೀಯ ತಂಡದ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಮಾರ್ಚ್‌ನಲ್ಲಿ, ಅವರ ಪತ್ನಿ ಅತಿಯಾಶೆಟ್ಟಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ಹೀಗಾಗಿ ರಾಹುಲ್ ಮೊದಲ ಪಂದ್ಯ ಮಿಸ್ ಮಾಡಿಕೊಂಡಿದ್ರು. ಆ ಬಳಿಕ ಮೇ ಎಂಡ್​ವರೆಗೂ ಐಪಿಎಲ್​ನಲ್ಲೇ ಬ್ಯುಸಿಯಾಗಿದ್ರು. ಅದಾದ ಬಳಿಕವೂ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕಿಂತ ಟೀಮ್ ಇಂಡಿಯಾ ಪರ ಆಡುವುದಕ್ಕೆ ಆದ್ಯತೆ ನೀಡಿದ್ದಾರೆ. ಅದ್ರಲ್ಲೂ ಅಭ್ಯಾಸ ಪಂದ್ಯಗಳನ್ನು ಆಡಿ ತಮಗೆ ಕುಟುಂಬಕ್ಕಿಂತ ದೇಶವೇ ಮುಖ್ಯ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಬಿಸಿಸಿಐ ಆಯ್ಕೆ ಮಾಡದೆಯೂ ಸ್ವಯಂಪ್ರೇರಿತರಾಗಿ ಭಾಗವಹಿಸಿದರು. ನಾನು ಭಾರತ ತಂಡಕ್ಕಿಂತ ಸ್ವಲ್ಪ ಮುಂಚಿತವಾಗಿ ಇಂಗ್ಲೆಂಡ್‌ಗೆ ಹೋಗಲು ಬಯಸುತ್ತೇನೆ. ಮುಖ್ಯ ಟೆಸ್ಟ್ ಸರಣಿಗೂ ಮುನ್ನ ನಾನು ಅಭ್ಯಾಸ ಪಂದ್ಯಗಳನ್ನು ಆಡಬೇಕು. ಈ ವೇಳೆ ಬದಾನಿ ಅವ್ರು ಮಗು ಆಗಿದೆ ಅಲ್ವ ಎಂದು ಪ್ರಶ್ನಿಸಿದಾಗ ನನ್ನ ವೈಯಕ್ತಿಕ ಜೀವನಕ್ಕಿಂತ ದೇಶ ನನಗೆ ಮುಖ್ಯ ಎಂದು ರಾಹುಲ್ ಹೇಳಿದ್ದು ಅವರು ಮಾಡಿದ ಈ ತ್ಯಾಗ ನಿಜಕ್ಕೂ ಅದ್ಭುತ. ಅದರಂತೆ ರಾಹುಲ್ ಹಿರಿಯ ಬ್ಯಾಟ್ಸ್‌ಮನ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಹೇಮಾಂಗ್ ಬದಾನಿ ರಾಹುಲ್​ರನ್ನ ಕೊಂಡಾಡಿದ್ದಾರೆ.

ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ, ಅವರು ಮೊದಲ ಇನ್ನಿಂಗ್ಸ್‌ನಲ್ಲಿ 116 ರನ್‌ಗಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 51 ರನ್‌ಗಳನ್ನು ಗಳಿಸಿದರು. ಲೀಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 42 ರನ್‌ಗಳು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 137 ರನ್‌ಗಳನ್ನು ಕಲೆಹಾಕಿದ್ದಾರೆ.

Shantha Kumari