ನಾನು ಕನ್ನಡಿಗ RCB ನನ್ನ ತಂಡ – KL ರಾಹುಲ್ ಮಾತು ಅರ್ಥವಾಯ್ತಾ?
ಫ್ಯಾನ್ಸ್ ಕಪ್ ಕನಸು ಈಡೇರುತ್ತಾ?

ಈ ಸಲ ಕಪ್ ನಮ್ದೇ ಬಿಡಿ. ಆರ್‌ಸಿಬಿ ಫ್ಯಾನ್ಸ್ ಈ ಬಾರಿ ಕಪ್ ಕನಸು ಕಾಣೋದ್ರಲ್ಲಿ ಅರ್ಥವಿದೆ. ಯಾಕೆಂದ್ರೆ, ಆರ್‌ಸಿಬಿಗೆ ಈ ಬಾರಿ ಸ್ಟಾರ್ ಆಟಗಾರರ ದಂಡೇ ಸೇರಲಿದೆ. ಆರ್‌ಸಿಬಿ ಮೈನ್ ಸ್ಟ್ರೆಂಥ್ ವಿರಾಟ್ ಕೊಹ್ಲಿ ಇರುವಾಗ್ಲೇ ಕಪ್ ಗೆಲ್ಲಬೇಕು ಎಂಬ ಹಠದಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಹೀಗಾಗಿಯೇ ಕೊಹ್ಲಿಗಾಗಿಯೇ ಆರ್‌ಸಿಬಿ ಟೀಮ್ ಸಖತ್ ಸ್ಟ್ರಾಂಗ್ ಮಾಡಲು ಹೊರಟಿದೆ ಮ್ಯಾನೇಜ್‌ಮೆಂಟ್. ಇದಕ್ಕಾಗಿಯೇ ಮೇಜರ್ ಸರ್ಜರಿ ಶುರುವಾಗಿದೆ. ಇದ್ರ ಮಧ್ಯೆ ಕನ್ನಡಿಗರು ಕಾಯ್ತಿದ್ದ ದಿನ ಬಂದೇ ಬಿಟ್ಟಿದೆ. ಆರ್‌ಸಿಬಿ ಫ್ಯಾನ್ಸ್ ಕನಸು ನನಸಾಗಲಿದೆ. ಯೆಸ್. ಕನ್ನಡಿಗ ಕೆ.ಎಲ್ ರಾಹುಲ್ ಆರ್‌ಸಿಬಿಗೆ ಬರೋದು ಕನ್‌ಫರ್ಮ್‌ಆಗಿದೆ. ಈ ವಿಚಾರವನ್ನ ನಾವ್ ಹೇಳ್ತಿಲ್ಲ. ಸ್ವತಃ ಕೆ.ಎಲ್ ಈ ವಿಚಾರದ ಬಗ್ಗೆ ಮಾತಾಡಿದ್ದಾರೆ. ರಾಹುಲ್ ಹೇಳಿದ್ದೇನು?, ಇದಕ್ಕೆ ಆರ್‌ಸಿಬಿ ಆನ್ಸರ್ ಏನು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ : IND Vs SL ಸರಣಿಗೆ ಬಿಗ್ ಶಾಕ್ – ಸೂರ್ಯ & ಪಾಂಡ್ಯ ನಡುವೆ ಬಿರುಕು
ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಯಾವಾಗ ಕಿರಿಕ್ ಆಯ್ತೋ, ಆವತ್ತಿಂದ ಆರ್‌ಸಿಬಿ ಫ್ಯಾನ್ಸ್ ಕೆ.ಎಲ್ ರಾಹುಲ್‌ಗೆ ನಮ್ಮ ಟೀಮ್‌ಗೆ ಬನ್ನಿ ಅಂತಾ ಕರೀತಾನೇ ಇದ್ರು. ಕನ್ನಡಿಗನಿಗೆ ಮರ್ಯಾದೆ ಕೊಡದ ಲಕ್ನೋ ಟೀಮ್ ನಿಮಗೆ ಬೇಡ್ವೇ ಬೇಡ ಅಂತಾ ಹಠ ಮಾಡಿ ಕರೆದಿದ್ರು ಆರ್‌ಸಿಬಿ ಫ್ಯಾನ್ಸ್. ಇದೀಗ ಕೆ.ಎಲ್ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿರೋ ಸುದ್ದಿ ನಿಜವಾಗುತ್ತಿದೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡಾ ಡಿಸೆಂಬರ್ನಲ್ಲಿ ನಡೆಯಲಿರೋ ಮೆಗಾ ಆಕ್ಷನ್ನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಲು ನಿರ್ಧರಿಸಿದೆ. ಇದ್ರ ನಡುವೆಯೇ ಈ ಹಿಂದೆ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಕೆ.ಎಲ್ ರಾಹುಲ್ ಮತ್ತೆ ತವರು ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂಬ ವಿಚಾರ ಪಕ್ಕಾ ಆಗಿದೆ. ಸ್ವತಃ ಕೆ.ಎಲ್ ಕೂಡಾ ಆರ್‌ಸಿಬಿ ಸೇರಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತಾನಾಡಿದ ಕೆಎಲ್ ರಾಹುಲ್, ಆರ್‌ಸಿಬಿ ಪರ ಆಡಬೇಕೆಂಬ ತಮ್ಮ ಮನದಾಳದ ಆಸೆಯನ್ನು ತೆರೆದಿಟ್ಟಿದ್ದಾರೆ. ನಾನು ಮೊದಲು ಕರ್ನಾಟಕದ. ಅದರಲ್ಲೂ ಬೆಂಗಳೂರಿನವ. ಇದನ್ನೂ ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನನಗೆ ತವರು. ಪ್ರತಿಯೊಬ್ಬ ಆಟಗಾರ ಕೂಡ ತನ್ನ ತವರು ತಂಡದ ಪರ ಆಡಲು ಬಯಸುತ್ತಾರೆ. ಹೀಗಾಗಿ ನಾನು ಸಹ ಬೆಂಗಳೂರು ಪರ ಆಡುವುದು ಸೂಕ್ತ. ನನ್ನ ನಗರದ ಪರ ಆಡುವುದು ನನ್ನ ಕನಸಾಗಿತ್ತು. ಈಗ ಮತ್ತೆ ಅದೇ ತಂಡದಲ್ಲಿ ಆಡಲು ಸಾಧ್ಯವಾದರೆ ಆಡುತ್ತೇನೆ ಅಂತಾ ಹೇಳಿದ್ದಾರೆ ಕೆ.ಎಲ್ ರಾಹುಲ್. ರಾಹುಲ್ ಅವರ ಮಾತಲ್ಲೇ ಈ ಬಾರಿ ಆರ್‌ಸಿಬಿಗೆ ಸೇರೋದು ಗ್ಯಾರಂಟಿ ಅಂತಾ ಫ್ಯಾನ್ಸ್ ಅಂದುಕೊಂಡಿದ್ದಾರೆ. ಜೊತೆಗೆ ಆರ್‌ಸಿಬಿ ಮೂಲಗಳು ಕೂಡಾ ಕೆ.ಎಲ್ ಟೀಮ್ ಸೇರ್ತಾರೆ ಅನ್ನೋ ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಐಪಿಎಲ್ ಮುಗಿದ ಮೇಲೆ ಕೆ.ಎಲ್ ರಾಹುಲ್ ಕೂಡಾ ಮೈದಾನಕ್ಕಿಳಿದಿಲ್ಲ. ಕಳೆದ 2 ತಿಂಗಳಿಂದ ಮೈದಾನದಿಂದ ದೂರ ಉಳಿದಿದ್ದಾರೆ ಕೆ.ಎಲ್ ರಾಹುಲ್. ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸಿದ್ಧತೆಯನ್ನ ಆರಂಭಿಸಿದ್ದಾರೆ. ಬೆಂಗಳೂರಿನ ಎನ್ಸಿಎನಲ್ಲಿ ಬೀಡು ಬಿಟ್ಟಿರುವ ರಾಹುಲ್ ಬ್ಯಾಟ್ ಹಿಡಿದು ಘರ್ಜಿಸಿದ್ದಾರೆ. ನೆಟ್ಸ್ನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿದ್ದಾರೆ. ಕೆ.ಎಲ್ ರಾಹುಲ್ ಬ್ಯಾಟಿಂಗ್ ಶೈಲಿ ಬದಲಾಗಿರೋದಕ್ಕೆ ಕಾರಣ ಕೂಡಾ ಐಪಿಎಲ್ ಅನ್ನೋ ವಿಚಾರ ರಿವೀಲ್ ಆಗಿದೆ. ಐಪಿಎಲ್ ಸೀಸನ್ 18ಕ್ಕೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆ ಆರಂಭವಾಗಿದ್ದು, ರಿಟೈನ್, ರಿಲೀಸ್ ಲೆಕ್ಕಾಚಾರ ಜೋರಾಗಿದೆ. ಹೀಗಾಗಿಯೇ ಕೆ.ಎಲ್ ತನ್ನ ನಿಧಾನಗತಿಯ ಬ್ಯಾಟಿಂಗ್ ನಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿಯೇ ಕ್ಲಾಸಿಕ್ ಆಟವಾಡ್ತಿದ್ದ ಕೆ.ಎಲ್ ರಾಹುಲ್ ಉಗ್ರಾವತಾರ ಎತ್ತಿದ್ದಾರೆ. ತನ್ನ ತಾಕತ್ತನ್ನ ನಿರೂಪಿಸಲು ಅಭ್ಯಾಸದ ಅಖಾಡದಲ್ಲಿ ಭರ್ಜರಿ ತಯಾರಿ ನಡೆಸೋ ಮೂಲಕ ಕನ್ನಡಿಗ ಸಜ್ಜಾಗ್ತಿದ್ದಾರೆ. ಇದನ್ನ ನೋಡಿದ ನಮ್ಮ ಆರ್‌ಸಿಬಿ ಫ್ಯಾನ್ಸ್ ಅಂತೂ ಕೆ.ಎಲ್ ಬೆಂಗಳೂರು ಟೀಮ್ ಗೆ ಬಂದ್ರೆ ಕಪ್ ಗ್ಯಾರಂಟಿ ಅಂತಿದ್ದಾರೆ. ಕೆ.ಎಲ್ ರಾಹುಲ್ ಆರ್‌ಸಿಬಿಗೆ ಬಂದ್ರೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜೊತೆ ಒಂದೊಳ್ಳೇ ಕಾಂಬಿನೇಷನ್ ಕೂಡಾ ನೋಡಬಹುದು.