ಕುಗ್ಗಿಸಿದಷ್ಟೂ ಹಿಗ್ಗುವ KL – SLOT ಬದಲಾದ್ರೂ ಸೂಪರ್ ಶೋ! – ಬೆಸ್ಟ್ ಇದ್ರೂ T-20Iಗೆ ಯಾಕಿಲ್ಲ?

ಮಳೆಯ ಕಣ್ಣಾಮುಚ್ಚಾಲೆ ನಡುವೆ ಅಫ್ಘಾನಿಸ್ತಾನ ವಿರುದ್ಧ ಮೊದಲ ಮ್ಯಾಚ್ ಗೆದ್ದಿರೋ ಭಾರತ ಈಗ ಬುಧವಾರ ಎರಡನೇ ಪಂದ್ಯಕ್ಕೆ ರೆಡಿಯಾಗ್ತಿದೆ. ಏಕನಾ ಸ್ಟೇಡಿಯಮ್ನಲ್ಲಿ ಈ ಮ್ಯಾಚ್ ನಡೆಯಲಿದೆ. ಆದ್ರೆ ಈ ಪಂದ್ಯಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ಕೆಎಲ್ ರಾಹುಲ್ ಬಗ್ಗೆ ಬಾರೀ ಚರ್ಚೆಯಾಗ್ತಿದೆ.
ಐಪಿಎಲ್ ಬಳಿಕ ಅಫ್ಘಾನಿಸ್ತಾನ ವಿರುದ್ಧ ಭಾರತ ಏಕೈಕ ಟೆಸ್ಟ್ ಮ್ಯಾಚ್ ಗೆದ್ದು ಈಗ ಏಕದಿನ ಸರಣಿಯಲ್ಲೂ ಗೆಲುವಿನ ಜರ್ನಿ ಕಂಟಿನ್ಯೂ ಮಾಡಿದೆ. ಎರಡನೇ ಪಂದ್ಯ ಜೂನ್ 17ಕ್ಕೆ ಶೆಡ್ಯೂಲ್ ಆಗಿದೆ. ಆದ್ರೆ ಈ ಸರಣಿಯ ನಡುವೆ ಕೆಎಲ್ ರಾಹುಲ್ ವಿಚಾರದ ಬಗ್ಗೆ ಚರ್ಚೆಗಳಾಗ್ತಿದೆ. ಶ್ರೀಲಂಕಾದ ಮಾಜಿ ಕ್ಯಾಪ್ಟನ್ ತಿಲಕರತ್ನೆ ದಿಲ್ಶಾನ್ ಹೇಳಿರೋ ಮಾತುಗಳು ಕೂಡ ರಾಹುಲ್ ವಿಚಾರದಲ್ಲಿ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಸ್ಲಾಟ್ ಚೇಂಜ್ ಆದ್ರೂ ಫಾರ್ಮ್ ಬಿಟ್ಟುಕೊಡದ ಕೆಎಲ್ಗೆ ಅನ್ಯಾಯ ಆಗ್ತಿದ್ಯಾ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಟೆಸ್ಟ್ ನಲ್ಲಿ ಶತಕ.. ಏಕದಿನದಲ್ಲಿ ಸ್ಫೋಟಕ ಬ್ಯಾಟಿಂಗ್.. ಟಿ-20ಐನಲ್ಲಿ ಯಾಕಿಲ್ಲ?
ಅಫ್ಘಾನಿಸ್ತಾನ ವಿರುದ್ಧ ಬ್ಯಾಟಿಂಗ್ನಲ್ಲಿ ಶತಕ ಬಾರಿಸಿದ್ದ ಕೆಎಲ್ ರಾಹುಲ್ ಏಕದಿನ ಮಾದರಿಯ ಮೊದಲ ಮ್ಯಾಚಲ್ಲಿ 19 ಬಾಲಲ್ಲೇ 205ರ ಸ್ಟ್ರೈಕ್ ರೇಟ್ ನಲ್ಲಿ 39 ರನ್ಸ್ ಕಲೆ ಹಾಕಿದ್ರು. ಇದಕ್ಕೂ ಮುನ್ನ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವೂ ಅದ್ಭುತ ಪ್ರದರ್ಶನ ನೀಡಿದ್ರು. ಹೀಗಿದ್ರೂ ಟಿ-20ಐ ತಂಡದಲ್ಲಿ ರಾಹುಲ್ ಗೆ ಅವಕಾಶಗಳು ಸಿಗ್ತಿಲ್ಲ. ಇತ್ತೀಚೆಗೆ ಆಲ್ ಫಾರ್ಮೆಟ್ ಪ್ಲೇಯರ್ಸ್ ಸಕ್ಸಸ್ ಬಗ್ಗೆ ಮಾತನಾಡುವಾಗ ಕೆಎಲ್ ರಾಹುಲ್ ಹೆಸರನ್ನ ಪ್ರಸ್ತಾಪ ಮಾಡಿದ್ದ ತಿಲಕರತ್ನೆ ದಿಲ್ಶಾನ್ ರಾಹುಲ್ ಆಲ್ ಫಾರ್ಮೆಟ್ ಬೆಸ್ಟ್ ಪ್ಲೇಯರ್ ಎಂದಿದ್ರು. ಟಿ-20 ಮಾದರಿಗಿಂತ ಏಕದಿನ ಮತ್ತು ಟೆಸ್ಟ್ ನಲ್ಲಿ ಆಡುವ ಆಟಗಾರರು ಹೆಚ್ಚಿನದನ್ನ ಕಲಿಯುತ್ತಾರೆ. ಟಿ-20 ಫಾರ್ಮೆಟ್ ಬ್ಯುಸಿನೆಸ್ ಪರ್ಪಸ್ ಚೆನ್ನಾಗಿರುತ್ತೆ. ಹೀಗಾಗಿ ಕೆಲ ರಾಷ್ಟ್ರಗಳಲ್ಲಿ ಬೇರೆಬೇರೆ ಮಾದರಿಗೆ ಬೇರೆ ಬೇರೆ ಆಟಗಾರರನ್ನ ನಾಯಕರನ್ನ ಸೆಲೆಕ್ಟ್ ಮಾಡ್ತಾರೆ. ಆದ್ರೆ ಭಾರತ ತಂಡದಲ್ಲಿ ಶುಭ್ಮನ್ ಗಿಲ್ ಮತ್ತು ರಾಹುಲ್ ಆಲ್ ಫಾರ್ಮೆಟ್ನಲ್ಲಿ ಬೆಸ್ಟ್ ಅಂದಿದ್ರು. ಹೀಗಿದ್ರೂ ಸದ್ದೇ ಇಲ್ಲದೆ ರಾಹುಲ್ರನ್ನ ಭಾರತ ಟಿ-20 ತಂಡದಿಂದ ದೂರವೇ ಇಟ್ಟಿದ್ದಾರೆ. 2022ರ ನವೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೇದಾಗಿ ಆಡಿದ್ದು. ಅದಾದ ಮೇಲೆ ಮತ್ತೆ ತಂಡಕ್ಕೆ ಸೆಲೆಕ್ಟ್ ಆಗಿಲ್ಲ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ಬರ್ತಿದ್ರು ಭಾರತ ತಂಡದ ಬಾಗಿಲು ಮುಚ್ಚೇ ಇದೆ. ಮುಂದಿನ ದಿನಗಳಲ್ಲೂ ತೆಗೆಯೋದು ಕಷ್ಟವೇ.
ರಾಹುಲ್ ಗೆ ಯಾಕಿಲ್ಲ ಚಾನ್ಸ್?
ಬ್ಯಾಟಿಂಗ್ ಪೊಸಿಷನ್ ಮಿಸ್ ಮ್ಯಾಚ್ ಆಗ್ತಿದೆ ಎಂದಿರುವ ಅಗರ್ಕರ್
ಆರಂಭದಲ್ಲಿ ಸ್ಟ್ರೈಕ್ ರೇಟ್ ಕಾರಣ ನೀಡಿದ್ರೂ ಈಗ ಪವರ್ ಹಿಟ್ಟರ್
ಅಗ್ರೆಸ್ಸಿವ್ ಬ್ಯಾಟಿಂಗ್ ಇಂಟೆಂಟ್ ಕಾರಣ ನೀಡುತ್ತಿರುವ ಸೆಲೆಕ್ಟರ್ಸ್
ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಗೆ ಸೀಮಿತ ಮಾಡಿರೋದ್ರಿಂದ ಕಷ್ಟ
ಟಿ-20ಐ ಫಾರ್ಮೆಟ್ ನಲ್ಲಿ ಯಂಗ್ ಸ್ಟರ್ಸ್ ಗೆ ಬಿಸಿಸಿಐ ಮಣೆ
ನಾಲ್ಕು ವರ್ಷದಿಂದ ಹೊರಗಿರುವ ರಾಹುಲ್ ಮರಳಿ ಆಡುವುದು ಕಷ್ಟ
ಸದ್ಯದ ಪ್ರೊಗ್ರೆಸ್ಗಳನ್ನ ನೋಡ್ತಿದ್ರೆ ರಾಹುಲ್ ಮತ್ತೆ ಭಾರತದ ಪರ ಟಿ-20ಐ ಆಡೋದೇ ಕಷ್ಟ ಇದೆ. ಹೊಸ ಮುಖಗಳಿಗೆ ಮಣೆ ಹಾಕ್ತಿರೋದ್ರಿಂದ ಏಕದಿನ ಮತ್ತು ಟೆಸ್ಟ್ನಲ್ಲಷ್ಟೇ ರಾಹುಲ್ ಆಡ್ಬೇಕಾಗುತ್ತೆ.

ನೋಡಿರಿ

