Mr. Perfect ರಾಹುಲ್ – ಬ್ಯಾಟಿಂಗ್ ನಲ್ಲಿ ಫುಟ್ ಬಾಲ್ ಆದ್ರಾ?
ಗಂಭೀರ್ ಗೆ ಬುದ್ಧಿನೇ ಬರಲ್ವಾ?

Mr. Perfect ರಾಹುಲ್ – ಬ್ಯಾಟಿಂಗ್ ನಲ್ಲಿ ಫುಟ್ ಬಾಲ್ ಆದ್ರಾ?ಗಂಭೀರ್ ಗೆ ಬುದ್ಧಿನೇ ಬರಲ್ವಾ?

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಸರಣಿಯನ್ನ ಭಾರತ ಗೆದ್ದಿದೆ. ಮೂರು ಪಂದ್ಯಗಳ ಸಿರೀಸ್​ನಲ್ಲಿ ಲೀಡ್ ಸಾಧಿಸಿದೆ. ಇದೆಲ್ಲಾ ಓಕೆ. ಆದ್ರೂ ಗೌತಮ್ ಗಂಭೀರ್ ಮತ್ತು ಮ್ಯಾನೇಜ್​ಮೆಂಟ್ ವಿರುದ್ಧ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಯಾಕಂದ್ರೆ ಕೆಎಲ್ ರಾಹುಲ್ ವಿಚಾರದಲ್ಲಿ ಪದೇಪದೆ ಮ್ಯೂಸಿಕಲ್ ಚೇರ್ ಆಡಿಸ್ತಿರೋದು ಅವ್ರ ಆಕ್ರೋಶಕ್ಕೆ ಕಾರಣ.

ಇದನ್ನೂ ಓದಿ : ಶತಕ ತಪ್ಪಿದ್ರೂ ಮ್ಯಾಚ್ ಗೆದ್ದ ಕೊಹ್ಲಿ – ಕ್ಲಾಸಿಕ್ KL.. ಕೈ ಹಿಡಿದ ರಾಣಾ!

ಭಾನುವಾರದ ಮ್ಯಾಚಲ್ಲಿ ಭಾರತದ ಟಾಪ್ ಆರ್ಡರ್ ಬ್ಯಾಟಿಂಗ್ ಪರ್ಫಾಮೆನ್ಸ್ ನೋಡ್ದಾಗ ಭಾರತ ಒನ್ ಸೈಡೆಡ್ ಆಗಿ ಮ್ಯಾಚ್ ಗೆಲ್ಲುತ್ತೆ ಅನ್ನೋದೇ ಎಲ್ಲರ ನಿರೀಕ್ಷೆ ಆಗಿತ್ತು. ರೋಹಿತ್ ಶರ್ಮಾ ಬೇಗ ಔಟಾದ್ರೂ ಕಿಂಗ್ ಕೊಹ್ಲಿ ಮತ್ತು ಶುಭ್​ಮನ್ ಗಿಲ್ ಪಾರ್ಟ್ನರ್​ಶಿಪ್​ನಲ್ಲಿ 100ಪ್ಲಸ್ ರನ್ಸ್ ಬಂತು. ಌಂಡ್ ನೆಕ್ಸ್​ಟ್ ಕೊಹ್ಲಿ ಮತ್ತು ಶ್ರೇಯಸ್ ಜೊತೆಗೂಡಿ 90ಪ್ಲಸ್ ರನ್ಸ್ ಕಲೆ ಹಾಕಿದ್ರು. ಆದ್ರೆ 93 ರನ್ ಗಳಿಸಿ ವಿರಾಟ್ ಔಟ್ ಆಗ್ತಿದ್ದಂತೆ ಮಿಡಲ್ ಆರ್ಡರ್​ ಲೆಕ್ಕಾಚಾರ ಉಲ್ಟಾ ಆಗಿತ್ತು. ಜಸ್ಟ್ 8 ರನ್​ಗಳ ಅಂತರದಲ್ಲೇ 3 ವಿಕೆಟ್ ಬಿದ್ದಿತ್ತು. ಇಂಥಾ ಟೈಮಲ್ಲಿ ಬಿಸಿಸಿಐ ಬಾಸ್​ಗಳು ಮತ್ತೊಂದು ಶಾಕ್ ಕೊಟ್ಟಿದ್ರು.

ನ್ಯೂಜಿಲೆಂಡ್ ವಿರುದ್ಧದ ಮ್ಯಾಚಲ್ಲೂ ರಾಹುಲ್ ಮೇಲೆ ಪ್ರಯೋಗ!

ಕಿವೀಸ್ ಪಡೆ ವಿರುದ್ಧ ಕ್ರೀಸ್ ಕಚ್ಚಿ ಆಡ್ತಿದ್ದ ವಿರಾಟ್ ಕೊಹ್ಲಿಯವ್ರೇ ಮ್ಯಾಚ್ ಫಿನಿಶ್ ಮಾಡ್ತಾರೆ ಅನ್ನುವಂತೆ ಕಾಣ್ತಿದ್ರು. ಆದ್ರೆ 93 ರನ್ ಗಳಿಸಿ ಶತಕಕ್ಕೆ ಹತ್ತಿರವಿರುವಾಗ್ಲೇ ವಿಕೆಟ್ ಒಪ್ಪಿಸಿದ್ರು. ಈ ವೇಳೆ ಎರಡು ಓವರ್ ಗಳಲ್ಲಿ ಕೈಲ್ ಜೇಮಿಸನ್ ಪ್ರಮುಖ 3 ವಿಕೆಟ್ ಉರುಳಿಸಿದ್ರು. ಈ ಟೈಮಲ್ಲಿ ಮ್ಯಾಚ್ ನ್ಯೂಜಿಲೆಂಡ್ ಕಡೆ ವಾಲಿದಂತೆ ಕಾಣ್ತಿತ್ತು. ಆದ್ರೆ ಅಂತಿಮವಾಗಿ ಕೆಎಲ್ ರಾಹುಲ್ ಮತ್ತು ಹರ್ಷಿತ್ ರಾಣಾ ಕೂಲ್ ಆಗಿಯೇ ಇನ್ನಿಂಗ್ಸ್ ಕಟ್ಟಿದ್ರು. ಕೊನೆಗೆ ವಾಷಿಂಗ್ಟನ್ ಸುಂದರ್ ಸಪೋರ್ಟ್​ನಿಂದ ಲಾಸ್ಟ್ ಬಾಲಲ್ಲಿ ಸಿಕ್ಸ್ ಬಾರಿಸಿ ರಾಹುಲ್ ಗೇಮ್ ಎಂಡ್ ಮಾಡಿದ್ರು. ಇನ್ನೂ ಒಂದು ಓವರ್ ಇರುವಂತೆಯೇ ಭಾರತ ವಿನ್ ಆಯ್ತು. ಆದ್ರೆ ಈ ಮ್ಯಾಚಲ್ಲಿ ರಾಹುಲ್​ರನ್ನ 6ನೇ ಸ್ಲಾಟ್​ನಲ್ಲಿ ಕಳಿಸಿದ್ದೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೆಎಲ್ ರಾಹುಲ್ ಌಕ್ಚುಲಿ ಟಾಪ್ ಆರ್ಡರ್ ಬ್ಯಾಟಿಂಗ್​ನಲ್ಲಿ ಬ್ಯಾಟ್ ಬೀಸೋ ಪ್ಲೇಯರ್. ಹೀಗಿದ್ರೂ ನಂಬರ್ 5ನಲ್ಲಿ ರವೀಂದ್ರ ಜಡೇಜಾರನ್ನ ಕಳ್ಸಿ ನಂಬರ್ 6ನಲ್ಲಿ ರಾಹುಲ್​ರನ್ನ ಕಳಿಸೋ ಅಗತ್ಯ ಏನಿತ್ತು ಅಂತಾ ಪ್ರಶ್ನೆ ಮಾಡಿದ್ದಾರೆ. ಕ್ರೂಶಿಯಲ್ ಟೈಮಲ್ಲಿ ಬ್ಯಾಟರ್​ನ ಕಳ್ಸೋದ್ ಬಿಟ್ಟು ಕೆಳ ಕ್ರಮಾಂಕದಲ್ಲಿ ಕಳ್ಸಿದ್ರೆ ಅವ್ರಿಂದ ಉತ್ತಮ ಪ್ರದರ್ಶನ ನಿರೀಕ್ಷೆ ಹೇಗೆ ಮಾಡೋದು ಅಂತಾ ಅಸಮಾಧಾನ ಹೊರ ಹಾಕಿದ್ದಾರೆ. ಅದೂ ಅಲ್ದೇ ಪದೇಪದೆ ಸ್ಲಾಟ್ ವೇರಿಯೇಷನ್ ಮಾಡೋದ್ರಿಂದ ಅವ್ರ ಪರ್ಫಾಮೆನ್ಸ್ ಮೇಲೂ ಹೊಡೆತ ಬೀಳುತ್ತೆ ಅನ್ನೋದು ಕ್ರಿಕೆಟ್ ಎಕ್ಸ್​ಪರ್ಟ್ಸ್​ಗಳ ವಾದ ಕೂಡ. ಸೋ ಕ್ರಿಕೆಟ್​ನಲ್ಲಿ ರಾಹುಲ್​ರನ್ನ ಫುಟ್​ಬಾಲ್ ಮಾಡಿದ್ದಾರಾ? ಸ್ಲಾಟ್ ಬದಲಾವಣೆಯ ಎಫೆಕ್ಟ್ ಏನೆಲ್ಲಾ ಅನ್ನೋದನ್ನ ನೋಡ್ತಾ ಹೋಗೋಣ. ಮೊದಲನೇದಾಗಿ..

ರಾಹುಲ್ ಈಗ ಫುಲ್ ಬಾಲ್!

ಸೌತ್ ಆಫ್ರಿಕಾ ಸಿರೀಸ್ ನಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ

5ನೇ ಸ್ಲಾಟ್ ಬಿಟ್ಟು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಅವಕಾಶ

ಪ್ಯೂರ್ ಬ್ಯಾಟರ್ ಗೆ ಹಿಂಬಡ್ತಿ ಕೊಟ್ಟಂತೆಲ್ಲಾ ಕಳಪೆ ಪ್ರದರ್ಶನ

ಗೇಮ್ ಗೆಲ್ಲಿಸಲೇಬೇಕಾದ ಒತ್ತಡ, ಸೋತರೆ ಹೊಣೆಗಾರಿಕೆ

ಟೇಲ್ ಎಂಡರ್ಸ್ ಜೊತೆ ಕ್ರೀಸ್ ಕಚ್ಚಿ ನಿಂತು ಆಡಬೇಕು

ಇದೇ ಕಾರಣಕ್ಕೆ ರಾಹುಲ್​ರನ್ನ ಪದೇಪದೆ ಲೋವರ್ ಆರ್ಡರ್​ನಲ್ಲಿ ಆಡಿಸ್ತಿರೋದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಌಂಡ್ ಭಾನುವಾರದ ಮ್ಯಾಚಲ್ಲಿ ನಂಬರ್ 6ನಲ್ಲಿ ಆಡಿಸಿರೋದ್ರ ಬಗ್ಗೆ ಇರ್ಫಾನ್ ಪಠಾಣ್ ಕೂಡ ಮಾತ್ನಾಡಿದ್ದಾರೆ. 34ನೇ ಓವರ್​ ಬಳಿಕ ಬಾಲ್ ಅಷ್ಟು ಸ್ವಿಂಗ್ ಆಗಲ್ಲ. ಹಾಗೇ ಸ್ಲೋ ಆಗುತ್ತೆ. ಇಂಥಾ ಟೈಮಲ್ಲಿ ಬ್ಯಾಟರ್​ನ ಚೇಂಜ್ ಮಾಡಿರಬಹುದು ಎಂದಿದ್ದಾರೆ. ಒಟ್ನಲ್ಲಿ ಟೀಂ ಇಂಡಿಯಾದಲ್ಲಿ ರಾಹುಲ್​ ವಿಚಾರದಲ್ಲಿ ಎಕ್ಸ್​ಪೆರಿಮೆಂಟ್ಸ್ ನಡೀತಾನೇ ಇರುತ್ತೆ. ತಂಡ ಗೆಲ್ಲಲಿ ಅಂತಾ ಈ ರೀತಿಯ ಟೆಕ್ನಿಕ್ ಬಳಸ್ತಾ ಇರ್ಬೋದು. ಬಟ್ ಇದು ಎಲ್ಲಾ ಟೈಮಲ್ಲೂ ವರ್ಕ್ ಆಗಲ್ಲ. ಜೊತೆಗೆ ರಾಹುಲ್ ಕೆರಿಯರ್​ಗೂ ಎಫೆಕ್ಟ್ ಆಗಬಹುದು. ಹೀಗಾಗಿ ರಾಹುಲ್​ ಈಗ ಎಲ್ಲಿ ಆಡಿಸ್ತಾರೆ ಅನ್ನೋದಕ್ಕಿಂತ ಪ್ಲೇಯಿಂಗ್ 11ನಲ್ಲಿ ಆಡ್ಸಿದ್ರೆ ಸಾಕು ಅಂತಿದ್ದಾರೆ. ನಂಬರ್ 6ನಲ್ಲಿ ಬ್ಯಾಟಿಂಗ್ ಮಾಡೊದಾದ್ರೆ ನಿವೃತ್ತಿ ತಗೊಂಡ್ ಬಿಡಿ ಅಂತಾ ಕೆಲ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.

Shantha Kumari