IPLನಲ್ಲಿ ಜೋರಾಯ್ತು ಕನ್ನಡಿಗರ ಕಿಚ್ಚು – ದೇವ್, ವಿಜಿ, ಕೃಷ್ಣ ಆಯ್ತು.. ಈಗ KL!
ದೌಲತ್ತಿನ LSG ಓನರ್ ಗೆ ಪಾಠ ಕಲಿಸ್ತಾರಾ?

19ನೇ ಸೀಸನ್ ಐಪಿಎಲ್ ಗ್ರ್ಯಾಂಡ್ ಆಗೇ ಸ್ಟಾರ್ಟ್ ಆಗಿ ಈಗ 8 ತಂಡಗಳು ಆಲ್ರೆಡಿ ತಮ್ಮ ಫಸ್ಟ್ ಮ್ಯಾಚ್ ಆಡಿವೆ. ಉಳಿದಿರೋದು ಲಕ್ನೋ ಮತ್ತು ಡೆಲ್ಲಿ ಮಾತ್ರ. ಇವತ್ತಿನ ಮ್ಯಾಚ್ ಮೂಲಕ ಅವ್ರೂ ಕೂಡ ಜರ್ನಿ ಸ್ಟಾರ್ಟ್ ಮಾಡ್ತಾರೆ. ಈ ಮ್ಯಾಚ್ ಕನ್ನಡಿಗರಿಗೆ ತುಂಬಾನೇ ಸ್ಪೆಷಲ್. ಡೆಲ್ಲಿ ತಂಡದ ಆಟಗಾರ ಕೆಎಲ್ ರಾಹುಲ್ಗೆ ಪ್ರತಿಷ್ಠೆಯ ಪಂದ್ಯ ಕೂಡ.
ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿ – ರಿಷಭ್ ಪಂತ್‌ಗೆ ಕೆ.ಎಲ್. ರಾಹುಲ್ ಸವಾಲ್
ಐಪಿಎಲ್ನಲ್ಲಿ ನಾಲ್ಕು ಮ್ಯಾಚಸ್ ಕಂಪ್ಲೀಟ್ ಆಗಿದ್ದು ಈಗ ಐದನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಲಕ್ನೋ ಸೂಪರ್ ಜೇಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮ್ಯಾಚಲ್ಲಿ ಕನ್ನಡಿಗರ ಕಣ್ಣಂತೂ ಡೆಲ್ಲಿ ಮೇಲೆಯೇ ಇದೆ. ಜೊತೆಗೆ ಡೆಲ್ಲಿಯೇ ಗೆಲ್ಲಲಿ ಅಂತಾ ಸಪೋರ್ಟ್ ಮಾಡ್ತಾರೆ. ಅದಕ್ಕೆ ಕಾರಣ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್. ಇಬ್ಬರು ಕನ್ನಡಿಗರು ಡೆಲ್ಲಿ ಟೀಮ್ನಲ್ಲಿರೋರು ವಿಶೇಷ ಆದ್ರೆ ರಾಹುಲ್ಗೆ ಈ ಪಂದ್ಯ ಸೇಡಿನ ಸವಾಲೂ ಹೌದು. ಯಾಕಂದ್ರೆ ಮೈದಾನದಲ್ಲೇ ದೌಲತ್ತು ತೋರಿಸಿದ್ದ ಲಕ್ನೋ ತಂಡದ ಓನರ್ಗೆ ಮತ್ತೊಂದು ಸಲ ಬ್ಯಾಟ್ನಲ್ಲೇ ಉತ್ತರಿಸೋ ಟೈಂ ಬಂದಿದೆ.
ಲಕ್ನೋ ವಿರುದ್ಧ ಮತ್ತೆ ಸಿಡಿಯುತ್ತಾರಾ ಕನ್ನಡಿಗ ರಾಹುಲ್!
ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೇಂಟ್ಸ್ ತಂಡ ಅಂತಾ ಬಂದಾಗ ಕನ್ನಡಿಗರಿಗೆ ಸ್ವಲ್ಪ ಬೇಸರ ಇರುತ್ತೆ. ಯಾಕಂದ್ರೆ ಈ ಫ್ರಾಂಚೈಸಿಯ ಮಾಲೀಕ ನಮ್ಮ ಕನ್ನಡಿಗ ಕೆಎಲ್ ರಾಹುಲ್ರನ್ನ ನಡೆಸಿಕೊಂಡ ಪರಿ ಅರಗಿಸಿಕೊಳ್ಳೋಕೆ ಆಗಿರಲಿಲ್ಲ. 2024ರ ಸೀಸನ್ನಲ್ಲಿ ಹೈದ್ರಾಬಾದ್ ವಿರುದ್ಧ ಸೋತಿದ್ದಕ್ಕೆ ಆಗ ಲಕ್ನೋ ಕ್ಯಾಪ್ಟನ್ ಆಗಿದ್ದ ಕೆಎಲ್ ರಾಹುಲ್ ವಿರುದ್ಧ ಮೈದಾನದಲ್ಲೇ ಕೂಗಾಡಿದ್ರು. ಕೈ ತೋರಿಸುತ್ತಾ ರೂಡ್ ಆಗಿ ಬಿಹೇವ್ ಮಾಡಿದ್ರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್ ಆಗಿತ್ತು. ಜೊತೆಗೆ ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ದರ್ಪಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಇದಾದ್ಲೇಲೆ 2025ರ ಐಪಿಎಲ್ಗೂ ಮುನ್ನ ಕೆಎಲ್ ರಾಹುಲ್ ತಂಡದಿಂದಲೇ ಹೊರ ಬರ್ತಾರೆ. ಹಾಗೇ ಮೆಗಾ ಆಕ್ಷನ್ನಲ್ಲಿ ಡೆಲ್ಲಿ ಟೀಂ ಸೇರಿಕೊಂಡಿದ್ರು. ಕಳೆದ ವರ್ಷದ ಐಪಿಎಲ್ನಲ್ಲೇ ಲಕ್ನೋ ತಂಡದ ವಿರುದ್ದ ಅಬ್ಬರಿಸಿದ್ದ ರಾಹುಲ್ ಈಗ ಮತ್ತೆ ಅದೇ ಮೈಂಡ್ಸೆಟ್ನಲ್ಳೇ ಇದ್ದಾರೆ. ಕಳೆದ ವರ್ಷ ಪರ್ಸನಲ್ ರೀಸನ್ಸ್ ನಿಂದ ಲಕ್ನೋ ವಿರುದ್ಧ ಫಸ್ಟ್ ಮ್ಯಾಚ್ ಮಿಸ್ ಮಾಡಿಕೊಂಡಿದ್ರು. ಬಟ್ ರಿವೇಂಜ್ ಮ್ಯಾಚಲ್ಲಿ ತಮ್ಮ ರಿವೇಂಜ್ ತೀರಿಸಿಕೊಂಡಿದ್ರು. 57 ರನ್ ಗಳಿಸಿ ಅಜೇಯರಾಗಿ ಉಳಿದು ಡೆಲ್ಲಿ ತಂಡವನ್ನ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ರು. ಸೋ ಈ ಸೀಸನ್ನಲ್ಲೂ ಫಸ್ಟ್ ಮ್ಯಾಚಲ್ಲೇ ಬಿಗ್ ಸ್ಕೋರ್ ಟಾರ್ಗೆಟ್ನಲ್ಲೇ ಕಣಕ್ಕಿಳೀತಾರೆ. ಯಾಕಂದ್ರೆ ರಾಹುಲ್ಗೆ ಇದು ತಂಡದ ಜೊತೆಗಿನ ಪಂದ್ಯ ಅನ್ನೋದಕ್ಕಿಂತ ಮಾಲೀಕ ಸಂಜೀವ್ ಗೋಯೆಂಕಾಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸೋಕೆ ಕಾಯ್ತಿದ್ದಾರೆ. ಸೋ ಈ ಪಂದ್ಯದಲ್ಲಿ ರಾಹುಲ್ ಪರ್ಫಾಮೆನ್ಸ್ ಮೇಲೆಯೇ ಕನ್ನಡಿಗರ ಕಣ್ಣಿರುತ್ತೆ. ಌಂಡ್ ಈಗಾಗ್ಳೇ ಕಳೆದ ಪಂದ್ಯಗಳಲ್ಲಿ ಕನ್ನಡಿಗರು ಧಮಾಕೇಧಾರ್ ಪರ್ಫಾಮೆನ್ಸ್ ನೀಡಿರೋದ್ರಿಂದ ನಿರೀಕ್ಷೆ ಇನ್ನೂ ಜಾಸ್ತಿನೇ ಇರುತ್ತೆ. ಸೋ ಈ ವರ್ಷ ಟೂರ್ನಿ ಆರಂಭದಲ್ಲೇ ಯಾವೆಲ್ಲಾ ಕನ್ನಡಿಗರು ಅಬ್ಬರಿಸಿದ್ದಾರೆ ಅನ್ನೋದನ್ನ ನೋಡ್ತಾ ಹೋಗೋಣ.
ಕನ್ನಡಿಗರ ಕಿಚ್ಚು!
ಆರ್ ಸಿಬಿ ಪರ ಹೈದ್ರಾಬಾದ್ ವಿರುದ್ಧ ಪಡಿಕ್ಕಲ್ 61(26) ರನ್ಸ್
ಪಂಜಾಬ್ ಪರ ಜಿಟಿ ವಿರುದ್ಧ ವೈಶಾಕ್ 34ಕ್ಕೆ 3 ವಿಕೆಟ್ ಗಳ ಅಬ್ಬರ
ಗುಜರಾತ್ ಪರ ಪಂಜಾಬ್ ವಿರುದ್ಧ ಪ್ರಸಿದ್ಧ್ ಕೃಷ್ಣ 29ಕ್ಕೆ 3 ವಿಕೆಟ್
ಸೋ ಆಲ್ರೆಡಿ 2026ರ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗರು ಭರ್ಜರಿಯಾಗೇ ಸದ್ದು ಮಾಡ್ತಿದ್ದಾರೆ. ಇವತ್ತಿನ ಮ್ಯಾಚಲ್ಲಿ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಮೇಲೆ ಎಲ್ಲರ ಕಣ್ಣಿರುತ್ತೆ. ಇಲ್ಲಿ ರಾಹುಲ್ ಪ್ಲೇಯಿಂಗ್ 11ನಲ್ಲಿ ಆಡೋದಂತೂ ಕನ್ಪರ್ಮ್.. ಬಟ್ ಕರುಣ್ ಆಡಿಸ್ತಾರಾ ನೋಡ್ಬೇಕು. ಇಬ್ರೂ ಕೂಡ ಸಾಕಷ್ಟು ಎಕ್ಸ್ಪೀರಿಯನ್ಸ್ ಇರೋ ಪ್ಲೇಯರ್ಸ್. ಹೀಗಾಗಿ ಇವ್ರಿಂದಲೂ ಬೊಂಬಾಟ್ ಪ್ರದರ್ಶನವನ್ನ ನಿರೀಕ್ಷೆ ಮಾಡ್ಬೋದು.

ನೋಡಿರಿ

