IPL ಆಡಲ್ವಾ ಕೆ.ಎಲ್ ರಾಹುಲ್ ? – ಲಂಡನ್‌ಗೆ ಚಿಕಿತ್ಸೆಗೆ ತೆರಳಿದ ಕನ್ನಡಿಗ

IPL ಆಡಲ್ವಾ ಕೆ.ಎಲ್ ರಾಹುಲ್ ? – ಲಂಡನ್‌ಗೆ ಚಿಕಿತ್ಸೆಗೆ ತೆರಳಿದ ಕನ್ನಡಿಗ

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳು ಮುಗಿದಿವೆ. ಇದರ ಮಧ್ಯೆ ಐದನೇ ಪಂದ್ಯದಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ಐದನೇ ಪಂದ್ಯ ಆಡೋದು ಕೂಡಾ ಅನುಮಾನವಾಗಿದೆ. ಇದರ ಜೊತೆಗೆ ಐಪಿಎಲ್‌ಗೂ ಕೆ.ಎಲ್ ರಾಹುಲ್ ಆಡಲ್ವಾ ಎಂಬ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ನಾಲ್ಕನೇ ಟೆಸ್ಟ್‌ನಲ್ಲೂ ಕಣಕ್ಕಿಳಿಯಲ್ಲ ಕನ್ನಡಿಗ ಕೆ.ಎಲ್ ರಾಹುಲ್ – ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಪಂದ್ಯ ಆಡುವ ಚಾನ್ಸ್

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಕ್ಕೂ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಉಂಟಾದ ತೊಡೆಸಂದು ನೋವಿನ ಕಾರಣ ಕೆ.ಎಲ್ ರಾಹುಲ್ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ, 5ನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಐದನೇ ಪಂದ್ಯದ ವೇಳೆ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಧರ್ಮಶಾಲಾದಲ್ಲಿ ಮಾರ್ಚ್ 7 ರಿಂದ ಶುರುವಾಗಲಿರುವ ಕೊನೆಯ ಟೆಸ್ಟ್ ಪಂದ್ಯಕ್ಕೂ ರಾಹುಲ್ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಕನ್ನಡಿಗ ಕೆ. ಎಲ್ ರಾಹುಲ್ ಅವರ ಗಾಯದ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬಿಸಿಸಿಐ ಅವರನ್ನು ಲಂಡನ್‌ಗೆ ಕಳುಹಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಹುಲ್ ಅವರು ಶೇ.90 ರಷ್ಟು ಫಿಟ್ನೆಸ್ ಹೊಂದಿದ್ದರೂ ನೋವು ಅವರನ್ನು ಕಾಡುತ್ತಿದೆ. ಇದೇ ಕಾರಣದಿಂದಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಕೆಲ ಮೂಲಗಳ ಮಾಹಿತಿ ಪ್ರಕಾರ, ಕೆಎಲ್ ರಾಹುಲ್ ಇನ್ನೊಂದು ವಾರ ಲಂಡನ್‌ನಲ್ಲಿ ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯಲಿದ್ದಾರೆ. ಈ ವೇಳೆ ಅವರ ಗಾಯವು ಗಂಭೀರವಾಗಿರುವುದು ಕಂಡು ಬಂದರೆ ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿ ಬರಬಹುದು.

ಒಂದು ವೇಳೆ ಕೆಎಲ್ ರಾಹುಲ್ ಅವರ ಗಾಯವು ಗಂಭೀರವಾಗಿದ್ದರೆ ಐಪಿಎಲ್‌ನ ಮೊದಲಾರ್ಧದಲ್ಲಿ ಕಣಕ್ಕಿಳಿಯುವುದು ಅನುಮಾನ. ಏಕೆಂದರೆ ಮಾರ್ಚ್ 22 ರಿಂದ ಐಪಿಎಲ್ ಸೀಸನ್-17 ಶುರುವಾಗಲಿದೆ. ಇದೇ ವೇಳೆ ವೈದ್ಯರು ವಿಶ್ರಾಂತಿ ಸೂಚಿಸಿದರೆ ಅವರು ಕೆಲ ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬರಬಹುದು. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ ಐಪಿಎಲ್‌ನ ಮೊದಲಾರ್ಧದಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬುದು ಮಾರ್ಚ್ ಮೊದಲ ವಾರದಲ್ಲಿ ಸ್ಪಷ್ಟವಾಗಲಿದೆ.

Sulekha