ತಿಲಕ್ ದ್ರೋಹಕ್ಕೆ ಕರಣ್ ಸೆಂಚುರಿ ಉತ್ತರ – DC ಬಿಡಲ್ಲ KL ರಾಹುಲ್

ಕ್ರಿಕೆಟ್‌ನ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾರತ ವಿರುದ್ಧದ ಪಂದ್ಯದಲ್ಲಿ ಶಫಾಲಿ ವರ್ಮಾ ಔಟಾದ ಬಳಿಕ ಮಾಡಿದ ಸನ್ನೆ ಮತ್ತು ವರ್ತನೆಗೆ ಪಾಕಿಸ್ತಾನ ನಾಯಕಿ ಫಾತಿಮಾ ಸನಾಗೆ ICC ದಂಡ ವಿಧಿಸಿದೆ. ಪಂದ್ಯದ ಶುಲ್ಕದ ಶೇ.10ರಷ್ಟು ದಂಡದ ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಇದು 24 ತಿಂಗಳಲ್ಲಿ ಅವರ ಎರಡನೇ ಶಿಸ್ತು ಉಲ್ಲಂಘನೆಯಾಗಿದೆ.
ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಎದುರಾಗಿದೆ. ಎರಡೂ ತಂಡಗಳು ಸೆಮಿಫೈನಲ್ ಗೆದ್ದರೆ ಸೆಪ್ಟೆಂಬರ್ 13ರಂದು ಫೈನಲ್‌ನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಬಹುದು. ಭಾರತ ಈಗಾಗಲೇ ಪಾಕಿಸ್ತಾನವನ್ನು ಗ್ರೂಪ್ ಹಂತದಲ್ಲಿ ಸೋಲಿಸಿರುವುದರಿಂದ, ಮತ್ತೊಂದು ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:BCCI ಹತ್ತಿರಕ್ಕೂ ಬಾಳಲ್ಲ PCB – ಟೀಂ ಇಂಡಿಯಾ 40 ಪಟ್ಟು ಗ್ರೇಟ್
ಭಾರತದ ನ್ಯೂಜಿಲೆಂಡ್ ಪ್ರವಾಸಕ್ಕೂ ಮುನ್ನ ಕಿವೀಸ್ ನಾ:ಯಕ ಮಿಚೆಲ್ ಸ್ಯಾಂಟ್ನರ್ ಜಸ್ಪ್ರೀತ್ ಬುಮ್ರಾ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ಸರಣಿಯಲ್ಲಿ ಬುಮ್ರಾ ಭಾರತದ ಪ್ರಮುಖ ಅಸ್ತ್ರವಾಗಲಿದ್ದು, ಅವರ ಬೌಲಿಂಗ್ ಪಂದ್ಯಗಳ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಯಾಂಟ್ನರ್ ಅಭಿಪ್ರಾಯಪಟ್ಟಿದ್ದಾರೆ
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ PCB ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಕಳೆದ ಹತ್ತು ವರ್ಷ ಹಿಂದಕ್ಕೆ ಹೋಗಿದೆ ಎಂದು ಅವರು ಆರೋಪಿಸಿದ್ದಾರೆ. ತಂಡದ ಕಳಪೆ ಪ್ರದರ್ಶನಕ್ಕೆ ಆಡಳಿತ ಮಂಡಳಿಯ ನಿರ್ಧಾರಗಳೇ ಪ್ರಮುಖ ಕಾರಣ ಎಂದು ಅಜ್ಮಲ್ ಹೇಳಿದ್ದಾರೆ. PCB ಅಧ್ಯಕ್ಷ ಮೊಹ್ಸಿನ್ ನಖ್ವಿ ಮಾತ್ರ ಬದಲಾವಣೆಗಳು ಅಗತ್ಯವೆಂದು ಸಮರ್ಥಿಸಿಕೊಂಡಿದ್ದಾರೆ.
ಕರಣ್ ನಾಯರ್ ಮತ್ತು ತಿಲಕ್ ವರ್ಮಾ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸೌತ್ ಝೋನ್ ತಂಡದ ನಾಯಕ ತಿಲಕ್ ವರ್ಮಾ, ಅನುಭವಿ ಬ್ಯಾಟರ್ ಕರಣ್ ನಾಯರ್ ಅವರನ್ನು ಸೆಮಿಫೈನಲ್ ಪಂದ್ಯದಲ್ಲಿ ಆಡಿಸಿಲ್ಲ. ಬಳಿಕ ತಂಡದಿಂದ ಹೊರಬಂದ ಕೆಎಸ್‌ಸಿಎ ಸೆಕ್ರೆಟರಿ ಇಲೆವೆನ್ ಪರ ಆಡಿದ ಕರಣ್, ಚತ್ತೀಸ್‌ಗಢ ವಿರುದ್ಧ ಶತಕ ಸಿಡಿಸಿ ಬ್ಯಾಟ್‌ನಿಂದಲೇ ತಿಲಕ್‌ಗೆ ಉತ್ತರ ನೀಡಿದ್ದಾರೆ.
ಕೆಕೆಆರ್ ತಂಡಕ್ಕೆ ಹೊಸ ನಾಯಕನ ಹುಡುಕಾಟ ಶುರುವಾಗಿದೆ. ಇದೇ ಸಂದರ್ಭದಲ್ಲಿ ರಿಂಕು ಸಿಂಗ್ ಅವರನ್ನು ನಾಯಕನನ್ನಾಗಿ ಮಾಡಬೇಕು ಎಂಬ ಮಾತುಗಳು ಜೋರಾಗಿವೆ. ರಿಂಕು ಸಿಂಗ್ ನಾಯಕತ್ವದಲ್ಲಿ ಯುಪಿ ಟಿ20 ಲೀಗ್‌ನ ಮೀರುಟ್ ಮೇವರಿಕ್ಸ್ ತಂಡ ಚಾಂಪಿಯನ್ ಆಗಿದೆ. ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 9 ಗೆಲುವು ತಂದುಕೊಟ್ಟಿರುವ ರಿಂಕು, ನಾಯಕನಾಗಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಹೀಗಾಗಿ ಇವರು ಕೆಕೆಆರ್ ಕ್ಯಾಪ್ಟನ್ ಆಗಬೇಕು ಅನ್ನೋ ಮಾತು ಕೇಳಿ ಬರ್ತಿದೆ.
ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟು ಬೇರೆ ತಂಡ ಸೆರ್ತಾರೆ ಅನ್ನೋ ಎಲ್ಲಾ ಸುಳ್ಳು ಸುದ್ದಿಗಳಿಗೆ ಪಾರ್ಥ್ ಜಿಂದಾಲ್ ಬ್ರೇಕ್ ಹಾಕಿದ್ದಾರೆ. ಅವರು ಈ ಬಗ್ಗೆ ಪೋಸ್ಟ್ ಹಾಕಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಕೆ.ಎಲ್. ರಾಹುಲ್ ಒಬ್ಬ ಕ್ಲಚ್ ಪ್ಲೇಯರ್. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹೆಮ್ಮೆ ಪಡುವಂತೆ ಮಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದು ಜಿಂದಾಲ್ ಬರೆದುಕೊಂಡಿದ್ದಾರೆ. ಹಾಗೇ ಡೆಲ್ಲಿ ತಂಡ ಕೂಡ ಈ ಬಗ್ಗೆ ವಿಡಿಯೋ ಹಾಕಿದ್ದು, ಡೆಲ್ಲಿ ಜರ್ಸಿ ಧರಿಸಿರುವ ಕೆ.ಎಲ್. ರಾಹುಲ್ ಅಭಿಮಾನಿಗಳನ್ನು ಉದ್ದೇಶಿಸಿ, “ನಾನು ನನ್ನ ಮನೆಯಲ್ಲಿದ್ದೇನೆ” ಎಂದು ಹೇಳುವ ಮೂಲಕ ತಾವು ತಂಡದಲ್ಲೇ ಮುಂದುವರಿಯುವುದನ್ನು ಸ್ಪಷ್ಟಪಡಿಸಿದ್ದರು.
ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ಇದೀಗ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಯಿಂದ ಸುದ್ದಿಯಾಗಿದ್ದಾರೆ. ಸಚಿನ್ ಅವರು ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಲೋನಾವಳಿಯಲ್ಲಿ ಬರೋಬ್ಬರಿ 70 ಕೋಟಿ ರೂಪಾಯಿಗೆ 3.86 ಎಕರೆ ಜಮೀನು ಖರೀದಿಸಿದ್ದಾರೆ. ಈ ಬೃಹತ್ ವಹಿವಾಟು ಸೆಪ್ಟೆಂಬರ್ 4, 2026 ರಂದು ಯಶಸ್ವಿಯಾಗಿ ನಡೆದಿದೆ. ಸಚಿನ್ ತೆಂಡೂಲ್ಕರ್ ಅವರು ಒಟ್ಟು ಮೂರು ಪ್ರತ್ಯೇಕ ಆಸ್ತಿ ಒಪ್ಪಂದಗಳ ಮೂಲಕ ಈ ಜಮೀನನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾರತದ ಜೂನಿಯರ್ ಕ್ರಿಕೆಟ್ ಸಮಿತಿ ಅಂಡರ್-19 ತಂಡಕ್ಕೆ ಆರ್ಯನ್ ಸಾವ್ಸಾನಿ ಮತ್ತು ತನ್ಮಯ್ ಬಲೋಡಾ ಅವರನ್ನು ಸೇರಿಸಿದೆ. ಸೆಪ್ಟೆಂಬರ್ 8ರಂದು BCCI ಈ ಬದಲಾವಣೆಯನ್ನು ಪ್ರಕಟಿಸಿದೆ. ಯುವ ಕ್ರಿಕೆಟಿಗರಿಗೆ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇದು ಮಹತ್ವದ ಅವಕಾಶವಾಗಿದ್ದು, ಮುಂದಿನ U-19 ಸರಣಿಗಳತ್ತ ಕ್ರಿಕೆಟ್ ಅಭಿಮಾನಿಗಳ ಗಮನ ಹರಿದಿದೆ.
ಇಂಗ್ಲೆಂಡ್‌ನ ಮಾಜಿ ಸ್ಟಾರ್ ಬ್ಯಾಟರ್ ಕೆವಿನ್ ಪೀಟರ್ಸನ್ ಮತ್ತೆ ರಾಷ್ಟ್ರೀಯ ತಂಡದ ವ್ಯವಸ್ಥೆಗೆ ಮರಳಿದ್ದಾರೆ. 2027ರ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ನ ವೈಟ್-ಬಾಲ್ ತಂಡಕ್ಕೆ ಅವರನ್ನು ಸ್ಪೆಷಲಿಸ್ಟ್ ಮೆಂಟರ್ ಆಗಿ ನೇಮಕ ಮಾಡಲಾಗಿದೆ. 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾದ ಬಳಿಕ ಇದೇ ಮೊದಲ ಬಾರಿಗೆ ಅವರು ಇಂಗ್ಲೆಂಡ್ ಸೆಟಪ್‌ನ ಭಾಗವಾಗಿದ್ದಾರೆ.

ನೋಡಿರಿ

