ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಟೀಮ್ ಇಂಡಿಯಾದ ಉಪನಾಯಕ ಕೆಎಲ್‌ ರಾಹುಲ್

ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಟೀಮ್ ಇಂಡಿಯಾದ ಉಪನಾಯಕ ಕೆಎಲ್‌ ರಾಹುಲ್

ಮಂಗಳೂರು: ಟಿ20 ವಿಶ್ವಕಪ್ ನಲ್ಲಿ ನಿರಾಶದಾಯಕ ಪ್ರದರ್ಶನ ನೀಡಿದ ಕೆ.ಎಲ್ ರಾಹುಲ್, ಈಗ ತವರಿಗೆ ಬಂದಿಳಿದಿದ್ದಾರೆ. ಟೀಮ್ ಇಂಡಿಯಾ ವೈಸ್ ಕ್ಯಾಪ್ಟನ್ ಕೆ.ಎಲ್ ರಾಹುಲ್ ಸದ್ಯದಲ್ಲೇ ಮದುವೆಯಾಗ್ತಿದ್ದಾರೆ ಅನ್ನೋ ಸುದ್ದಿ ಕೂಡಾ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಬುಧವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಕೆ.ಎಲ್ ರಾಹುಲ್ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿರಮೇಶ್ ಕುಮಾರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಗೆ ಕುಮಾರಸ್ವಾಮಿ ಸ್ಪಷ್ಟನೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತನ್ನ ಸ್ನೇಹಿತರೊಂದಿಗೆ ಆಗಮಿಸಿದ ಕೆ.ಎಲ್ ರಾಹುಲ್ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ನಡೆದ ಮಹಾಪೂಜೆಯಲ್ಲೂ ಕೂಡ ಭಾಗಿಯಾದರು. ಈ ಸಮಯದಲ್ಲಿ ದೇವಳದ ವತಿಯಿಂದ ಕೆ.ಎಲ್. ರಾಹುಲ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ನಂತರ ದೇವಸ್ಥಾನದ ವತಿಯಿಂದ ಕೆ.ಎಲ್. ರಾಹುಲ್ ಅವರಿಗೆ ಸನ್ಮಾನ ಕೂಡ ಮಾಡಲಾಗಿದೆ.

ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೆ.ಎಲ್‌. ರಾಹುಲ್ ಕಳಪೆ ಪ್ರದರ್ಶನ ತೋರಿದ್ದರು. ಪ್ರಮುಖ ಪಂದ್ಯಗಳಲ್ಲಿ ಅವರು ಕಂಡಿದ್ದ ವೈಫಲ್ಯ ದೊಡ್ಡ ಮಟ್ಟದ ಟೀಕೆಗೆ ಕಾರಣವಾಗಿತ್ತು. ವಿಶ್ವಕಪ್‌ ಮುಗಿದ ಬೆನ್ನಲ್ಲಿಯೇ ಅವರು ಕುಕ್ಕೆಗೆ ಭೇಟಿ ನೀಡಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರಕ್ಕೆ ಕೆಎಲ್‌ ರಾಹುಲ್‌ ಭೇಟಿ ನೀಡಿದ್ದು ಇದು ಮೊದಲೇನಲ್ಲ. ಹಿಂದೆಯೂ ಸಾಕಷ್ಟು ಬಾರಿ ಅವರು ಭೇಟಿ ನೀಡಿದ್ದರು.

ಬಾಲಿವುಡ್ ನಟ ಸುನಿಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಜೊತೆ ಕೆ.ಎಲ್ ರಾಹುಲ್ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಅಥಿಯಾ ಜೊತೆ ಜನವರಿಯಲ್ಲಿ ಹಸೆಮಣೆ ಏರಲಿದ್ದಾರೆ ಅನ್ನುವ ಮಾತು ಕೂಡಾ ಕೇಳಿಬರುತ್ತಿದೆ.

suddiyaana