KL ಆಟ ಬದಲಿಸಿದ ಮಗಳು – ಭಾರತದ ಪರ ಟಿ-20ಗೂ ಬರ್ತಾರಾ?
ಪವರ್ ಪ್ಲೇ ಗೇಮ್ ಬದಲಿಸಬೇಕಾ?

ಐಪಿಎಲ್ನಲ್ಲಿ ಬ್ಯಾಟರ್ಗಳ ಅಗ್ರೆಶನ್ ಪೀಕ್ನಲ್ಲಿದೆ. ಒಬ್ರು ಬೌಂಡರಿ ಅಂದ್ರೆ ಮತ್ತೊಬ್ರು ಸಿಕ್ಸರ್ ಅಂತಾರೆ. ಒಬ್ರು 200 ಸ್ಟ್ರೈಕ್ರೇಟ್ ಅಂದ್ರೆ ಮತ್ತೊಬ್ರು 250, 300 ಅಂತಾರೆ. ಅದ್ರಲ್ಲೂ ಯಂಗ್ಸ್ಟರ್ಸ್ ಅಂತೂ ಎಂಥದ್ದೇ ವರ್ಲ್ಡ್ಕ್ಲಾಸ್ ಬೌಲರ್ ಆಗಿದ್ರೂ ಕ್ಯಾರೇ ಎನ್ನದೆ ಫಿಯರ್ಲೆಸ್ ಆಗಿ ಬ್ಯಾಟ್ ಬೀಸ್ತಿದ್ದಾರೆ. ಬಿಸಿರಕ್ತದ ಯುವಕರ ಆರ್ಭಟದ ನಡುವೆ ಕೆಲ ಸೀನಿಯರ್ ಪ್ಲೇಯರ್ಸ್ ಟಫ್ ಫೈಟ್ ಕೊಡ್ತಿದ್ದಾರೆ. ಅದ್ರಲ್ಲಿ ನಮ್ಮ ಕನ್ನಡಿಗ ಕೆಎಲ್ ರಾಹುಲ್ ಕೂಡ ಒಬ್ರು. ಆರೆಂಜ್ ಕ್ಯಾಪ್ ರೇಸ್ನಲ್ಲಿರೋ ರಾಹುಲ್ ಈ ಸೀಸನ್ನಲ್ಲಿ ಹೊಸ ಅವತಾರ ತಾಳಿದ್ದಾರೆ.
ಇದನ್ನೂ ಓದಿ : ನಂಬರ್ 1 ಆಗುತ್ತಾ RCB? – ಮುಂಬೈನಿಂದ ಫ್ಲಾಪ್ ಸೂರ್ಯ OUT.. ವೈಭವ್ ಸೂರ್ಯವಂಶಿ ಬಾಲಕಾರ್ಮಿಕನಾ?
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್, ಕನ್ನಡಿಗರ ಹೆಮ್ಮೆಯಾಗಿರೋ ಕೆಎಲ್ ರಾಹುಲ್ ಈ ಬಾರಿಯ ಐಪಿಎಲ್ನಲ್ಲೂ ಸದ್ದು ಮಾಡ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಬ್ಯಾಕ್ಬೋನ್ ಆಗಿ ಓವರ್ ಆಲ್ ಅದ್ಭುತ ಸ್ಟ್ರೈಕ್ರೇಟ್ನೊಂದಿಗೆ ಆರೆಂಜ್ ಕ್ಯಾಪ್ ರೇಸ್ನಲ್ಲೂ ಇದ್ದಾರೆ. ಆದ್ರೆ ವೈಟ್ಬಾಲ್ ಫಾರ್ಮೆಟ್ ಅಂತಾ ಬಂದಾಗ ಆರಂಭದಲ್ಲಿ ರಾಹುಲ್ ಬಗ್ಗೆ ಬೇರೆಯದ್ದೇ ರೀತಿಯ ಇಮೇಜ್ ಇತ್ತು. ಏನಿದ್ರೂ ಟೆಸ್ಟ್ ಕ್ರಿಕೆಟ್ಗೆ ಮಾತ್ರ ಸೂಟ್ ಆಗ್ತಾರೆ ಅನ್ನೋ ಟಾಕ್ ಇತ್ತು. ಸ್ವತಃ ರಾಹುಲ್ ಅವ್ರೇ ಈ ಬಗ್ಗೆ ಮಾತನಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಚರಿತ್ರೆ ಸೃಷ್ಟಿಸಿದ ಕೆಎಲ್ ರಾಹುಲ್!
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟರ್ ಆಗಿರೋ ಕೆಎಲ್ ರಾಹುಲ್ ಈ ಸೀಸನ್ನಲ್ಲಿ ತಂಡದ ಪರ ಸಾಕಷ್ಟು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಈವರೆಗೆ ಡೆಲ್ಲಿ ಪರ 10 ಪಂದ್ಯಗಳನ್ನ ಆಡಿರೋ ರಾಹುಲ್ 180.89ರ ಅದ್ಭುತ ಸ್ಟ್ರೈಕ್ರೇಟ್ನಲ್ಲಿ 49.44ರ ಆವರೇಜ್ನಲ್ಲಿ 445 ರನ್ಸ್ ಕಲೆ ಹಾಕಿದ್ದಾರೆ. ಈ ಸೀಸನ್ನಲ್ಲಿ 1 ಶತಕ ಹಾಗೇ 3 ಅರ್ಧಶತಕಗಳು ಅವ್ರ ಬ್ಯಾಟಿಂಗ್ನಲ್ಲಿ ಬಂದಿದೆ. ಅದ್ರಲ್ಲೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಂತೂ ಇತಿಹಾಸವನ್ನೇ ಸೃಷ್ಟಿಸಿದ್ರು. ಏಪ್ರಿಲ್ 25ರಂದು ಅರುಣ್ ಜೇಟ್ಲಿ ಸ್ಟೇಡಿಯಮ್ನಲ್ಲಿ ನಡೆದ ಮ್ಯಾಚಲ್ಲಿ 67 ಎಸೆತಗಳಲ್ಲಿ ಅಜೇಯ 152 ರನ್ ಗಳಿಸಿದ್ರು. ಹಾಗೇ ಐಪಿಎಲ್ನ ಇನ್ನಿಂಗ್ಸ್ವೊಂದರಲ್ಲಿ 150+ ರನ್ಸ್ ಗಳಿಸಿದ ಮೊದಲ ಭಾರತೀಯನಾದ್ರು. ಆದ್ರೆ ರಾಹುಲ್ಗೆ ಈ ಅವತಾರ ತಾಳುವುದು ಅಷ್ಟು ಸುಲಭ ಇರಲಿಲ್ಲ. ಸ್ವತಃ ಅವ್ರೇ ಈ ವಿಚಾರವನ್ನ ಹೇಳಿಕೊಂಡಿದ್ದಾರೆ.
ಟೆಸ್ಟ್ ಪ್ಲೇಯರ್ ಅಂದವರ ಬಾಯಿ ಮುಚ್ಚಿಸಿದ ಕನ್ನಡಿಗ!
ಕ್ರಿಕೆಟ್ ಲೋಕದಲ್ಲಿ ಕೆಎಲ್ ರಾಹುಲ್ ಒಂಥರಾ ಬೆಂಕಿಯಲ್ಲಿ ಅರಳಿದ ಹೂವು ಇದ್ದಂತೆ. ಟೀಂ ಇಂಡಿಯಾದಲ್ಲಿ ಈಗಲೂ ಅವ್ರ ಸ್ಥಾನದ ಬಗ್ಗೆ ಗ್ಯಾರಂಟಿ ಇಲ್ಲ. ಯಾವುದೇ ಜವಾಬ್ದಾರಿ ಕೊಟ್ರೂ ಶಿಸ್ತಿನ ಸಿಪಾಯಿಯಂತೆ ಪಾಲಿಸ್ತಾರೆ. ಆದ್ರೆ ಅವ್ರ ಕ್ರಿಕೆಟ್ ವೃತ್ತಿಜೀವನದ ಆರಂಭದಲ್ಲಿ ಅವ್ರನ್ನ ಓನ್ಲಿ ಟೆಸ್ಟ್ ಪ್ಲೇಯರ್ ಅನ್ನೋ ಥರ ಪೋಟ್ರೇ ಮಾಡಲಾಗ್ತಿತ್ತು ಅನ್ನೋದನ್ನ ಸ್ವತಃ ಕೆಎಲ್ ರಾಹುಲ್ ಹೇಳಿದ್ದಾರೆ. ಇತ್ತೀಚೆಗೆ ಸೂಪರ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಮಾತ್ನಾಡಿರೋ ಕೆಎಲ್ ರಾಹುಲ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಪಟ್ಟ ಕಷ್ಟಗಳನ್ನ ಹೇಳಿಕೊಂಡಿದ್ದಾರೆ. 10 ವರ್ಷಗಳ ಹಿಂದೆ, ನಾನು ಎಂಥದ್ದೇ ರಿಸ್ಕ್ ತಗೊಂಡಾದ್ರೂ ಟಿ20 ತಂಡದಲ್ಲಿ ಅವಕಾಶ ಪಡೀಬೇಕು ಅನ್ಕೊಂಡಿದ್ದೆ. ಆದ್ರೆ ಆ ಟೈಮಲ್ಲಿ ನನ್ನನ್ನು ಟಿ20 ಬ್ಯಾಟ್ಸ್ಮನ್ ಅಂತಾ ಕನ್ಸಿಡರ್ ಮಾಡಿರಲಿಲ್ಲ. ಟೆಸ್ಟ್ ಆಟಗಾರ ಅನ್ನೋ ಟ್ಯಾಗ್ಲೈನ್ ಮಾತ್ರ ಇತ್ತು. ಆದರೆ ಈಗ ತಮ್ಮ ಹಾರ್ಡ್ ವರ್ಕ್ ಮೂಲಕ ಆ ಇಮೇಜ್ನ ಚೇಂಜ್ ಮಾಡಿದ್ದೇನೆ ಎಂದಿದ್ದಾರೆ. ಹಾಗೇ ಈ ಅಗ್ರೆಸ್ಸಿವ್ ಬ್ಯಾಟಿಂಗ್ ಹಿಂದಿನ ಶಕ್ತಿ ಯಾರೂ ಅನ್ನೋದನ್ನೂ ಹೇಳಿದ್ದಾರೆ.
ರಾಹುಲ್ ಆಟದ ದಿಕ್ಕು ಬದಲಿಸಿದ ಮಗಳು!
ಇನ್ನು ಇದೇ ವೇಳೆ ತಮ್ಮ ಬ್ಯಾಟಿಂಗ್ ಬದಲಾವಣೆ ಹಿಂದಿನ ಸೀಕ್ರೆಟ್ ತಮ್ಮ ಮಗಳು ಎಂದಿದ್ದಾರೆ ರಾಹುಲ್. ಅಪ್ಪ ಆಗಿರೋದನ್ನು ನನ್ನ ಜೀವನದ ಬೆಸ್ಟ್ ಫೀಲಿಂಗ್. ನನ್ನ ಮಗಳನ್ನ ನೋಡಿದಾಗ ನನ್ನೆಲ್ಲಾ ಸಮಸ್ಯೆ, ನೋವುಗಳನ್ನ ಮರೆತು ಬಿಡ್ತೇನೆ. ಅವಳ ನಗು ನನ್ನ ಆಟದ ಮೇಲೆ ಪಾಸಿಟಿವ್ ಇಂಪ್ಯಾಕ್ಟ್ ಮಾಡಿದೆ. ಈಗ ನಾನು ಕ್ರಿಕೆಟ್ನ ಜಾಸ್ತಿ ಎಂಜಾಯ್ ಮಾಡ್ತಿದ್ದೇನೆ. ಹಾಗೇ ಅನ್ನೆಸೆಸರಿ ವಿಚಾರಗಳಿಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ಹೀಗೆ ರಾಹುಲ್ ತಮ್ಮ ಆಟದ ಮೇಲೆ ಮಾತ್ರ ಫೋಕಸ್ ಮಾಡ್ತಿದ್ರೂ ಅವ್ರ ಬ್ಯಾಟಿಂಗ್ ಬಗ್ಗೆ ಕೆಲವ್ರು ಟೀಕೆಗಳನ್ನೂ ಮಾಡ್ತಿದ್ದಾರೆ. ಪವರ್ ಪ್ಲೇನಲ್ಲಿ ಸ್ಲೋ ಗೇಮ್ ಆಡ್ತಾರೆ ಅನ್ನೋ ಆರೋಪಗಳು ಬರ್ತಿವೆ.
ರಾಹುಲ್ ಸ್ಟ್ರೈಕ್ ರೇಟ್ ಬಗ್ಗೆ ಟೀಕೆ ಮಾಡಿದ ಮಂಜ್ರೇಕರ್!
ಕೆಎಲ್ ರಾಹುಲ್ ಅವ್ರ ಪವರ್ ಪ್ಲೇ ಸ್ಟ್ರೈಕ್ರೇಟ್ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟೀಕೆ ಮಾಡಿದ್ದಾರೆ. ಅದ್ರಲ್ಲೂ ಚೆನ್ನೈ ವಿರುದ್ಧದ ಮ್ಯಾಚಲ್ಲಿ 12 ಬಾಲಲ್ಲಿ 12 ರನ್ ಗಳಿಸಿ ಔಟಾಗಿದ್ದನ್ನ ಟೀಕಿಸಿದ್ದಾರೆ. ನೀವು ಪವರ್ ಪ್ಲೇನಲ್ಲಿ ಬಾಲ್ಗೊಂದು ರನ್ ಹೊಡೆದು ಔಟಾದ್ರೆ ನಿಮ್ಮ ತಂಡದ ಡೆತ್ ವಾರಂಟ್ಗೆ ನೀವೇ ಸೈನ್ ಮಾಡ್ತೀರಿ ಅನ್ನೋ ಮೂಕ ರಾಹುಲ್ ಆಟದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಹಾಗಂತ ಇಲ್ಲಿ ಪ್ರತೀ ಮ್ಯಾಚಲ್ಲಿ ರಾಹುಲ್ ಒಬ್ರೇ ಆಡಿ ಗೆಲ್ಸೋಕಾಗಲ್ಲ. ಪಂಜಾಬ್ ವಿರುದ್ಧ ರಾಹುಲ್ ಅವ್ರ ಸ್ಫೋಟಕ ಇನ್ನಿಂಗ್ಸ್ ಮೂಲಕ 265 ರನ್ಸ್ ಹೊಡೆದ್ರೂ ಡಿಫೆಂಡ್ ಮಾಡಿಕೊಳ್ಳೋಕೆ ಆಗಿಲ್ಲ ಅಂದಾಗ ಅದು ರಾಹುಲ್ ಪ್ರಾಬ್ಲಂ ಅಲ್ಲ. ಟೀಂ ವೀಕ್ನೆಸ್. ಸೋ ಅದನ್ನೂ ನೋಡ್ಬೇಕಾಗುತ್ತೆ. ಸುಖಾಸುಮ್ಮನೆ ಕಮೆಂಟ್ ಪಾಸ್ ಮಾಡೋದು ಸರಿ ಇಲ್ಲ. ಆದ್ರೆ ಯಾರ ಮಾತುಗಳಿಗೂ ಕಿವಿಗೊಡದ ರಾಹುಲ್ ಮಾತ್ರ ಬ್ಯಾಟ್ನಲ್ಲೇ ಉತ್ತರಿಸ್ತಿದ್ದಾರೆ. ಕೆಲವ್ರು ಭಾರತ ಟಿ-20 ತಂಡಕ್ಕೆ ಕಂ ಬ್ಯಾಕ್ ಮಾಡಿ ಅಂತಿದ್ದಾರೆ. ಆದ್ರೆ 2022 ರಿಂದ ರಾಹುಲ್ ಭಾರತ ಪರ ಟಿ20 ಪಂದ್ಯಗಳನ್ನು ಆಡಿಲ್ಲ. ಏಕದಿನ ಮತ್ತು ಟೆಸ್ಟ್ ತಂಡಗಳ ಪ್ರಮುಖ ಭಾಗವಾಗಿದ್ದಾರೆ. ಸೋ ಮುಂದಿನ ದಿನಗಳಲ್ಲು ಟಿ-20ಐಗೆ ಬರೋದು ಕಷ್ಟ. ಯಾಕಂದ್ರೆ ಈಗ್ಲೇ ಯಂಗ್ಸ್ಟರ್ಗಳ ರೇಸ್ ತುಂಬಾನೇ ದೊಡ್ಡದಿವೆ. ಅವ್ರಿಗೇ ಚಾನ್ಸ್ ಸಿಕ್ರೆ ಸಾಕಾಗಿದೆ.

ನೋಡಿರಿ

