IPLನಲ್ಲಿ ಕನ್ನಡಿಗರ ದರ್ಬಾರ್! – ರಾಹುಲ್, ಕೃಷ್ಣ, ಕರುಣ್ ಯಾರೆಲ್ಲಾ?
ಈ ಸಲವೂ ನಿರ್ಲಕ್ಷಿಸಿತಾ RCB?

. 1.4 ಬಿಲಿಯನ್ ಇಂಡಿಯನ್ಸ್ ಸೆಲೆಬ್ರೇಟ್ ಮಾಡೋ ಕ್ರಿಕೆಟ್ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಯ್ತು. ಇದೇ ವೀಕ್ ಎಂಡ್ನಿಂದ ಭಾರತ ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಕ್ರಿಕೆಟ್ ಪ್ರೇಮಿಗಳೆಲ್ಲಾ ಐಪಿಎಲ್ ಗುಂಗಿನಲ್ಲಿರ್ತಾರೆ. ಇನ್ನೆರಡು ತಿಂಗಳು ಜಗತ್ತಿನ ಶ್ರೀಮಂತ ಲೀಗ್ನದ್ದೇ ಸದ್ದು ಸುದ್ದಿ ಎಲ್ಲವೂ. ಸೋ ಇಂಥಾ ಐಪಿಎಲ್ನಲ್ಲಿ ಆಡೋದು ಅಂದ್ರೆ ಅದು ಆಟಗಾರರಿಗೆ ಪ್ರತಿಷ್ಠೆಯೂ ಹೌದು. ಈ ಬಾರಿಯ ಐಪಿಎಲ್ನಲ್ಲಿ ಕರ್ನಾಟಕದ ಆಟಗಾರರೂ ಅಬ್ಬರಿಸಲಿದ್ದಾರೆ.
ಇದನ್ನೂ ಓದಿ : RCB ಫ್ಯಾನ್ಸ್‌ಗೆ ಬಿಗ್ ಶಾಕ್! – RCB Vs SRH ಮ್ಯಾಚ್ ಟಿಕೆಟ್ ದರ ಜಸ್ಟ್ 47,000 ರೂಪಾಯಿ!
ಐಪಿಎಲ್ ಅಂದ್ರೆ ಇಂಡಿಯನ್ಸ್ ಅಷ್ಟೇ ಅಲ್ಲದೇ ಜಗತ್ತಿನ ಸ್ಟಾರ್ ಆಟಗಾರರೆಲ್ಲಾ ಆಡ್ಬೇಕು ಅನ್ಕೊಳ್ತಾರೆ. ಬಿಡ್ಡಿಂಗ್ ಮೂಲಕ ಫ್ರಾಂಚೈಸಿಗಳಿಗೆ ಜಾಯ್ನ್ ಆಗ್ತಾರೆ. ಌಂಡ್ ಐಪಿಎಲ್ನಲ್ಲಿ ಚಾನ್ಸ್ ಸಿಕ್ಕ ಕೂಡಲೇ ಬೇರೆ ಬೇರೆ ಲೀಗ್ಗಳಿಗೆಲ್ಲಾ ಗುಡ್ ಬೈ ಹೇಳಿ ಬಂದು ಜಾಯ್ನ್ ಆದವರೂ ಇದ್ದಾರೆ. ಯಾಕಂದ್ರೆ ಇಲ್ಲಿ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ರೆ ಅವ್ರಿಗೆ ಅದೃಷ್ಟದ ಬಾಗಿಲು ತೆರೆದಂತೆಯೇ ಲೆಕ್ಕ. ಜಗತ್ತಿನ ಘಟಾನುಘಟಿ ಪ್ಲೇಯರ್ಗಳೆಲ್ಲಾ ಸೇರಿ ಆಡೋ ಐಪಿಎಲ್ನಲ್ಲಿ ಕನ್ನಡಿಗರೂ ಇದ್ದಾರೆ.
ಐಪಿಎಲ್ ಅಖಾಡದಲ್ಲಿ ಕನ್ನಡಿಗರು!
ಆಟಗಾರ ತಂಡ ಸಂಭಾವನೆ
ಕೆಎಲ್ ರಾಹುಲ್ ಡೆಲ್ಲಿ 14 ಕೋಟಿ ರೂ.
ಕರುಣ್ ನಾಯರ್ ಡೆಲ್ಲಿ 50 ಲಕ್ಷ ರೂ.
ದೇವದತ್ ಪಡಿಕ್ಕಲ್ ಬೆಂಗಳೂರು 5 ಕೋಟಿ ರೂ.
ಪ್ರಸಿದ್ಧ್ ಕೃಷ್ಣ ಗುಜರಾತ್ 9.5 ಕೋಟಿ ರೂ
ವೈಶಾಕ್ ವಿಜಯ್ ಕುಮಾರ್ ಪಂಜಾಬ್ 1.80 ಕೋಟಿ ರೂ
ಪ್ರವೀಣ್ ದುಬೆ ಪಂಜಾಬ್ 50 ಲಕ್ಷ ರೂ.
ಶ್ರೇಯಲ್ ಗೋಪಾಲ್ ಚೆನ್ನೈ 30 ಲಕ್ಷ ರೂ.
ಮನೀಶ್ ಪಾಂಡೆ ಕೊಲ್ಕತ್ತಾ 75 ಲಕ್ಷ ರೂ.
ಸ್ಮರಣ್ ರವಿಚಂದ್ರನ್ ಹೈದರಾಬಾದ್ 30 ಲಕ್ಷ ರೂ.

ನೋಡಿರಿ

