ಮುಂಬೈಗೆ ಮಣ್ಣು ಮುಕ್ಕಿಸಿದ KL  – ಕರ್ನಾಟಕಕ್ಕೆ ಸ್ಮರಣೀಯ ಗೆಲುವು   
ರಣಜಿ ಸೆಮೀಸ್ ಗೆ ಪಡಿಕ್ಕಲ್ ಪಡೆ!

ಮುಂಬೈಗೆ ಮಣ್ಣು ಮುಕ್ಕಿಸಿದ KL  – ಕರ್ನಾಟಕಕ್ಕೆ ಸ್ಮರಣೀಯ ಗೆಲುವು   ರಣಜಿ ಸೆಮೀಸ್ ಗೆ ಪಡಿಕ್ಕಲ್ ಪಡೆ!

ಒಂದ್ಕಡೆ ಕೆಎಲ್ ರಾಹುಲ್ ಅವ್ರ ಕೆಚ್ಚೆದೆಯ ಬ್ಯಾಟಿಂಗ್.. ಇನ್ನೊಂದ್ಕಡೆ ಸ್ಮರಣ್ ರವಿಚಂದ್ರನ್ ಸ್ಮರಣೀಯ ಇನ್ನಿಂಗ್ಸ್.. ಮತ್ತೊಂದ್ಕಡೆ ವಿದ್ಯಾಧರ್ ಪಾಟೀಲ್ ಅವ್ರ ಮೋಸ್ಟ್ ವ್ಯಾಲ್ಯೂಯೇಬಲ್ ಫಿನಿಶಿಂಗ್.. ಅಂತಿಮವಾಗಿ ಇಡೀ ಟೀಂ ಎಫರ್ಟ್​ನಿಂದ ಕರ್ನಾಟಕ ತಂಡ ಪ್ರತಿಷ್ಠಿತ ರಣಜಿ ಟೂರ್ನಿಯಲ್ಲಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಅದೂ ಕೂಡ ಬಲಿಷ್ಠ ಮುಂಬೈ ತಂಡವನ್ನು ಬಗ್ಗು ಬಡಿದು.

ಇದನ್ನೂ ಓದಿ : ವಿಶ್ವಕಪ್ ನಲ್ಲಿ DSP ಚಾರ್ಜ್ – ಲಕ್ಕಿ ಸ್ಟಾರ್ ಮೊಹಮ್ಮದ್ ಸಿರಾಜ್

ರಣಜಿ ಟ್ರೋಫಿ. ಭಾರತದ ಪ್ರತಿಷ್ಠಿತ ದೇಶೀಯ ಟೂರ್ನಿ. ರಾಜ-ಮಹಾರಾಜರ ಕಾಲದಿಂದಲೇ ಹಲ್​ಚಲ್ ಎಬ್ಬಿಸಿದ್ದ ಈ ಟೂರ್ನಿ ಈಗ ರೀಜಿನಲ್ ಮತ್ತು ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್​ಗಳಿಗೆ  ಪ್ರೆಸ್ಟೀಜ್ ಪ್ರಶ್ನೆಯಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ರಣಜಿ ಅಂತಾನೇ ಕರೆಯಲ್ಪಡುವ ರಂಜಿತ್‌ಸಿಂಗ್‍ಜಿ ಅವ್ರ ಹೆಸ್ರನ್ನೇ ಈ ಪಂದ್ಯಾವಳಿಗೆ ಇಡ್ಲಾಗಿದೆ. 1934ರಲ್ಲಿ ಶುರುವಾದ ಟೂರ್ನಿಯಲ್ಲಿ ಫಸ್ಟ್ ಸೀಸನ್​ನಲ್ಲೇ ಚಾಂಪಿಯನ್ ಆಗಿದ್ದ ಮುಂಬೈ ಟೀಂ ಈ ಟೂರ್ನಿಯ ಮೋಸ್ಟ್ ಸಕ್ಸಸ್​​ಫುಲ್ ಟೀಮ್.. ಬರೋಬ್ಬರಿಗೆ 42 ಬಾರಿ ಪ್ರಶಸ್ತಿ ಗೆದ್ದು ಕಂಪ್ಲೀಟ್ ಡಾಮಿನೇಟ್ ಮಾಡಿದೆ. ಆದ್ರೀಗ ಅದೇ ಮುಂಬೈಗೆ ಮಣ್ಣು ಮುಕ್ಕಿಸಿದ ಕೆಚ್ಚೆದೆಯ ಕನ್ನಡಿಗರು ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಮುಂಬೈ ಪಡೆ ಬಗ್ಗು ಬಡಿದು ಸೆಮೀಸ್ ಗೆ ಲಗ್ಗೆ ಇಟ್ಟ ಕರ್ನಾಟಕ!

ಫೆಬ್ರವರಿ 6ರಿಂದ ಮುಂಬೈನಲ್ಲಿ ಆರಂಭವಾಗಿದ್ದ ಕರ್ನಾಟಕ ಮತ್ತು ಮುಂಬೈ ನಡುವಿನ ರಣಜಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಮುಂಬೈ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡ್ಕೊಳ್ತು. ಆದ್ರೆ ಯಾಕಾದ್ರೂ ಬ್ಯಾಟಿಂಗ್​ಗೆ ಬಂದ್ವೋ ಎನ್ನುವಂತೆ ಮಾಡಿದ್ದು ನಮ್ಮ ಕರ್ನಾಟಕದ ಬೌಲರ್​ಗಳು. ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 120 ರನ್​ಗಳಿಗೆ ಮುಂಬೈ ಪಡೆಯನ್ನ ಪೆವಿಲಿಯನ್​ಗೆ ಅಟ್ಟಿದ್ರು. ನೆಕ್ಸ್​ಟ್ ಇನ್ನಿಂಗ್ಸ್​ ಆರಂಭ ಮಾಡಿದ ಕರ್ನಾಟಕದ ಪರ ಮಯಾಂಕ್ ಅಗರ್ವಾಲ್ 92 ರನ್ ಬಾರಿಸಿ ಶತಕ ಮಿಸ್ ಮಾಡ್ಕೊಂಡು. ಉಳಿದ ಬ್ಯಾಟರ್​ಗಳಿಂದ ಸಾಥ್ ಸಿಗದ ಕಾರಣ 173 ರನ್​ಗಳನ್ನ ಕಲೆ ಹಾಕಿತು. ನೆಕ್ಸ್​ಟ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಪರ ಆಕಾಶ್ ಆನಂದ್ 70 ರನ್ ಗಳಿಸಿದ್ರೆ ಮುಶೀರ್ ಖಾನ್ 49 ರನ್ ಬಾರಿಸಿದ್ರು. ಅಂತಿಮವಾಗಿ ಮುಂಬೈ 377 ರನ್ ಕಲೆ ಹಾಕಿತು. ಮೊದಲ ಇನ್ನಿಂಗ್ಸ್ ಲೀಡ್ ನಿಂದಾಗಿ 325 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಕರ್ನಾಟಕ 12 ರನ್ ಗಳಿಸಿದ್ದಾಗ್ಲೇ ಮಯಾಂಕ್ ವಿಕೆಟ್ ಕಳ್ಕೊಳ್ತು. ನೆಕ್ಸ್​ಟ್ ರಾಹುಲ್ ಮತ್ತು ಪಡಿಕ್ಕಲ್ ನಡುವೆ ಒಂದೊಳ್ಳೆ ಪಾರ್ಟ್ನರ್​ಶಿಪ್ ಬಂತು. ಸ್ಮರಣ್ ರವಿಚಂದ್ರನ್ ಅಜೇಯ 83 ರನ್ ಬಾರಿಸಿದ್ರು. ಅಂತಿಮವಾಗಿ ಕರ್ನಾಟಕ 4 ವಿಕೆಟ್​ಗಳಿಂದ ಗೆದ್ದು ಸೆಮೀಸ್​ಗೆ ಲಗ್ಗೆ ಇಟ್ಟಿದೆ.

ರಾಹುಲ್ ಶತಕ.. ಸ್ಮರಣ್ ಅರ್ಧಶತಕ.. ವಿದ್ಯಾಧರ್ ಫಿನಿಶಿಂಗ್!

ಇನ್ನು ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕೆಎಲ್ ರಾಹುಲ್. 182 ಎಸೆತಗಳಲ್ಲಿ 130 ರನ್ ಬಾರಿಸಿದ್ರು. ಪ್ರಥಮ ದರ್ಜೆ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 24ನೇ ಶತಕವನ್ನು ಬಾರಿಸಿದ್ರು. ಹಾಗೇ ಸ್ಮರಣ್ ರವಿಚಂದ್ರನ್ 83 ರನ್ ಗಳಿಸಿ ಅಜೇಯರಾಗಿ ಉಳಿದಿದ್ರು. ಲಾಸ್ಟ್ ಮೂಮೆಂಟ್​ನಲ್ಲಿ ಕರ್ನಾಟಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳ್ಕೊಂಡು ಮುಂಬೈ ಮತ್ತೆ ಟ್ರ್ಯಾಕ್​ಗೆ ಬರೋ ಲಕ್ಷಣ ಕಾಣ್ತಿತ್ತು. ಇಂಥಾ ಟೈಮಲ್ಲಿ ವಿದ್ಯಾಧರ್ ಪಾಟೀಲ್ ಅಗ್ರೆಸ್ಸಿವ್ ಇನ್ನಿಂಗ್ಸ್ ಆಡ್ತಿದ್ರು. ಸೋಲಿನ ಹೊಸ್ತಿಲಿನಲ್ಲಿದ್ದ ಮುಂಬೈ ಪರ ತುಷಾರ್ ದೇಶಪಾಂಡೆ ಬೌನ್ಸರ್ ಹಾಕಿ ಗುರಾಯಿಸ್ತಿದ್ರು. ಆದ್ರೆ ಇದ್ಯಾವುದಕ್ಕೂ ​ಕೇರ್ ಮಾಡದ ವಿದ್ಯಾದರ್ 30 ಎಸೆತಗಳಲ್ಲೇ 31 ರನ್ ಬಾರಿಸಿ ಮ್ಯಾಚ್ ವಿನ್ ಮಾಡ್ಸಿದ್ರು. ಇನ್ನು ಕರ್ನಾಟಕ ಪರ ಬೌಲಿಂಗ್​ನಲ್ಲಿ ವಿಧ್ವತ್ ಕಾವೇರಪ್ಪ 5 ವಿಕೆಟ್ ತಗೊಂಡ್ರೆ ಪ್ರಸಿದ್ಧ್ ಕೃಷ್ಣ 4, ಶ್ರೇಯಸ್ ಗೋಪಾಲ್ 4 ವಿಕೆಟ್ ಪಡೆದು ಮಿಂಚಿದ್ರು. ಸದ್ಯ ರಣಜಿ ಟೂರ್ನಿಯಲ್ಲಿ ಎಂಟು ಬಾರಿ ಪ್ರಶಸ್ತಿ ಗೆದ್ದಿರುವ ಕರ್ನಾಟಕ 9ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಹಾಗೇ ಇದೇ ಮೊದಲ ಬಾರಿಗೆ ಸೆಮಿಫೈನಲ್​​ನಲ್ಲಿ ನಾಲ್ಕರ ಘಟ್ಟ ತಲುಪಿರುವ ಉತ್ತರಾಖಂಡದ ವಿರುದ್ಧ ಆಡಲಿದೆ. ಮತ್ತೊಂದು ಸೆಮಿಫೈನಲ್​​ನಲ್ಲಿ ಬೆಂಗಾಲ್ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಲಿವೆ. ಇನ್ನು ರಣಜಿ ಟೂರ್ನಿಯಲ್ಲಿ  ಪ್ರಸ್ತುತ 38 ತಂಡಗಳು ಭಾಗವಹಿಸುತ್ತಿದ್ದು, 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ತಂಡಗಳು ಫೈಟ್ ನಡೆಸುತ್ತಿವೆ. ಈ ಬಾರಿಯ ಟೂರ್ನಿ ಇನ್ನೇನು ಕ್ಲೈಮ್ಯಾಕ್ಸ್ ಹಂತದಲ್ಲಿದ್ದು ಕರ್ನಾಟಕ ಕೂಡ ಟ್ರೋಫಿ ಗೆಲುವಿನ ಫೇವರೆಟ್ ಟೀಂ ಆಗಿದೆ.

Shantha Kumari

Leave a Reply

Your email address will not be published. Required fields are marked *