ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಕೆ.ಎಲ್ ರಾಹುಲ್ ಶೈನಿಂಗ್ – ಸೌತ್ ಆಫ್ರಿಕಾದಲ್ಲಿ ಕನ್ನಡಿಗನ ಬೊಂಬಾಟ್ ಬ್ಯಾಟಿಂಗ್
ಕೆ.ಎಲ್. ರಾಹುಲ್.. ಟೀಂ ಇಂಡಿಯಾದ ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ ಕೇವಲ ಹೆಸರಲ್ಲಿ ಮಾತ್ರವಲ್ಲ ಬ್ಯಾಟಿಂಗ್ನಲ್ಲಿ ರಾಹುಲ್ ದ್ರಾವಿಡ್ರಂತೆಯೇ ಆಪತ್ಬಾಂಧವ. ಸೌತ್ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್ ಮ್ಯಾಚ್ನ ಡೇ 1 ಟೀಂ ಇಂಡಿಯಾಗೆ ತುಂಬಾನೆ ಚಾಲೆಂಜಿಂಗ್ ಆಗಿತ್ತು. ಆದ್ರೆ ತಂಡದ ಮರ್ಯಾದೆ ಉಳಿಸಿರೋದು ಕನ್ನಡಿಗ ಕೆ.ಎಲ್. ರಾಹುಲ್. ಒಬ್ಬ ಕ್ಲಾಸ್ ಬ್ಯಾಟ್ಸ್ಮನ್ನನ್ನ ಯಾವತ್ತೂ ನೆಗ್ಲೆಕ್ಟ್ ಮಾಡಬಾರದು ಅನ್ನೋದು ಈ ಆಟವೇ ಸಾಕ್ಷಿಯಾಗಿದೆ.
ಇದನ್ನೂ ಓದಿ: ಏನಿದು BOXING DAY ಟೆಸ್ಟ್? – ಈ ಮ್ಯಾಚ್‌ಗೆ ಯಾಕಿಷ್ಟು ಮಹತ್ವ ಕೊಡುತ್ತಾರೆ?
ಸೌತ್ ಆಫ್ರಿಕಾನ್ನರಗೆ ಮೊದಲೇ ಗೊತ್ತಿತ್ತು.. ಹೇಳಿಕೇಳಿ ಇದು ಫಾಸ್ಟ್ ಬೌಲರ್ಸ್ಗಳ ಪಾಲಿನ ಪಿಚ್. ದಕ್ಷಿಣ ಆಫ್ರಿಕಾ ಬೌಲರ್ಸ್ಗಳಂತೂ ಅಟ್ಯಾಕ್ ಮಾಡಲು ಕಾಯುತ್ತಿದ್ದರು. ಟಾಸ್ ಗೆದ್ದ ಸೌತ್ ಆಫ್ರಿಕಾ ನೇರವಾಗಿ ಬ್ಯಾಟಿಂಗ್ಗೆ ಇಳೀರಪ್ಪಾ.. ಬೌಲಿಂಗ್ ಅಂದ್ರೆ ಏನು ಅಂತಾ ತೋರಿಸ್ತೀವಿ ಅನ್ನೋ ರೀತಿಯಲ್ಲೇ ಟೀಂ ಇಂಡಿಯಾವನ್ನ ಮೊದಲು ಬ್ಯಾಟಿಂಗ್ಗೆ ದಬ್ಬಿದ್ರು. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಓಪನಿಂಗ್ ಆಗಿ ಕ್ರೀಸ್ಗಿಳಿದ್ರು. ಆದ್ರೆ ಕಗಿಸೋ ರಬಾಡ ಬೌಲಿಂಗ್ನಲ್ಲಿ ರೋಹಿತ್ ಶರ್ಮಾ ತಮ್ಮ ಫೇವರೇಟ್ ಶಾಟ್ ಆಡೋಕೆ ಕ್ಯಾಚ್ ಕೊಟ್ಟು 5 ರನ್ಗೆ ಔಟಾದ್ರು. ಇನ್ನೊಂದು ವಿಶೇಷ ಏನು ಗೊತ್ತಾ.. ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾರನ್ನ ಅತೀ ಹೆಚ್ಚು ಬಾರಿ ಔಟ್ ಮಾಡಿರೋ ಬೌಲರ್ ಅಂದ್ರೆ ಅದು ಕಗಿಸೋ ರಬಾಡ. 13 ಬಾರಿ ರೋಹಿತ್ ವಿಕೆಟ್ ಪಡೆದಿದ್ದಾರೆ. ರೋಹಿತ್ರನ್ನ ರಬಾಡ್ ಔಟ್ ಮಾಡಿದಷ್ಟು ಇನ್ಯಾವ ಬೌಲರ್ ಕೂಡ ರೋಹಿತ್ ವಿಕೆಟ್ ಪಡೆದಿಲ್ಲ. ಪುಲ್ಶಾಟ್ ಪ್ಲೇಯರ್ನ್ನ ಯಾವ ರೀತಿ ಮಾಡಬೇಕು ಅನ್ನೋದು ರಬಾಡಾಗೆ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ತಮ್ಮ ಫೇವರೇಟ್ ಶಾಟ್ ಆಡುವಂತೆಯೇ ರೋಹಿತ್ ಶರ್ಮಾರನ್ನ ಡ್ರ್ಯಾಗ್ ಮಾಡಿ ಔಟ್ ಮಾಡಿದ್ರು. ರೋಹಿತ್ ಬೆನ್ನಲ್ಲೇ ಶುಬ್ಮನ್ ಗಿಲ್ ಮತ್ತು ಜೈಸ್ವಾಲ್ ಕೂಡ ಬಂದ ದಾರಿಯಲ್ಲೇ ಹೋದ್ರು. ಸೌತ್ ಆಫ್ರಿಕನ್ನರ ಬೌನ್ಸಿ ಬಾಲ್ಗೆ ಆಡೋಕೆ ನಮ್ಮ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಒದ್ದಾಡಿದ್ರು.
ಸೌತ್ ಆಫ್ರಿಕಾದ ಪಿಚ್ಗಳಲ್ಲಿ ಫಾಸ್ಟ್ ಬೌಲರ್ಸ್ಗಳಿಗೆ ಎಕ್ಸ್ಟ್ರಾ ಬೌನ್ಸ್ ಸಿಗೋ ಕಾರಣ ಆಡೋದು ಈಸಿ ಇಲ್ವೇ ಇಲ್ಲ. ಹೆಚ್ಚಿನ ಬಾಲ್ಗಳನ್ನ ಲೀವ್ ಮಾಡ್ತಾನೆ ಇರಬೇಕಾಗುತ್ತೆ. ಬಾಲ್ ಹಳೆಯದಾಗೋವರೆಗೂ ತುಂಬಾ ಕೇರ್ಫುಲ್ ಆಗಿ ಆಡಬೇಕು. ಇಲ್ಲದಿದ್ರೆ ಸ್ಲಿಪ್ನಲ್ಲಿ ಕ್ಯಾಚ್ ಕೊಟ್ಟು ಔಟಾಗೋದು ಫಿಕ್ಸ್. ನಂತ್ರ ಕ್ರೀಸ್ನಲ್ಲಿ ಸ್ಟೇಯಾಗಿದ್ದು ವಿರಾಟ್ ಕೊಹ್ಲಿ. 64 ಬಾಲ್ಗಳಲ್ಲಿ 38 ರನ್ ಗಳಿಸಿದ್ರು. ವಿರಾಟ್ ಆ್ಯಕ್ಚುವಲಿ ಚೆನ್ನಾಗಿಯೇ ಆಡ್ತಾ ಇದ್ರು. ಆದ್ರೆ ಕೊಹ್ಲಿಯನ್ನ ಔಟ್ ಮಾಡೋದಕ್ಕಾಗಿ ಸೌತ್ ಆಫ್ರಿಕಾ ಬೌಲರ್ಸ್ಗಳು ಸರಿಯಾಗಿಯೇ ಸ್ಟ್ರ್ಯಾಟಜಿ ಮಾಡಿದ್ರು. ಡಿಸೆಂಬರ್ 23ಕ್ಕೆ ಕೊಹ್ಲಿಗೆ ಕೌಂಟರ್ ಪ್ಲ್ಯಾನ್ ಮಾಡಿರೋದ್ರ ಬಗ್ಗೆ ಒಂದು ಎಪಿಸೋಡ್ ಮಾಡಿದ್ದೆ. ವಿರಾಟ್ ಕೊಹ್ಲಿಯನ್ನ ಹೇಗೆ ಔಟ್ ಮಾಡಬೇಕು ಅನ್ನೋ ಬಗ್ಗೆ ದಕ್ಷಿಣ ಆಫ್ರಿಕಾ ಮತ್ತು ಆರ್ಸಿಬಿ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಒಂದಷ್ಟು ಟಿಪ್ಸ್ ಕೊಟ್ಟಿದ್ರು. ಜಸ್ಟ್ ಔಟ್ ಸೈಡ್ ದಿ ಆಫ್ ಸ್ಟಂಪ್ನತ್ತ ಬಾಲ್ ಎಸೀಬೇಕು ಅನ್ನೋದಾಗಿ. ಅಂದ್ರೆ ಫೋರ್ತ್ ವಿಕೆಟ್ ಲೈನ್ನಲ್ಲಿ ಬೌಲಿಂಗ್ ಮಾಡಬೇಕು. ಇಲ್ಲಿ ಕಗಿಸೊ ರಬಾಡ ಮಾಡಿರೋದು ಕೂಡ ಇದನ್ನೇ. ಜಸ್ಟ್ ಔಟ್ಸೈಡ್ ದಿ ಆಫ್ಸ್ಟಂಪ್ನತ್ತ ಬೌನ್ಸಿಯಾಗಿ ಬಾಲ್ ಎಸೆದ್ರು, ಕೊಹ್ಲಿ ಅದನ್ನ ಕೆಣಕಿ ಬ್ಯಾಟ್ನ ಎಡ್ಜಿಗೆ ಬಾಲ್ ಬಡಿದು ಕ್ಯಾಚ್ ಕೊಟ್ಟು ಔಟಾದ್ರು. ಸೇಮ್ ಎಬಿಡಿ ವಿಲಿಯರ್ಸ್ ಹೇಳಿದ್ದ ಪ್ಲ್ಯಾನ್ ಇದು. ಈ ಹಿಂದೆ ರೋಹಿತ್ ಔಟ್ ಆಫ್ ಫಾರ್ಮ್ನಲ್ಲಿದ್ದಾಗಲೂ ಅಷ್ಟೇ, ಇಂಥದ್ದೇ ಜಸ್ಟ್ ಔಟ್ ಸೈಡ್ ದಿ ಆಫ್ ಸ್ಟಂಪ್ ಬಾಲ್ಗಳಿಗೆ ಔಟಾಗಿದ್ರು. ಕೊಹ್ಲಿಯ ವೀಕ್ನೆಸ್ ಇರೋದೆ ಇಲ್ಲಿ. ಹೀಗಾಗಿ ಸೌತ್ ಆಫ್ರಿಕಾ ಬೌಲರ್ಸ್ಗಳು ಕೂಡ ಅದನ್ನೇ ನೋಟ್ ಮಾಡಿಕೊಂಡು ಟಾರ್ಗೆಟ್ ಮಾಡಿದ್ದಾರೆ. ಸೋ ಕೊಹ್ಲಿ ಈ ಬಾಲ್ಗೆ ಆಡೋ ವಿಚಾರದಲ್ಲಿ ವರ್ಕೌಟ್ ಮಾಡಲೇಬೇಕಿದೆ. ಟೀಂ ಇಂಡಿಯಾದ ಟಾಪ್ 5 ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ಮಾಡಿದ್ದನ್ನ ನೋಡಿದ್ರೆ 150ರೊಳಗೆ ಆಲ್ಔಟ್ ಆಗುವಂತಿತ್ತು. ಆದ್ರೆ, ಕೊನೆಗೂ ಕೆಎಲ್ ರಾಹುಲ್ ನಿಂತು ಆಡಿದ್ರು. ಇಲ್ಲಿ ರಾಹುಲ್ ಬ್ಯಾಟಿಂಗ್ ಬಗ್ಗೆ ಒಂದಷ್ಟು ಹೇಳಲೇಬೇಕು. ಪ್ಯೂರ್ ಕ್ಲಾಸ್.. 6ನೇ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಇಳಿದ ಕೆಎಲ್ ಆರಂಭದಲ್ಲಿ ಟೈಮ್ ತಗೊಂಡ್ರು. ಡಿಫೆನ್ಸಿವ್ ಆಗಿ ಆಡಿದ್ರು..ಬಾಲ್ನ್ನ ಲೀವ್ ಮಾಡಿದ್ರು. ಅನಗತ್ಯ ರಿಸ್ಕ್ ತೆಗೆದುಕೊಳ್ಳಲೇ ಇಲ್ಲ. ಒಮ್ಮೆ ಪಿಚ್ನಲ್ಲಿ ಸೆಟ್ ಆಗ್ತಾ ಇದ್ದಂತೆ ಅಟ್ಯಾಕಿಂಗ್ ಆಗಿ ಆಡೋಕೆ ಶುರು ಮಾಡಿದ್ರು. ಫಸ್ಟ್ ಡೇನಲ್ಲಿ ರಾಹುಲ್ 70 ರನ್ ಗಳಿಸಿ ನಾಟ್ಔಟ್ ಆಗಿದ್ರು. ಈ 70 ರನ್ಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಕೂಡ ಬಂದಿತ್ತು. ಕೆಎಲ್ ರಾಹುಲ್ ಆಡಿದ್ದು ಕೇವಲ 105 ಬಾಲ್ಗಳನ್ನ ಮಾತ್ರ. ಟೆಸ್ಟ್ ಕ್ರಿಕೆಟ್ನಲ್ಲಿ 105 ಬಾಲ್ಗಳಲ್ಲಿ 70 ರನ್ ಹೊಡೆದಿದ್ದಾರೆ ಅಂದ್ರೆ ಕೆಎಲ್ ರಾಹುಲ್ ಇಲ್ಲಿ ಆಲ್ಮೋಸ್ಟ್ ವಂಡೇ ಮೋಡ್ನಲ್ಲೇ ಬ್ಯಾಟಿಂಗ್ ಮಾಡಿದ್ದಾರೆ. ಯಾಕಂದ್ರೆ ಟೀಂ ಇಂಡಿಯಾ 5 ವಿಕೆಟ್ಗಳನ್ನ ಕಳೆದುಕೊಂಡು ಟ್ರಬಲ್ನಲ್ಲಿದ್ದಾಗ ಕೆಎಲ್ ಕ್ರೀಸ್ಗಿಳಿದಿರೋದು. ಬಟ್..ಕೆಎಲ್ ರಾಹುಲ್ ಆಡಿದ ಒಂದೊಂದು ಶಾಟ್ಸ್ ಕೂಡ ಸಖತ್ತಾಗಿತ್ತು.. ಪ್ಯೂರ್ ಕ್ಲಾಸ್.. ಅದಕ್ಕೆ ಹೇಳೋದು ಫಾರ್ಮ್ ಕಳೆದುಕೊಂಡಾಗಲೂ ಕ್ಲಾಸ್ ಬ್ಯಾಟ್ಸ್ಮನ್ಗಳನ್ನ ಯಾವಾಗಲೂ ಬ್ಯಾಕ್ಅಪ್ ಮಾಡಲೇಬೇಕು. ಯಾಕಂದ್ರೆ ಫಾರ್ಮ್ ಈಸ್ ಟೆಂಪರರಿ..ಬಟ್ ಕ್ಲಾಸ್ ಈಸ್ ಪರ್ಮನೆಂಟ್.. ಇಂಥಾ ಸ್ಟ್ಯಾಂಡರ್ಡ್ ಬ್ಯಾಟ್ಸ್ಮನ್ಗಳ ಕೆರಿಯರ್ನಲ್ಲಿ ಪ್ಯಾಚ್ಅಪ್ ಅನ್ನೋದು ಇದ್ದೇ ಇರುತ್ತೆ. ಆದ್ರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ನಂಥವರು ಕ್ಲಾಸ್ ಬ್ಯಾಟ್ಸ್ಮನ್ಗಳು. ಹೀಗಾಗಿ ಕೆಲ ಮ್ಯಾಚ್ಗಳಲ್ಲಿ ಆಡಿಲ್ಲ ಅನ್ನೋ ಕಾರಣಕ್ಕೆ ಅವರನ್ನ ಡ್ರಾಪ್ ಮಾಡೋದ್ರಲ್ಲಿ ಅರ್ಥವೇ ಇಲ್ಲ. ಈಗ ನೋಡಿ, ಕೆಎಲ್ ರಾಹುಲ್ ಇಂಥದ್ದೊಂದು ಟಾಪ್ ನಾಚ್ ಇನ್ನಿಂಗ್ಸ್ ಆಡಿರೋದು ಸೌತ್ ಆಫ್ರಿಕಾ ಪಿಚ್ನಲ್ಲಿ. ಉಳಿದೆಲ್ಲಾ ಟಾಪ್ ಬ್ಯಾಟ್ಸ್ಮನ್ಗಳು ಫೇಲ್ ಆಗಿದ್ರೂ ಕೆಎಲ್ ರಾಹುಲ್ ಮಾತ್ರ ಆಫ್ರಿಕನ್ನರ ಬೌನ್ಸಿ, ಪೇಸ್ ಬೌಲಿಂಗ್ಗೂ ಕೇರ್ ಮಾಡದೆ ತಮ್ಮ ಕೆರಿಯರ್ನ ವನ್ ಆಫ್ ದಿ ಬೆಸ್ಟ್ ಇನ್ನಿಂಗ್ಸ್ ಆಡಿದ್ರು.