KL ರಾಹುಲ್ ಆದಾಯ ಶತಕೋಟಿ.. Italian ಬ್ರ್ಯಾಂಡ್.. ದುಡ್ಡಿನ ಹೊಳೆ? – ಕೆಎಲ್ ಹಣದ ಮೂಲ ಕ್ರಿಕೆಟ್ ಅಲ್ವಾ?

ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್.. ಸದ್ಯ ಲೀಡ್ಸ್ ನಲ್ಲಿ ನಡೆಯುತ್ತಿರೋ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಆಡ್ತಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಕನ್ನಡಿಗ ಎಲ್ಲರ ಗಮನ ಸೆಳೆದಿದ್ದಾರೆ. ಕೆಎಲ್ ರಾಹುಲ್ ಮೈದಾದನಲ್ಲಿ ಬ್ಯಾಟ್ ಬೀಸ್ತಿದ್ದಂತೆ ಅವ್ರ ಆದಾಯ ಕೂಡ ದುಪ್ಪಟ್ಟು ಆಗಿದೆ. ವರ್ಷದಿಂದ ವರ್ಷಕ್ಕೆ ಕೆಎಲ್ ರಾಹುಲ್ ಆದಾಯ ಹೆಚ್ಚಾಗ್ತಿದೆ. ಇದೀಗ ಕನ್ನಡಿಗ ಎಷ್ಟು ಕೋಟಿಗಳ ಒಡೆಯ? ಆದಾಯ ಮೂಲ ಯಾವುದು ಅನ್ನೋ ಚರ್ಚೆ ನಡಿತಾ ಇದೆ.
ಇದನ್ನೂ ಓದಿ: ENG ಚೆಂಡಾಡಿದ ಸಿರಾಜ್ & ದೀಪ್.. 6 ಜನ DUCK.. ಹೇಗಿತ್ತು ಅಟ್ಯಾಕ್? – ಗೆಲುವಿಗೆ ಹತ್ತಿರವಾಯ್ತಾ ಟೀಂ ಇಂಡಿಯಾ?
ಕರುನಾಡಿನ ಹೆಮ್ಮೆಯ ಪುತ್ರ ಕೆ.ಎಲ್.ರಾಹುಲ್ ಟೀಂ ಇಂಡಿಯಾದ ಬಲಿಷ್ಠ ಆಟಗಾರ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹುಡುಗ ಕೆಎಲ್ ರಾಹುಲ್ ಮಂಗಳೂರಿನ ನೆಹರು ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಾ ಬೆಳೆದವರು. ಇದೀಗ ಕೆಎಲ್ ಟೀಂ ಇಂಡಿಯಾದಲ್ಲಿ ಮತ್ತು ಐಪಿಎಲ್‌ನಲ್ಲಿ ಸ್ಟೈಲಿಶ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಲೋಕದ ದುಬಾರಿ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಕೆಎಲ್ ರಾಹುಲ್. ಕನ್ನಡಿಗನ ಬ್ಯಾಟಿಂಗ್ ಶೈಲಿ ಅದ್ಭುತ. ಮೈದಾನದಲ್ಲಿ ಸೈಲೆಂಟ್ ಆಗಿ ಕಾಣಿಸಿಕೊಳ್ಳುವ ರಾಹುಲ್ ಬ್ಯಾಟಿಂಗ್‌ನಲ್ಲಿ ಅದ್ಭುತ ಚಾಣಾಕ್ಷ.. ಈಗಾಗಲೇ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆ ಮುರಿದಿದ್ದಾರೆ. ಹೀಗಾಗಿಯೇ ರಾಹುಲ್ ಸಂಬಳ ವರ್ಷದಿಂದ ವರ್ಷಕ್ಕೆ ಡಬಲ್ ಆಗ್ತಿದೆ.
ಹೌದು, ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲೂ ಕನ್ನಡಿಗ ಉತ್ತಮ ಪ್ರದರ್ಶನ ನೀಡಿದ್ರು. ಇದೀಗ ಕೆಎಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸೀರಿಸ್ ನಲ್ಲಿಆಡುತ್ತಿದ್ದಾರೆ. ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರೆಲ್ಲಾ ನಿವೃತ್ತಿಯಾದ ಬಳಿಕ ಕೆಎಲ್ ರಾಹುಲ್ ತಂಡದ ಬ್ಯಾಟಿಂಗ್ ಜವಾಬ್ಧಾರಿ ಹೊತ್ತವರಂತೆ ಆಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲೂ ಭರ್ಜರಿ ಶತಕ ಬಾರಿಸಿದ್ರು ಕೆಎಲ್ ರಾಹುಲ್.. ಮೈದಾನದಲ್ಲಿ ಕೆಎಲ್ ರಾಹುಲ್ ಬ್ಯಾಟ್ ಬೀಸ್ತಿದ್ದಂತೆ ಅವರ ಆದಾಯದ ಬಗ್ಗೆ ಫ್ಯಾನ್ಸ್ ಚರ್ಚೆ ನಡೆಸ್ತಿದ್ದಾರೆ. ಕೆಎಲ್ ರಾಹುಲ್ ಆದಾಯ ಗಳಿಕೆಯಲ್ಲೂ ಕೋಟ್ಯಾಧಿಪತಿ ಆಗಿದ್ದಾರೆ. ಟೀಮ್ ಇಂಡಿಯಾ ಪರ ಆಡಿ ಬಿಸಿಸಿಐ ನಿಂದ ಕೋಟಿ ಗಟ್ಟಲೆ ಹಣ ಗಳಿಸ್ತಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಲು ಭಾರತೀಯ ಕ್ರಿಕೆಟ್ ಮಂಡಳಿ ಕೆಎಲ್ ಗೆ ಕೋಟಿ ಗಟ್ಟಲೆ ಹಣ ನೀಡುತ್ತಿದೆ.
ಜೂನ್ 2016 ರಲ್ಲಿ ಜಿಂಬಾಬ್ವೆ ವಿರುದ್ಧದ T20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೆಎಲ್ ರಾಹುಲ್ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ರಾಹುಲ್ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ.. ಇದೀಗ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿ ಕೆಎಲ್ ರಾಹುಲ್ ಅವರನ್ನು ‘ಎ’ ದರ್ಜೆಯಲ್ಲಿ ಇರಿಸಲಾಗಿದೆ. ಈ ವರ್ಷದ ಹೊಸ ಹಣಕಾಸು ವರ್ಷಕ್ಕೂ ಅವರಿಗೆ ಅದೇ ಗ್ರೂಪ್ ನಲ್ಲಿ ಸ್ಥಾನ ಸಿಕ್ಕಿದೆ. ಕೆಎಲ್ ರಾಹುಲ್ ಕೇಂದ್ರ ಒಪ್ಪಂದದ ಎ ದರ್ಜೆಯಲ್ಲಿರುವುದರಿಂದ ಅವರಿಗೆ ವರ್ಷಕ್ಕೆ 5 ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. ಟೆಸ್ಟ್‌ಗೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿ ಸಿಗುತ್ತದೆ.
ಇನ್ನು ಕೆಎಲ್ ರಾಹುಲ್ ಐಪಿಎಲ್ ಟೂರ್ನಿಯಲ್ಲೂ ಆಡ್ತಿದ್ದಾರೆ. 2013ರಲ್ಲಿ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಕನ್ನಡಿಗ ಆರ್‌ಸಿಬಿ ಪರ ಕಣಕ್ಕಿಳಿದ್ರು. ಆರ್‌ಸಿಬಿ ಮೂಲ ಬೆಲೆ 10 ಲಕ್ಷ ರೂಪಾಯಿಗೆ ರಾಹುಲ್‌ನ ಖರೀಸಿತ್ತು. ಅದಾದ ಬಳಿಕ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಸೇರಿದಂತೆ ವಿವಿಧ ತಂಡಗಳಿಗೆ ಆಡಿರುವ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. 2025 ರ ಐಪಿಎಲ್ ನಲ್ಲಿ, ಕೆಎಲ್ ರಾಹುಲ್ ಅವ್ರನ್ನ ಡೆಲ್ಲಿ ಕ್ಯಾಪಿಟಲ್ಸ್ ₹14 ಕೋಟಿಗೆ ಖರೀದಿಸಿತು. ಇದೂ ಕೂಡ ಅವ್ರ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ.
ಇನ್ನು ಕೆಎಲ್ ರಾಹುಲ್ ಕ್ರಿಕೆಟ್ ನಿಂದ ಮಾತ್ರ ಹಣ ಸಂಪಾದಿಸುತ್ತಿಲ್ಲ. ಬ್ರ್ಯಾಂಡ್ ಎಂಡೋರ್ಸ್‌ಮೆಂಟ್, ಜಾಹಿರಾತು ಮೂಲಕ ಕೂಡ ಆದಾಯ ಗಳಿಸ್ತಿದ್ದಾರೆ. ಈಗಾಗಲೇ ರಾಹುಲ್, ಭಾರತ್ ಪೇ, ಬೋಟ್, ರಿಯಲ್ ಮೀ.. ಪೂಮಾ.. ಟಾಟಾ ನೆಕ್ಸಾನ್.. ಬಿಯರ್ಡೋ ಮತ್ತು ರೆಡ್‌ಬುಲ್ ಮುಂತಾದ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗೆ ಇಟಾಲಿಯನ್ ಐಷಾರಾಮಿ ಫ್ಯಾಷನ್ ಕಂಪನಿ ಪಾಲ್ ಆಂಡ್ ಶಾರ್ಕ್ ಕಂಪನಿ ರಾಹುಲ್ ಅವ್ರನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಈ ಮೂಲಕ ಕೆಎಲ್ ರಾಹುಲ್ ಜಾಗತಿಕ ವೇದಿಕೆಯಲ್ಲಿ ಪಾಲ್ ಆಂಡ್ ಶಾರ್ಕ್ ಕಂಪನಿಯನ್ನ ಪ್ರತಿನಿಧಿಸಿದ ಮೊದಲ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಈ ಎಲ್ಲಾ ಒಪ್ಪಂದಗಳಿಂದಾಗಿ ಕೆಎಲ್ ರಾಹುಲ್ ಆದಾಯ ದುಪ್ಪಟ್ಟು ಆಗುವಂತೆ ಮಾಡಿದೆ. ಇದೀಗ ಕನ್ನಡಿಗನ ವಾರ್ಷಿಕ ಆದಾಯ 101 ಕೋಟಿಗೂ ಅಧಿಕ ಎಂದು ವರದಿಯಾಗಿದೆ.

ನೋಡಿರಿ

