ಅಂದು ದ್ರಾವಿಡ್.. ಇಂದು ರಾಹುಲ್ – ಅನುಭವ + ತಾಳ್ಮೆ = ಶತಕ
TEST ತಂಡಕ್ಕೆ KL ಎಷ್ಟು ಮುಖ್ಯ?

ಅಂದು ದ್ರಾವಿಡ್.. ಇಂದು ರಾಹುಲ್ – ಅನುಭವ + ತಾಳ್ಮೆ = ಶತಕTEST ತಂಡಕ್ಕೆ KL ಎಷ್ಟು ಮುಖ್ಯ?

ಮ್ಯಾಚ್ ಸೋತಾಗ ಬ್ಲೇಮ್ ಮಾಡಿದ್ರು. ಎಷ್ಟೋ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ರು. ಸ್ಲಾಟ್ ವೇರಿಯೇಷನ್ಸ್ ಮಾಡಿ ಪ್ರಯೋಗ ಮಾಡಿದ್ರು. ಆದ್ರೂ ಅದೆಲ್ಲವನ್ನೂ  ವಿಷಕಂಠನಂತೆ ನುಂಗಿ ಸಹಿಸಿಕೊಂಡಿದ್ದ ಕೆಎಲ್ ರಾಹುಲ್ ಈಗ ತಾನೇಕೆ ತಂಡಕ್ಕೆ ಮುಖ್ಯ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಮ್ಯಾಚ್​ನ ಫಸ್ಟ್ ಇನ್ನಿಂಗ್ಸ್​ನಲ್ಲಿ ಸೆಂಚುರಿ ಸಿಡಿಸಿದ್ದಾರೆ. ಆರಂಭದಿಂದಲೂ ತಾಳ್ಮೆಯಿಂದಲೇ ಬ್ಯಾಟ್ ಬಿಸಿದ ರಾಹುಲ್ ಹೊಸ ಮೈಲುಗಲ್ಲು ಸೃಷ್ಟಿಸಿದ್ದಾರೆ. ಥೇಟ್ ರಾಹುಲ್ ದ್ರಾವಿಡ್ ರಂತೆಯೇ ಕೆಎಲ್ ರಾಹುಲ್ ಕೂಡ ಭಾರತ ತಂಡಕ್ಕೆ ಮಹಾಗೋಡೆಯಾಗಿ ನಿಂತಿದ್ದಾರೆ.

ಇದನ್ನೂ ಓದಿ : ಇಂಡೋ-ಪಾಕ್ ಮತ್ತೊಂದು WAR – ಮಹಿಳಾ WCನಲ್ಲೂ ನೋ ಶೇಕ್ ಹ್ಯಾಂಡ್

ಕೆಎಲ್ ರಾಹುಲ್ ಅಂದ್ರೇನೇ ಹಾಗೆ. ಕೂಲ್ ಌಂಡ್ ಕ್ಲಾಸಿಕ್ ಪ್ಲೇಯರ್. ಟ್ರಿಗರ್ ಮಾಡಲ್ಲ, ಅಗ್ರೆಶನ್ ತೋರ್ಸಲ್ಲ. ತುಂಬಾನೇ ಪೇಷನ್ಸ್. ಅದೇ ತಾಳ್ಮೆ ಮತ್ತು ಅನುಭವ ಬಿಗ್ ಸ್ಕೋರ್ ಆಗಿ ಕನ್ವರ್ಟ್ ಆಗ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಸೆಂಚುರಿ ರಾಹುಲ್ ಪಾಲಿಗೆ ತುಂಬಾನೇ ಸ್ಪೆಷಲ್. ಬರೋಬ್ಬರಿ 9 ವರ್ಷಗಳ ಬಳಿಕ ತವರಿನಲ್ಲಿ ಮೂರಂಕಿ ಗಡಿ ದಾಟಿದ್ದಾರೆ. ವಿಂಡೀಸ್ ಟೀಮ್ ಏನ್ ಸ್ಟ್ರಾಂಗೆಸ್ಟ್ ಟೀಂ ಅಲ್ಲ. ಸೋ ಶತಕ ಸಿಡಿಸೋದು ದೊಡ್ಡ ಮ್ರಾಟ್ರಲ್ಲ ಅಂತಾ ಕೆಲವ್ರು ಹೇಳ್ಬೋದು. ಬಟ್ ಜೈಸ್ವಾಲ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬರದೇ ಇದ್ದಾಗ, ಸಾಯಿ ಸುದರ್ಶನ್ ಮತ್ತೆ ಫೇಲ್ಯೂರ್ ಆದಾಗ, ಗಿಲ್ ಔಟ್ ಆದಾಗ ರಾಹುಲ್ ನೆಲಕಚ್ಚಿ ಆಡಲೇಬೇಕಿತ್ತು. ಯಾಕಂದ್ರೆ ಇದು ಡಬ್ಲ್ಯೂಟಿಸಿ ಸರ್ಕಲ್​ನಲ್ಲಿ ನಡೀತಿರೋ ಮ್ಯಾಚ್. ಇಲ್ಲಿ ಒಂದೊಂದು ಪಂದ್ಯ ಕೂಡ ಇಂಪಾರ್ಟೆಂಟ್ ಆಗುತ್ತೆ. ಅದೂ ಅಲ್ದೇ ರಾಹುಲ್ ಕಡೆಯಿಂದ ತವರಿನಲ್ಲಿ ಇಂಥಾದ್ದೊಂದು ಇನ್ನಿಂಗ್ಸ್ ಬರಲೇಬೇಕಿತ್ತು.

2016ರ ಬಳಿಕ ತವರಿನಲ್ಲಿ ಶತಕ ಸಿಡಿಸಿದ ರಾಹುಲ್!

ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್​ನಲ್ಲಿ ಸದ್ಯ ನಂಬಿಕಸ್ತ ಪ್ಲೇಯರ್ ಆಗಿದ್ರೂ ಕೂಡ ತವರಿನಲ್ಲೂ ಅದನ್ನ ಪ್ರೂವ್ ಮಾಡ್ಬೇಕಿತ್ತು. ಯಾಕಂದ್ರೆ 2016 ರ ಬಳಿಕ ತವರಿನಲ್ಲಿ ರಾಹುಲ್ ಸಿಡಿಸಿದ 2ನೇ ಶತಕ ಇದು. 2016ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 199 ರನ್​ಗಳಿಸಿದ್ದು, ಅವರ ಮೊದಲ ಹಾಗೂ ಕೊನೆಯ ತವರಿನ ಶತಕವಾಗಿತ್ತು. ಇದೀಗ ತಮ್ಮ ವೃತ್ತಿ ಜೀವನದ 11ನೇ ಶತಕ ಕಂಪ್ಲೀಟ್ ಮಾಡಿದ್ದಾರೆ. ಬಟ್ ರಾಹುಲ್ ತವರಿಗಿಂತ ಜಾಸ್ತಿ ವಿದೇಶಿ ನೆಲಗಳಲ್ಲಿ ಅತ್ಯದ್ಭುತ ರೆಕಾರ್ಡ್ಸ್ ಹೊಂದಿದ್ದಾರೆ. ಇಂಗ್ಲೆಂಡ್​ನಲ್ಲಿ 4 ಶತಕ, ದಕ್ಷಿಣ ಆಫ್ರಿಕಾದಲ್ಲಿ 2 ಹಾಗೂ ಆಸ್ಟ್ರೇಲಿಯಾದಲ್ಲಿ 1 ಶತಕ, ವೆಸ್ಟ್ ಇಂಡೀಸ್​ನಲ್ಲಿ 1, ಶ್ರೀಲಂಕಾದಲ್ಲಿ 1 ಶತಕ ಸಿಡಿಸಿದ್ದರು. ಇದೀಗ ಭಾರತದಲ್ಲಿ ತಮ್ಮ 2ನೇ ಶತಕ ದಾಖಲಿಸಿದ್ದಾರೆ. ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ ಜೊತೆ ಓಪನರ್ ಆಗಿ ಕಣಕ್ಕಿಳಿದ ಕೆಎಲ್ ನಾಲ್ವರ ಜೊತೆಯಾಟದಲ್ಲಿ ಶತಕ ಬಾರಿಸಿದ್ದಾರೆ. ಮೊದಲ ವಿಕೆಟ್​ಗೆ ಜೈಸ್ವಾಲ್ ಜೊತೆಗೆ 68, ಸಾಯಿ ಸುದರ್ಶನ್ ಜೊತೆಗೆ 22, ಗಿಲ್ ಜೊತೆಗೆ 98 ರನ್ ಹಾಗೂ ಜುರೆಲ್ ಜೊತೆಗೆ 25 ರನ್ ಪಾರ್ಟ್ನರ್ ಶಿಪ್ ಜೊತೆ ಸೆಂಚುರಿ ಕಂಪ್ಲೀಟ್ ಮಾಡಿದ್ರು. 190 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 100 ರನ್​ ಪೂರೈಸಿದ್ರು. ಹೀಗೆ ಫಸ್ಟ್ ಸೆಷನ್​ನಲ್ಲಿ ಚೆನ್ನಾಗಿ ಆಡಿದ್ದ ರಾಹುಲ್ ಲಂಚ್ ಬ್ರೇಕ್ ಬಳಿಕ ಬಂದ ಮೇಲೆ ಫಸ್ಟ್ ಓವರ್​ನಲ್ಲೇ ವಿಕೆಟ್ ಒಪ್ಪಿಸಿದ್ರು.

ಟೀಂ ಇಂಡಿಯಾದಲ್ಲಿ ಅಂದು ದ್ರಾವಿಡ್.. ಇಂದು ರಾಹುಲ್ ಪರ್ವ!

ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲೋಕೆ ಬೇಕಿರೋ ಬ್ರಹ್ಮಾಸ್ತ್ರವೇ ಪೇಷನ್ಸ್. ಗಂಟೆಗಟ್ಟಲೆ ಕ್ರೀಸ್​ನಲ್ಲಿ ನಿಂತು ಎದುರಾಳಿ ಬೌಲರ್​ಗಳ ನೀರಿಳಿಸಿದ್ರೆ ಮಾತ್ರವೇ ಬಿಗ್ ಸ್ಕೋರ್ ಬರೋದು. ಈ ಕೆಲಸವನ್ನ ಹಿಂದೆಲ್ಲಾ ರಾಹುಲ್ ದ್ರಾವಿಡ್ ಸಮರ್ಥವಾಗಿ ನಿಭಾಯಿಸ್ತಿದ್ರು. ಈಗ ಆ ಕೆಲಸವನ್ನ ಕೆಎಲ್ ರಾಹುಲ್ ಅಚ್ಚುಕಟ್ಟಾಗಿ ಮಾಡ್ತಿದ್ದಾರೆ. ತಂಡದ ಅಗತ್ಯಕ್ಕೆ ತಕ್ಕಂತೆ ಪರ್ಫಾಮ್ ಮಾಡ್ತಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ರೆಡ್ ಬಾಲ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ಮೆಲೆ ಶುಭ್​ಮನ್ ಗಿಲ್ ಕ್ಯಾಪ್ಟನ್ಸಿ ನೀಡಲಾಯ್ತು. ಈಗ ತಂಡದಲ್ಲಿ ರವೀಂದ್ರ ಜಡೇಜಾ ಹಾಗೇ ಕೆಎಲ್ ರಾಹುಲ್ ಬಿಟ್ರೆ ಉಳಿದವ್ರೆಲ್ಲಾ ಯಂಗ್​ಸ್ಟರ್ಸ್. ಸೋ ಸೀನಿಯರ್ ಪ್ಲೇಯರ್ ಆಗಿ ರಾಹುಲ್ ತಮ್ಮ ಅಷ್ಟೂ ಅನುಭವವನ್ನ ಧಾರೆ ಎರೆದು ಯುವಪಡೆಗೆ ಮಾದರಿಯಾಗಿ ನಿಲ್ಲಬೇಕಿದೆ. ಅದನ್ನ ಮಾಡಿ ತೋರಿಸ್ತಾ ಇದ್ದಾರೆ ಕೂಡ. ಅದೂ ಅಲ್ದೇ ಈ ವರ್ಷ ರಾಹುಲ್ ಸೂಪರ್ ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಇದೇ ವರ್ಷ 3ನೇ ಶತಕ ದಾಖಲಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲೂ ರಾಹುಲ್ 2 ಶತಕ ಸಿಡಿಸಿ ಸರಣಿ ಸಮಬಲ ಸಾಧಿಸಲು ನೆರವಾಗಿದ್ದರು. ರಾಹುಲ್ ದ್ರಾವಿಡ್ ಟೀಂ ಇಂಡಿಯಾಗೆ ವಿದಾಯ ಘೋಷಿಸಿದ ಬಳಿಕ ಕನ್ನಡಿಗನಾಗಿ ಕೆಎಲ್ ರಾಹುಲ್ ಭಾರತ ತಂಡದಲ್ಲಿ ಆಪತ್ಬಾಂಧವನಾಗಿ ಬೆಳೀತಿದ್ದಾರೆ.

ಬೌಲರ್ ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ರಾಹುಲ್ ದ್ರಾವಿಡ್!

ಹಿಸ್ಟರಿ ಕೆದಕಿ ನೋಡಿದ್ರೆ ಟೆಸ್ಟ್ ಕ್ರಿಕೆಟ್​ನಲ್ಲಿ ಬೌಲರ್​ಗಳನ್ನ ಅತೀ ಹೆಚ್ಚು ಕಾಡಿರೋ ಆಟಗಾರನೇ ರಾಹುಲ್ ದ್ರಾವಿಡ್. ದ್ರಾವಿಡ್ 164 ಟೆಸ್ಟ್ ಪಂದ್ಯಗಳಲ್ಲಿ 13,288 ರನ್‌ಗಳನ್ನು ಗಳಿಸಿದ್ದಾರೆ. 36 ಶತಕಗಳು ಮತ್ತು 63 ಅರ್ಧಶತಕಗಳು ಅವ್ರ ಬ್ಯಾಟಿಂದ ಬಂದಿವೆ. ಇಂಟ್ರೆಸ್ಟಿಂಗ್ ಅಂದ್ರೆ ಟೆಸ್ಟ್ ಪಂದ್ಯಗಳನ್ನ ಆಡುವ ಎಲ್ಲಾ ದೇಶಗಳಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಅಂದ್ರೆ ಅದು ದ್ರಾವಿಡ್. ಅದೆಲ್ಲಕ್ಕಿಂತ ಹೆಚ್ಚಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಚೆಂಡುಗಳನ್ನು ಫೇಸ್ ಮಾಡಿದ ದಾಖಲೆ ಕೂಡ ದ್ರಾವಿಡ್ ಹೆಸರಲ್ಲೇ ಇದೆ. ಬರೋಬ್ಬರಿ 31,258 ಬಾಲ್​ಗಳನ್ನ ಎದುರಿಸಿದ್ದಾರೆ. ಅದ್ರಲ್ಲೂ ಪಾಕಿಸ್ತಾನ ವಿರುದ್ಧದ ಇನ್ನಿಂಗ್ಸ್​ನಲ್ಲಿ 270 ರನ್‌ಗಳ ಗರಿಷ್ಠ ಸ್ಕೋರ್ ಬಾರಿಸಿ ಗೆಲುವಿಗೆ ಕಾರಣರಾಗಿದ್ರು. ಹೀಗಾಗೇ ಟೀಂ ಇಂಡಿಯಾದಲ್ಲಿ ದಿ ವಾಲ್ ಅಂತಾನೇ ಹೆಸರು ಪಡೆದಿದ್ರು.

Shantha Kumari