DC ಕ್ಯಾಪ್ಟನ್ಸಿ ಬೇಡವೆಂದ KL – IPLನಲ್ಲಿ ಜಸ್ಟ್ ಪ್ಲೇಯರ್ ರಾಹುಲ್

2025ರ ಐಪಿಎಲ್ ಹಿಂದೆಂದಿಗಿಂತ್ಲೂ ಸ್ಪೆಷಲ್ ಆಗಿ ಕಾಣ್ತಿದೆ. ಕಳೆದ ನವೆಂಬರ್ನಲ್ಲಿ ಮೆಗಾ ಹರಾಜು ನಡೆದಿದ್ದರಿಂದ ಸ್ಟಾರ್ ಆಟಗಾರರೆಲ್ಲಾ ಬೇರೆ ಬೇರೆ ಟೀಂ ಸೇರ್ಕೊಂಡಿದ್ದಾರೆ. ಹೊಸ ಹೊಸ ಜೆರ್ಸಿಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕೆಲ ಫ್ರಾಂಚೈಸಿಗಳಲ್ಲಿ ಕ್ಯಾಪ್ಟನ್ಗಳೂ ಬದಲಾಗಿದ್ದು. ಟೋಟಲಿ ಟೀಮ್ಗಳೆಲ್ಲಾ ಡಿಫ್ರೆಂಟ್ ಆಗಿ ಕಾಣ್ತಿವೆ. ಬಟ್ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು ಕೆಎಲ್ ರಾಹುಲ್ ನಾಯಕತ್ವ ನಿರಾಕರಿಸಿದ್ದಾರೆ
ಐಪಿಎಲ್ 2025ರ ನಾಯಕರು!
ತಂಡ ನಾಯಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ರಜತ್ ಪಾಟಿದಾರ್
ಚೆನ್ನೈ ಸೂಪರ್ ಕಿಂಗ್ಸ್ ಋತುರಾಜ್ ಗಾಯಕ್ವಾಡ್
ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ
ಸನ್ ರೈಸರ್ಸ್ ಹೈದ್ರಾಬಾದ್ ಪ್ಯಾಟ್ ಕಮಿನ್ಸ್
ಪಂಜಾಬ್ ಕಿಂಗ್ಸ್ ಶ್ರೇಯಸ್ ಅಯ್ಯರ್
ಲಕ್ನೋ ಸೂಪರ್ ಜೇಂಟ್ಸ್ ರಿಷಭ್ ಪಂತ್
ರಾಜಸ್ತಾನ ರಾಯಲ್ಸ್ ಸಂಜು ಸ್ಯಾಮ್ಸನ್
ಕೊಲ್ಕತ್ತಾ ನೈಟ್ ರೈಡರ್ಸ್ ಅಜಿಂಕ್ಯ ರಹಾನೆ
ಗುಜರಾತ್ ಟೈಟಾನ್ಸ್ ಶುಭ್ ಮನ್ ಗಿಲ್
ಡೆಲ್ಲಿ ಕ್ಯಾಪಿಟಲ್ಸ್ ?
ಐಪಿಎಲ್ ಆರಂಭಕ್ಕೆ ಇನ್ನೊಂದೇ ವಾರ ಬಾಕಿ ಇದ್ದು, 9 ತಂಡಗಳ ನಾಯಕರು ಅನೌನ್ಸ್ ಆಗಿದ್ದಾರೆ. ಬಟ್ ಡೆಲ್ಲಿ ಕ್ಯಾಪಿಟಲ್ಸ್ ಗೆ ಇನ್ನೂ ಫೈನಲ್ ಆಗಿಲ್ಲ. ಆಲ್‌ರೌಂಡರ್ ಅಕ್ಸರ್ ಪಟೇಲ್ ಮತ್ತು ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಇಬ್ಬರೂ ಪ್ರಬಲ ಸ್ಪರ್ಧಿಗಳಾಗಿದ್ರು. ಇದ್ರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದರಿಂದ ಅವ್ರ ಹೆಸ್ರೂ ಮುಂಚೂಣಿಗೆ ಬಂದಿತ್ತು. ಬಟ್ ಅಂತಿಮವಾಗಿ ಅಕ್ಷರ್ ಅಥವಾ ಕೆಎಲ್ ಇಬ್ಬರಲ್ಲಿ ಒಬ್ರು ನಾಯಕ ಆಗ್ತಾರೆ ಎನ್ನಲಾಗಿತ್ತಾದ್ರೂ ಕೆಎಲ್ ರಾಹುಲ್ ರೇಸ್ನಿಂದ ಹೊರ ಬಂದಿದ್ದಾರೆ.
2025ರ ಐಪಿಎಲ್ಗೆ ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿಕೊಳ್ಳಲು ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ರನ್ನ ಫ್ರಾಂಚೈಸಿ ಕೇಳಿಕೊಂಡಿದೆ. ಆದ್ರೆ ನಾಯಕನಾಗೋಕೆ ರಾಹುಲ್ ತಿರಸ್ಕಾರ ಮಾಡಿದ್ದಾರೆ. ಅಲ್ದೇ ತಂಡಕ್ಕಾಗಿ ಬ್ಯಾಟ್ಸ್‌ಮನ್ ಆಗಿ ಆಡುವುದಾಗಿ ತಿಳಿಸಿದ್ದಾಗಿ ರಿಪೋರ್ಟ್ ಮಾಡ್ಲಾಗಿದೆ. ಆದ್ರೂ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಇನ್ನೂ ಕೂಡ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಮತ್ತೊಮ್ಮೆ ರಾಹುಲ್ ಅವರ ಮನವೊಲಿಸಲು ಮುಂದಾಗಬಹುದು. ಆದರೆ ಮತ್ತೊಮ್ಮೆ ಕೆಎಲ್ಆರ್ ನಾಯಕತ್ವವನ್ನು ನಿರಾಕರಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ಮುಂದೆ ಎರಡು ಆಯ್ಕೆಗಳಿವೆ.
ಕೆಎಲ್ ರಾಹುಲ್ ನಾಯಕತ್ವ ವಹಿಸಿಕೊಳ್ಳದೇ ಇದ್ರೆ ಡೆಲ್ಲಿ ಫ್ರಾಂಚೈಸಿ ಮುಂದೆ ಎರಡು ಆಯ್ಕೆಗಳಿವೆ. ಅದ್ರಲ್ಲಿ ನಂಬರ್ 1 ಅಕ್ಷರ್ ಪಟೇಲ್. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಡಿಸಿ ಕ್ಯಾಪ್ಟನ್ಸಿಗೆ ಮೊದಲನೇ ಚಾಯ್ಸ್ ಆಗಬಹುದು. ಅಲ್ದೇ ಈ ಹಿಂದೆ ಕೆಲ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹಾಗೆಯೇ ಅನುಭವಿ ನಾಯಕನಾಗಿ ಫಾಫ್ ಡುಪ್ಲೆಸಿಸ್ ಕೂಡ ಡೆಲ್ಲಿ ಪಡೆಯಲಿದ್ದಾರೆ. ಬಟ್ ಇಲ್ಲಿ ಫಾಫ್ ಡುಪ್ಲೆಸಿಸ್ ರನ್ನ ಪಿಕ್ ಮಾಡೋದು ಕಡಿಮೆ. ಫಾಫ್ಗೆ ಅನುಭವ ಇದ್ರೂ 40+ ವಯಸ್ಸಾಗಿರೋದ್ರಿಂದ ಭವಿಷ್ಯದ ದೃಷ್ಟಿಯಿಂದ ಅಕ್ಷರ್ಗೆ ಮಣೆ ಹಾಕಬಹುದು. ಹೀಗಾಗಿ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ತಂಡದ ನಾಯಕನಾಗುವ ಎಲ್ಲ ಸಾಧ್ಯತೆ ಇದೆ. ಇಲ್ಲಿ ಕೆಎಲ್ ರಾಹುಲ್ ಕ್ಯಾಪ್ಟನ್ಸಿ ರಿಜೆಕ್ಟ್ ಮಾಡಿರೋದ್ರ ಹಿಂದ ಕೆಲ ಕಾರಣಗಳೂ ಇವೆ. ಪತ್ನಿ ಅತಿಯಾ ಶೆಟ್ಟಿ ಗರ್ಭಿಣಿಯಾಗಿರುವುದರಿಂದ ಕೆಎಲ್ ರಾಹುಲ್ ಒಂದು ಅಥವಾ ಎರಡು ಐಪಿಎಲ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಮೊದಲನೇ ಮಗುವಿನ ನಿರೀಕ್ಷೆಯಲ್ಲಿರೋದ್ರಿಂದ ಪತ್ನಿ ಜೊತೆ ಟೈಂ ಸ್ಪೆಂಡ್ ಮಾಡಲಿದ್ದಾರೆ. ಹೀಗಾಗಿ ಕ್ಯಾಪ್ಟನ್ಸಿ ಒತ್ತಡಕ್ಕಿಂತ ಪ್ಲೇಯರ್ ಆಗಿಯೇ ಆಡೋದಾಗಿ ರಾಹುಲ್ ಕೂಡ ಫ್ರಾಂಚೈಸಿ ಮುಂದೆ ಕ್ಲಾರಿಟಿ ಕೊಟ್ಟಿದ್ದಾರೆ. ಇದೇ ಮೊದಲ ರಾಹುಲ್ ಡೆಲ್ಲಿ ತಂಡವನ್ನು ಸೇರಿದ್ದಾರೆ. ಬಟ್ ಈ ಹಿಂದೆ ಪಂಜಾಬ್ ಮತ್ತು ಲಕ್ನೋ ತಂಡವನ್ನ ಮುನ್ನಡೆಸಿದ ಎಕ್ಸ್ಪೀರಿಯನ್ಸ್ ಇದೆ.
ಡೆಲ್ಲಿ ತಂಡದ ಜೊತೆ ಕೆಎಲ್ ರಾಹುಲ್ ಗಿಂತ ಅಕ್ಷರ್ ಪಟೇಲ್ಗೆ ಹೆಚ್ಚಿನ ಅಟ್ಯಾಚ್ಮೆಂಟ್ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಜೊತೆಗಿನ ಏಳನೇ ಸೀಸನ್‌ನಲ್ಲಿರುವ ಅಕ್ಷರ್ ಪಟೇಲ್ ತಂಡದ ಪ್ಲಸ್ & ಮೈನಸ್ ಎಲ್ಲವನ್ನೂ ತಿಳ್ಕೊಂಡಿದ್ದಾರೆ. ಅಕ್ಸರ್ ಪಟೇಲ್ 150 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಸುಮಾರು 131 ಸ್ಟ್ರೈಕ್ ರೇಟ್‌ನಲ್ಲಿ 1653 ರನ್ ಗಳಿಸಿದ್ದು, 7.28 ಎಕಾನಮಿ ರೇಟ್‌ನಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ದೇ ಡೆಲ್ಲಿ ತಂಡ ಹರಾಜಿಗೂ ಮುನ್ನ 18 ಕೋಟಿ ರೂಪಾಯಿಗೆ ಅಕ್ಷರ್ ಪಟೇಲ್ರನ್ನ ರಿಟೇನ್ ಮಾಡಿಕೊಂಡಿತ್ತು. ಈ ಅದ್ಬುತ ಅನುಭವದಿಂದ ಅವರಿಗೆ ಡೆಲ್ಲಿ ತಂಡದ ನಾಯಕತ್ವ ಸಿಗಬಹುದು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಮೊದಲ ಎರಡು ಪಂದ್ಯಗಳಿಗಾಗಿ ವಿಶಾಖಪಟ್ಟಣಕ್ಕೆ ತೆರಳುವ ಮೊದಲು ದೆಹಲಿಯಲ್ಲಿ ಒಂದು ಸಣ್ಣ ತರಬೇತಿ ಮತ್ತು ಅಭ್ಯಾಸ ಶಿಬಿರವನ್ನು ನಡೆಸಲಿದೆ. ಮಾರ್ಚ್ 17 ಮತ್ತು 18 ರಂದು ವಿಶಾಖಪಟ್ಟಣದಲ್ಲಿ ಅಕ್ಸರ್ ಪಟೇಲ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ದಕ್ಷಿಣ ಆಫ್ರಿಕಾದ ಟ್ರಿಸ್ಟಾನ್ ಸ್ಟಬ್ಸ್, ಆಸ್ಟ್ರೇಲಿಯಾದ ಆಟಗಾರರಾದ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು ಮಿಚೆಲ್ ಸ್ಟಾರ್ಕ್ ಸೇರಿಕೊಳ್ಳಲಿದ್ದಾರೆ.
ಐಪಿಎಲ್ನಲ್ಲಿ ಕೆಎಲ್ ರಾಹುಲ್ ಗೆ ಟೀಂ ಲೀಡ್ ಮಾಡಿದ ಅನುಭವ ಬಹಳಷ್ಟಿದೆ. 2013 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದ ರಾಹುಲ್ ಈವರೆಗೂ ನಾಲ್ಕು IPL ತಂಡಗಳಲ್ಲಿ ಆಡಿದ್ದಾರೆ. ಫಸ್ಟ್ ಸೀಸನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡಿದ್ದ ರಾಹುಲ್ 2014 ಮತ್ತು 2015 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಭಾಗವಾಗಿದ್ದರು. ಬಳಿಕ 2016 ರಲ್ಲಿ RCB ಗೆ ರೀ ಜಾಯ್ನ್ ಆಗಿದ್ರು. ಇನ್ನು IPL 2017ರಲ್ಲಿ ಗಾಯದ ಸಮಸ್ಯೆಯಿಂದ ಕಣಕ್ಕಿಳಿದಿರಲಿಲ್ಲ. ನಂತರ 2018 ರಿಂದ 2021 ರವರೆಗೆ ಪಂಜಾಬ್ ಕಿಂಗ್ಸ್ ಪ್ರತಿನಿಧಿಸಿದರು. 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೇರಿದ್ದ ಕೆಎಲ್ ಕಳೆದ ಮೂರು ವರ್ಷಗಳಿಂದ ತಂಡವನ್ನ ಲೀಡ್ ಮಾಡಿದ್ರು. ಇದೀಗ 2025ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದು ಇದು ಕೆಎಲ್ ರಾಹುಲ್ಗೆ ಐದನೇ ತಂಡವಾಗಿದೆ.