IPLಗೂ ಮುನ್ನ ದೇವರ ಮೊರೆ ಹೋದ ಕೆ.ಎಲ್‌ ರಾಹುಲ್​​ – IPLನಲ್ಲಿ ಭಕ್ತನ ಕೈಹಿಡಿತಾನಾ ಮಹಾಕಾಳೇಶ್ವರ..?

IPLಗೂ ಮುನ್ನ ದೇವರ ಮೊರೆ ಹೋದ ಕೆ.ಎಲ್‌ ರಾಹುಲ್​​ – IPLನಲ್ಲಿ ಭಕ್ತನ ಕೈಹಿಡಿತಾನಾ ಮಹಾಕಾಳೇಶ್ವರ..?

ಕ್ರಿಕೆಟ್‌ ಪ್ರೇಮಿಗಳಿಗೆ ಐಪಿಎಲ್‌ ಫಿವರ್‌ ಶುರುವಾಗಿದೆ. ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ರಂಗೇರಲು ಇನ್ನು ಉಳಿದಿರುವುದು ಕೇವಲ 1 ದಿನ ಮಾತ್ರ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ (ಮಾ.22) ನಡೆಯಲಿರುವ RCB ಮತ್ತು CSK ನಡುವಣ ಪಂದ್ಯದೊಂದಿಗೆ ಐಪಿಎಲ್​ಗೆ ಅಧಿಕೃತ ಚಾಲನೆ ದೊರೆಯಲಿದೆ. ಕ್ರಿಕೆಟರ್ಸ್‌ ಅಖಾಡಕ್ಕೆ ಧುಮುಕುವ ಮುನ್ನ ದೇವರ ಆಶಿರ್ವಾದ ಪಡೆಯಲು ಹೊರಟಿದ್ದಾರೆ.

ಹೌದು, ಶುಕ್ರವಾರದಿಂದ ಕ್ರಿಕೆಟ್‌ ಹಬ್ಬ ಶುರುವಾಗಲಿದೆ. ಕೆಎಲ್‌ ರಾಹುಲ್​ ಶೀಘ್ರದಲ್ಲೆ ಲಕ್ನೋ ಸೂಪರ್​​​​​​​ ಜೈಂಟ್ಸ್​​ ಕ್ಯಾಂಪ್​​​​ ಸೇರಿಕೊಂಡು, ಐಪಿಎಲ್​​​​​​​​​​​​ ಸಂಗ್ರಾಮಕ್ಕೆ ರಣಕಹಳೆ ಊದಲಿದ್ದಾರೆ. ಅದಕ್ಕೂ ಮುನ್ನ ಸ್ಟಾರ್ ಬ್ಯಾಟ್ಸ್​​​ಮನ್ ​​​​ ಮಹಾಶಕ್ತಿಯ ಮೊರೆ ಹೋಗಿದ್ದಾರೆ. ದೇಗುಲಕ್ಕೆ ಭೇಟಿ ನೀಡಿ ದೇವರ ಆಶಿರ್ವಾದ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಅರುಣಾಚಲ ಪ್ರದೇಶ ಭಾರತದ ಭೂ ಪ್ರದೇಶ, ಇದು ಚೀನಾದ ಹಕ್ಕಲ್ಲ – ಯುನೈಟೆಡ್ ಸ್ಟೇಟ್ಸ್

ಕೆ.ಎಲ್‌ ರಾಹುಲ್​​ ಫುಲ್​​ ಫಿಟ್​ ಅಂಡ್ ಫೈನ್ ಆಗಿದ್ದಾರೆ. ಆದರೆ ಐಪಿಎಲ್​ ಲೋಕದಲ್ಲಿ ಘರ್ಜಿಸಲು ಇಷ್ಟೆ ಸಾಲಲ್ಲ. ದೇವರ ಬಲವು ಬೇಕು. ಹೀಗಾಗಿ ಕೆ. ಎಲ್‌ ರಾಹುಲ್‌  ಪವಿತ್ರ 12 ಜೋರ್ತಿಲಿಂಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ಮಂದಿರಕ್ಕೆ ಕುಟುಂಬಸ್ಥರ ಜತೆ ಭೇಟಿ ನೀಡಿದ್ದಾರೆ. ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ ರಾಹುಲ್ ಹಾಗೂ ಅವರ ತಂದೆ-ತಾಯಿ ತಮ್ಮ ಇಷ್ಠಾರ್ಥ ನೆರವೇರಿಸುವಂತೆ ಭಕ್ತಿಯಿಂದ ಬೇಡಿಕೊಂಡಿದ್ದಾರೆ.

ಮಹಾಕಾಳೇಶ್ವರನ ಮಹಾಭಕ್ತ ರಾಹುಲ್​​​..!

ರಾಹುಲ್​​​​ ಉಜ್ಜಯಿನಿ ಮಹಾಕಾಳೇಶ್ವರ ದರ್ಶನ ಪಡಿತಿರೋದು ಇದೇ ಮೊದಲೇನಲ್ಲ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಪತ್ನಿ ಆಥಿಯಾ ಶೆಟ್ಟಿ ಜತೆಗೆ ದೇಗುಲಕ್ಕೆ ಭೇಟಿ ನೀಡಿ, ಮಹಾಕಾಳನ ಭಸ್ಮಾರತಿ ಪೂಜೆಯಲ್ಲಿ ಭಾಗಿಯಾಗಿದ್ದರು.  ಭಸ್ಮಾರತಿ ನಂತರ ರಾಹುಲ್-ಆಥಿಯ ಜೋಡಿ, ನಂದಿ ಬಳಿ ಕುಳಿತು ಕೆಲ ಕಾಲ ಏಕಭಕ್ತಿಯಿಂದ ಧ್ಯಾನ ಮಾಡಿದ್ದರು. ನಂತರ ನವಗ್ರಹಳಿಗೂ ಪೂಜಾ ಸಲ್ಲಿಸಿದ ನವವಿವಾಹಿತ ಜೋಡಿ, ದೇವಸ್ಥಾನ ಪ್ರದಕ್ಷಿಣೆ ಹಾಕಿದ್ದರು.

Shwetha M