OUT ಆದ್ರೂ KL ರಾಹುಲ್ ಡ್ರಾಮಾ – ಜಸ್ಟ್ 2 ಲಕ್ಷಕ್ಕೆ ಪಡಿಕಲ್ ಸೇಲ್
GT ಪ್ಲೇಯರ್ ಮಾನವ್‌ಗೆ ಟೆಸ್ಟ್‌ ಕ್ಯಾಪ್

OUT ಆದ್ರೂ KL ರಾಹುಲ್ ಡ್ರಾಮಾ – ಜಸ್ಟ್ 2 ಲಕ್ಷಕ್ಕೆ ಪಡಿಕಲ್ ಸೇಲ್GT ಪ್ಲೇಯರ್ ಮಾನವ್‌ಗೆ ಟೆಸ್ಟ್‌ ಕ್ಯಾಪ್

ಐಪಿಎಲ್ ಟೂರ್ನಿ ಈಗ ರೋಚಕ ಘಟ್ಟ ತಲುಪಿದೆ. ಈ ಟೂರ್ನಿಯ ಅಂಗಳದಲ್ಲಿ ನಡೆಯುತ್ತಿರುವ ಕೆಲ ಸ್ವಾರಸ್ಯಕರ ಘಟನೆಗಳ ಸಂಕ್ಷಿಪ್ತ ಸುದ್ದಿ ಇಲ್ಲಿದೆ.

ಇದನ್ನೂ ಓದಿ: ಬ್ಲೂ ಜರ್ಸಿಗೆ ವಿರಾಟ್‌ Goodbye? ODI ನಿವೃತ್ತಿಗೆ ಮುಹೂರ್ತ ಫಿಕ್ಸ್?

ಭಾರತ ಮತ್ತು ಅಫ್ಘಾನಿಸ್ತಾನ  ನಡುವಿನ ಟೆಸ್ಟ್  ಪಂದ್ಯ ಆರಂಭವಾಗಿದೆ. ಈ ಐತಿಹಾಸಿಕ ಪಂದ್ಯಕ್ಕೆ ಗುಜರಾತ್ ಟೈಟಾನ್ಸ್‌ ತಂಡದ ಸ್ಟಾರ್ ಆಲ್‌ರೌಂಡರ್ ಮಾನವ್ ಸುತಾರ್ ಭಾರತ ತಂಡಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. ಚೊಚ್ಚಲ ಟೆಸ್ಟ್‌ ಪಂದ್ಯವಾಡಲಿರುವ ಮಾನವ್ ಅವರಿಗೆ, ಪಂದ್ಯ ಪ್ರಾರಂಭವಾಗುವ ಮೊದಲು, ಭಾರತದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಚೊಚ್ಚಲ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು. ಈ ಯುವ ಆಟಗಾರನ ಬಹುಕಾಲದ ಕನಸನ್ನು ನನಸಾಗಿಸಿದೆ. 23 ವರ್ಷದ ಎಡಗೈ ಸ್ಪಿನ್ನರ್ ಮತ್ತು ಆಲ್‌ರೌಂಡರ್ ಮಾನವ್ ಸುತಾರ್, ಬೌಲಿಂಗ್‌ನಲ್ಲೂ ಮತ್ತು ಬ್ಯಾಟಿಂಗ್‌ನಲ್ಲೂ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರಿದ್ದರು.

ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಕೆಎಲ್ ರಾಹುಲ್‌ ಜೀವದಾನ ಸಿಕ್ಕಿದೆ. ಪಂದ್ಯದ 11 ನೇ ಓವರ್‌ನಲ್ಲಿ ರೆಹಮಾನ್ ಶರೀಫಿ ಬೌಲಿಂಗ್ ಮಾಡುತ್ತಿದ್ದಾಗ ಆಫ್ ಸ್ಟಂಪ್ ಹೊರಗೆ ರಾಹುಲ್‌ ಚೆಂಡು ಹೊಡೆಯಲು ಯತ್ನಿಸಿದಾಗ ಬ್ಯಾಟ್‌ಗೆ ತಾಗಿದ ಚೆಂಡು ವಿಕೆಟ್‌ ಕೀಪರ್‌ ಕೈ ಸೇರಿತು.  ಆದ್ರೆ ಇದ್ದಕೆ ಅಂಪೈರ್‌ ಔಟ್‌ ನೀಡಲಿಲ್ಲ. ಆಫ್ಘಾನ್‌ ನಾಯಕ ರಿವ್ಯೂ ಪಡೆಯಲಿಲ್ಲ. ಆದ್ರೆ ಟಿವಿ ರಿವ್ಯೂ ಪರಿಶೀಲನೆ ನಡೆಸಿದಾಗ ಚೆಂಡು ಬ್ಯಾಟ್‌ಗೆ ಬಡಿದಿರುವುದು ಕಂಡು ಬಂತು. ಒಂದು ವೇಳೆ ರಿವ್ಯೂ ತೆಗೆದುಕೊಂಡಿದ್ರೆ ಕೆೆಎಲ್ ಔಟ್ ಆಗುತ್ತಿದ್ದರು.

ಈ ಘಟನೆಯಿಂದ ಕೆ.ಎಲ್‌ ರಾಹುಲ್‌ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡರು ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.  ಚೆಂಡು ತಮ್ಮ ಬ್ಯಾಟ್‌ಗೆ ಬಡಿದಿದೆ ಎಂದೂ ತಿಳಿದರೂ ಕ್ರೀಸ್‌ನಲ್ಲೇ ನಿಂತ ರಾಹುಲ್‌ ನಡೆಗೆ ಆಕ್ರೋಶ ಹೊರಹಾಕಿದ ಕಾಮೆಂಟ್ರಿ ಮಾಡುತ್ತಿದ್ದ ಗ್ರೇಮ್‌ ಸ್ವಾನ್, “ಕೆಎಲ್ ರಾಹುಲ್ ಇಲ್ಲಿಗೆ ಬನ್ನಿ, ನಿಮ್ಮ ಆಸ್ಕರ್ ಇಲ್ಲಿದೆ ಎಂದು ವ್ಯಂಗವಾಡಿದ್ದಾರೆ.

ಅಫ್ಘಾನ್ ವಿರುದ್ದ  ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ಪಂದ್ಯದ ಮೊದಲ ದಿನವೇ ಭರ್ಜರಿ ಶತಕ ಬಾರಿಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದ 68 ನೇ ಪಂದ್ಯವನ್ನಾಡುತ್ತಿರುವ ರಾಹುಲ್ 12ನೇ ಟೆಸ್ಟ್ ಶತಕವನ್ನು ಬಾರಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 164 ಎಸೆತಗಳನ್ನು ಎದುರಿಸಿದ ರಾಹುಲ್ 11 ಬೌಂಡರಿಗಳ ಸಹಿತ ಶತಕದ ಗಡಿ ದಾಟಿದರು.

ಜೂನ್-ಜುಲೈನಲ್ಲಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಹಾಗೂ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ಟಿ20 ತಂಡವನ್ನು ಬಿಸಿಸಿಐ ಇಂದು ಪ್ರಕಟಿಸಿದೆ. 16 ಸದಸ್ಯರ ಈ ತಂಡವನ್ನು ನೂತನ ನಾಯಕ ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ. ಹಾಗೆಯೇ ತಿಲಕ್ ವರ್ಮಾ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿದೆ.

ಕೇವಲ 15 ವರ್ಷಕ್ಕೆ ಭಾರತದ ಹಿರಿಯರ ಟಿ20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಬಿಹಾರದ ವೈಭವ್ ಸೂರ್ಯವಂಶಿ, ತಂಡಕ್ಕೆ ಆಯ್ಕೆಯಾಗುವ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 36 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ನಿರ್ಮಿಸಿದ್ದ ದಾಖಲೆಯನ್ನು ವೈಭವ್ ಮುರಿದಿದ್ದಾರೆ. ಸಚಿನ್ 15 ವರ್ಷ 205 ದಿನಕ್ಕೆ ಟೀಂ ಇಂಡಿಯಾ ಅಂತರರಾಷ್ಟ್ರೀಯ ತಂಡದಲ್ಲಿ ಆಡಿದ್ರು.

IPL ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ  ‘ಮಹಾರಾಜ ಟ್ರೋಫಿ ಟಿ20’ ಟೂರ್ನಿಗೆ ವೇದಿಕೆ ಸಿದ್ಧವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ 6 ತಂಡಗಳ ಹರಾಜು ಪ್ರಕ್ರಿಯೆ ಮುಗಿದಿದೆ. ಈ ಹರಾಜಿನಲ್ಲಿ 2 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂದ್ದ RCB ತಂಡದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಕೇವಲ 2.6 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ.  ಪಡಿಕ್ಕಲ್ ಖರೀದಿಗೆ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿಯೇ ತೋರಿಸದ ಕಾರಣ  ಕಡಿಮೆ ಬೆಲೆಗೆ ಹರಾಜಾಗಿದ್ದಾರೆ.

ತಿಲಕ್ ವರ್ಮಾ ನಾಯಕತ್ವದ ಭಾರತ ಎ ತಂಡ ಶ್ರೀಲಂಕಾದಲ್ಲಿ ನಡೆಯುವ ತ್ರಿಕೋನ ಏಕದಿನ ಸರಣಿಗಾಗಿ ತೆರಳಿದೆ. ಜೂನ್ 9 ರಿಂದ ಪ್ರಾರಂಭವಾಗುವ ಈ ಸರಣಿಯಲ್ಲಿ ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ತಂಡಗಳು ಕಣಕ್ಕಿಳಿಯಲಿವೆ. ಯುವ ಪ್ರತಿಭೆಗಳಿಂದ ಕೂಡಿದ ಭಾರತ ಎ ತಂಡದಲ್ಲಿ ರಿಯಾನ್ ಪರಾಗ್ ಉಪನಾಯಕರಾಗಿದ್ದಾರೆ. ಈ ಸರಣಿಯು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ.

ರಿಷಭ್ ಪಂತ್ ತಮ್ಮ ಟೆಸ್ಟ್ ಉಪನಾಯಕತ್ವವನ್ನು ಕಳೆದುಕೊಂಡಿದ್ರೂ ಕೂಡ  ಟೆಸ್ಟ್‌ ಇತಿಹಾಸದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.  ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಸ್ಥಾನ ಪಡೆಯುವ ಮೂಲಕ ಭಾರತದ ಟೆಸ್ಟ್ ಇತಿಹಾಸದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಮೂರನೇ ನಿಯೋಜಿತ ವಿಕೆಟ್ ಕೀಪರ್ ಎನಿಸಿಕೊಂಡರು. ಈ ಮೂಲಕ ದಿಗ್ಗಜರಾದ ಎಂ.ಎಸ್ ಧೋನಿ ಮತ್ತು ಸೈಯದ್ ಕಿರ್ಮಾನಿ ಜತೆ ಎಲೈಟ್‌ ಪಟ್ಟಿ ಸೇರಿದರು.

ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನ ಮುಂಬೈನಲ್ಲಿ ಭೇಟಿಯಾಗಿದ್ದಾರೆ.  ಈ ಕುರಿತು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ಭಾರತೀಯ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರು ಮುಂಬೈನಲ್ಲಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಅವರ ಅಧಿಕೃತ ನಿವಾಸ ‘ವರ್ಷ’ದಲ್ಲಿ ಭೇಟಿಯಾಗಿದ್ದಾರೆ” ಎಂದು ಪೋಸ್ಟ್ ಮಾಡಿದೆ.

Kishor KV

Leave a Reply

Your email address will not be published. Required fields are marked *