ಗಿಲ್ ಬದಲು KL ಕ್ಯಾಪ್ಟನ್ – ODIನಲ್ಲಿ ರಾಹುಲ್ ರಿಯಲ್ ಸ್ಟಾರ್
SA ಸರಣಿಯಲ್ಲೇ ಬದಲಾವಣೆ?

ಅಧಿಕಾರ ಸಿಗೋದು ಮುಖ್ಯ ಅಲ್ಲ ಸಿಕ್ಕಾಗ ಅದನ್ನ ಹೇಗೆ ಬಳಸಿಕೊಳ್ತಾರೆ ಅನ್ನೋದೇ ಮುಖ್ಯ. ಈ ವಿಚಾರದಲ್ಲಿ ಕೆಎಲ್ ರಾಹುಲ್ ತಮಗೆ ಕೊಟ್ಟಿರೋ ಪವರ್ನ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ ನೋಡಿ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಹಂಗಾಮಿ ನಾಯಕನಾಗಿ ಆಯ್ಕೆಯಾದ ರಾಹುಲ್ ಈಗ ಸಂಪೂರ್ಣ ನಾಯಕನಾಗೋಕೆ ನಾನು ಸರ್ವಸಮರ್ಥ ಅನ್ನೋ ಥರ ಪರ್ಫಾಮ್ ಮಾಡ್ತಿದ್ದಾರೆ. ಸದ್ಯಕ್ಕೆ ಸರಣಿ ಸಮಬಲ ಆಗಿದ್ರೂ ರಾಹುಲ್ ಆಟವನ್ನಂತೂ ಮೆಚ್ಚಲೇಬೇಕು.
ಇದನ್ನೂ ಓದಿ : ಇಂಡಿಗೋ ವಿಮಾನ ಹಾರಾಟ ರದ್ದು ಬೆನ್ನಲ್ಲೇ ಪ್ರಯಾಣಿಕರ ಆಕ್ರೋಶ – ಪೈಲಟ್ ರಜೆ ನಿಯಮಗಳನ್ನು ಸಡಿಲಿಸಿದ DGCA
ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ಸದ್ಯ ಸಮಬಲದಲ್ಲಿದೆ. ನಾಳಿನ ಪಂದ್ಯ ಗೆದ್ದವ್ರು ಸರಣಿ ಗೆಲ್ತಾರೆ. ಕ್ಯಾಪ್ಟನ್ ಆಗಿ ಗೆಲ್ಲೋಕೆ ಕೆಎಲ್ ರಾಹುಲ್ಗೆ ನಾಳಿನ ಪಂದ್ಯ ತುಂಬಾನೇ ಇಂಪಾರ್ಟೆಂಟ್ ಇದೆ. ಯಾಕಂದ್ರೆ ಟೀಂ ಇಂಡಿಯಾದಲ್ಲಿ ರಾಹುಲ್ ಎಲ್ಲರಂತಲ್ಲ. ಮೊದ್ಲಿಂದಲೂ ಮಲತಾಯಿ ಧೋರಣೆ ನಡ್ಕೊಂಡೇ ಬಂದಿದೆ. ಗಂಭೀರ್ ಕೋಚ್ ಆದ್ಮೇಲಂತೂ ಎಕ್ಸ್ಪೆರಿಮೆಂಟ್ ನಡೀತಾನೇ ಇದೆ. ರೋಹಿತ್ ಶರ್ಮಾರನ್ನ ಏಕದಿನ ನಾಯಕತ್ವದಿಂದ ತೆಗೆದ ಬಿಸಿಸಿಐ ಶುಭ್ಮನ್ ಗಿಲ್ರನ್ನ ಕ್ಯಾಪ್ಟನ್ ಆಗಿ ಆಯ್ಕೆ ಮಾಡ್ತು. ಬಿಸಿಸಿಐ ಲಾಜಿಕ್ ಏನಂದ್ರೆ ಲಾಂಗ್ ಟರ್ಮ್ ಕ್ಯಾಪ್ಟನ್ ಌಂಡ್ ಆಲ್ ಫಾರ್ಮೆಟ್ ಕ್ಯಾಪ್ಟನ್ ಫಾರ್ಮೂಲಾ ಮೇಲೆ ಸೆಲೆಕ್ಷನ್ ಮಾಡಿದ್ರು. ಬಟ್ ಏಕದಿನ ತಂಡದ ನಾಯಕತ್ವಕ್ಕೆ ಕಂಪ್ಲೀಟ್ ಡಿಸರ್ವ್ ಇದ್ದದ್ದು ಅಂದ್ರೆ ಕೆಎಲ್ ರಾಹುಲ್.
ರಾಹುಲ್ ನಾಯಕತ್ವಕ್ಕೆ ಸಮರ್ಥ!
ವೈಟ್ ಬಾಲ್ ಸಿರೀಸ್ ನಲ್ಲಿ ಗಿಲ್ ಕಳಪೆ ಫಾರ್ಮ್
ಕ್ಯಾಪ್ಟನ್ ಆಗಿ ಮೊದಲ ಸರಣಿಯಲ್ಲೇ ಭಾರತ ಸೋಲು
ಆಸೀಸ್ ಪ್ರವಾಸದಲ್ಲಿ ಗಿಲ್ 3 ಪಂದ್ಯಗಳಿಂದ 43 ರನ್ಸ್
ಸೌತ್ ಆಫ್ರಿಕಾ ಸಿರೀಸ್ ನಲ್ಲಿ ಕ್ಯಾಪ್ಟನ್ ಆಗಿ ರಾಹುಲ್ ಶೈನ್
2 ಪಂದ್ಯಗಳಿಂದ 126 ರನ್ ಕಲೆ ಹಾಕಿರುವ ರಾಹುಲ್
ಆಲ್ ರೌಂಡರ್ & ತಂಡದಲ್ಲಿ ಅನುಭವಿ ಆಟಗಾರ
ಇಲ್ಲಿ ಶುಭ್ಮನ್ ಗಿಲ್ ಬಗ್ಗೆ ನೆಗೆಟಿವ್ ಆಗಿ ಹೇಳ್ತಿಲ್ಲ. ಗಿಲ್ ಕೂಡ ಉತ್ತಮ ಆಟಗಾರ. ಆದ್ರೆ ಏಕದಿನ ತಂಡಕ್ಕೆ ನಾಯಕನಾಗೋಕೆ ರಾಹುಲ್ಗೆ ಜಾಸ್ತಿ ಅರ್ಹತೆ ಇದೆ ಅನ್ನೋದಷ್ಟೇ ಇಲ್ಲಿ ನಮ್ಮ ವಾದ. ಅಟ್ಲೀಸ್ಟ್ ಬಿಸಿಸಿಐ ಈಗಲಾದ್ರೂ ಅಲರ್ಟ್ ಆಗ್ಬೇಕು. ಸೌತ್ ಆಫ್ರಿಕಾ ಸರಣಿ ಬಳಿಕ ಏಕದಿನ ಮಾದರಿಯಲ್ಲಿ ಸಂಪೂರ್ಣ ನಾಯಕನಾಗಿ ರಾಹುಲ್ರನ್ನ ನೇಮಕ ಮಾಡ್ಬೋದು. 2027ರ ವಿಶ್ವಕಪ್ ನಂತ್ರ ಬೇಕಿದ್ರೆ ಬೇರೆ ಬದಲಾವಣೆ ಮಾಡಬಹುದು.

ನೋಡಿರಿ

