ರಾಹುಲ್ ರಾಕ್.. ಗೋಯೆಂಕಾ ಶಾಕ್ – ಗೇಲಿಗೆ ಗೆಲುವಿನ ಗುದ್ದು ಕೊಟ್ಟ ಕನ್ನಡಿಗ
ನಂ.1 KL.. ಬಂಗಾರ ಕಳ್ಕೊಂಡ LSG

ನೋಡಿ ಸಿಚುಯೇಶನ್ ಹೆಂಗಿದೆ. ಕಳೆದ ವರ್ಷ ಲಕ್ನೋದ ಏಕನಾ ಸ್ಟೇಡಿಯಮ್ನಲ್ಲೇ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಕನ್ನಡಿಗ ಕೆಎಲ್ ರಾಹುಲ್ಗೆ ಕೈತೋರಿಸಿ ಮಾತ್ನಾಡಿದ್ರು. ಹೈದ್ರಾಬಾದ್ ವಿರುದ್ಧ ಮ್ಯಚ್ ಸೋತಿದ್ದಕ್ಕೆ ಮೈದಾನದಲ್ಲೇ ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ರು. ಆಗ ಎಲ್ಎಸ್ಜಿ ನಾಯಕನಾಗಿದ್ದ ರಾಹುಲ್ ಸೈಲೆಂಟಾಗೇ ಎಲ್ಲವನ್ನೂ ಕೇಳಿಸಿಕೊಂಡಿದ್ರು. ಅಸಹಾಯಕರಾಗಿ ನಿಂತಿದ್ರು. ಬಟ್ ಈಗ ಸೀನೇ ಫುಲ್ ಉಲ್ಟಾ.
ಇದನ್ನೂ ಓದಿ : RCBಗೆ ಅಯ್ಯರ್ ಬರದಿದ್ದೇ ಅದೃಷ್ಟ -₹23.50 ಕೋಟಿ ವೇಸ್ಟ್ ಆಗುತ್ತಿತ್ತಾ?
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ನಿಗದಿತ 20 ಓವರ್ಗಳಲ್ಲಿ 159 ರನ್ ಅಷ್ಟೇ ಕಲೆ ಹಾಕಿತ್ತು. 160 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕೇವಲ 17.5 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ ಗೆದ್ದು ಬೀಗಿತು. ಅದ್ರಲ್ಲೂ ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅಜೇಯ ಅರ್ಧಶತಕ ಸಿಡಿಸಿ ಲಖನೌ ವಿರುದ್ಧ ಸೇಡು ತೀರಿಸಿಕೊಂಡ್ರು.
ರಾಹುಲ್ ಬಗ್ಗೆ ನಿನ್ನೆ ಮಾಚಲ್ಲಿ ಇನ್ನೊಂದು ವಿಚಾರ ಹೇಳ್ಳೇಬೇಕು. ಟಾರ್ಗೆಟ್ ನೋಡಿದಾಗ್ಲೇ ಡಿಸಿ ಕಡೆ ಮ್ಯಾಚ್ ಇದೆ ಅನ್ನೋದು ಗೊತ್ತಾಗ್ತಾ ಇತ್ತು. ಕರುಣ್ ನಾಯರ್ ಔಟ್ ಆದ ಬಳಿಕ ಬಂದ ರಾಹುಲ್ ಆರಂಭದಿಂದ್ಲೇ ತಾಳ್ಮೆಯಿಂದ ಆಡ್ತಾ ಇದ್ರು. ಹೀಗಾಗಿ 40+ ಬಾಲ್ಗಳನ್ನ ಫೇಸ್ ಮಾಡಿ ಫಿಫ್ಟಿ ಕಂಪ್ಲೀಟ್ ಮಾಡಿದ್ರು. ಬಟ್ ಅರ್ಧ ಶತಕ ಪೂರೈಸಿದ್ರೂ ಯಾವುದೇ ರೀತಿ ಸೆಲೆಬ್ರೇಷನ್ ಮಾಡೋಕೆ ಹೋಗ್ಲಿಲ್ಲ. ಕ್ಲಾಸ್ ಆಗೇ ತಮ್ಮ ಬ್ಯಾಟ್ನ ಬೆನ್ನಿನ ಮೇಲೆ ಇಟ್ಟುಕೊಳ್ಳೋ ಮೂಲಕ ಕೆಎಲ್ ರಾಹುಲ್ ನಂಬರ್ 1 ಅನ್ನೋ ಥರ ತೋರಿಸಿದ್ರು. ಈವನ್ ಮ್ಯಾಚ್ ವಿನ್ ಆದ್ಮೇಲೂ ಅಷ್ಟೇ ಕೂಲ್ ಆಗಿದ್ರು. ಅದ್ರಲ್ಲೂ ಗೋಯೆಂಕಾ ಜೊತೆ ಕ್ಲಾಸ್ ಆಗೇ ಡೀಲ್ ಮಾಡಿದ್ರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೋ ವಿರುದ್ಧ ಅನಾಯಾಸವಾಗಿ ಗೆದ್ದು ಬೀಗಿತ್ತು. ಅದ್ರಲ್ಲೂ ಲಕ್ನೋದ ಮಾಜಿ ನಾಯಕ ರಾಹುಲ್ ಡಿಸಿ ಪರ ಅಜೇಯವಾಗಿ ಇನ್ನಿಂಗ್ಸ್ ಮುಗಿಸಿದ್ರು. ಪಂದ್ಯ ಮುಗಿದ ಬಳಿಕ ಎರಡು ತಂಡಗಳ ಆಟಗಾರರು ಪರಸ್ಪರ ಮುಖಾಮುಖಿಯಾಗಿ ಕೈಲುಕಿದರು. ಈ ವೇಳೆ ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಕೂಡ ಡೆಲ್ಲಿ ಆಟಗಾರರಿಗೆ ವಿಶ್ ಮಾಡಲು ಮೈದಾನಕ್ಕೆ ಬಂದಿದ್ದರು. ಅದ್ರಂತೆ ಕೆಎಲ್ ರಾಹುಲ್ಗೂ ಕೂಡ ಕೈಕುಕೋಕೆ ಮುಂದೆ ಮಾಡಿದ್ರು. ಈ ವೇಳೆ ಕೆ.ಎಲ್.ರಾಹುಲ್ ಗೋಯೆಂಕಾರನ್ನ ಕಂಪ್ಲೀಟ್ ಕೇರ್ಲೆಸ್ ಮಾಡಿದ್ದಾರೆ. ಜಸ್ಟ್ ಶೇಕ್ ಹ್ಯಾಂಡ್ ಮಾಡುವಂತೆ ಕೈಕೊಟ್ಟು ಮುಂದಕ್ಕೆ ಹೊರಟ್ರು. ಬಟ್ ಗೋಯೆಂಕಾ ಮಾತ್ರ ರಾಹುಲ್ ಬಳಿ ಅದೇನನ್ನೋ ಮಾತಾಡೋಕೆ ಮುಂದಾಗಿದ್ರು. ಆದ್ರೆ ರಾಹುಲ್ ಒಂದೇ ಒಂದು ಕ್ಷಣ ಕೂಡ ಅಲ್ಲಿ ನಿಂತುಕೊಳ್ಳೇ ಇಲ್ಲ. ಜಸ್ಟ್ ಫಾರ್ಮಲಿಟೀಸ್ ಮುಗ್ಸಿ ಅಲ್ಲಿಂದ ಮೂವ್ ಆನ್ ಆಗಿದ್ರು. ರಾಹುಲ್ರ ಈ ಕ್ಲಾಸಿಟ್ ಌಟಿಟ್ಯೂಡ್ಗೆ ಗೋಯೆಂಕಾ ಇಂಗು ತಿಂದ ಮಂಗನಂತಾಗಿದ್ರು. ರಾಹುಲ್ ಅಲ್ಲಿಂದ ಹೋದ್ರೂ ಅವ್ರನ್ನೇ ನೋಡುತ್ತಾ ನಿಂತಿದ್ರು.
ಲಕ್ನೋ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ 42 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 57 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಕೆಎಲ್ಆರ್ ಐಪಿಎಲ್ನಲ್ಲಿ 5000 ರನ್ ಪೂರೈಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತೀ ವೇಗವಾಗಿ 5 ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೆಎಲ್ ರಾಹುಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾ ಮೂಲಕ ಆಟಗಾರ ಡೇವಿಡ್ ವಾರ್ನರ್ ಅವರ ಹೆಸರಿನಲ್ಲಿತ್ತು. ಐಪಿಎಲ್ನಲ್ಲಿ 184 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ 135 ಇನಿಂಗ್ಸ್ಗಳ ಮೂಲಕ 5000 ರನ್ ಕಲೆಹಾಕಿದ್ರು. ಆದ್ರೆ ರಾಹುಲ್ ಕೇವಲ 130 ಇನಿಂಗ್ಸ್ಗಳ ಮೂಲಕ 5000 ರನ್ಗಳನ್ನು ಪೂರೈಸಿದ್ದಾರೆ.
ಒಂದ್ಕಡೆ ಲಕ್ನೋದ ಮಾಜಿ ನಾಯಕ ರಾಹುಲ್ ದಾಖಲೆ ಬರೆದ್ರೆ ಅತ್ತ ಹಾಲಿ ಕ್ಯಾಪ್ಟನ್ ರಿಷಭ್ ಪಂತ್ ಸಿಕ್ಕಾಪಟ್ಟೆ ಪ್ರೆಸ್ಟ್ರೇಷನ್ನಲ್ಲಿದ್ರು. ಈ ಸೀಸನ್ನಲ್ಲಿ ಬ್ಯಾಟಿಂಗ್ನಲ್ಲಿ ಕಳಪೆ ಫಾರ್ಮ್ನಲ್ಲಿದ್ದು ಡಿಸಿ ವಿರುದ್ಧವೂ 20ನೇ ಓವರ್ನ ಕೊನೇ 2 ಬಾಲ್ ಇದ್ದಾಗ ಎಂಟ್ರಿ ಕೊಟ್ಟಿದ್ರು. ಬಟ್ ಅಲ್ಲೂ ಖಾತೆ ತೆರೆಯದೇ ಡಕ್ ಔಟ್ ಆಗಿ ನಿರಾಸೆ ಮೂಡಿಸಿದ್ರು. ಹೀನಾಯ ಸೋಲಿನ ಬಳಿಕ ಮಾತನಾಡಿದ ಪಂತ್, ಮ್ಯಾಚ್ ಹೀಗೆ ನಡೆಯುತ್ತೆ, ಹೀಗೆ ಆಗುತ್ತೆ ಎಂದು ಯಾರನ್ನೂ ದೂರನ್ನು ಸಾಧ್ಯವಿಲ್ಲ. ಫಸ್ಟ್ ಇನ್ನಿಂಗ್ಸ್ಗಿಂತ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ಗೆ ಈಸಿಯಾಗಿರುತ್ತೆ ಅಂತಾ ತೇಪೆ ಹಚ್ಚೋ ಕೆಲಸ ಮಾಡಿದ್ರು.

ನೋಡಿರಿ

